ಮೊದಲ ಬಾರಿ ಫೋನ್ ಪೇಯಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಿದವರಿಗೆ 50 ರುಪಾಯಿ ಕ್ಯಾಷ್ ಬ್ಯಾಕ್
ರೈಲ್ವೇ ಟಿಕೆಟ್ ಬುಕ್ಕಿಂಗ್ ಗೆ ಕ್ಯೂನಲ್ಲಿ ನಿಲ್ಲೋ ಕಾಲ ಯಾವತ್ತೋ ಹೋಯ್ತು. ಇದೀಗ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಸಮಯ. ಅದಕ್ಕಾಗಿ ಆಪ್ ಗಳು ಕೂಡ ಸಾಕಷ್ಟು ನೆರವು ನೀಡುತ್ತಿದೆ. ಇದೀಗ ಫೋನ್ ಪೇ ಸರದಿ.

ಹೌದು ಫೋನ್ ಪೇ ಪ್ರಕಟಿಸಿರುವಂತೆ ಇದೀಗ ಫೋನ್ ಪೇ ಬಳಕೆದಾರರು ನೇರವಾಗಿ ಆಪ್ ಮೂಲಕ ರೈಲ್ವೇ ಟಿಕೆಟ್ ಗಳನ್ನು ಬುಕ್ ಮಾಡಬಹುದು. ಡಿಜಿಟಲ್ ಪೇಮೆಂಟ್ ಕಂಪೆನಿ ಇದೀಗ ಭಾರತೀಯ ರೈಲ್ವೇ ಮತ್ತು ಟೂರಿಸಂ ಕಾರ್ಪೋರೇಷನ್ ಜೊತೆಗೆ ಕೈಜೋಡಿಸಿದ್ದು ಹೊಸದಾಗಿ ಫೋನ್ ಪೇನಲ್ಲಿ ಐಆರ್ ಸಿಟಿಸಿ ಮೈಕ್ರೋ ಆಪ್ ನ್ನು ಪರಿಚಯಿಸಿದೆ.

50 ರುಪಾಯಿ ಕ್ಯಾಷ್ ಬ್ಯಾಕ್:
ಫೋನ್ ಪೇ ಆಪ್ ನಲ್ಲಿ ಹಲವಾರು ರೀತಿಯ ಪೇಮೆಂಟ್ ಆಯ್ಕೆಗಳನ್ನು ಬಳಕೆದಾರರಿಗಾಗಿ ನೀಡಲಾಗಿದ್ದು ಯುಪಿಐ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ಫೋನ್ ಪೇ ವ್ಯಾಲೆಟ್ ಮೂಲಕ ಪಾವತಿ ಮಾಡಬಹುದು. ಇದರ ಜೊತೆಗೆ ಬಳಕೆದಾರರಿಗೆ ಮೊದಲ ಬಾರಿ ರೈಲ್ವೇ ಟಿಕೆಟ್ ನ್ನು ಫೋನ್ ಪೇ ಮೂಲಕ ಪಾವತಿ ಮಾಡಿದ್ದಲ್ಲಿ 50 ರುಪಾಯಿ ಕ್ಯಾಷ್ ಬ್ಯಾಕ್ ಆಫರ್ ಕೂಡ ಸಿಗಲಿದೆ. ಈ ಆಫರ್ ಡಿಸೆಂಬರ್ 4 ರ ವರೆಗೆ ಇರುತ್ತದೆ.

ಹೆಚ್ಚುವರಿ ಶುಲ್ಕ ಇರುವುದಿಲ್ಲ:
ಮಾಧ್ಯಮಗೋಷ್ಟಿಯಲ್ಲಿ ಕಂಪೆನಿಯು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಫೋನ್ ಪೇ ಮೂಲಕ ರೈಲ್ವೇ ಟಿಕೆಟ್ ಬುಕ್ಕಿಂಗ್ ಮಾಡುವುದಕ್ಕಾಗಿ ಹಲವಾರು ರೀತಿಯ ಆಫರ್ ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಅಂದರೆ ಅವರಿಗೆ ಉತ್ತಮ ರೈಲ್ವೇ ಬುಕ್ಕಿಂಗ್ ಅನುಭವ ನೀಡಲು ಫೋನ್ ಪೇ ಸಿದ್ಧವಾಗಿದೆ. ಆಪ್ ನಲ್ಲಿ ಬುಕ್ಕಿಂಗ್ ಮಾಡುವುದಕ್ಕಾಗಿ ಸಂಸ್ಥೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ ಎಂಬುದನ್ನು ಕೂಡ ದೃಢಪಡಿಸಿದೆ.

ಫೋನ್ ಪೇ ಆಪ್
ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಫೋನ್ ಪೇ ಆಪ್ ಫ್ಲ್ಯಾಟ್ ಫಾರ್ಮ್ ನ ಮುಖ್ಯಸ್ಥರಾಗಿರುವ ರಿತುರಾಜ್ ರಾಯ್ಟೇಲಾ ನಮ್ಮ ಆಪ್ ನಲ್ಲಿ ಇದನ್ನು ಸೇರಿವುದಕ್ಕೆ ನಾವು ಕಾತರರಾಗಿದ್ದೇವೆ. ಐಆರ್ಸಿಟಿಸಿಯಲ್ಲಿ ಈಗಾಗಲೇ ಅವರ ಬುಕ್ಕಿಂಗ್ ಮಾಡುವುದಕ್ಕೆ ಅವಕಾಶವಿತ್ತು. ಇದೀಗ ನೇರವಾಗಿ ಟಿಕೆಟ್ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ 100 ಮಿಲಿಯನ್ ಗ್ರಾಹಕರ ಜೊತೆಗೆ ಉತ್ತಮ ಭಾಂಧವ್ಯ ಮತ್ತು ಯಾವುದೇ ಸಮಸ್ಯೆ ರಹಿತ ಜೀವನಕ್ಕಾಗಿ ಅನುಕೂಲ ಮಾಡಿಕೊಡುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಪ್ರವಾಸ ಮತ್ತು ಪ್ರಯಾಣದಲ್ಲಿ ಯಾವುದೇ ಪ್ರಯಾಸ ಇರಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಖಂಡಿತ ಇದು ನೆರವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications





