Home
Apps

ವಾಟ್ಸ್ ಆಪ್ ನಲ್ಲಿ ರಕ್ಷಾಬಂಧನದ ಶುಭಾಶಯ

By Gizbot Bureau

ವಾಟ್ಸ್ ಆಪ್ ಗಾಗಿ ಹ್ಯಾಪಿ ರಕ್ಷಾ ಬಂಧನ್ 2019 ರ ಶುಭಾಶಯದ ಸ್ಟಿಕ್ಕರ್ ಗಳು ಬೇಕಾಗಿದ್ಯಾ? ವಾಟ್ಸ್ ಆಪ್ ನಲ್ಲಿ ರಕ್ಷಾ ಬಂಧನದ ದಿನ ನೀವು ನಿಮ್ಮವರಿಗೆ ಶುಭಾಶಯ ಕೋರಬೇಕು ಎಂದು ಬಯಸಿದ್ದೀರಾ? ಅದಕ್ಕಾಗಿ ವಿಭಿನ್ನ ಡಿಸೈನಿನ ಸ್ಟಿಕ್ಕರ್ ಗಳನ್ನು ವಾಟ್ಸ್ ಆಪ್ ನಲ್ಲಿ ಹುಡುಕಾಡುತ್ತಿದ್ದೀರಾ?ವಾಟ್ಸ್ ಆಪ್ ನಲ್ಲಿ ರಕ್ಷಾ ಬಂಧನದ ಶುಭಾಶದ ಸ್ಟಿಕ್ಕರ್ ಗಳು ಸಿಗಬೇಕು ಎಂದರೆ ಏನು ಮಾಡಬೇಕು ಗೊತ್ತಾ?

ಹೀಗೆ ಮಾಡಿ:

ಹೀಗೆ ಮಾಡಿ:

ಪ್ಲೇ ಸ್ಟೋರ್ ನಲ್ಲಿ ನೀವು ಕೀವರ್ಡ್ ಬಳಸಿ ಹುಡುಕಾಡಬಹುದು. ಉದಾಹರಣೆಗೆ "ರಕ್ಷಾಬಂಧನ ಸ್ಟಿಕ್ಕರ್ಸ್ 2019", "ರಾಖಿ ಸ್ಟಿಕ್ಕರ್ಸ್ ", ಅಥವಾ " ವಾಟ್ಸ್ ಆಪ್ ಗಾಗಿ ರಾಖಿ ಸ್ಟಿಕ್ಕರ್ಸ್ ಗಳು " ಮತ್ತು ನಂತರ ವಾಟ್ಸ್ ಆಪ್ ನಲ್ಲಿ ಆ ಸ್ಟಿಕ್ಕರ್ ಪ್ಯಾಕ್ ನ್ನು ಬಳಕೆ ಮಾಡಬಹುದೇ ಎಂದು ಪರೀಕ್ಷಿಸಿ.

ಥರ್ಡ್ ಪಾರ್ಟಿ ಆ ಬಳಕೆ:

ಥರ್ಡ್ ಪಾರ್ಟಿ ಆ ಬಳಕೆ:

400 ಮಿಲಿಯನ್ ಗೂ ಅಧಿಕ ಬಳಕೆದಾರರು ವಾಟ್ಸ್ ಆಪ್ ನ್ನು ಭಾರತದಲ್ಲಿ ಬಳಕೆ ಮಾಡುತ್ತಿದ್ದು ಅತೀ ದೊಡ್ಡ ಮೆಸೇಜಿಂಗ್ ಸೇವೆಗಳಲ್ಲಿ ಒಂದೆನಿಸಿಕೊಂಡಿದೆ. ಅದರಲ್ಲೂ ಹಬ್ಬದ ಸಂದರ್ಬದಲ್ಲಿ ಮಿಲಿಯನ್ ಗಟ್ಟಲೆ ಮೆಸೇಜ್ ಗಳು ಈ ಫ್ಲ್ಯಾಟ್ ಫಾರ್ಮ್ ನಲ್ಲಿ ವಿತರಣೆಗೊಳ್ಳುತ್ತದೆ ಮತ್ತು ಸ್ಟಿಕ್ಕರ್ ಗಳು ಇದರಲ್ಲಿ ಪ್ರಸಿದ್ಧಿಯಾಗಿವೆ. ರಕ್ಷಾಬಂಧನಕ್ಕಾಗಿ ಫ್ಲ್ಯಾಟ್ ಫಾರ್ಮ್ ಸ್ವಂತವಾಗಿ ಯಾವುದೇ ಸ್ಟಿಕ್ಕರ್ ನ್ನು ಸೇರಿಸದೇ ಇದ್ದರೂ ಕೂಡ, ಥರ್ಡ್ ಪಾರ್ಟಿ ಆಪ್ ಸಹಾಯದಿಂದ ಸ್ಟಿಕ್ಕರ್ ಪ್ಯಾಕ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ವಾಟ್ಸ್ ಆಪ್ ನಲ್ಲಿ ಕಳುಹಿಸಬಹುದು ಅಥವಾ ತಮ್ಮದೇ ಸ್ವಂತ ಸ್ಟಿಕ್ಕರ್ ಪ್ಯಾಕ್ ನಿರ್ಮಿಸುವುದಕ್ಕೂ ಕೂಡ ಅವಕಾಶವಿದೆ.

ವಾಟ್ಸ್ ಆಪ್ ನಲ್ಲಿ ಚಾಟ್ ನ್ನು ತೆರೆಯಿರಿ ಮತ್ತು ಸ್ಟಿಕ್ಕರ್ಸ್ ನ್ನು ಕ್ಲಿಕ್ಕಿಸಿ. ನಂತರ ಸ್ಟಿಕ್ಕರ್ಸ್ ಟ್ಯಾಬ್ ನ ಬಲಭಾಗದಲ್ಲಿರುವ + ಐಕಾನ್ ನ್ನು ಕ್ಲಿಕ್ಕಿಸಿ. ಇದು ನಿಮಗೆ ಎಲ್ಲಾ ಸ್ಟಿಕ್ಕರ್ಸ್ ಗಳ ಪರದೆಯನ್ನು ತೆರೆಯುತ್ತದೆ ಮತ್ತು ನೀವು ನಿಮಗೆ ಬೇಕಾದ ಸ್ಟಿಕ್ಕರ್ಸ್ ನ್ನು ಆಯ್ಕೆ ಮಾಡಬಹುದು. ಅದರಲ್ಲಿ "ಎಲ್ಲಾ ಸ್ಟಿಕ್ಕರ್ಸ್ ಗಳು" ಮತ್ತು "ನನ್ನ ಸ್ಟಿಕ್ಕರ್" ಆಯ್ಕೆಗಳಿರುತ್ತದೆ. ಎಲ್ಲಾ ಸ್ಟಿಕ್ಕರ್ಸ್ ಗಳು ಎಂಬ ಆಯ್ಕೆಯನ್ನು ಸ್ಕ್ರೋಲ್ ಡೌನ್ ಮಾಡಿ ಮತ್ತು "ಗೆಟ್ ಮೋರ್ ಸ್ಟಿಕ್ಕರ್ಸ್" ಆಯ್ಕೆಯ ಬಟ್ ನ್ನು ಕ್ಲಿಕ್ಕಿಸಿ. ಇದು ಬಳಕೆದಾರರನ್ನು ಪ್ಲೇ ಸ್ಟೋರ್ ಗೆ ಕೊಂಡೊಯ್ಯುತ್ತದೆ.

ಹುಡುಕಾಟಕ್ಕೆ ವಿಭಿನ್ನ ಆಯ್ಕೆಗಳು:

ಹುಡುಕಾಟಕ್ಕೆ ವಿಭಿನ್ನ ಆಯ್ಕೆಗಳು:

ಪ್ಲೇ ಸ್ಟೋರ್ ಮೂಲಕ ಸ್ಟಿಕ್ಕರ್ ಪ್ಯಾಕ್ ಆಯ್ಕೆಯನ್ನು ಆರಿಸಬಹುದು ಅಥವಾ ಮೇಲ್ಬಾಗದಲ್ಲಿರುವ ಮೆನುವಿನಲ್ಲಿ ಫಿಲ್ಟರ್ ಮಾಡಿ ಹುಡುಕಾಟ ನಡೆಸುವುದಕ್ಕೂ ಕೂಡ ಅವಕಾಶವಿರುತ್ತದೆ ಉದಾಹರಣೆಗೆ "ತಮಿಳು", "ಹಿಂದಿ", "ಚಾಕೋಲೇಟ್", "ಪಿಯುಬಿಜಿ", "ನೈಟ್",ಇತ್ಯಾದಿ.

ಈ ಕೆಳಗಿನ ಕೀವರ್ಡ್ ಗಳು ಸೂಕ್ತ:

ಈ ಕೆಳಗಿನ ಕೀವರ್ಡ್ ಗಳು ಸೂಕ್ತ:

ರಾಖಿ ಸ್ಟಿಕ್ಕರ್ ನ್ನು ಡೌನ್ ಲೋಡ್ ಮಾಡುವುದಕ್ಕಾಗಿ "ರಕ್ಷಾ ಬಂಧನ್", "ರಾಖಿ" ಅಥವಾ ಇಂತಹದ್ದೇ ಸಂಬಂಧಪಟ್ಟ ಕೀವರ್ಡ್ ನ್ನು ಟೈಪ್ ಮಾಡಿ. ಬಳಕೆದಾರರು ವಿಭಿನ್ನ ಸ್ಟಿಕ್ಕರ್ ಪ್ಯಾಕ್ ನ್ನು ಸೆಲೆಕ್ಟ್ ಮಾಡಬಹುದು ಮತ್ತು ತಮಗಿಷ್ಟವಾಗಿರುವುದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

"+" ಐಕಾನ್ ಮೂಲಕ ಸೇರಿಸಿ:

ಹೆಚ್ಚಿನ ಸ್ಟಿಕ್ಕರ್ ಪ್ಯಾಕ್ ಗಳಲ್ಲಿ ಸೆಟ್ ಆಪ್ ಸ್ಟಿಕ್ಕರ್ಸ್ ಗಳಿರುತ್ತದೆ. ಅವುಗಳನ್ನು + ಐಕಾನ್ ಮೂಲಕ ನೇರವಾಗಿ ವಾಟ್ಸ್ ಆಪ್ ಗೆ ಸೇರಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.ಉದಾಹರಣೆಗೆ "ರಕ್ಷಾ ಬಂಧನ್ ಸ್ಟಿಕ್ಕರ್ಸ್-ರಾಖಿ ಸ್ಟಿಕ್ಕರ್ಸ್" ನಲ್ಲಿ ಐದು ರಾಖಿ ಸ್ಟಿಕ್ಕರ್ ಪ್ಯಾಕ್ ಜೊತೆಗೆ 10 ರಿಂದ 15 ಸ್ಟಿಕ್ಕರ್ ಪ್ಯಾಕ್ ಗಳಿವೆ. ಪ್ರತಿ ಸ್ಟಿಕ್ಕರ್ ಪ್ಯಾಕ್ ನ್ನು ವಾಟ್ಸ್ ಆಪ್ ಗೆ ಸೇರಿಸಿದಾಗಲೂ ಕೂಡ ಅದು ಚಾಟ್ ಬಾಕ್ಸ್ ನ ಸ್ಟಿಕ್ಕರ್ಸ್ ಟ್ಯಾಬ್ ನಲ್ಲಿ ಕಾಣಿಸಿಕೊಳ್ಳುತ್ತದೆ.

ಆಂಡ್ರಾಯ್ಡ್ ಅಥವಾ ಆಪ್ ಸಹಾಯದಿಂದ ನೇರವಾಗಿ ವಾಟ್ಸ್ ಆಪ್ ಸ್ಟಿಕ್ಕರ್ ಪ್ಯಾಕ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ರಕ್ಷಾ ಬಂಧನ ಸ್ಟಿಕ್ಕರ್ಸ್ 2019, ರಾಖಿ ಸ್ಟಿಕ್ಕರ್ಸ್ ಅಥವಾ ರಾಖಿ ಸ್ಟಿಕ್ಕರ್ಸ್ ಫಾರ್ ವಾಟ್ಸ್ ಆಫ್ ಮತ್ತು ಇತ್ಯಾದಿ ರಾಖಿ ಸಂಬಂಧಿತ ಸ್ಟಿಕ್ಕರ್ ಕೀವರ್ಡ್ ಗಳನ್ನು ಬಳಸಿ ವಾಟ್ಸ್ ಆಪ್ ಗೆ ರಕ್ಷಾ ಬಂಧನದ ಸ್ಟಿಕ್ಕರ್ ಗಳನ್ನು ಸೇರಿಸಿಕೊಳ್ಳಬಹುದು. ಇದೇ ರೀತಿಯ ವಿಧಾನವನ್ನು ಅನುಸರಿಸಿ ಸ್ವಾತಂತ್ರ್ಯ ದಿನಾಚರಣೆಯ ಸ್ಟಿಕ್ಕರ್ ಸೇರಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತದೆ. ಬೇಕಿದ್ದರೆ ಟ್ರೈ ಮಾಡಿ ನೋಡಿ.

Best Mobiles in India

English summary
Raksha Bandhan Sticker Pack Now Available For WhatsApp: Download Now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+