ಫೋನ್‌ಪೇಯಿಂದ ಎಟಿಎಂ ಸಮಸ್ಯೆಗೆ ಮುಕ್ತಿ..! ಡಿಜಿಟಲ್‌ ಎಟಿಎಂ ಸೇವೆ ಶುರು..!

By Gizbot Bureau
|

ಪ್ರಮುಖ ಡಿಜಿಟಲ್‌ ಪೇಮೆಂಟ್‌ ವೇದಿಕೆಯಾಗಿರುವ ಫೋನ್‌ಪೇ ಡಿಜಿಟಲ್ ಎಟಿಎಂಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ದೇಶಾದ್ಯಂತ ಹಣ ಹಿಂಪಡೆಯುವ ಕೇಂದ್ರಗಳ ಅತಿದೊಡ್ಡ ಪಡೆಯಾಗಿ ಕಾರ್ಯನಿರ್ವಹಿಸುವ ಮಹತ್ವಾಕಾಂಕ್ಷೆಗಳೊಂದಿಗೆ ಫೋನ್‌ಪೇ ಕಾರ್ಯನಿರ್ವಹಿಸುತ್ತಿದೆ.

ಫೋನ್‌ಪೇಯಿಂದ ಎಟಿಎಂ ಸಮಸ್ಯೆಗೆ ಮುಕ್ತಿ..! ಡಿಜಿಟಲ್‌ ಎಟಿಎಂ ಸೇವೆ ಶುರು..!

ಇದಕ್ಕಾಗಿ, ವಾಲ್‌ಮಾರ್ಟ್ ಒಡೆತನದ ಫೋನ್‌ಪೇ ಅಪ್ಲಿಕೇಶನ್‌ನಲ್ಲಿ 'ಹಿಂತೆಗೆದುಕೊಳ್ಳಿ’ ಬಟನ್ ಅನ್ನು ಅಳವಡಿಸಲಾಗಿದೆ. ಈ ಬಟನ್‌ ಡಿಜಿಟಲ್ ಹಣವನ್ನು ನಗದು ರೂಪಕ್ಕೆ ಪರಿವರ್ತಿಸಲು ಗ್ರಾಹಕರಿಗೆ ಸಹಾಯ ಮಾಡುತ್ತದೆ. ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ವ್ಯಾಪಾರಿಗಳನ್ನು ಈ ಸೇವೆಗೆ ಜಿಯೋಟ್ಯಾಗ್ ಮಾಡಲಾಗಿದ್ದು, ಗ್ರಾಹಕರಿಗೆ ಎಲ್ಲಾ ಕಡೆಯೂ ಈ ಸೇವೆ ಸಿಗುತ್ತದೆ. ಈ ಫೀಚರ್‌ ಮೂಲಕ ವೇದಿಕೆಯಲ್ಲಿ ವ್ಯಾಪಾರಿಗಳ ಬಳಕೆಯನ್ನು ಹೆಚ್ಚಿಸುವ ಆಲೋಚನೆಯಲ್ಲಿ ಫೋನ್‌ಪೇ ಇದೆ.

ಬಹಳಷ್ಟು ಎಟಿಎಂಗಳನ್ನು ನಿರ್ವಹಿಸಲು ಬ್ಯಾಂಕುಗಳಿಗೆ ಆಗುತ್ತಿಲ್ಲ. ಆದ್ದರಿಂದ ಯಾವಾಗಲೂ ಅನೇಕ ಎಟಿಎಂಗಳಲ್ಲಿ ನೋ ಕ್ಯಾಶ್‌ ಬೋರ್ಡ್‌ ಕಾಣುತ್ತೇವೆ ಎಂದು ಫೋನ್‌ಪೆಯ ಆಫ್‌ಲೈನ್ ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥ ವಿವೇಕ್ ಲೋಹ್ಚೆಬ್ ಹೇಳಿದ್ದಾರೆ. ಈ ಸಮಸ್ಯೆ ಟಯರ್‌ 3 ಮತ್ತು 4 ನಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಜನ ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮರ್ಚೆಂಟ್ ಡಿಸ್ಕೌಂಟ್ ದರಗಳ (ಎಂಡಿಆರ್) ಅನುಪಸ್ಥಿತಿಯಲ್ಲಿ, ಪ್ರಮುಖ ಪೇಮೆಂಟ್‌ ಆಪ್‌ ಆಗಿರುವ ಫೋನ್‌ಪೇ, ಅಸ್ತಿತ್ವದಲ್ಲಿರುವ ವ್ಯಾಪಾರ ಚಾನೆಲ್‌ಗಳಿಗೆ ಮೌಲ್ಯವರ್ಧಿತ ಸೇವೆಗಳನ್ನು ಪರಿಚಯಿಸುವುದು ಸೂಕ್ತ ಎಂದು ನಂಬಿದೆ. ಇದರಿಂದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭವಿಷ್ಯದ ಬೆಳವಣಿಗೆಗೆ ಪೇಟಿಎಂ, ಗೂಗಲ್ ಮತ್ತು ವಾಟ್ಸ್‌ಆಪ್‌ಗಳೊಂದಿಗೆ ಸ್ಪರ್ಧಿಸಲು ಸಹಾಯವಾಗುತ್ತದೆ.

Most Read Articles
Best Mobiles in India

Read more about:
English summary
PhonePe likely to bring digital ATMs at offline stores

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X