Home
Apps

ಪೇಟಿಎಂ ಮೂಲಕ ಚಿನ್ನ ಖರೀದಿಸಲು ಇದು ಸಕಾಲ!! ಏಕೆ ಗೊತ್ತಾ?

ಪೇಟಿಎಂ ಗೋಲ್ಡ್ ಮೂಲಕ ಚಿನ್ನದ ಖರೀದಿ ಮಾಡಲು. ಜನರಿಗೆ ಮಾಹಿತಿ ತಲುಪಿಸುವ ಕಾರ್ಯದಲ್ಲಿ ಪೇಟಿಎಂ ನಿರತರವಾಗಿದೆ.

By Bhaskar N J

ಆನ್‌ಲೈನ್ ಪೇಮೆಂಟ್ ಜಾಲತಾಣ ಪೇಟಿಎಂ ಆರಂಭಿಸಿದ ಪೇಟಿಎಂ ಗೋಲ್ಡ್ ಸೇವೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಎಂದು ಪೇಟಿಎಂ ಹಿರಿಯ ಉಪಾಧ್ಯಕ್ಷ ಕೃಷ್ಣ ಹೆಗ್ಡೆ ಅವರು ಹೇಳಿದ್ದಾರೆ. ಈಗಾಗಲೇ ಪೇಟಿಎಂ ಮೂಲಕ 175 ಕೆ.ಜಿ. ಚಿನ್ನವನ್ನು ಗ್ರಾಹಕರು ಖರೀದಿಸಿದ್ದು, ಆನ್‌ಲೈನ್ ಎಂದು ಅವರು ಪೇಟಿಎಂ ಗೋಲ್ಡ್ ದ್ವಿಗುಣಗೊಂಡಿದೆ ಎಂದು ಹೇಳಿದರು.!!

ಪೇಟಿಎಂ ಜನರಿಗೆ ಚಿನ್ನದ ಖರೀದಿಗೆ ಸುರಕ್ಷೆ ನೀಡುವಲ್ಲಿ ಬಹಳ ಕಾಳಜಿ ತೋರಿದ್ದು, ಪೇಟಿಎಂ ಗೋಲ್ಡ್ ಮೂಲಕ ಚಿನ್ನದ ಖರೀದಿ ಮಾಡಲು. ಜನರಿಗೆ ಮಾಹಿತಿ ತಲುಪಿಸುವ ಕಾರ್ಯದಲ್ಲಿ ಪೇಟಿಎಂ ನಿರತರವಾಗಿದೆ. ಸದ್ಯ ಚಿನ್ನಾದ ವ್ಯಾಪಾರವನ್ನು ಪ್ರಮುಖವಾಗಿ ಕೇಂದ್ರೀಕರಿಸಿಲ್ಲ ಆರು ತಿಂಗಳ ವಹಿವಾಟಿನ ನಂತರ ಈ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಅವರು ಹೇಳಿದರು.!!

ಉಚಿತ ಲಾಕರ್ ಸೌಲಭ್ಯ, ಕ್ಯಾಶ್‌ಬ್ಯಾಕ್ ಮತ್ತು ವಿಮೆ ಸೌಲಭ್ಯದಂತಹ ಹಲವು ಸೇವೆಗಳನ್ನು ಪೇಟಿಎಂ ಒದಗಿಸುತ್ತಿದ್ದು, ಪೇಟಿಎಂ ಗೋಲ್ಡ್ ಮೂಲಕ ಚಿನ್ನವನ್ನು ಖರಗೀದಿಸಿದವರಿಗೆ ಏನೆಲ್ಲಾ ಲಾಭ? ಪೇಟಿಎಂ ಮೂಲಕ ಚಿನ್ನ ಏಕೆ ಖರೀದಿಸಬೇಕು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

24K 999.9ಗುಣಮಟ್ಟದ ಚಿನ್ನ ಮಾರಾಟ!!

24K 999.9ಗುಣಮಟ್ಟದ ಚಿನ್ನ ಮಾರಾಟ!!

ಆನ್‌ಲೈನ್ ಮೂಲಕ 24K ಕ್ಯಾರಟ್ ಗುಣಮಟ್ಟದ ಚಿನ್ನವನ್ನು ಪೇಟಿಎಂ ಮಾರಾಟ ಮಾಡುತ್ತಿದ್ದು, ಬೇರೆ ಬೇರೆ ಅಂಗಡಿಗಳಿಂದ ಚಿನ್ನದಲ್ಲಿ ಮೋಸಹೋಗುವ ಸಾಧ್ಯತೆ ಇರುವುದರಿಂದ ಪೇಟಿಎಂ ಈ ಬಗ್ಗೆ ಸ್ವ ದೃಢೀಕರಣ ನೀಡಿದೆ.!!

ಚಿನ್ನವನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಅವಕಾಶ!!

ಚಿನ್ನವನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಅವಕಾಶ!!

ಪೇಟಿಎಂ ಮೂಲಕ ಚಿನ್ನ ಖರೀದಿಸುವ ಮತ್ತು ಅದನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಲಭ್ಯವಿದೆ.!! ಇಷ್ಟೇ ಅಲ್ಲದೇ ಆನ್‌ಲೈನ್‍ನಲ್ಲಿಯೇ ನೀವು ಚಿನ್ನವನ್ನು ಸಹ ಮಾರುವ ಅವಕಾಶಇದೆ. ಉತ್ತಮ ಬೆಲೆ ಬಂದಾಗ ಅದನ್ನು ಮಾರುವ ಅಥವಾ ಬಳಕೆಗೆ ಅಗತ್ಯವೆನಿಸಿದಾಗ ಅದನ್ನು ಪಡೆದುಕೊಂಡು ಬೇಕಾದ ಆಭರಣ ಮಾಡಿಸಿಕೊಳ್ಳಬಹುದು.!!

ಚಿನ್ನದ ಮೇಲೆ ಹೂಡಿಕೆ!!

ಚಿನ್ನದ ಮೇಲೆ ಹೂಡಿಕೆ!!

ಎಲ್ಲಾ ವರ್ಗದ ಜನ ಚಿನ್ನದ ಮೇಲೆ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಅದ್ದರಿಂದ ಪೇಟಿಎಂ ಈ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದ್ದು, ಪೇಟಿಎಂ ಆಪ್‍ನಲ್ಲಿಯೇ ಈ ಸೇವೆಯ ಸದುಪಯೋಗ ಪಡೆಯಬಹುದು. ಹಾಗಾಗಿ, ಪೇಟಿಎಂ ಮೂಲಕ ಆನ್‌ಲೈನ್‌ನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.!!

ದೀರ್ಘಾವಧಿಯ ಸಂಪತ್ತಿನ ಸೃಷ್ಟಿ!!

ದೀರ್ಘಾವಧಿಯ ಸಂಪತ್ತಿನ ಸೃಷ್ಟಿ!!

ಭಾರತೀಯ ಗ್ರಾಹಕರನ್ನು ಉಳಿತಾಯ ಮಾಡುವ ವಿಧಾನವನ್ನಾಗಿ ರೂಪಾಂತರಗೊಳಿಸಲು ಪೇಟಿಎಂ ಮುಂಧಾಗಿದ್ದು, ಸ್ಥಳ ಮತ್ತು ಆದಾಯ ಮಟ್ಟವನ್ನು ಲೆಕ್ಕಿಸದೆಯೇ ದೀರ್ಘಾವಧಿಯ ಸಂಪತ್ತಿನ ಸೃಷ್ಟಿಗಾಗಿ ಗೋಲ್ಡ್ ಅನ್ನು ಉಳಿಸಬಹುದು.! ಇದಕ್ಕಾಗಿ ಕ್ಯಾಶ್‌ಬ್ಯಾಕ್ ಅನ್ನು ಪೇಟಿಎಂ ಗೋಲ್ಡ್ ಆಗಿ ಪರಿಚಯಿಸುವುದಾಗಿ ಪೇಟಿಎಂ ಹೇಳಿದೆ.!!

ಗ್ಯಾರಂಟಿ ಚಿನ್ನ!!

ಗ್ಯಾರಂಟಿ ಚಿನ್ನ!!

ಗ್ಯಾರಂಟಿ ಚಿನ್ನದ ನಾವು ಪ್ರಚಾರ ನೀಡುವ ಕಾರ್ಯಕ್ಕೆ ಪೇಟಿಎಂ ಒತ್ತು ನೀಡಿದ್ದು, ಐಟಿ ಕ್ಷೇತ್ರವನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸೇವೆ ಆರಂಭಿಸಿದ್ದೇವೆ ಎಂದು ಪೇಟಿಎಂ ಹಿರಿಯ ಉಪಾಧ್ಯಕ್ಷ ಕೃಷ್ಣ ಹೆಗ್ಡೆ ಹೇಳಿದ್ದಾರೆ.!! ಪೇಟಿಎಂ ಗ್ಯಾರಂಟಿ ಚಿನ್ನಕ್ಕೆ ಭರವಸೆಯಾಗಿದೆ ಎಂದು ಹೇಳಿದ್ದಾರೆ.

ಶುದ್ಧ ಚಿನ್ನವನ್ನು ಉಚಿತವಾಗಿ ಗಳಿಸಬಹುದು!!

ಶುದ್ಧ ಚಿನ್ನವನ್ನು ಉಚಿತವಾಗಿ ಗಳಿಸಬಹುದು!!

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ, ಉಪಯುಕ್ತ ಬಿಲ್ಲುಗಳನ್ನು ಪಾವತಿಸುತ್ತಿದ್ದಲ್ಲಿ ಅಥವಾ ಮೂವಿ ಅಥವಾ ಟ್ರಾವೆಲ್ ಟಿಕೇಟ್‌ಗಳನ್ನು ಖರೀದಿಸುತ್ತಿದ್ದಲ್ಲಿ, ಶುದ್ಧ ಚಿನ್ನವನ್ನು ಉಚಿತವಾಗಿ ಗಳಿಸಬಹುದು ಎಂದು ಪೇಟಿಎಂ ವಕ್ತಾರರು ಹೇಳಿದ್ದಾರೆ.

Best Mobiles in India

English summary
Paytm started its digital gold business about two months back in partnership with MMTCPAMP.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+