Subscribe to Gizbot

ಫಾಸಿಲ್ ನೊಂದಿಗೆ ಪೂಮಾ ಒಪ್ಪಂದ: ಶೀಘ್ರವೇ ಸ್ಪೋರ್ಡ್ಸ್ ಸ್ಮಾರ್ಟ್ ವಾಚ್ ಲಾಂಚ್..!

Posted By: Precilla Dias

ಜಾಗತಿಕವಾಗಿ ಹೆಸರು ಮಾಡಿರುವ ಪೂಮಾ ಕಂಪನಿಯೂ ತನ್ನದೇ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಇದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ವೆರೆಬಲ್ಸ್ ಮತ್ತು ಸ್ಮಾರ್ಟ್ ವಾಚ್ ಬಿಡುಗಡೆ ಮಾಡಲು ಯೋಜನೆಯೊಂದನ್ನು ಸಿದ್ದಪಡಿಸಿದ್ದು, ಸ್ಮಾರ್ಟ್ ವಾಚ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫಾಸಿಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಫಾಸಿಲ್ ನೊಂದಿಗೆ ಪೂಮಾ ಒಪ್ಪಂದ: ಶೀಘ್ರವೇ ಸ್ಪೋರ್ಡ್ಸ್ ಸ್ಮಾರ್ಟ್ ವಾಚ್ ಲಾಂಚ್..!

ಫಾಸಿಲ್, ಪೂಮಾ ಬ್ರಾಂಡ್ ನ ಸ್ಮಾರ್ಟ್ ವಾಚ್ ಗಳನ್ನು ತಯಾರು ಮಾಡಲಿದ್ದು, ಪೂಮಾ ಅದನ್ನು ಮಾರಾಟ ಮಾಡಲಿದೆ. 10 ವರ್ಷಗಳ ಕಾಲ ಒಟ್ಟಾಗಿ ಕಾರ್ಯನಿರ್ವಹಿಸುವ ಈ ಒಪ್ಪಂದದ ಪ್ರಕಾರ ಮುಂದಿನ ವರ್ಷದಲ್ಲಿ ಪೂಮಾ ಸ್ಮಾರ್ಟ್ ವಾಚ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ಪೂಮಾ ಜಾಗತಿಕವಾಗಿ ಹೆಸರು ಮಾಡಿರುವ ಸ್ಪೋಡ್ಸ್ ಬ್ರಾಂಡ್ ಆಗಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸ್ಮಾರ್ಟ್ ವಾಚ್ ಅನ್ನು ಬಳಕೆ ನೀಡಬೇಕು ಎನ್ನುವ ಕಾರಣಕ್ಕಾಗಿ ಫಾಸಿಲ್ ನೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಉತ್ತಮ ವಿನ್ಯಾಸದ ಸ್ಮಾರ್ಟ್ ವಾಚ್ ಪೂಮಾ ಅಭಿಮಾನಿಗಳಿಗೆ ಶೀಘ್ರವೇ ದೊರೆಯಲಿದೆ.

ನೂತನವಾಗಿ ಲಾಂಚ್ ಆಗಲಿರುವ ಪೂಮಾ ವಾಚ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ ಎನ್ನಲಾಗಿದೆ. ಹೇಗೆ ಕಾಣಲಿದೆ, ವಿನ್ಯಾಸ ಹೇಗಿರಲಿದೆ ಎನ್ನುವ ವಿಚಾರಗಳನ್ನು ತಿಳಿದುಕೊಳ್ಳಲು ಇನ್ನು ಸಾಕಷ್ಟು ದಿನಗಳು ಕಾಯಲೇ ಬೇಕಾಗಿದೆ. ಒಟ್ಟಿನಲ್ಲಿ ಈ ಎರಡು ಕಂಪನಿಗಳು ಒಟ್ಟಾಗಿ ಲಾಂಚ್ ಮಾಡುತ್ತಿರುವುದರಿಂದ ಉತ್ತಮ ಉತ್ಪನ್ನವನ್ನು ನಿರೀಕ್ಷಿಸಬಹುದಾಗಿದೆ.

ಮಾರುಕಟ್ಟೆಯಲ್ಲಿ ಇದುವರೆಗ ಸಾಮಾನ್ಯ ಸ್ಮಾರ್ಟ್ ವಾಚ್ ಅನ್ನು ನೋಡಬಹುದಾಗಿತ್ತು. ಇನ್ನು ಮುಂದೆ ಪೂಮಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವುದರಿಂದ ಸ್ಪೋಡ್ಸ್ ಸ್ಮಾರ್ಟ್ ವಾಚ್ ಅನ್ನು ಕಾಣಬಹುದಾಗಿದ್ದು, ಹೆಚ್ಚಿನ ಪ್ರಮಾಣದ ಯುವ ಸಮೂಹವನ್ನು ಸ್ಮಾರ್ಟ್ ವಾಚ್ ಕಡೆಗೆ ಸೆಳೆಯಲು ಇದು ಸಹಾಯಕಾರಿಯಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಮಾರುಕಟ್ಟೆಯಲ್ಲಿ ಫಾಸಿಲ್ ಸಹ ಉತ್ತಮ ವೆರಬಲ್ಸ್ ಅನ್ನು ಲಾಂಚ್ ಮಾಡಿದ್ದು, ಈಗಾಗಲೇ ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಇದರ ಲಾಭವು ಪೂಮಾಗೆ ಆಗಲಿದೆ. ಅಲ್ಲದೇ ಸ್ಪೋಡ್ಸ್ ವಾಚ್ ಬಿಡುಗಡೆ ಮಾಡುವುದರಿಂದ ಫಾಸಿಲ್ ಸಹ ಲಾಭವನ್ನು ಪಡೆದುಕೊಳ್ಳಲಿದೆ.

English summary
Puma brand wants to try its luck in the smartwatch market and with that desire, it has inked a deal with Fossil for 10-years.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot