ಟಿಕೆಟ್ ಬುಕ್ಕಿಂಗ್ ಗೆ ಭಾರತೀಯ ರೈಲ್ವೆಯಿಂದ ಹೊಸ ಆಪ್ ಲಾಂಚ್..!
ಇನ್ನು ಮುಂದೆ ರೈಲಿನ ಟಿಕೆಟ್ ಮಾಡಿಸಿಕೊಳ್ಳುವುದಕ್ಕೆ ರೈಲ್ವೇ ಸ್ಟೇಷನ್ನಿಗೆ ಹೋಗಬೇಕಾಗಿಲ್ಲ, ಅಥವಾ ಕಂಪ್ಯೂಟರ್ ಮುಂದೆಯೂ ಕೂರಬೇಕಾಗಿಲ್ಲ. ನಿಮ್ಮ ಬೆರಳ ತುದಿಯಲ್ಲೇ ಈ ಕೆಲಸ ಆಗಿ ಹೋಗುತ್ತದೆ. ಹೌದು. ರೈಲ್ವೇ ಇಲಾಖೆಯು ಈಗ ಮೊಬೈಲ್ ಅಪ್ಲಿಕೇಷನ್ ಒಂದನ್ನು ಪರಿಚಯಿಸಿದ್ದು, ಆ ಮೂಲಕ ಮೀಸಲಾತಿ ಟಿಕೆಟ್ ಗಳ ಬುಕ್ಕಿಂಗ್ ಮತ್ತು ಇತರ ಸೌಲಭ್ಯಗಳ ಪೈಕಿ ಮೀಸಲಿಡದ ಟೆಕೆಟ್ ಗಳನ್ನು ರದ್ದು ಪಡಿಸುವ ಅವಕಾಶವೂ ಇದರಲ್ಲಿ ಲಭ್ಯವಾಗಲಿದೆ.

ಈ ಮೊಬೈಲ್ ಅಪ್ಲಿಕೇಷನ್ ಹೆಸರು 'utsonmobile” ಅಪ್ಲಿಕೇಷನ್. ಇದನ್ನು ಕೆಂದ್ರ ರೈಲ್ವೇ ಮಾಹಿತಿ ವ್ಯವಸ್ಥೆ ಕೇಂದ್ರ(CRIS) ಡೆಲವಪ್ ಮಾಡಿರುವ ಅಪ್ಲಿಕೇಷನ್ ಆಗಿದ್ದು, ಆಂಡ್ರಾಯ್ಡ್ ಮತ್ತು ವಿಂಡೋಸ್ ಸ್ಮಾರ್ಟ್ ಫೋನ್ ಗಳೆರಡರಲ್ಲೂ ಲಭ್ಯವಿರುತ್ತದೆ. ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ವಿಂಡೋಸ್ ಸ್ಟೋರ್ ಮೂಲಕ ಯಾವುದೇ ಶುಷ್ಕವಿಲ್ಲದೆ ಡೌನ್ ಲೋಡ್ ಮಾಡಿಕೊಳ್ಳಬಹುದು.
ಪ್ರಯಾಣಿಕರು ಮೊದಲು ಅವರ ಮೊಬೈಲ್ ನಂಬರ್, ಹೆಸರು, ನಗರ, ಡೀಫಾಲ್ಟ್ ಬುಕ್ಕಿಂಗ್ ರೈಲ್ವೇ ಟೈಪ್, ಕ್ಲಾಸ್, ಟಿಕೆಟ್ ಟೈಪ್, ಎಷ್ಟು ಜನ ಪ್ರಯಾಣಿಸುತ್ತೀರಿ ಮತ್ತು ಯಾವಾಗ ಸಂಚರಿಸುವ ಮಾರ್ಗ ಇತ್ಯಾದಿಗಳನ್ನು ಮೊದಲು ರಿಜಿಸ್ಟರ್ ಮಾಡಬೇಕು.. ಯಶಸ್ವಿ ರಿಜಿಸ್ಟ್ರೇಷನ್ ನ ನಂತರ, ರೈಲ್ವೇ ವ್ಯಾಲೆಟ್(ಆರ್-ವ್ಯಾಲೆಟ್) ಆಟೋಮ್ಯಾಟಿಕ್ ಆಗಿ ಕ್ರಿಯೇಟ್ ಆಗುತ್ತದೆ ಮತ್ತು ಪ್ರಯಾಣಿಕರ ಹೆಸರಿನಲ್ಲಿ ಯಾವುದೇ ಬ್ಯಾಲೆನ್ಸ್ ಇರುವುದಿಲ್ಲ. ಆರ್- ವ್ಯಾಲೆಟ್ ನ್ನು ಕ್ರಿಯೆಟ್ ಮಾಡಲು ಯಾವುದೇ ರೀತಿಯ ಹಣವನ್ನು ಪಾವತಿಸಬೇಕಾಗಿಲ್ಲ ಎಂಬ ಮಾಹಿತಿಯನ್ನು ರೈಲ್ವೇ ಇಲಾಖೆ ನೀಡಿದೆ.

ಆರ್-ವ್ಯಾಲೆಟ್ ನ್ನು ಯಾವುದೇ ಯುಟಿಎಸ್ ಕೌಂಟರ್ ನಲ್ಲಿ ಅಥವಾ https://www.utsonmobile.indianrail.gov.in ಈ ವೆಬ್ ಸೈಟ್ ನಲ್ಲಿ ಲಭ್ಯವಿರುವ ರೀಚಾರ್ಜ್ ಆಯ್ಕೆಯ ಮೂಲಕ ರಿಚಾರ್ಜ್ ಕೂಡ ಮಾಡಿಕೊಳ್ಳಬಹುದಾಗಿದೆ.
ಸದ್ಯ ಈ ಅಪ್ಲಿಕೇಷನ್ ಕೇವಲ ಮೀಸಲಾತಿ ಟಿಕೆಟ್ ಗಳಿಗೆ ಮಾತ್ರವಾಗಿದ್ದು, ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ನ್ನು ಸದ್ಯ ಅನುಮತಿಸಲಾಗಿಲ್ಲ.

“ ಪ್ರಯಾಣಿಕರು ಯಾವುದೇ ಹಾರ್ಡ್ ಕಾಪಿಯನ್ನು ಇಟ್ಟುಕೊಳ್ಳದೇ ಬೇಕಿದ್ದರೂ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಯಾವಾಗ ಟಿಕೆಟ್ ಚೆಕ್ ಮಾಡುವವರು ನಿಮ್ಮನ್ನು ಪ್ರಶ್ನಿಸುತ್ತಾರೋ ಆಗ ಪ್ರಯಾಣಿಕರು ಆಪ್ ನಲ್ಲಿರುವ “ಶೋ ಟಿಕೆಟ್” ಆಯ್ಕೆಯನ್ನು ಬಳಸಿ ತೋರಿಸಬಹುದು” ಎಂದು ತಿಳಿಸಿದ್ದಾರೆ ರೈಲ್ವೇ ಅಧಿಕಾರಿಗಳು.
ಒಟ್ಟಿನಲ್ಲಿ ರೈಲ್ವೇ ಇಲಾಖೆಯು ಪ್ರಯಾಣಿಕ ಸ್ನೇಹಿಯಾಗಿ ಬದಲಾಗುತ್ತಿದ್ದು, ಇದರ ಸದುಪಯೋಗವನ್ನು ಪ್ರಯಾಣಿಕರು ಪಡೆಯಬೇಕಾಗಿದೆ.


Click it and Unblock the Notifications





