ಪೇಟಿಯಂ ತಂದಿದೆ ಲಿಫಾಫಾ, ಇದು ಶಗುನ್ ನ ಡಿಜಿಟಲ್ ಆವೃತ್ತಿ!
ಪೇಟಿಯಂ ಲಾಂಚ್ ಮಾಡಿದೆ ವಿಶೇಷ ಸಂದರ್ಭಗಳಲ್ಲಿ ಹಣದ ರೂಪದಲ್ಲಿ ನೀಡುವ ಉಡುಗೊರೆಗಳ ಡಿಜಿಟಲ್ ಆವೃತ್ತಿಯನ್ನು. ಇದುವೇ ಪೇಟಿಯಂ ಲಿಫಾಫಾ.
ಹಬ್ಬ ಹರಿದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ಅಥವಾ ಶಗುನ್ ನೀಡುವುದು ಸರ್ವೇಸಾಮಾನ್ಯ. ಇಂತಹ ವಿಶೇಷ ಸಂದರ್ಭಗಳಲ್ಲಿ ಗ್ರಾಹಕರಿಗೆ ಕ್ಯಾಶ್ ಲೆಸ್ ಅನುಭವ ನೀಡಲು ಮುಂದಾಗಿದೆ ಡಿಜಿಟಲ್ ಪಾವತಿ ಮತ್ತು ಇ-ಕಾಮರ್ಸ್ ಕಂಪೆನಿಯಾದ ಪೇಟಿಯಂ. ಇದಕ್ಕೆಂದೇ ಪೇಟಿಯಂ ಲಾಂಚ್ ಮಾಡಿದೆ ಶಗುನ್ ನ ಡಿಜಿಟಲ್ ಆವೃತ್ತಿ. ಇದನ್ನು ಬಳಸಿ ಗ್ರಾಹಕರು ದೇಶದಾದ್ಯಂತ ತಮ್ಮ ಬೇಕಾದವರೊಂದಿಗೆ ಡಿಜಿಟಲ್ ಕ್ಯಾಶ್ ವಿನಿಮಯ ಮಾಡಿಕೊಳ್ಳಬಹುದು.

ಈ ಸೌಲಭ್ಯವನ್ನು ಲಾಂಚ್ ಮಾಡಿದ 24 ಘಂಟೆಗಳೊಳಗೆ ಈ ಸೌಲಭ್ಯದ ರಾಖಿ ಥೀಮ್ ನ ಟ್ರ್ಯಾನ್ಸ್ಯಾಕ್ಶನ್ ಅನ್ನು ಪೇಟಿಯಂ ನ ಬಹಳಷ್ಟು ಗ್ರಾಹಕರು ಬಳಸಿದ್ದರು. ಲಾಂಚ್ ಆದ ಮೂರೇ ವಾರಗಳಲ್ಲಿ ಈ ಸೌಲಭ್ಯ ತುಂಬ ಜನಪ್ರಿಯವಾಗಿದ್ದು, ಈಗಾಗಲೇ ಅರ್ಧ ಮಿಲಿಯನ್ ಟ್ರ್ಯಾನ್ಸ್ಯಾಕ್ಶನ್ ಗಳು ನಡೆದಿವೆ.
ಪೇಟಿಯಂ ಬಳಕೆದಾರರು ಬೇರೆ ಬೇರೆ ಥೀಮ್ಗಳಲ್ಲಿ ಜನರೊಂದಿಗೆ ಕ್ಯಾಶ್ ವಿನಿಮಯ ಮಾಡಿಕೊಳ್ಳಬಹುದಾಗಿದ್ದು, ಅವುಗಳಲ್ಲಿ ಥ್ಯಾಂಕ್ ಯೂ, ಲಕ್ಕಿ ಯೂ ಮತ್ತು ಬೆಸ್ಟ್ ವಿಶಸ್ ಥೀಮ್ಗಳು ಜನಪ್ರಿಯವಾಗಿದೆ. ಈಗ ಪೇಟಿಯಂ ಈ ಹೊಸ ಉಡುಗೊರೆ ನೀಡುವ ವಿಧಾನವನ್ನು ಪೇಟಿಯಂ ಲಿಫಾಫಾ ಎಂದು ಹೆಸರಿಸಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನದಲ್ಲಿದೆ!
ಪೇಟಿಯಂ ನ ವೈಸ್ ಪ್ರೆಸಿಡೆಂಟ್, ದೀಪಕ್ ಎಬೊಟ್ ಅವರು " ಪೇಟಿಯಂ ತಂದಿರುವ ಶಗುನ್ ನ ಡಿಜಿಟಲ್ ಆವೃತ್ತಿ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಜನರ ಗಮನ ಸೆಳೆದಿದೆ. ಹಾಗಾಗಿ ನಾವೀಗ ಅದನ್ನು ಲಿಫಾಪಾ ಎಂದು ಮರು ನಾಮಕರಣ ಮಾಡುತ್ತಿದ್ದೇವೆ.
'ಲಿಫಾಫಾ' ಶಬ್ದ ನಮ್ಮ ಜನರಿಗೆ ತುಂಬ ಹತ್ತಿರವಾಗಿದ್ದು, ತಲತಲಾಂತರಗಳಿಂದ ಜನರ ಜೀವನದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಮೂಲಕ ಜನರಿಗೆ ತಮಗೆ ಬೇಕಾದವರೊಂದಿಗೆ ಉಡುಗೊರೆ ರೂಪದಲ್ಲಿ ಹಣವನ್ನು ವಿನಿಮಯಮಾಡಿಕೊಳ್ಳಲು ಈ ಹೊಸ ಸೌಲಭ್ಯ ಮೊದಲ ಆದ್ಯತೆಯಾಗಲಿದೆ" ಎಂದು ಹೇಳಿದರು.
ಜನರನ್ನು ಕ್ಯಾಶ್ ಆಧಾರಿತ ಜೀವನಶೈಲಿಯಿಂದ ಡಿಜಿಟಲ್ ಪಾವತಿಗಳತ್ತ ಒಯ್ಯುವುದು ಪೇಟಿಯಂ ನ ಮುಖ್ಯ ಉದ್ದೇಶವಾಗಿದೆ.ತನ್ನ ಪೇಟಿಯಂ ಆಪ್ ಮೂಲಕ ಡಿಜಿಟಲ್ ಪಾವತಿಗಳ ಉತ್ತಮ ಅನುಭವವನ್ನು ತನ್ನ ಗ್ರಾಹಕರಿಗೆ ನೀಡುವ ಮೂಲಕ ಕ್ಯಾಶ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪೇಟಿಯಂ ಪ್ರಯತ್ನಿಸುತ್ತಿದೆ.
ಪೇಟಿಯಂ ಕಂಪೆನಿಯು ಕಳೆದ ಫೆಬ್ರವರಿಯಲ್ಲಿ ತನ್ನ ಗ್ರಾಹಕರ ಸಂಖ್ಯೆ 200 ಮಿಲಿಯನ್ ವ್ಯಾಲೆಟ್ಗಳಷ್ಟು ವಿಸ್ತರಿಸಿರುವುದಾಗಿ ಘೋಷಿಸಿತ್ತು. ಪೇಟಿಯಂ ವಾಲೆಟ್ ಬಿಡುಗಡೆಯಾಗಿ ಮೂರೇ ವರ್ಷದಲ್ಲಿ ಕಂಪೆನಿಯು ಈ ಸಾಧನೆಯನ್ನು ಮಾಡಿದ್ದು, ದೇಶದಾದ್ಯಂತ ಅತೀ ಹೆಚ್ಚು ಬಳಸಲ್ಪಡುತ್ತಿರುವ ಡಿಜಿಟಲ್ ಪಾವತಿಯ ಮಾಧ್ಯಮವೆನಿಸಿದೆ.
ಪೇಟಿಯಂ ವಾಲೆಟ್ ಕ್ಷಿಪ್ರ ಮತ್ತು ಯಾವುದೇ ರೀತಿಯ ತೊಂದರೆಗಳಿಲ್ಲದ ಡಿಜಿಟಲ್ ಪಾವತಿಯ ಮಾಧ್ಯಮವಾಗಿದ್ದು ಮೊಬೈಲ್ ಮತ್ತು DTH ರೀಚಾರ್ಜ್, ವಿದ್ಯುತ್ ಮತ್ತು ನೀರಿನ ಬಿಲ್ಗಳ ಪಾವತಿ, ಹಾಲು, ದಿನಸಿ, ಔಷಧಿ, ಪಾರ್ಕಿಂಗ್ ಮೊದಲಾದವುಗಳ ಹಣ ಪಾವತಿಗೆ ಬಳಕೆಯಾಗುತ್ತಿದೆ. ಪೇಟಿಯಂ ಕಂಪೆನಿಯು ತನ್ನ ವಾಲೆಟ್ ನ ಅಭಿವೃದ್ಧಿಯಲ್ಲಿ ಅರ್ಥಪೂರ್ಣವಾದ ಸಂದರ್ಭಗಳನ್ನು ಸೆರೆ ಹಿಡಿದಿದ್ದು, ಉತ್ತಮ ಮತ್ತು ಸರಳವಾದ ವಿನ್ಯಾಸವನ್ನು ಹೊಂದಿದೆ.
ಈ ಮೂಲಕ ಪೇಟಿಯಂ ಬಳಸಲು ಸರಳವಾಗಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಬ್ಬರೂ ಪೇಟಿಯಂ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ದೇಶದಾದ್ಯಂತ ವ್ಯಾಪಾರಿಗಳ ಮತ್ತು ಗ್ರಾಹಕರ ಜಾಲವೊಂದು ಪೇಟಿಯಂ ಮೂಲಕ ಸೃಷ್ಟಿಯಾಗಿದ್ದು, ಪೇಟಿಯಂ ಅಲ್ಪಕಾಲದಲ್ಲೇ ಬೃಹದಾಕಾರವಾಗಿ ಬೆಳೆದು ನಿಂತಿದೆ.


Click it and Unblock the Notifications








