ಕೆವೈಸಿಗಾಗಿ ಗ್ರಾಹಕರ ಮನೆ ಬಾಗಿಲಿಗೆ ಹೊರಟ ಫೋನ್‌ಪೇ..!

By Gizbot Bureau
|

ಡಿಜಿಟಲ್‌ ವ್ಯಾಲೆಟ್‌ಗಳಿಗೆ ಕೆವೈಸಿ ಅಳವಡಿಸಲು ಆರ್‌ಬಿಐ ನೀಡಿದ್ದ ಗಡುವು ಮುಕ್ತಾಯಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು, ಆಗಸ್ಟ್‌ ಅಂತ್ಯಕ್ಕೆ ಈ ಗಡುವು ಮುಗಿಯಲಿದೆ. ಅದಕ್ಕಾಗಿಯೇ ಪ್ರಮುಖ ಡಿಜಿಟಲ್‌ ವ್ಯಾಲೆಟ್‌ ಕಂಪನಿ ಫೋನ್‌ಪೇ ಕೆವೈಸಿ ಸೇವೆ ಪೂರೈಸಲು ಗ್ರಾಹಕರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದೆ. ಬಳಕೆದಾರರ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವುದು ದುಬಾರಿಯಾಗಿದೆ.

ಕೆವೈಸಿಗಾಗಿ ಗ್ರಾಹಕರ ಮನೆ ಬಾಗಿಲಿಗೆ ಹೊರಟ ಫೋನ್‌ಪೇ..!

ಆದರೆ ಇ-ಕೆವೈಸಿಗಾಗಿ ಆಧಾರ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ನಂತರ ವ್ಯಾಲೆಟ್‌ ಕಂಪನಿಗಳಿಗೆ ಹೆಚ್ಚಿನ ಆಯ್ಕೆ ಉಳಿದಿಲ್ಲ. ಗ್ರಾಹಕರು ತಮ್ಮ ಸಂಪೂರ್ಣ ಕೆವೈಸಿ ಮಾಡಿಸುವ ಗಡುವನ್ನು ಆರ್‌ಬಿಐ ಆಗಸ್ಟ್‌ವರೆಗೆ ವಿಸ್ತರಿಸಿತ್ತು, ಮೊದಲ ಗಡುವು ಫೆಬ್ರವರಿ 28ಕ್ಕೆ ಅಂತ್ಯವಾಗಿತ್ತು.

ಸಂಪೂರ್ಣ ಕೆವೈಸಿ ಅನಿವಾರ್ಯ

ಸಂಪೂರ್ಣ ಕೆವೈಸಿ ಅನಿವಾರ್ಯ

ಈ ಮೊದಲು ಮೊಬೈಲ್ ಸಂಖ್ಯೆಗೆ ಒಟಿಪಿ ಆಧರಿಸಿ ಭಾಗಶಃ ಕೆವೈಸಿ ಮಾಡಬಹುದಿತ್ತು. ಆದರೆ, ಆರ್‌ಬಿಐ ಕಾನೂನುಗಳ ಪ್ರಕಾರ ವ್ಯಾಲೆಟ್‌ಗಳು ಸಕ್ರಿಯವಾಗಿರಲು ಪೂರ್ಣ ಕೆವೈಸಿ ಮಾಡಬೇಕಾಗಿದೆ. ಐಡಿ ಪ್ರೂಫ್ ಮತ್ತು ವಿಳಾಸ ಪುರಾವೆ ಸೇರಿದಂತೆ ವಿವಿಧ ದಾಖಲೆಗಳ ಸಲ್ಲಿಕೆಯನ್ನು ಕೆವೈಸಿ ಒಳಗೊಂಡಿದೆ.

ಭೌತಿಕ ಕೆವೈಸಿ

ಭೌತಿಕ ಕೆವೈಸಿ

ಅಸ್ತಿತ್ವದಲ್ಲಿರುವ ನಮ್ಮ 8,000 ಜನರ ಏಜೆಂಟ್‌ಗಳನ್ನು ಬಳಸಿಕೊಂಡು ನಮ್ಮ ಗ್ರಾಹಕರ ಭೌತಿಕ ಕೆವೈಸಿ ಮಾಡಲು ಯೋಜನೆ ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದೇವೆ ಎಎಂದು ಫೋನ್‌ಪೇ ಸಹ-ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಹೇಳಿದ್ದಾರೆ. ಈ ಏಜೆಂಟ್‌ಗಳು ಈಗಾಗಲೇ ಫೋನ್‌ಪೆಯಲ್ಲಿ ಆಫ್‌ಲೈನ್ ವ್ಯಾಪಾರಿಗಳಿಗೆ ಕೆಲಸ ಮಾಡುತ್ತಿದ್ದಾರೆ. ವರ್ಷಾರಂಭದಲ್ಲಿ, ಅಮೆಜಾನ್ ಕೂಡ ತನ್ನ ವಾಲೆಟ್ ಅಮೆಜಾನ್ ಪೇ ಬಳಕೆದಾರರಿಗೆ ಇದೇ ರೀತಿಯ ಪ್ರಕ್ರಿಯೆ ಆರಂಭಿಸಿತ್ತು.

ಪರ್ಯಾಯ ಮಾರ್ಗಕ್ಕೆ ಅನುಮತಿಯಿಲ್ಲ

ಪರ್ಯಾಯ ಮಾರ್ಗಕ್ಕೆ ಅನುಮತಿಯಿಲ್ಲ

ಬಳಕೆದಾರರ ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಡಿಯೋ ಕೆವೈಸಿಯಂತಹ ಪರ್ಯಾಯ ಆಯ್ಕೆಗಳನ್ನು ವ್ಯಾಲೆಟ್‌ ಕಂಪನಿಗಳು ನಿರೀಕ್ಷಿಸುತ್ತಿದ್ದವು. ಆದರೆ, ಆರ್‌ಬಿಐ ಇನ್ನೂ ಅಂತಹ ಯಾವುದೇ ಪರ್ಯಾಯ ವಿಧಾನಕ್ಕೆ ಅನುಮೋದನೆ ನೀಡಿಲ್ಲ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ತನ್ನ ಬಹುಪಾಲು ವಹಿವಾಟುಗಳನ್ನು ನಿರ್ವಹಿಸುವ ಫೋನ್‌ಪೇ, ಸಣ್ಣ ಟಿಕೆಟ್ ಗಾತ್ರದ ವಹಿವಾಟುಗಳಿಗೆ ವ್ಯಾಲೆಟ್‌ ಬಳಸುವ ಬಳಕೆದಾರರ ಸಕ್ರಿಯ ನೆಲೆಯನ್ನು ಹೊಂದಿದೆ. ಜುಲೈನಲ್ಲಿ ನಡೆದ 335 ಮಿಲಿಯನ್ ವಹಿವಾಟುಗಳಲ್ಲಿ, 300 ಮಿಲಿಯನ್ ವಹಿವಾಟುಗಳು ಯುಪಿಐನಿಂದ ಬಂದಿವೆ. ಫೋನ್‌ಪೇಯು ಭೌತಿಕ ಕೆವೈಸಿಗೆ ಮುಂದಾಗಿರುವುದು ಏಕೆಂದರೆ, ಗ್ರಾಹಕರು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟು ಮುಂದುವರಿಸಲಿ ಎಂಬುದು ಪ್ರಮುಖ ಅಂಶವಾಗಿದೆ. ಅಮೆಜಾನ್‌ನಂತಹ ಕಂಪನಿಗಳು ಸಹ ಇದೇ ಕಾರಣಗಳಿಗಾಗಿ ಭೌತಿಕ ಕೆವೈಸಿಯನ್ನು ಪ್ರಯತ್ನಿಸಿದ್ದವು. ಅಂದಾಜಿನ ಪ್ರಕಾರ ಕನಿಷ್ಠ 70% ವ್ಯಾಲೆಟ್ ಖಾತೆಗಳು ಸಂಪೂರ್ಣ ಕೆವೈಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಕೂಡ ವರದಿಯಾಗಿದೆ.

 ದುಬಾರಿ ಪ್ರಕ್ರಿಯೆ

ದುಬಾರಿ ಪ್ರಕ್ರಿಯೆ

ಈ ಪ್ರಕ್ರಿಯೆ ದುಬಾರಿ ಮಾತ್ರವಲ್ಲದೆ, ವಾರದ ದಿನಗಳಲ್ಲಿ ಗ್ರಾಹಕರು ಹಾಜರಾಗಲು ಸಿದ್ಧರಿರುವ ಸಮಯ ಸ್ಲಾಟ್‌ಗಳನ್ನು ಹೊಂದಿಸುವುದು ಕಠಿಣವಾಗಿದೆ ಅಥವಾ ಅನೇಕ ವ್ಯಾಲೆಟ್‌ಗಳು ಕೂಡ ಇದೇ ಪ್ರಕ್ರಿಯೆ ನಡೆಸುತ್ತವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಹೆಚ್ಚಿನ ಗ್ರಾಹಕರು ಸಾಮಾನ್ಯವಾಗಿ ತಮ್ಮ ಫೋನ್‌ನಲ್ಲಿ ಎರಡು ಅಥವಾ ಮೂರು ಮೊಬೈಲ್ ವ್ಯಾಲೆಟ್‌ಗಳನ್ನು ಹೊಂದಿರುತ್ತಾರೆ. ಈ ಮೊದಲು ಇ-ಕೆವೈಸಿ ಬೆಲೆ 15 ರೂ., ಈಗ ಭೌತಿಕ ಕೆವೈಸಿ ವೆಚ್ಚ ಕನಿಷ್ಠ 100 ರೂ. ಆಗುತ್ತದೆ.

Best Mobiles in India

English summary
PhonePe Now Offers Doorstep KYC Verification For Free

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X