ಭಾರತದಲ್ಲಿ 'ಪೇಪಾಲ್ ಫಾರ್ ಬ್ಯುಸಿನೆಸ್' ರಿಲೀಸ್!..ನೀವು ತಿಳಿಯಬೇಕಾದ ವಿಷಯಗಳಿವು!!

|

ಜಾಗತಿಕ ತಂತ್ರಜ್ಞಾನದ ಪ್ಲಾಟ್‌ಫಾರ್ಮ್ ಹಾಗೂ ಡಿಜಿಟಲ್ ಪಾವತಿ ಮುಂಚೂಣಿ ನಾಯಕ, ಪೇಪಾಲ್ ಭಾರತದಲ್ಲಿ ತನ್ನ ಮೊದಲ ವ್ಯಾಪಾರಿ-ಕೇಂದ್ರಿತ ಆಪ್ 'ಪೇಪಾಲ್ ಫಾರ್ ಬ್ಯುಸಿನೆಸ್' ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಆಪ್ ಮೂಲಕ ಸಣ್ಣ/ಮಧ್ಯಮ ವ್ಯಾಪಾರಿಗಳು ಸಹ ದೇಶೀಯ ಹಾಗೂ ಅಂತಾರಾಷ್ಟ್ರೀಯ ಉದ್ದಿಮೆಯನ್ನು ಅತ್ಯಂತ ಸುಗಮವಾಗಿ ಪೇಪಾಲ್‍ನ ಅತ್ಯುತ್ಕೃಷ್ಟ ಭದ್ರತಾ ಪ್ಲಾಟ್ ಫಾರಂನ ಬೆಂಬಲದೊಂದಿಗೆ ನಡೆಸಬಹುದಾಗಿದೆ.

ಹೌದು, ನೂತನ 'ಪೇಪಾಲ್ ಫಾರ್ ಬ್ಯುಸಿನೆಸ್' ವೃತ್ತಿಪರ ಇಸ್ವಾಯ್ಸ್ ಮಾಡುವ ಸಾಮರ್ಥ್ಯ ಮತ್ತು ಜಗತ್ತಿನಾದ್ಯಂತದ ಬಗೆ ಬಗೆಯ ಕರೆನ್ಸಿಗಳಿಂದಲೂ ಪಾವತಿಯನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಆನ್‌ಲೈನ್ ಪಾವತಿಯನ್ನು ಯಾವಾಗಲೂ ಸುಗಮ ಹಾಗೂ ಸುರಕ್ಷಿತವಾಗಿ ಆಗುವಂತೆ, ಜೊತೆಗೆ ವ್ಯಾಪಾರಿಗಳು ತಮ್ಮ ಉದ್ದಿಮೆಯಲ್ಲಿ ಪ್ರಗತಿ ಸಾಧಿಸುವಂತೆ ಮಾಡುವುದು ಪೇಪಾಲ್ ಫಾರ್ ಬ್ಯುಸಿನೆಸ್' ಆಪ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಭಾರತದಲ್ಲಿ 'ಪೇಪಾಲ್ ಫಾರ್ ಬ್ಯುಸಿನೆಸ್' ರಿಲೀಸ್!..ನೀವು ತಿಳಿಯಬೇಕಾದ ವಿಷಯಗಳಿವು!

'ವ್ಯಾಪಾರಿಗಳೂ ಫಸ್ಟ್-ಗೋ-ಟು-ಮಾರ್ಕೆಟ್ ಎಂಬ ಕಾರ್ಯತಂತ್ರದ ಮೊರೆ ಹೋಗುತ್ತಿದ್ದಾರೆ. ಇಂಥ ವ್ಯಾಪಾರಿಗಳಿಗೆ ನೆರವಾಗುವ ಮೂಲಕ ಅವರ ಬದುಕನ್ನು ಸರಳಗೊಳಿಸುವುದರ ಜೊತೆಗೆ, ವ್ಯಾಪಾರವನ್ನು ಅತ್ಯಂತ ಸುಲಭ ಹಾಗೂ ಸುಗಮವಾಗಿ ನಡೆಸಲೂ ಸಹಾಯ ಮಾಡುವುದು ಪೇಪಾಲ್ ಫಾರ್ ಬ್ಯುಸಿನೆಸ್‍ನ ಧ್ಯೇಯವಾಗಿದೆ' ಎಂದು ಪೇಪಾಲ್ ಇಂಡಿಯಾ ನಿರ್ದೇಶಕ ಸುಬ್ರಮಣಿಯನ್ ಅವರು ಹೇಳುತ್ತಾರೆ. ಹಾಗಾದರೆ, ಈ ಪೇಪಾಲ್ ಫಾರ್ ಬ್ಯುಸಿನೆಸ್ ಆಪ್‌ನಿಂದ ಏನೆಲ್ಲಾ ಉಪಯೊಗಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.

ಆಪ್‌ನಲ್ಲಿನ ಪ್ರಮುಖ ಫೀಚರ್ಸ್ ಯಾವುವು?

ಆಪ್‌ನಲ್ಲಿನ ಪ್ರಮುಖ ಫೀಚರ್ಸ್ ಯಾವುವು?

ಪೇಪಾಲ್ ಫಾರ್ ಬ್ಯುಸಿನೆಸ್ ದೇಶೀಯ ಮತ್ತು ಅಂತಾರಾಷ್ಟ್ರೀಯ ವಹಿವಾಟಿಗೆ ಒಂದೇ ಆಪ್ ಆಗಿದೆ. ಬಹುಕರೆನ್ಸಿಯ ಮೊತ್ತಗಳನ್ನು ವೀಕ್ಷಿಸುವಂಥ ಅವಕಾಶ - ಸುಗಮವಾಗಿ ಇನ್‌ವಾಯ್ಸ್ ಸೃಷ್ಟಿಸುವ ಸಾಮರ್ಥ್ಯ, ಸುಗಮವಾಗಿ ಮಾರಾಟದ ಒಳನೋಟವನ್ನು ನೋಡಲು ಅವಕಾಶ, ನಿಯಮಿತವಾಗಿ ಮರುಪಾವತಿ ವಿತರಣೆ ಸೇರಿದಂತೆ ಹಲವು ಫೀಚರ್ಸ್ ತಂತ್ರಜ್ಞಾನದ ಮುಖಾಂತರವಾಗಿ ಸಣ್ಣ ಉದ್ಯಮಗಳ ಸಂಪೂರ್ಣ ಸಮಸ್ಯೆಗಳನ್ನು ಪರಿಹರಿಸಲಿವೆ.

ಮಾರಾಟದ ಟ್ರ್ಯಾಕ್ ನೋಡಿ

ಮಾರಾಟದ ಟ್ರ್ಯಾಕ್ ನೋಡಿ

ಪೇಪಾಲ್ ಫಾರ್ ಬ್ಯುಸಿನೆಸ್ ಆಪ್‌ನಲ್ಲಿರುವ ಡ್ಯಾಷ್ ಬೋರ್ಡ್‌ನಿಂದಾಗಿ ವ್ಯಾಪಾರಿಗಳು ತಮ್ಮ ಉದ್ದಿಮೆಯ ಸಂಪೂರ್ಣ ಸಾಧನೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ವ್ಯಾಪಾರಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಸಾಧನೆಯನ್ನು ಹೋಲಿಕೆ ಮಾಡಿಕೊಳ್ಳಬಹುದು, ವಹಿವಾಟುಗಳ ಒಟ್ಟು ಸಂಖ್ಯೆ ಮತ್ತು ಸರಾಸರಿ ಆರ್ಡರ್ ಮೌಲ್ಯ ಮತ್ತಿತರ ಮಾಹಿತಿಗಳು ದೊರೆಯುತ್ತವೆ. ಇದು ವ್ಯಾಪಾರಿಗಳಿಗೆ ಮಾರಾಟದ ಒಳನೋಟ ನೋಡಲು ಸಹಾಯ ಮಾಡುತ್ತದೆ.

ಮಲ್ಟಿ-ಕರೆನ್ಸಿ ಬ್ಯಾಲೆನ್ಸ್ ವೀಕ್ಷಣೆ

ಮಲ್ಟಿ-ಕರೆನ್ಸಿ ಬ್ಯಾಲೆನ್ಸ್ ವೀಕ್ಷಣೆ

ಪೇಪಾಲ್ ಫಾರ್ ಬ್ಯುಸಿನೆಸ್ ಆಪ್‌ನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾವತಿಗಳಿಗೆ ಒಂದೇ ಇಂಟೆಗ್ರೇಷನ್ ಕಲ್ಪಿಸುವ ಕಾರಣ, ವ್ಯಾಪಾರಿಗಳು ಎಲ್ಲ ದೇಶಗಳ ಕರೆನ್ಸಿಗಳಲ್ಲೂ ತಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದಾಗಿದೆ. ಪಾವತಿ ಮಾಡುವ ವೇಳೆ ಹಾಗೂ ಪಾವತಿ ಪಡೆಯುವ ವೇಳೆ ಹಲವು ಆಯ್ಕೆಗಳು ಮತ್ತು ನಮ್ಯತೆಯನ್ನು ಪೇಪಾಲ್ ಫಾರ್ ಬ್ಯುಸಿನೆಸ್ ಆಪ್‌ ತನ್ನ ಗ್ರಾಹಕರಿಗೆ ಕಲ್ಪಿಸುತ್ತದೆ.

25 ಕರೆನ್ಸಿಗಳ ಬ್ಯಾಲೆನ್ಸ್

25 ಕರೆನ್ಸಿಗಳ ಬ್ಯಾಲೆನ್ಸ್

ಜಗತ್ತಿನಾದ್ಯಂತ 200 ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಪೇಪಾಲ್, ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ 100ಕ್ಕೂ ಹೆಚ್ಚು ಕರೆನ್ಸಿಗಳಲ್ಲಿ ನಗದನ್ನು ಸ್ವೀಕರಿಸಲು, 56 ಕರೆನ್ಸಿಗಳಲ್ಲಿ ಫಂಡ್ ವಿತ್‍ಡ್ರಾ ಮಾಡಲು ಹಾಗೂ ತಮ್ಮ ಪೇಪಾಲ್ ಖಾತೆಗಳಲ್ಲಿ 25 ಕರೆನ್ಸಿಗಳ ಬ್ಯಾಲೆನ್ಸ್‍ಗಳನ್ನು ಹೊಂದಲು ಅವಕಾಶ ನೀಡುತ್ತಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಎದುರಿಸುವಂಥ ಸಾಮಾನ್ಯ ಸಮಸ್ಯೆಗಳನ್ನು ಪೇಪಾಲ್ ಫಾರ್ ಬ್ಯುಸಿನೆಸ್ ಆಪ್ ಪರಿಹರಿಸುತ್ತದೆ.

ಪೇಪಾಲ್‌ನಲ್ಲಿ ಸುಗಮ ಇನ್ವಾಯ್ಸ್

ಪೇಪಾಲ್‌ನಲ್ಲಿ ಸುಗಮ ಇನ್ವಾಯ್ಸ್

ಸರಾಗವಾಗಿ ಇನ್ವಾಯ್ಸ್ಗಳನ್ನು ಸೃಷ್ಟಿಸಲು, ರಚಿಸಲು, ಪೂರ್ವಭಾವಿಯಾಗಿ ವೀಕ್ಷಿಸಲು ಮತ್ತು ಕಳುಹಿಸಲು ಪೇಪಾಲ್ ಬ್ಯುಸಿನೆಸ್ ಆಪ್‌ನಲ್ಲಿ ವ್ಯಾಪಾರಿಗಳಿಗೆ ಸಾಧ್ಯವಾಗುತ್ತದೆ. ಪಾವತಿಗಳನ್ನು ನಿಯಮಿತವಾಗಿ, ಯಾವುದೇ ವಿಳಂಬವಿಲ್ಲದೇ ಪಡೆಯಲೂ ನೆರವಾಗುವ ಈ ಆಪ್, ಮರುಪಾವತಿಯನ್ನು ವಿತರಿಸುವಲ್ಲೂ ವ್ಯಾಪಾರಿಗಳಿಗೆನೆರವಾಗುತ್ತದೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಅನುಭವ ಹೊಂದುವಂತೆ ಪೇಪಾಲ್ ಬ್ಯುಸಿನೆಸ್ ಆಪ್‌ ಮಾಡುತ್ತದೆ.

Best Mobiles in India

English summary
Global digital payments major PayPal has launched its first merchant facing app in India named PayPal for Business.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X