ಶೀಘ್ರವೇ ಪೇಟಿಎಂ ಮೆಸೇಂಜರ್ ಆಪ್‌ ಬಿಡುಗಡೆ!.ಇದಿದ್ರೆ ವಾಟ್ಸ್ಆಪ್, ಹೈಕ್ ಯಾವುದು ಬೇಡ!!

ಇನ್ನೆರಡು ವಾರಗಳಲ್ಲಿ ಪೇಟಿಎಂ ತನ್ನ ಅಫಿಷಿಯಲ್ ಮೆಸೇಜಿಂಗ್ ಆಪ್ ಅನ್ನು ಲಾಂಚ್ ಮಾಡುತ್ತಿದೆ.!!

|

ವಾಟ್ಸ್ಆಪ್, ಹೈಕ್, ವೀಚಾಟ್ ನಂತಹ ಹಲವು ಮೆಸೇಂಜರ್ ಆಪ್‌ಗಳ ಸಾಲಿಗೆ ಇದೀಗ ಭಾರತದ ಪ್ರಖ್ಯಾತ ಆನ್‌ಲೈನ್ ಪೇಮೆಂಟ್ ಜಾಲತಾಣ ಪೇಟಿಎಂ ಲಗ್ಗೆಯಿಡುತ್ತಿದೆ. ಹೌದು, ಇದನ್ನು ನೀವು ನಂಬಲೇಬೇಕು.! ಶೀಘ್ರವೇ ಪೇಟಿಎಂ ಮೆಸೇಂಜರ್ ಆಪ್‌ ಬಿಡುಗಡೆಯಾಗಲಿದೆ.!!

ಈ ಬಗ್ಗೆ ಇಂಗ್ಲೀಷ್ ಪತ್ರಿಕೆಗಳ ವರದಿ ಮಾಡಿದ್ದು, ಭಾರತದ ಆನ್‌ಲೈನ್ ಪೇಮೆಂಟ್ ಕಂಪೆನಿ ಪೇಟಿಎಂ ಮೆಸೇಜಿಂಗ್ ಆಪ್ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ವರದಿ ಮಾಡಿವೆ.! ಇನ್ನೆರಡು ವಾರಗಳಲ್ಲಿ ಪೇಟಿಎಂ ತನ್ನ ಅಫಿಷಿಯಲ್ ಮೆಸೇಜಿಂಗ್ ಆಪ್ ಅನ್ನು ಲಾಂಚ್ ಮಾಡುತ್ತಿದೆ ಎಂದು ತಿಳಿಸಿವೆ.!!

ಹಾಗಾದರೆ, ಪೇಟಿಎಂ ಬಿಡುಗಡೆ ಮಾಡುತ್ತಿರುವ ಮೆಸೇಜಿಂಗ್ ಆಪ್ ಯಾವುದು? ಆಪ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿರುತ್ತವೆ? ಮತ್ತು ಪೇಟಿಎಂ ಮೆಸೇಜಿಂಗ್ ಆಪ್ ವಾಟ್ಸ್‌ಆಪ್‌ಗೆ ಸೆಡ್ಡುಹೊಡೆಯಲು ಸಾಧ್ಯವೆ? ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ನೋಡಿರಿ.!!

ಪೇಟಿಎಂ ಮೆಸೇಜಿಂಗ್ ಆಪ್!!

ಪೇಟಿಎಂ ಮೆಸೇಜಿಂಗ್ ಆಪ್!!

ಈಗಾಗಲೇ ಹಲವು ಮೆಸೇಂಜಿಂಗ್ ಆಪ್‌ಗಳು ಲಭ್ಯವಿದ್ದರರೂ ಪೇಟಿಎಂ ತನ್ನದೇ ಮೆಸೇಂಜಿಂಗ್ ಆಪ್‌ ಅನ್ನು ಬಿಡುಗಡೆ ಮಾಡುತ್ತಿದೆ. ಪೇಟಿಎಂ ಬೋರ್ಡ್ ಡೈರೆಕ್ಟರ್ ಸದಸ್ಯರಾಗಿರುವ ವಾಟ್ಸ್‌ಆಪ್ ಗ್ಲೋಬಲ್ ಬ್ಯುಸಿನೆಸ್ ಹೆಡ್ ಇದಕ್ಕೆ ರುವಾರಿ ಎಂದು ಮಾಧ್ಯಮಗಳು ಹೇಳಿವೆ.!!

ಪೇಟಿಎಂ ಆಪ್‌ನಲ್ಲಿ ಏನೆಲ್ಲಾ ಸೌಲಭ್ಯ.!!

ಪೇಟಿಎಂ ಆಪ್‌ನಲ್ಲಿ ಏನೆಲ್ಲಾ ಸೌಲಭ್ಯ.!!

ಪ್ರಸ್ತುತ ಈಗಾಗಲೇ ಲಭ್ಯವಿರುವ ವಾಯ್ಸ್ ಕಾಲ್, ವಿಡಿಯೋಕಾಲ್ ಎಲ್ಲಾ ಫೀಚರ್ಸ್‌ಗಳು ಪೇಟಿಎಂ ಮೆಸೇಂಜಿಂಗ್ ಆಪ್‌ನಲ್ಲಿ ಇರುತ್ತದೆ ಎಂದು ಹೇಳಲಾಗಿದೆ. ಇದರ ಜೊತೆಗೆಯೇ ಪೇಟಿಎಂ ಪೇಮೆಂಟ್ ಸೇವೆಯೂ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.!!

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಪೇಟಿಎಂ ಮೆಸೇಜಿಂಗ್ ಆಪ್ ಏಕೆ?

ಪೇಟಿಎಂ ಮೆಸೇಜಿಂಗ್ ಆಪ್ ಏಕೆ?

ಈಗಾಗಲೇ ಪೇಮೆಂಟ್ ಜಾಲತಾಣವಾಗಿ ಹೆಸರಾಗಿರುವ ಪೇಟಿಎಂ ಯಾವಾಗಲೂ ಎಲ್ಲಾ ಮೊಬೈಲ್‌ಗಳಲ್ಲೂ ಶಾಶ್ವತವಾಗಿ ನೆಲೆಸಲು ಚಿಂತಿಸಿದೆ. ಹಾಗಾಗಿ, ಪೇಟಿಎಂ ಮೆಸೇಂಜಿಂಗ್ ಮತ್ತು ಪೇಟಿಎಂ ಪೇಮೆಂಟ್‌ ಅನ್ನು ಒಂದೇ ಆಪ್‌ನಲ್ಲಿ ತಂದು ಜನರಿಗೆ ಹತ್ತಿರವಾಗಿವ ನಿರೀಕ್ಷೆಯಲ್ಲಿದೆ.!!

ವಾಟ್ಸ್‌ಆಪ್‌ಗೆ ಸೆಡ್ಡುಹೊಡೆಯುತ್ತದೆಯೇ?

ವಾಟ್ಸ್‌ಆಪ್‌ಗೆ ಸೆಡ್ಡುಹೊಡೆಯುತ್ತದೆಯೇ?

ಪ್ರಪಂದಲ್ಲಿಯೇ ಹೆಚ್ಚು ಹೆಸರುಗಳಿಸಿರುವ ವಾಟ್ಸ್‌ಆಪ್ ಅನ್ನು ಯಾವ ಬೇರೆ ಆಪ್‌ಗಳಿಂದಲೂ ಮಣಿಸಲು ಸಾಧ್ಯವಾಗಿಲ್ಲ.!! ಆದರೆ, ಪೇಟಿಎಂ ನೀಡಲು ಉದ್ದೇಶಿಸಿರುವ ಆಪ್‌ ಫೀಷರ್ಸ್ ವಾಟ್ಸ್‌ಆಪ್‌ಗಿಂತಲೂ ಬೆಸ್ಟ್ ಆಗಿದ್ದು, ಜನರು ಪೇಟಿಎಂ ಅನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು.!!

ವಾಟ್ಸ್‌ಆಪ್‌ನಿಂದ ಪೇಮೆಂಟ್ ಫೀಚರ್ಸ್!!

ವಾಟ್ಸ್‌ಆಪ್‌ನಿಂದ ಪೇಮೆಂಟ್ ಫೀಚರ್ಸ್!!

ಇನ್ನೊಂದು ವಿಷಯ ಎಂದರೆ ವಾಟ್ಸ್‌ಆಪ್‌ ಕೂಡ ಪೇಮೆಂಟ್ ಫೀಚರ್ಸ್ ಅನ್ನು ಶೀಘ್ರದಲ್ಲಿಯೇ ಅಳವಡಿಸಿಕೊಳ್ಳಲು ಮುಂದಾಗಿದೆ.!! ಆದರೆ, ಈಗಾಗಲೇ ಪೇಮೆಂಟ್ ಕ್ಷೇತ್ರದಲ್ಲಿ ಹೆಸರಾಗಿದ್ದು, ಪೇಟಿಎಂ ಮುಂದೆ ವಾಟ್ಸ್‌ಆಪ್‌ ಪೇಮೆಂಟ್ ಫೀಚರ್ಸ್ ನಿಲ್ ಆಗಬಹುದು!! ಅಥವಾ ಪೇಟಿಎಂ ಮೆಸೇಂಜಿಂಗ್ ಆಪ್ ಮರೆಯಾಗಬಹುದು.!!

<strong>ಜಿಯೋ ದೇವರು ಅಂಬಾನಿ ಈಗ ಏಷ್ಯಾದ ಎರಡನೇ ಶ್ರೀಮಂತ!!..ಒಟ್ಟು ಆಸ್ತಿ ಎಷ್ಟು ಗೊತ್ತಾ?</strong>ಜಿಯೋ ದೇವರು ಅಂಬಾನಿ ಈಗ ಏಷ್ಯಾದ ಎರಡನೇ ಶ್ರೀಮಂತ!!..ಒಟ್ಟು ಆಸ್ತಿ ಎಷ್ಟು ಗೊತ್ತಾ?

Best Mobiles in India

English summary
Paytm is reportedly planning to start its own messaging service like Facebook-owned WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X