Subscribe to Gizbot

ಪೇಟಿಎಂನಿಂದ ಮತ್ತೊಂದು ಹೊಸ ಸೇವೆ: ಪೇಮೆಂಟ್ ಇನ್ನು ಸುಲಭ!

Posted By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಇ ಕಾರ್ಮಸ್ ಸೇವೆ, ಡಿಜಿಟಲ್ ಪೇಮೆಂಟ್ ಮತ್ತು ಡಿಜಿಟಲ್ ವ್ಯಾಲೆಟ್, ಪೇಮೆಂಟ್ ಬ್ಯಾಂಕ್ ಸೇವೆಯನ್ನು ನೀಡುತ್ತಿರುವ ಪೇಟಿಎಂ, ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಇದಲ್ಲಿ ಬಳಕೆದಾರರಿಗೆ ಬ್ಯಾಂಕಿಂಗ್ ಟಾರ್ಫರ್ ಗಳನ್ನ ಅತೀ ಸುಲಭವಾಗಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಹೆಚ್ಚು ಮೌಲ್ಯದ ಪೇಮೆಂಟ್ ಗಳನ್ನು ಮಾಡಲು ಅವಕಾಶ ಮಾಡಿಕೊಡಲಿದೆ.

ಇದಕ್ಕಾಗಿಯೇ 'ಮೈ ಪೇಮೆಂಟ್ಸ್’ ಎನ್ನುವ ಆಯ್ಕೆಯೊಂದನ್ನು ನೀಡುತ್ತಿದೆ. ಈ ಹೊಸ ಸೇವೆಯಲ್ಲಿ ಯಾವುದೇ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಬಹುದಾಗಿದ್ದು, ಇದಕ್ಕೆ ಯಾವುದೇ ದರಗಳನ್ನು ಪೇಟಿಎಂ ವಿಧಿಸುವುದಿಲ್ಲ ಎನ್ನಲಾಗಿದೆ. ಈಗಾಗಲೇ ಹೊಸ ಸೇವೆ ಬಳಕೆದಾರರಿಗೆ ಮುಕ್ತವಾಗಿದೆ.

ಪೇಟಿಎಂನಿಂದ ಮತ್ತೊಂದು ಹೊಸ ಸೇವೆ: ಪೇಮೆಂಟ್ ಇನ್ನು ಸುಲಭ!

ಈ ಮಾದರಿಯಲ್ಲಿ ಪೇಮೆಂಟ್ ಮಾಡುವ ಸಲುವಾಗಿ ಬಳಕೆದಾರರು ಪೇಟಿಎಂ ನಲ್ಲಿ ಲಭ್ಯವಿರುವ ಪೇಟಿಎಂ ವ್ಯಾಲೆಟ್, UPI ಇಲ್ಲವೇ ಬೇರೆ ಯಾವುದೇ ಪೇಮೆಂಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಪಾಯಿಂಟ್ ಟು ಪಾಯಿಂಟ್ ಸೇವೆಯಾಗಿದ್ದು, ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ.

ಮೊಬೈಲ್ ಪೇಮೆಂಟ್ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೇ ನಿರ್ಮಾಣವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರನ್ನು ಸೆಳೆಯುವ ದೃಷ್ಟಿಯಿಂದ ವಿವಿಧ ಹೊಸ ಮಾದರಿಯ ಸೇವೆಗಳನ್ನು ನೀಡಲು ಪೇಮೆಂಟ್ ಆಪ್ ಗಳು ಮುಂದಾಗಿದ್ದು, ಇದೇ ಮಾದರಿಯಲ್ಲಿ ಪೇಟಿಎಂ ಸಹ ಹೊಸ ಹೊಸ ಆಯ್ಕೆಗಳನ್ನು ನೀಡುವುದರಲ್ಲಿ ಮುಂಚುಣಿಯಲ್ಲಿದೆ.

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಪೇಟಿಎಂ ಬಳಕೆದಾರರ ಸಂಖ್ಯೆಯೂ ಅತೀ ದೊಡ್ಡದಾಗಿದ್ದು, ಈ ವರ್ಷದ ಕೊನೆಯಲ್ಲಿ ತಿಂಗಳಿಗೆ ರೂ.60,000 ಕೋಟಿ ಹಣವನ್ನು ವರ್ಗಾವಣೆ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ನೀಡುವು ಆಯ್ಕೆಯೂ ಸಹ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡುವುದರಿಂದ, ಪೇಟಿಎಂ ಬಳಕೆ ಮತ್ತಷ್ಟು ಅಧಿಕವಾಗುವ ಎಲ್ಲಾ ಸಾಧ್ಯತೆಗಳಿದೆ.

English summary
‘My payments' feature will be focusing on recurring, high-value payments along with monthly expenses. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot