Home
Apps

ಸ್ವದೇಶಿ ಮಂತ್ರದ ಕಿಂಬೋ ಬಗ್ಗೆ ನಿಮಗೆ ಗೊತ್ತಿರಬೇಕು ಈ ಅಂಶಗಳು

By Gizbot Bureau

ಸಿಮ್ ಕಾರ್ಡ್ ಗಳ ನಂತರ, ಪತಂಜಲಿ ಸಂಸ್ಥೆ ತನ್ನ ಸ್ವಂತ ವಾಟ್ಸ್ಆಪ್ ಗೆ ಸ್ಪರ್ಧೆ ನೀಡುವ ಸ್ವದೇಶಿ ಮೆಸೇಜಿಂಗ್ ಆಪ್ ಕಿಂಬೋ ವನ್ನು ಬಿಡುಗಡೆಗೊಳಿಸಿತು. ಕಿಂಬೋ ಫ್ಲಾಟ್ ಫಾರ್ಮ್ ವೀಡಿಯೋಗಳು, ಫೋಟೋಗಳು, ಡಾಡಲ್, ಸ್ಟಿಕ್ಕರ್ಸ್, ಜಿಫ್ ಹಾಗೂ ಇತ್ಯಾದಿಗಳಿಗೆ ಬೆಂಬಲ ನೀಡುತ್ತದೆ. ಲೋಕೇಷನ್ ಹಂಚಿಕೆಗೂ ಕೂಡ ಇದು ನೆರವು ನೀಡುತ್ತದೆ. ಮೇ ತಿಂಗಳಲ್ಲಿ ಇದು ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಆದರೆ ಒಂದೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಭದ್ರತಾ ದೋಷಗಳ ಕಾರಣದಿಂದಾಗಿ ಹಿಂಪಡೆಯಲಾಯಿತು.

ಸ್ವದೇಶಿ ಮಂತ್ರದ ಕಿಂಬೋ ಬಗ್ಗೆ ನಿಮಗೆ ಗೊತ್ತಿರಬೇಕು ಈ ಅಂಶಗಳು

ಈಗ ಸದ್ಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಬದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಪುನಃ ಆಪ್ ಅಗಸ್ಟ್ 27 ಕ್ಕೆ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ತಿಳಿಸಿದ್ದಾರೆ. ಹಾಗಾದ್ರೆ ನೀವು ಕಿಂಬೋ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ ನೋಡಿ.

ಕಿಂಬೋ

ಕಿಂಬೋ

ಚಾಟ್ ಬಾಬಾ ರಾಮ್ ದೇವ್ ಹೇಳುವಂತೆ ವಾಟ್ಸ್ ಆಪ್ ನ ಸ್ವದೇಶಿ ಅವತರಣಿಕೆ ಪತಂಜಲಿಯ ವಕ್ತಾರರಾಗಿರುವ ಎಸ್ ಕೆ ತಿಜರವಾಲಾ ಈ ಆಪ್ ನ ಬಿಡುಗಡೆಯ ಸಂದರ್ಬದಲ್ಲಿ ಹೀಗೆ ಟ್ವೀಟಿಸಿದ್ದರು " ಈಗ ಭಾರತ ಮಾತನಾಡುತ್ತದೆ. ಸಿಮ್ ಬಿಡುಗಡೆಯ ನಂತರ ಬಾಬಾ ರಾಮ್ ದೇವ್ ಮೆಸೇಜಿಂಗ್ ಆಪ್ ಬಿಡುಗಡೆಗೊಳಿಸಿದ್ದು ಅದರ ಹೆಸರು ಕಿಂಬೋ. ಈಗ ವಾಟ್ಸ್ ಆಪ್ ಗೆ ಸ್ಪರ್ಧೆ ಏರ್ಪಡಲಿದೆ"

ಕಿಂಬೋ ಎಂದು ಹೆಸರಿಸಲು ಕಾರಣವೇನು? 

ಕಿಂಬೋ ಎಂದು ಹೆಸರಿಸಲು ಕಾರಣವೇನು? 

ಆಪ್ ನ ಹೆಸರು ಸೂಚಿಸುವಂತೆ ಕಿಂಬೋ ಬಗ್ಗೆ ಪತಂಜಲಿಯ ವಕ್ತರಾ ಎಸ್ ಕೆ ತಿಜರ್ ವಾಲಾ ಹೀಗೆ ಟ್ವೀಟಿಸಿದ್ದಾರೆ " ಕಿಂಬೋ ಎಂಬುದು ಸಂಸ್ಕೃತ ಪದವಾಗಿದ್ದು ಇದರ ಅರ್ಥ ಏನಾಗುತ್ತಿದೆ?ಮತ್ತು ಏನು ಸಮಾಚಾರ ಎಂಬ ಅರ್ಥವನ್ನು ಇದು ಸೂಚಿಸುತ್ತದೆ"

ಕಿಂಬೋ ವೀಡಿಯೋ, ಫೋಟೋಗಳು, ಸ್ಟಿಕ್ಕರ್ಸ್ ಮತ್ತು ಇತರೆ ಹಲವು ಅಂಶಗಳನ್ನು ಬೆಂಬಲಿಸುತ್ತದೆ

ಕಿಂಬೋ ವೀಡಿಯೋ, ಫೋಟೋಗಳು, ಸ್ಟಿಕ್ಕರ್ಸ್ ಮತ್ತು ಇತರೆ ಹಲವು ಅಂಶಗಳನ್ನು ಬೆಂಬಲಿಸುತ್ತದೆ

ಕಿಂಬೋ ಆಪ್ ವೀಡಿಯೋಗಳು, ಫೋಟೋಗಳು, ಡಾಡಲ್, ಸ್ಟಿಕ್ಕರ್, ಜಿಫ್ ಹಾಗೂ ಇತರೆ ಹಲವು ಅಂಶಗಳಿಗೆ ಬೆಂಬಲಿಸುತ್ತದೆ. ಫೇಸ್ಬುಕ್ ಮಾಲೀಕತ್ವದ ವಾಟ್ಸ್ ಆಪ್ ನಲ್ಲಿರುವ ಎಲ್ಲಾ ವೈಶಿಷ್ಟ್ಯತೆಗಳು ಕಿಂಬೋ ದಲ್ಲಿ ಇದೆ ಎಂದು ಹೇಳಲಾಗಿದೆ.

ವೀಡಿಯೋ ಚಾಟಿಂಗ್ ಗೂ ಸಹಕಾರ 

ವೀಡಿಯೋ ಚಾಟಿಂಗ್ ಗೂ ಸಹಕಾರ 

ಪತಂಜಲಿ ಕಿಂಬೋ ಆಪ್ ವೀಡಿಯೋ ಚಾಟಿಂಗ್ ಗೂ ಕೂಡ ಬೆಂಬಲ ನೀಡುತ್ತದೆ. ಬಳಕೆದಾರರು ಗ್ರೂಪ್ ಚಾಟ್ ಕೂಡ ಮಾಡಬಹುದು. ಆದರೆ ಗ್ರೂಪ್ ಚಾಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ.

ಲೋಕೇಷನ್ ಶೇರಿಂಗ್ ಗೆ ಅನುಕೂಲ 

ಲೋಕೇಷನ್ ಶೇರಿಂಗ್ ಗೆ ಅನುಕೂಲ 

ಕಿಂಬೋ ಆಪ್ ಬಳಕೆದಾರರಿಗೆ ಲೋಕೇಷನ್ ಗೂ ಬೆಂಬಲ ನೀಡುತ್ತದೆ. ಇದು ಬಳಕೆದಾರರು ತಮ್ಮ ಲೋಕೇಷನ್ ಹಂಚಿಕೊಳ್ಳುವುದಕ್ಕೂ ನೆರವು ನೀಡುತ್ತದೆ.

ಹಂಚಿಕೊಳ್ಳುವ ಮೆಸೇಜ್ ಗಳು ಎನ್ಕ್ರಿಪ್ಟ್ ಆಗಿರುತ್ತದೆ 

ಹಂಚಿಕೊಳ್ಳುವ ಮೆಸೇಜ್ ಗಳು ಎನ್ಕ್ರಿಪ್ಟ್ ಆಗಿರುತ್ತದೆ 

ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇರಲಿದೆ. ಅಂದರೆ ಮೆಸೇಜ್ ಕಳಿಸಿದವರು ಮತ್ತು ರಿಸೀವ್ ಮಾಡಿದವರು ಮಾತ್ರ ಮೆಸೇಜ್ ನ ಕಟೆಂಟ್ ನೋಡುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಮೆಸೇಜ್ ನ್ನು ಮಧ್ಯ ಇತರೆ ಯಾರಿಂದಾದಲೂ ಎನ್ಕ್ರಿಪ್ಟ್ ಆದರೆ ಅದನ್ನು ಎನ್ಕ್ರಿಪ್ಟೆಡ್ ಎಂದು ತೋರಿಸಲಾಗುತ್ತದೆ.

ಅನಾಮಧೇಯತೆ

ಅನಾಮಧೇಯತೆ

ಕಿಂಬೋ ಗೋಸ್ಟ್ ಚಾಟ್ ಗೆ ಬೆಂಬಲ ನೀಡುತ್ತದೆ ಮತ್ತು ಆಟೋ ಡಿಲೀಟ್ ಆಯ್ಕೆಯೂ ಇದರಲ್ಲಿ ಇದೆ. ಈ ವೈಶಿಷ್ಟ್ಯತೆಯ ಬಗ್ಗೆ ಸಂಸ್ಥೆ ಇನ್ನು ಹೆಚ್ಚು ಮಾಹಿತಿಯನ್ನು ನೀಡಿಲ್ಲ. ನಾವು ಮೆಸೇಜನ್ನು ನಿಗದಿತ ಸಮಯಕ್ಕೆ ಫಿಕ್ಸ್ ಮಾಡಲು ಸಾಧ್ಯವಿರುತ್ತದೆ.

ಭದ್ರತಾ ವಿಚಾರ 

ಭದ್ರತಾ ವಿಚಾರ 

ಮೇ ತಿಂಗಳಲ್ಲಿ ಆಪ್ ಬಿಡುಗಡೆಗೊಂಡಾದ ಸೆಕ್ಯುರಿಟಿ ರೀಸರ್ಚ್ ಮಾಡುವವರು ಕೆಲವು ದೋಷಗಳನ್ನು ಕಂಡುಹಿಡಿದಿದ್ದರು. ಅಷ್ಟೇ ಅವರು ಸ್ವಲ್ಪ ತಾಂತ್ರಿಕ ಜ್ಞಾನವಿರುವವರು ಕಿಂಬೋ ಮೆಸೇಜ್ ಗಳನ್ನು ಕದ್ದು ಓದಬಹುದು ಎಂಬ ವಿಚಾರವನ್ನೂ ತಿಳಿಸಿದ್ದರು. ಅಧ್ಯಯನಕಾರರು ಆರೋಪಿಸಿರುವಂತೆ ಕಿಂಬೋ ಆಪ್ ಬೋಲೋ ಆಪ್ ನಿಂದ ಕದಿಯಲ್ಪಟ್ಟಿದೆ ಎಂದು ಹೇಳಿದ್ದರು.

ಅನುಮತಿಗಳು

ಅನುಮತಿಗಳು

ವಾಟ್ಸ್ ಆಪ್ ನಂತೆ ಕಿಂಬೋ ಕೂಡ ಹಲವು ಡಿವೈಸ್ ಗಳಿಗೆ ಅನುಮತಿಯನ್ನು ನೀಡುತ್ತದೆ ಉದಾಹರಣೆಗೆ ಮಿಕ್, ಫೋನ್, ಕಾಂಟ್ಯಾಕ್ಟ್, ಡಿವೈಸ್ ಐಡಿ, ಫೋಟೋಗಳು, ಮಲ್ಟಿಮೀಡಿಯಾ, ಕ್ಯಾಮರಾ ಹಾಗೂ ಇತ್ಯಾದಿ.

ಲಭ್ಯತೆ

ಲಭ್ಯತೆ

ಕಿಂಬೋ ಚಾಟ್ ಮೇ 30 ರಂದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ 24 ಘಂಟೆಗಳ ಒಳಗೆ ಅದನ್ನು ಕೆಲವು ತಾಂತ್ರಿಕ ದೋಷಗಳ ಕಾರಣದಿಂದಾಗಿ ಹಿಂಪಡೆಯಲಾಯಿತು.ಸದ್ಯ ಈ ಆಪ್ ಲಭ್ಯವಿಲ್ಲ.ಕೆಲವೇ ದಿನಗಳಲ್ಲಿ ಪುನಃ ರೀಲಾಂಚ್ ಆಗಲಿದೆ.

Best Mobiles in India

English summary
Ramdev’s WhatsApp killer coming: 10 things to know. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+