ನಾಳೆಯಿಂದ ಪೇಟಿಎಂ ಮಾಲ್‌ನಲ್ಲಿ ಫೇಸ್ಟಿವ್ ಸೀಸನ್ ಸೇಲ್..! ಭರ್ಜರಿ ಆಫರ್‌ಗಳು..!
ಒಂದಾದ ಮೇಲೆ ಒಂದರಂತೆ ಹಬ್ಬಗಳ ದಿನಗಳು ಆರಂಭವಾಗಿದೆ. ಹಬ್ಬಕ್ಕೆ ರಂಗು ತುಂಬಲು ಆನ್ ಲೈನ್ ಶಾಪಿಂಗ್ ಮಾಲ್ ಗಳೂ ಕೂಡ ತಯಾರಾಗಿ ನಿಂತಿವೆ. ಹೌದು ಹಲವಾರು ಹೊಸ ಪ್ರೊಡಕ್ಟ್ ಗಳ ಬಿಡುಗಡೆ, ರಿಯಾಯಿತಿ ಮಾರಾಟಗಳು, ಭಿನ್ನವಿಭಿನ್ನ ಆಫರ್ ಗಳು ಗ್ರಾಹಕರಿಗಾಗಿ ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ಕಾಯುತ್ತಿದೆ. ಹೆಚ್ಚಿನ ಎಲ್ಲಾ ಇ-ಕಾಮರ್ಸ್ ಸೈಟ್ ಗಳಲ್ಲೂ ಕೂಡ ಹಬ್ಬದ ಸೀಸನ್ ಗೆ ವಿಶೇಷ ಸೇಲ್ ನ್ನು ಆಯೋಜಿಸಲಾಗಿದೆ.

ಇದೀಗ ಪೇಟಿಎಂ ಮಾಲ್ ತನ್ನ ಫೆಸ್ಟೀವ್ ಸೀಸನ್ ಸೇಲ್ ನ ದಿನಾಂಕವನ್ನು ಪ್ರಕಟಿಸಿದ್ದು, ಮೂರು ದಿನಗಳ ಕಾಲ ರಿಯಾಯಿತಿ ಮಾರಾಟವನ್ನು ಆಯೋಜಿಸಿದೆ. ಸೆಪ್ಟೆಂಬರ್ 20 ರಿಂದ ಈ ಹಬ್ಬದ ಸೀಸನ್ ಸೇಲ್ ಪೇಟಿಎಂ ಮಾಲ್ ನಲ್ಲಿ ಆರಂಭವಾಗಲಿದ್ದು ಸೆಪ್ಟೆಂಬರ್ 23ವರೆಗೆ ನಡೆಯಲಿದೆ.

ಮಾರುತಿ ಬೈಕ್ ಗೆಲ್ಲುವ ಅವಕಾಶ
ಈ ಸೇಲ್ ನಲ್ಲಿ ಪೇಟಿಎಂ ಮಾಲ್ ನಲ್ಲಿ ಹಲವು ರೀತಿಯ ರಿಯಾಯಿತಿ ಮಾರಾಟಗಳು ನಡೆಯಲಿದ್ದು ಮೊಬೈಲ್ ಗಳು, ಟಿವಿ ಮತ್ತು ಅಪ್ಲಯನ್ಸ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಮತ್ತು ಇತರೆ ವಸ್ತುಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ಈ ಸೇಲ್ ನಲ್ಲಿ ಖರೀದಿಸಿದ ಗ್ರಾಹಕರಿಗೆ ಮಾರುತಿ ಸುಝುಕಿ ಗಿಕ್ಸ್ಸರ್ ಬೈಕ್ ನ್ನು ಗೆಲ್ಲುವ ಅವಕಾಶವೂ ಇದೆ.

ಭರ್ಜರಿ ಕ್ಯಾಷ್ ಬ್ಯಾಕ್ ಸೌಲಭ್ಯ
ಸ್ಮಾರ್ಟ್ ಫೋನ್ ಗಳಾದ ಹಾನರ್ 7ಸಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 ಪ್ಲಸ್, ಓಪ್ಪೋ ಎಫ್7 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಪಿಕ್ಸಲ್ 2ಎಕ್ಸ್ಎಲ್ ಫೋನ್ ಗಳ ಎಂಆರ್ ಪಿಗಿಂತ ಶೇಕಡಾ 50 ರಷ್ಟು ಉಳಿತಾಯ ಮಾಡಲು ಗ್ರಾಹಕರಿಗೆ ಈ ಸೇಲ್ ನಲ್ಲಿ ಅವಕಾಶವಿರುತ್ತದೆ. ಅಷ್ಟೇ ಅಲ್ಲದೆ ಈ ಫೋನ್ ಗಳ ಖರೀದಿಯಲ್ಲಿ 4000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವೂ ಇದೆ. ಹಾನರ್ 9 ಲೈಟ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ 8 ಫೋನ್ ಗಳ ಮೇಲೆ 2000 ರುಪಾಯಿ ಕ್ಯಾಷ್ ಬ್ಯಾಕ್ ಇದೆ.

ಕಡಿಮೆ ಬೆಲೆಗೆ ಟಿವಿ
ಸ್ಮಾರ್ಟ್ ಫೋನ್ ಗಳಲ್ಲದೆ ಟಿವಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಎಸಿಗಳು, ಸೋನ್, ಸ್ಯಾಮ್ ಸಂಗ್, ಎಲ್.ಜಿ, ಮೈಕ್ರೋಮ್ಯಾಕ್ಸ್, ಪ್ಯಾನಸಾನಿಕ್ ನ ರೆಫ್ರಿಜರೇಟರ್ ಗಳು ಕೂಡ ಇದರಲ್ಲಿ ಸೇರಿವೆ.

ಇತರೆ ಎಲೆಕ್ಟ್ರಾನಿಕ್ ವಸ್ತುಗಳು
ಹೊಸದಾಗಿ ಬಿಡುಗಡೆಗೊಂಡಿರುವ ವಸ್ತುಗಳ ಕೆಟಗರಿಯಲ್ಲಿ ಡೆಲ್ ಇನ್ಸ್ಪಿರಾನ್ 300, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮತ್ತು ಪ್ರೀಮಿಯಂ ಆಡಿಯೋಫೈಲ್ ಕಲೆಕ್ಷನ್ ಗಳು ಸೇರಿವೆ. ಡೆಲ್ ಇನ್ಸ್ಪಿರಾನ್ 300 ಮೇಲೆ ಗ್ರಾಹಕರಿಗೆ ಶೇಕಡಾ 12 ರಷ್ಟು ಫ್ಲ್ಯಾಟ್ ಕ್ಯಾಷ್ ಬ್ಯಾಕ್ ಅವಕಾಶವಿದೆ. ಅಷ್ಟೇ ಅಲ್ಲದೆ ಲ್ಯಾಪ್ ಟಾಪ್ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದೆ.

ಶೇ.70ರವರೆಗೆ ರಿಯಾಯಿತಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಖರೀದಿಯಲ್ಲಿ 6000 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಹಾರ್ಮನ್ ಕಾರ್ಡನ್ ಸೌಂಡ್ ಸ್ಟಿಕ್ ಜೊತೆಗೆ ಬ್ಲೂಟೂತ್ ಸ್ಪೀಕರ್ ಗಳು 5000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯಗಳಲ್ಲಿ ಲಭ್ಯವಿದೆ. ಇಷ್ಟಕ್ಕೆ ಮುಗಿಯಿತು ಅಂದುಕೊಳ್ಳಬೇಡಿ. ಲಗ್ಗೇಜ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಮೆಟಿರಿಯಲ್ಸ್, ಫಿಟ್ ನೆಟ್ ಆಕ್ಸಸರೀಸ್ ಗಳುಗಳ ಮೇಲೂ ಕೂಡ ಪೇಟಿಎಂ ಮಾಲ್ ನ ಈ ಫೆಸ್ಟೀವ್ ಸೀಸನ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಗಳಿವೆ. ಶೇಕಡಾ 70 ರಿಂದ ಶೇಕಡಾ 25 ರವರೆಗಿನ ರಿಯಾಯಿತಿಯನ್ನು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಪಡೆಯಲು ಗ್ರಾಹಕರಿಗೆ ಅವಕಾಶವಿದೆ.


Click it and Unblock the Notifications








