Home
Apps

ಬೆಂಗಳೂರಿನಲ್ಲಿ ನಡೆಯಲಿದೆ PUBG MCC ಫೈನಲ್‌..! ಗೆದ್ದವರಿಗೆ 15 ಲಕ್ಷ ರೂ...!

PUBG ಗೇಮ್‌ ಭಾರತದ ಯುವಕರಲ್ಲಿ ಹುಚ್ಚೇಬ್ಬಿಸಿದ್ದು, ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. Tencent Games ಮತ್ತು Oppo Mobile ಸಹಯೋಗದಲ್ಲಿ ಭಾರತದಲ್ಲಿ ಆಯೋಜಿಸಿದ್ದ PUBG ಮೊಬೈಲ್‌ ಕ್ಯಾಂಪಸ್‌ ಚಾಂಪಿಯನ್‌ಶಿಪ್‌ಗೆ 2 ,50,000 ವಿದ್ಯಾರ್ಥಿಗಳು ನೊಂದಣಿಯಾಗಿರುವುದು ದಾಖಲೆಯಾಗಿದೆ. ಚಾಂಪಿಯನ್‌ಶಿಪ್‌ಗೆ ಸೆಪ್ಟೆಂಬರ್ 26ರಂದು ನೊಂದಣಿ ಆರಂಭವಾಗಿತ್ತು.

ಬೆಂಗಳೂರಿನಲ್ಲಿ ನಡೆಯಲಿದೆ PUBG MCC ಫೈನಲ್‌..! ಗೆದ್ದವರಿಗೆ 15 ಲಕ್ಷ ರೂ...!

PUBG ಮೊಬೈಲ್‌ ಕ್ಯಾಂಪಸ್‌ ಚಾಂಪಿಯನ್‌ಶಿಪ್‌ನ ಮೊದಲ ಹಂತ ಆನ್‌ಲೈನ್‌ನಲ್ಲಿ ನಡೆದಿದ್ದು, ಒಟ್ಟು 600 ಪಂದ್ಯಗಳು ನಡೆದಿವೆ. 12 ದಿನದಲ್ಲಿ 4 ನಾಕ್‌ಔಟ್‌ ಸುತ್ತುಗಳು ನಡೆದು ನಂತರ ಸೆಮಿಫೈನಲ್‌ನಲ್ಲಿ 20 ತಂಡಗಳು ಅಕ್ಟೋಬರ್‌ 21ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ KTPOನಲ್ಲಿ ನಡೆಯುವ ಫೈನಲ್‌ನಲ್ಲಿ ಭಾಗವಹಿಸಲಿವೆ.

50 ಲಕ್ಷದ ಬಹುಮಾನ

50 ಲಕ್ಷದ ಬಹುಮಾನ

PUBG ಮೊಬೈಲ್‌ ಕ್ಯಾಂಪಸ್‌ ಚಾಂಪಿಯನ್‌ಶಿಪ್‌ 50 ಲಕ್ಷ ರೂ. ಮೌಲ್ಯದ ಬಹುಮಾನವನ್ನು ಹೊಂದಿದ್ದು, ವಿಜಯಶಾಲಿ ತಂಡ 15 ಲಕ್ಷ ರೂ. ನಗದು ಬಹುಮಾನ ಪಡೆಯಲಿದ್ದಾರೆ.

ವಿವಿಧ ಪ್ರಶಸ್ತಿಗಳು

ವಿವಿಧ ಪ್ರಶಸ್ತಿಗಳು

ವಿವಿಧ ಸಾಧನೆಗಳನ್ನು ಮಾಡಿದ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ಪಡೆಯುತ್ತಾರೆ. ಒಟ್ಟು ಆರು ವಿಶೇಷ ಪ್ರಶಸ್ತಿಗಳಿದ್ದು, ಗರಿಷ್ಟ ಜನರನ್ನು ಕೊಂದ ಆಟಗಾರನಿಗೆ ದಿ ಎಕ್ಸಿಕ್ಯೂಶನರ್, ಹೆಚ್ಚಿನ ಸಂಖ್ಯೆಯ ಪುನರುಜ್ಜೀವನ ಪಡೆದ ಆಟಗಾರನಿಗೆ ಮೆಡಿಕ್, ಅತ್ಯಧಿಕ ಆರೋಗ್ಯ ಹೊಂದುವ ಆಟಗಾರನಿಗೆ ದಿ ರೆಡೀಮರ್, ಆಟದಲ್ಲಿ ದೀರ್ಘಾವಧಿ ಬದುಕುಳಿಯುವ ಆಟಗಾರನಿಗೆ ಲೋನ್ ರೇಂಜರ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಎರಾಂಜೆಲ್‌ ನಕ್ಷೆಯಲ್ಲಿ ಚಾಂಪಿಯನ್‌ಶಿಪ್‌

ಎರಾಂಜೆಲ್‌ ನಕ್ಷೆಯಲ್ಲಿ ಚಾಂಪಿಯನ್‌ಶಿಪ್‌

ಚಾಂಪಿಯನ್‌ಶಿಪ್‌ ಎರಾಂಜೆಲ್‌ ನಕ್ಷೆಯಲ್ಲಿ ನಡೆಯುತ್ತದೆ. PUBG ಮೊಬೈಲ್‌ ಗೇಮ್‌ನಲ್ಲಿ ಮಿರಾಮಾರ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಸ್ಯಾನ್‌ಹೋಕ್‌ ಸೇರಿ ಒಟ್ಟು ಮೂರು ನಕ್ಷೆಗಳು ಇವೆ.

ಎಕ್ಸ್‌ಕ್ಲೂಸಿವ್‌ ಆಫರ್‌

ಎಕ್ಸ್‌ಕ್ಲೂಸಿವ್‌ ಆಫರ್‌

PUBG ಮೊಬೈಲ್ ಲಿಮಿಟೆಡ್‌ BAPE ಕ್ರೇಟುಗಳನ್ನು ಕೂಡಾ ನೀಡುತ್ತಿದ್ದು, A Bathing Ape (BAPE) ಪಾಲುದಾರಿಕೆಯೊಂದಿಗೆ PUBG ಮೊಬೈಲ್ ವಿಶೇಷ BAPE ಬಟ್ಟೆ ಮತ್ತು ಅಕ್ಸೆಸರಿಸ್‌ಗಳನ್ನು ನೀಡುತ್ತಿದೆ. PUBG ಮೊಬೈಲ್‌ನಲ್ಲಿನ BAPE ಕ್ರೇಟ್‌ನಲ್ಲಿ ಜನಪ್ರಿಯ ಶಾರ್ಕ್‌ ಹೂಡಿ, ಶಾರ್ಟ್ಸ್‌, ಹುರಿಯುವ ಪ್ಯಾನ್, ಬೂಟುಗಳು ಮತ್ತು ಗನ್ ಹೊಂದಿದೆ.

Best Mobiles in India

English summary
PUBG Mobile Campus Championship India hits 250,000 registrations. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+