Just In
- 1 hr ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 1 hr ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೇಟಿಎಮ್ ಆಂಡ್ರಾಯ್ಡ್ ಆಪ್ ಅಪ್‌ಡೇಟ್ ಆಗಿದೆ: ಹೊಸದೇನಿದೆ..?
ದೇಶದಲ್ಲಿ ನೋಟು ರದ್ದತಿ ನಂತರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಚೀನಾ ಮೂಲದ ಮೊಬೈಲ್ ವಾಲೆಟ್ ಪೇಟಿಎಮ್ ತನ್ನ ಜಾಹಿರಾತಿನಲ್ಲಿ ಪ್ರಧಾನಿ ಮೋದಿ ಪೋಟೋ ಹಾಕಿಕೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಕೇಂದ್ರ ಸರಕಾರ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ನಿಟ್ಟಿನಲ್ಲಿ ಪೇಟಿಎಮ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗಿತು. ಈ ಹಿನ್ನಲೆಯಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ತನ್ನ ಆಪ್ ಅನ್ನು ಆಪ್‌ಡೇಟ್ ಮಾಡಿದೆ.

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!
ಕೇಂದ್ರ ಸರಕಾರವು ಭೀಮ್ ಆಪ್ ಲಾಂಚ್ ಮಾಡಿದ ನಂತರದಲ್ಲಿ ಪೇಟಿಎಮ್ ಕಡೆಗಿನ ಒಲವು ಸ್ಪಲ್ಪಮಟ್ಟದಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದಾಗಿದ್ದು, ಅಲ್ಲದೇ ಪೇಟಿಮ್ ಆಪ್ ನಲ್ಲಿದ್ದ ಕೆಲವು ಕೊರತೆಗಳು ಕಂಡು ಬಂದಿದ್ದ ಹಿನ್ನಲೆಯಲ್ಲಿ ಹೊಸ ಆಪ್‌ಡೇಟ್ ಬಿಡುಗಡೆಯಾಗಿದೆ.

ಕಡಿಮೆ ವೇಗದ ನೆಟ್‌ವರ್ಕ್‌ನಲ್ಲೂ ಕಾರ್ಯಚರಣೆ:
ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಪೇಟಿಎಮ್ ಆಪ್ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳಲ್ಲೂ ವೇಗವಾಗಿ ಕಾರ್ಯನಿರ್ವಹಿಸುವಂತೆ ಡಿಸೈನ್ ಮಾಡಲಾಗಿದೆ. ಅಲ್ಲದೇ ಕಡಿಮೆ ವೇಗದ ನೆಟ್‌ವರ್ಕ್ ಇದ್ದರೂ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆಯಂತೆ.

ವಾಲೆಟ್‌ಗೆ ಹಣ ತುಂಬಿಸಲು ಸರಳ ವಿಧಾನ:
ನಿಮ್ಮ ಬ್ಯಾಂಕ್ ಆಕೌಂಟಿನಲ್ಲಿರುವ ಹಣವನ್ನು ಪೇಟಿಎಮ್ ಗೆ ತುಂಬಿಸಲು ಸರಳ ವಿಧಾನವನ್ನು ಈ ಆಪ್ ನಲ್ಲಿ ಅಳವಡಿಸಲಾಗಿದೆ. ಕೇವಲ ಒಂದೇ ಸ್ಕ್ರಿನ್ ನಲ್ಲಿ ಹಣವನ್ನು ತುಂಬಿಸುವಂತೆ ಮಾಡಲಾಗಿದ್ದು, ಈ ಹಿಂದೆ ಇದ್ದ ಎರಡು ಹಂತದ ಪ್ರಕ್ರಿಯೆಯನ್ನು ಸರಳಿಕೃತಗೊಳಿಸಲಾಗಿದೆ.

ಹಣ ಪಾವತಿಯೂ ಸುಲಭ:
ಹಣ ಪಾವತಿ ಮಾಡುವ ವಿಧಾನ ಈ ಹೊಸ ಆಪ್ ನಲ್ಲಿ ಮತ್ತಷ್ಟು ಸರಳಿಕೃತವಾಗಿದೆ. ಸದ್ಯ ಎಲ್ಲ ಕಡೆಯಲ್ಲೂ ಕಾಣಸಿಗುವ ಪೇಟಿಎಮ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇಲ್ಲವೇ ಮೊಬೈಲ್ ನಂಬರ್ ನಲ್ಲಿಯೂ ಹಣ ಪಾವತಿ ಮಾಡಬಹುದಾಗಿದೆ. ಇವೇರಡು ಒಂದೇ ಸ್ಕ್ರಿನ್ ನಲ್ಲಿ ಲಭ್ಯವಿದೆ. ಅಲ್ಲದೇ ಸ್ಕ್ಯಾನ್ ಮಾಡಿದ್ದ ಕ್ಯೂಆರ್ ಕೋಡ್ ಅನ್ನು ಸೇವ್ ಸಹ ಮಾಡಿಕೊಳ್ಳಬಹುದಾಗಿದೆ. ಗ್ಯಾಲರಿಯಿಂದಲೇ ಕೋಡ್ ಸ್ಕಾನ್ ಮಾಡಿಕೊಳ್ಳಬಹುದಾಗಿದೆ.

ರೂ.50,000 ವರೆಗೂ ವರ್ಗಾವಣೆ ಮಾಡಬಹುದು:
ಯಾವುದೇ ಚಾರ್ಜ್ ಇಲ್ಲದೇ ಈ ಹೊಸ ಆಪ್ ಮೂಲಕ ರೂ.50,000 ವರೆಗೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೇ ಬ್ಯಾಂಕ್ ಆಕೌಂಟಿನಿಂದ ನೇರವಾಗಿ ರೂ.50,000ವನ್ನು ಆಪ್‌ಗೆ ತುಂಬಹುದಾಗಿದೆ. ಇದರಿಂದ ಖರೀದಿ ಮತ್ತು ಪಾವತಿ ಎರಡು ಸುಲಭವಾಗಿದೆ.

ಬಾಂಕಿಗೆ ಹಣ ಹಾಕುವ ವಿಧಾನವು ಸರಳಿಕೃತ:
ವ್ಯಾಪಾರಿಗಳು 20,000ಕ್ಕಿಂತ ಹೆಚ್ಚಿನ ಹಣವನ್ನು ಪಡೆದರೆ ಅದನ್ನು ನೇರವಾಗಿ ಬ್ಯಾಂಕ್ ಆಕೌಂಟಿಗೆ ಹಾಕುವ ಸೌಲಭ್ಯವನ್ನು ನೀಡಲಾಗಿದ್ದು, ಇಲ್ಲದೇ ಭದ್ರತೆಗೂ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಪಾಸ್‌ಕೋಡ್, ಪ್ಯಾಟರ್ನ್ ಇಲ್ಲವೇ ಪಿಂಗರ್‌ಪ್ರಿಂಟ್ ಮೂಲಕವೂ ಆಪ್ ಬಳಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470