Home
Apps

ನಿಮ್ಮ “ಆ ದಿನ” ತಿಂಗಳಲ್ಲಿ ಯಾವತ್ತು ಎಂಬುದು ಫೇಸ್ ಬುಕ್ ಗೆ ಗೊತ್ತಾಗುತ್ತಿದೆ!

By Gizbot Bureau

ಈ ಸ್ಟೋರಿ ಓದಿ ನಮ್ಮ ಲೇಡಿಸ್ ಗೆ ಒಮ್ಮೆ ಶಾಕ್ ಆಗಬಹುದು. ಯುಕೆ ಮೂಲದ ಅಡ್ವೋಕೆಸಿ ಗ್ರೂಪ್ ಆಗಿರುವ ಪ್ರೈವೆಸಿ ಇಂಟರ್ನ್ಯಾಷನಲ್ ಹೆಸರಿನ ಸಂಸ್ಥೆಯೊಂದು ಹೊಸ ರೀಸರ್ಚ್ ಒಂದನ್ನು ಮಾಡಿದ್ದು ಇದು ಹೆಂಗಸರ ಪಾಲಿನ ಭಯಾನಕ ಸುದ್ದಿ ಆಗಿದೆ.

"ಆ ದಿನ" ಯಾವತ್ತೆಂಬುದು ಫೇಸ್ ಬುಕ್ ಗೆ ಗೊತ್ತಾಗುತ್ತಿದೆ!

ಹೌದು ನಿಮ್ಮ ತಿಂಗಳ ಚಕ್ರದ ವಿಚಾರವೂ ಕೂಡ ಫೇಸ್ ಬುಕ್ ಗೆ ಗೊತ್ತಾಗುತ್ತದೆ ಅಂದರೆ ನಿಮಗೆ ಆಶ್ಚರ್ಯವೆನಿಸುವುದಿಲ್ಲವೇ? ಎಸ್ ಈ ಅಧ್ಯಯನದಿಂದ ತಿಳಿದು ಬಂದಿರುವ ಸಂಗತಿ ಇದೇ ಆಗಿದೆ. ನೀವು ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದೀರಾ? ನಿಮ್ಮ ಮಾಸಿಕ ಚಕ್ರವನ್ನು ಟ್ರ್ಯಾಕ್ ಮಾಡುವ ಆಪ್ ಗಳಾಗಿರುವ ಎಂಐಎ ಫೆಮ್ ಮತ್ತು ಮಾಯಾದಂತಹ ಆಪ್ ಗಳು ನಿಮ್ಮ ಸೂಕ್ಷ್ಮ ಡಾಟಾವನ್ನು ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುತ್ತಿವೆಯಂತೆ!

ನಿರಂತರ ಪರೀಕ್ಷೆಯ ನಂತರ ಪತ್ತೆ:

ನಿರಂತರ ಪರೀಕ್ಷೆಯ ನಂತರ ಪತ್ತೆ:

ಮಿಲಿಯನ್ ಗೂ ಅಧಿಕ ಮಂದಿ ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿರುವ ಆಪ್ಸ್ ಗಳನ್ನು ಈ ಅಡ್ವೋಕೆಸಿ ಗುಂಪು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಿ ಈ ವರದಿ ನೀಡಿದೆ.

ಮಹಿಳೆಯರ ಸೂಕ್ಷ್ಮ ವಿಚಾರಗಳ ಹಂಚಿಕೆ:

ಮಹಿಳೆಯರ ಸೂಕ್ಷ್ಮ ವಿಚಾರಗಳ ಹಂಚಿಕೆ:

ಯುಕೆ ಮೂಲದ ಅಡ್ವೊಕೆಸಿ ಗ್ರೂಪ್ ಪ್ರೈವೆಸಿ ಇಂಟರ್ನ್ಯಾಷನಲ್ ಪೀರೆಡ್ಸ್ ಟ್ರ್ಯಾಕಿಂಗ್ ಆಪ್ಸ್ ಗಳಾಗಿರುವ ಎಂಐಎ ಫೆಮ್ ಮತ್ತು ಮಾಯಾಗಳು ಮಹಿಳೆಯರ ಗರ್ಭನಿರೋಧಕ ಮಾತ್ರೆಯ ಬಳಕೆ, ಅವರ ಮಾಸಿಕ ಋತುಚಕ್ರದ ದಿನಾಂಕ, ನೋವು ಮತ್ತು ಸೆಳೆತ ಇತ್ಯಾದಿ ಲಕ್ಷಣಗಳ ವಿವರಗಳನ್ನು ನೇರವಾಗಿ ಫೇಸ್ ಬುಕ್ ಜೊತೆಗೆ ಹಂಚಿಕೊಳ್ಳುತ್ತಿವೆ ಎಂದು ಬಝ್ ಫೀಡ್ ನ್ಯೂಸ್ ವರದಿ ಮಾಡಿದೆ.

ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುತ್ತಿರುವ ಆಪ್ ಗಳು:

ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುತ್ತಿರುವ ಆಪ್ ಗಳು:

ಪ್ಲ್ಯಾಕಲ್ ಟೆಕ್ ಅವರಿಂದ ಮಾಯಾ ಮತ್ತು ಮೊಬಾಪ್ ಡೆವಲಪ್ ಮೆಂಟ್ ಲಿಮಿಟೆಡ್ ನ ಎಂಐಎಗಳು ಸಾಮಾಜಿಕ ಜಾಲತಾಣದ ದೈತ್ಯ ಎಂದು ಕರೆಸಿಕೊಳ್ಳುವ ಫೇಸ್ ಬುಕ್ ಮತ್ತು ಇತರೆ ಮೂರನೇ ಪಾರ್ಟಿಗಳೊಂದಿಗೆ ಮಹಿಳೆಯರ ಈ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಫೇಸ್ ಬುಕ್ ಪ್ರತಿಕ್ರಿಯೆ:

ಫೇಸ್ ಬುಕ್ ಪ್ರತಿಕ್ರಿಯೆ:

ಈ ವರದಿಗೆ ಫೇಸ್ ಬುಕ್ ಕೂಡ ಪ್ರತಿಕ್ರಿಯಿಸಿದ್ದು, ನಿಷೇಧಿತ ರೀತಿಯ ಸೂಕ್ಷ್ಮ ಮಾಹಿತಿಯನ್ನು ಕಳುಹಿಸುವುದು ಸೇರಿದಂತೆ ತನ್ನ ಸೇವಾ ನಿಯಮಗಳ ಉಲ್ಲಂಘನೆಯನ್ನು ಚರ್ಚಿಸಲು ಮತ್ತು ಅಂತರಾಷ್ಟ್ರೀಯ ಗೌಪ್ಯತೆ ನೀತಿಯ ಕುರಿತಾಗಿ ಸಂಪರ್ಕದಲ್ಲಿ ಇರಲಾಗಿದೆ ಎಂದು ತಿಳಿಸಿದೆ.

ಲಾಗಿನ್ ಆಗುವ ಮುನ್ನ ಎಚ್ಚರ:

ಲಾಗಿನ್ ಆಗುವ ಮುನ್ನ ಎಚ್ಚರ:

ಸಾಮಾಜಿಕ ನೆಟ್ ವರ್ಕಿಂಗ್ ದೈತ್ಯ ನೀತಿಗಳು ಅದರ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ (ಎಸ್‌ಡಿಕೆಗಳು) ಮತ್ತು ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಗಳನ್ನು ಬಳಸುವ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಂದ ಮಾಹಿತಿಯನ್ನು ಸಂಗ್ರಹಿಸಬಹುದು ಎಂದು ಹೇಳುತ್ತಿದೆ.

ಫೇಸ್ ಬುಕ್ ಮೂಲಕ ಲಾಗಿನ್

ಎಸ್ ಡಿಕೆಗಳು ಆಪ್ಸ್ ಜೊತೆಗೆ ಇಂಟಿಗ್ರೇಟ್ ಆಗಿರುತ್ತದೆ ಮತ್ತು ವಿಶ್ಲೇಷಣೆಗಳು ಅಥವಾ ಫೇಸ್ ಬುಕ್ ನೊಂದಿಗೆ ಲಾಗಿನ್ ಆಗುವುದಕ್ಕೆ ಬಳಕೆದಾರರಿಗೆ ಇವು ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಯಾವುದೇ ಆಪ್ ಗಳಿಗೆ ಫೇಸ್ ಬುಕ್ ಮೂಲಕ ಲಾಗಿನ್ ಆಗಿ ನಿಮ್ಮ ವಯಕ್ತಿಕ ಡಾಟಾ ಹಂಚಿಕೊಳ್ಳುವ ಮುನ್ನ ಹುಷಾರಾಗಿರಿ!

Best Mobiles in India

English summary
Period Tracking Apps Share Confidential Data Via Facebook
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+