Subscribe to Gizbot

‘ಪೇಟಿಎಂ-ICIC ಬ್ಯಾಂಕ್ ಪೇಸ್ಟ್ ಪೇಯ್ಡ್’ ಸೇವೆ: ದಿನ ನಿತ್ಯದ ಖರ್ಚಿಗೆ ಸಾಲ..!

Written By: Lekhaka

ಡಿಜಿಟಲ್ ಪೇಮೆಂಟ್ ಬ್ಯಾಂಕ್ ಪೇಟಿಎಂ ದಿನೇ ದಿನೇ ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತಿದೆ. ಸದ್ಯ ICICI ಬ್ಯಾಂಕಿನೊಂದಿಗೆ ಪಾಲುದಾರಿಕೆಯನ್ನು ಹಂಚಿಕೊಂಡಿದ್ದು, ಎರಡು ಬ್ಯಾಂಕ್ ಗಳು ಸೇರಿ 'ಪೇಟಿಎಂ-ICIC ಬ್ಯಾಂಕ್ ಪೇಸ್ಟ್ ಪೇಯ್ಡ್’ ಎಂಬ ಹೊಸ ಸೇವೆಯನ್ನು ಲಾಂಚ್ ಮಾಡಿದೆ.

‘ಪೇಟಿಎಂ-ICIC ಬ್ಯಾಂಕ್ ಪೇಸ್ಟ್ ಪೇಯ್ಡ್’ ಸೇವೆ: ದಿನ ನಿತ್ಯದ ಖರ್ಚಿಗೆ ಸಾಲ..!

ಹೊಸ ಸೇವೆಯಲ್ಲಿ ಪೇಟಿಮೆಂ ಬಳಕೆದಾರರು ಇನ್ಸಟೆಂಟ್ ಕ್ರೆಡಿಟ್ ಪಡೆದುಕೊಳ್ಳಿದ್ದಾರೆ. ಅದುವೇ ದಿನ ನಿತ್ಯದ ಬಳಕೆಗೆ ಮೂವಿ ನೋಡುವುದರಿಂದ ಫ್ಲೇಟ್ ಸೇವೆಯನ್ನು ಪಡೆಯಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ದಿನನಿತ್ಯದ ಬಳಕೆಗೆ ಸಾಲವನ್ನು ನೀಡುವ ಮಾದರಿಯಾಗಿದೆ.

ಈ 'ಪೇಟಿಎಂ-ICIC ಬ್ಯಾಂಕ್ ಪೇಸ್ಟ್ ಪೇಯ್ಡ್’ ಸೇವೆಯನ್ನು ಪಡೆದುಕೊಳ್ಳಲು ಯಾವುದೇ ಡಾಕ್ಯುಮೆಂಟ್ ಗಳ ಅಗತ್ಯತೆ ಇಲ್ಲ. ಅಲ್ಲದೇ ಯಾವುದೇ ಬ್ಯಾಂಕಿಗೆ ಹೋಗುವ ಅಗತ್ಯತೆಯೂ ಇಲ್ಲ ಎನ್ನಲಾಗಿದೆ. ಇದು ಆನ್ ಲೈನ್ ಮೂಲಕವೇ ಕಾರ್ಯನಿರ್ವಹಿಸಲಿದೆ. ಅಲ್ಲಿಯೇ ಕ್ರೆಡಿಟ್ ದೊರೆಯಲಿದೆ.

ಮೊಜಿಲಾ ದಿಂದ ಹೊಸ ಮಾದರಿಯ ಫೈರ್ ಫಾಕ್ಸ್ ಬ್ರೌಸರ್

ಈ ಆಫರ್ ನಲ್ಲಿ 45 ದಿನಗಳ ಬಡ್ಡಿ ರಹಿತ ಸಾಲದ ಮಿತಿಯನ್ನು ನೀಡಲಾಗಿದೆ. ರೂ. 3,000 ದಿಂದ 10,000ದ ವರೆಗೆ ಹಿಂದೆ ಹೆಚ್ಚಿನ ಪೇಮೆಂಟ್ ಮಾಡಿದ್ದವರಿಗೆ ರೂ.20,000ದ ವರೆಗೂ ಸಾಲ ನೀಡಾಲಾಗುತ್ತಿದೆ. ಕೇಲವೇ ದಿನಗಳಲ್ಲಿ ICICI ಬ್ಯಾಂಕ್ ಗ್ರಾಹಕರಲ್ಲದವರಿಗೂ ಈ ಸೇವೆ ದೊರೆಯಲಿದೆ.

ಒಮ್ಮೆಗೆ ಕ್ರೆಡಿಟ್ ಲಿಮಿಟ್ ಸೆಟ್ ಆದ ನಂತರದಲ್ಲಿ ತಿಂಗಳ ಮೊದಲಿನಿಂದ ಸಾಲ ದೊರೆಯಲಿದ್ದು, 15 ದಿನದಲ್ಲಿ ಪಾವತಿ ಮಾಡಬೇಕಾಗಿದೆ. ಇಲ್ಲವಾದರೆ ಬಡ್ಡಿ ಬಿಳಲಿದೆ ಎನ್ನಲಾಗಿದೆ.

Read more about:
English summary
This will be available 24x7 and on all days, it is based on a new Big Data-based algorithm by ICICI Bank for real-time credit assessment of customers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot