PUBGಯಲ್ಲಿ ಮತ್ತೊಂದು ಹೊಸ ಅಪ್ ಡೇಟ್
ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ PUBG ಮೊಬೈಲ್ ಒಂದು ಪ್ರಸಿದ್ಧ ಶೂಟರ್ ಗೇಮ್ ಅನ್ನಿಸಿಕೊಂಡಿದೆ. ಇದೀಗ ಮತ್ತೊಮ್ಮೆ ಇದರಲ್ಲಿ ಮಹತ್ವದ ಅಪ್ ಡೇಟ್ ಒಂದು ಆಗುತ್ತಿದೆ.

ನಾಲ್ಕನೇ ಮ್ಯಾಪ್ ನ ಬಿಡುಗಡೆ:
ಈ ಮೊಬೈಲ್ ಗೇಮ್ ನಲ್ಲಿ ಈಗಾಗಲೇ ಮೂರು ಮ್ಯಾಪ್ ಗಳು ಪ್ಲೇ ಆನ್ ನಲ್ಲಿ ಲಭ್ಯವಿದೆ - ಎರಾಂಜೆಲ್, ಮಿರಮಾರ್ ಮತ್ತು ಸನ್ಹೋಕ್. ಸನ್ಹೋಕ್ ಇತ್ತೀಚೆಗಷ್ಟೇ ಈ ಲಿಸ್ಟ್ ಸೇರಿಕೊಂಡಿರುವುದಾಗಿದೆ. ಆದರೆ ಇದೀಗ ನಾಲ್ಕನೇ ಮ್ಯಾಪ್ ವೊಂದು ಈ ಲಿಸ್ಟ್ ಗೆ ಸೇರುತ್ತಿದೆ ಅದುವೇ ವಿಕೆಂಡಿ.

ಹಿಮದ ಥೀಮ್ ಹೊಂದಿರುವ ಮ್ಯಾಪ್:
ಹೊಸದಾಗಿರುವ ಸ್ನೋ-ಥೀಮ್ ಹೊಂದಿರುವ ಮ್ಯಾಪ್ ಇದಾಗಿದ್ದು ಸದ್ಯ ಬೆಟಾ ಸ್ಟೇಜ್ ನಲ್ಲಿ ಈ ತಿಂಗಳ ಆರಂಭದಿಂದಲೇ ಲಭ್ಯವಿದೆ. ಆದರೆ PUBG ಮೊಬೈಲ್ ಇದುವರೆಗೂ ಈ ಮ್ಯಾಪ್ ನ್ನು ಕನ್ಫರ್ಮ್ ಮಾಡಿಲ್ಲ.

ಸರ್ವರ್ ಡೌನ್ :
ಈ ಹೊಸ ಅಪ್ ಡೇಟ್ ಬಗ್ಗೆ ಗೇಮ್ ನ ಡೆವಲಪರ್ ಆಗಿರುವ ಟೆನ್ಸೆಂಟ್ ದೃಢಪಡಿಸಿದರು. ಇತ್ತೀಚೆಗೆ "ಮೈಂಟೆನೆನ್ಸ್ ನೋಟಿಸ್" ಎಚ್ಚರಿಕೆಯನ್ನು ಕಳುಹಿಸಿದಾಗ ಕೆಲವು ಸಮಯದವರೆಗೆ PUBG ಮೊಬೈಲ್ ಸರ್ವರ್ ಗಳು ಡೌನ್ ಆಗಿದ್ದವು. ಈ ಸಂದರ್ಬದಲ್ಲಿ ಹೊಸ ವಿಕೆಂಡಿ ಮ್ಯಾಪ್ ಅಪ್ ಡೇಟ್ ಕೂಡ ಸೇರಿತ್ತು.
ಸರ್ವರ್ ಡಿಸೆಂಬರ್ 17 ರಂದು ಅಂದರೆ ಇಂದು ಬೆಳಿಗ್ಗೆ 12ಎಎಂ ನಿಂದ 9ಎಎಂ ಯುಟಿಸಿ ವರೆಗೆ ಸರ್ವರ್ ಡೌನ್ ಇತ್ತು. ಅಂದರೆ ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 17 ರ ಮಧ್ಯಾಹ್ನ 2.30ರ ವರೆಗೆ ಸರ್ವರ್ ಡೌನ್ ಇತ್ತು.

ರಿವಾರ್ಡ್ಸ್ ಗಳು ಲಭ್ಯ:
ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನ PUBG ಮೊಬೈಲ್ ವರ್ಷನ್ ನ ಅಪ್ ಡೇಟ್ ಗಾಗಿ ಡಿಸೆಂಬರ್ 18 ರಂದು ಅನುಸರಿಸಲಾಗುತ್ತದೆ. ಡಿಸೆಂಬರ್ 25 ರ ಒಳಗೆ ಗೇಮ್ ನ್ನು ಅಪ್ ಡೇಟ್ ಮಾಡಿಕೊಂಡರೆ ಗೇಮರ್ ಗಳಿಗೆ ಔಟ್ ಫಿಟ್ ಬಾಕ್ಸ್ III (7d) x1 ಮತ್ತು 1,888 BP ಲಭ್ಯವಾಗುತ್ತದೆ.

PUBG ಮೊಬೈಲ್ ನ ವಿಕೆಂಡಿ ಮ್ಯಾಪ್ ಅಪ್ ಡೇಟ್ ನಲ್ಲಿ ಹೊಸತೇನಿದೆ?
ಇದರಲ್ಲಿ 6km x 6km ನ ಮಂಜಿನ ಥೀಮ್ ಇರುವ ವಿಕೆಂಡಿ ಮ್ಯಾಪ್ ಲಭ್ಯವಾಗುತ್ತದೆ. ಇದನ್ನು ಮ್ಯಾಚ್ ಮಾಡುವಂತಹ ಹೊಸ ಸ್ನೋ-ಥೀಮ್ ಪ್ರಮುಖ ಮೆನುವಿನಲ್ಲಿ ಇರುತ್ತದೆ. ಹೊಸ ಅಪ್ ಡೇಟ್ ನಲ್ಲಿ ಅರೆಬಿಕ್ ಭಾಷೆಯನ್ನು ಬೆಂಬಲಿಸಲಾಗುತ್ತದೆ, ಕ್ರಾಸ್ ಸರ್ವರ್ ಮ್ಯಾಚ್ ಮೇಕಿಂಗ್, ಗೇಮ್ ನಲ್ಲಿ ಅನುಮಾನಾಸ್ಪದ ವರ್ತನೆಯನ್ನು ವರದಿ ಮಾಡಲು ಅವಕಾಶ ಇತ್ಯಾದಿ ಫೀಚರ್ ಗಳಿದೆ. ಅಪ್ ಡೇಟ್ ನಲ್ಲಿ ಫೈಯರ್ ಆರ್ಮ್ ಫಿನಿಶ್ ಅಪ್ ಗ್ರೇಡ್ ಸಿಸ್ಟಮ್ ಮತ್ತು ಸೀಸನ್ ಸ್ಪೆಂಡಿಂಗ್ ರಿವಾರ್ಡ್ಸ್ ಕೂಡ ಲಭ್ಯವಿದೆ.

ವಿಕೆಂಡಿ ಮ್ಯಾಪ್ ನ ಸ್ಪೆಷಾಲಿಟಿ:
ಈ ತಿಂಗಳ ಆರಂಭದಲ್ಲಿ ವಿಕೆಂಡಿ ಮ್ಯಾಪ್ ನ್ನು ಟೆಸ್ಟ್ ಸರ್ವರ್ ನಲ್ಲಿ ಪರಿಚಯಿಸುವ ಸಂದರ್ಬದಲ್ಲಿ ಇತರೆ ಎಲ್ಲಾ ಮ್ಯಾಪ್ ಗಳಿಗಿಂತ ಇದು ಹೆಚ್ಚು ವೇಗವಾಗಿತ್ತು. ವೆಹಿಕಲ್ ಗಳು ಇದರಲ್ಲಿ ಮಂಜಿನ ಕಾರಣದಿಂದ ಜಾರುತ್ತದೆ ಮತ್ತು ಆಟಗಾರರು, ವಾಹನ ಚಲಿಸಿದ ಗುರುತುಗಳು ಹಿಮದಲ್ಲಿ ಮೂಡುತ್ತದೆ. ಹೊಸ ವಾಹನ ಮತ್ತು ಆಕ್ರಮಣಕಾರಿ ರೈಫಲ್ ಕೂಡ ಪರಿಚಯಿಸಲಾಗಿದೆ ಮತ್ತು ಜಿ36ಸಿ ಅಸಾಲ್ಟ್ ರೈಫಲ್ ಕೂಡ ನೀಡಲಾಗಿದೆ. ರೈಫಲ್ ವಿಕೆಂಡಿಯಲ್ಲಿ ಅತ್ಯಂತ ಜನಪ್ರಿಯಾವಾಗಿರುವ SCAR ನ್ನು ಬದಲಿಸುತ್ತದೆ.


Click it and Unblock the Notifications





