ಗೇಮ್ ಪ್ರೀಯರಿಗೆ ಅಮಲೇರಿಸಿದೆ PUBG ಗೇಮ್..! ಡೌನ್‌ಲೋಡ್ ಸಂಖ್ಯೆ ಬೆರಗಾಗಿಸುತ್ತದೆ...!
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೇಮರ್‌ಗಳನ್ನು ಕಾಣಬಹುದಾಗಿದೆ. ಗೇಮ್ ಆಡುವ ಸಲುವಾಗಿ ಸ್ಮಾರ್ಟ್‌ಫೋನ್ ಖರೀದಿ ಮಾಡುವವರನ್ನು ಇಂದು ನಮ್ಮ ನಡುವೆ ಇದ್ದಾರೆ. ಅಲ್ಲದೇ ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಗೇಮಿಂಗ್‌ಗಾಗಿಯೇ ಸ್ಮಾರ್ಟ್‌ಫೋನ್‌ಗಳನ್ನು ವಿಶೇಷವಾಗಿ ನಿರ್ಮಿಸುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ PUBG ಗೇಮ್ ಹೊಸ ಸಾಧನೆಯನ್ನು ಮಾಡಿದೆ.

ಗೇಮಿಂಗ್ ಪ್ರಿಯರಿಗೆ PUBG ಗೇಮ್ ಅಮಲೇರಿಸಿದೆ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ವಯಸ್ಸಿನ, ಎಲ್ಲಾ ವರ್ಗದ ಬಳಕೆದಾರರು PUBG ಗೇಮ್ ಆಡುವುದನ್ನು ಕಾಣಬಹುದಾಗಿದೆ. ಈಗಾಗಲೇ ಯಶಸ್ಸು ಕಂಡಿರುವ PUBG ಗೇಮ್ ಲೈಟ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು, ಪ್ಲೇ ಸ್ಟೋರಿನಲ್ಲಿ 100 ಮಿಲಿಯನ್ ಡೌನ್‌ಲೋಡ್ ಅನ್ನು ಕಂಡಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿ ಗೇಮ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

ಆಂಡ್ರಾಯ್ಡ್ ಮತ್ತು iOS:
ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ PUBG ಗೇಮ್ ಬಳಕೆಗೆ ಮುಕ್ತವಾಗಿಗಿದೆ. ವಿಶ್ವದಲ್ಲಿ ಬಳಕೆಯಾಗುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ PUBG ಗೇಮ್ ಅನ್ನು ಅಡಬಹುದಾಗಿದೆ. ಚೀನಾದಲ್ಲಿ ಮತ್ತು ಭಾರತದಲ್ಲಿಯೇ ಹೆಚ್ಚಿನ ಮಂದಿ PUBG ಗೇಮ್ ಬಳಕೆದಾರರನ್ನು ನೋಡಬಹುದಾಗಿದೆ. ಒಂದು ಮಾದರಿಯಲ್ಲಿ ಯುದ್ದದ ತಂತ್ರಗಳನ್ನು ಹೊಂದಿರುವ ಗೇಮ್ ಗ್ರಾಫಿಕ್ಸ್ ನಿಂದಲೂ ಸದ್ದು ಮಾಡುತ್ತಿದೆ.

100 ಮಿಲಿಯನ್ ಡೌನ್‌ಲೋಡ್:
PUBG ಗೇಮ್ ಡೌನ್‌ಲೋಡ್ ಮಾಡಿರುವವರ ಸಂಖ್ಯೆಯೂ 100 ಮಿಲಿಯನ್ ದಾಟಿದೆ. ಈಗಾಗಲೇ ಬಳಕೆದಾರರಿಗೆ ಸಾಕಷ್ಟು ಹೊಸ ಅನುಭವನ್ನು ನೀಡುತ್ತಿರುವ ಕಾರಣದಿಂದಾಗಿ ಇನ್ನು ಡೌನ್‌ಲೋಡ್ ಮಾಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಒಮ್ಮೆ ಬಳಸಿ ನೋಡಿ.

PUBG ಗೇಮ್:
ಇದಲ್ಲದೇ PUBG ಗೇಮ್ ಅನ್ನು ಪ್ಲೇ ಸ್ಟೇಷನ್ ಮತ್ತು ಪಿಸಿಯಲ್ಲಿಯೂ ಆಡುವ ಅವಕಾಶವನ್ನು ನೀಡುತ್ತಿದೆ. ಈಗಾಗಲೇ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಗಳನ್ನು PUBG ಗೇಮ್ ನೀಡುತ್ತಾ ಸಾಗಿದೆ. ಎರಡು ಮಾದರಿಯ ಬೇಸ್‌ಗಳಲ್ಲಿ ಸರ್ವೇವರ್ ಆಗುವ ಅವಕಾಶದೊಂದಿಗೆ ಇನ್ನು ಮೂರು ಮಾದರಿಯ ಸಣ್ಣ ಗೇಮ್‌ಗಳನ್ನು ಆಡುವ ಅವಕಾಶವನ್ನು ಮಾಡಿಕೊಟ್ಟಿದೆ.

ವಿಡಿಯೋಗಳು:
ಇದಲ್ಲದೇ PUBG ಗೇಮ್ ಆಡುವುದು ಹೇಗೆ, ಇದರ ಟಿಪ್ಸ್ ಗಳನ್ನು ಕುರಿತಾದ ವಿಡಿಯೋಗಳು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿರುವುದು ಈ ಗೇಮ್ ಜನಪ್ರಿಯತೆಗೆ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಒಮ್ಮೆ ಈ ಗೇಮ್ ಅನ್ನು ಆಡಿದರೆ ಖಂಡಿತವಾಗಿಯೂ ಇದು ಇಷ್ಟವಾಗಲಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.


Click it and Unblock the Notifications








