ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೇಯಿಂದ ಹೊಸ ಆಪ್‌..!

|

ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಚಲಿಸುತ್ತಿರುವ ರೈಲಿನಲ್ಲಿ “ಝೀರೋ-ಎಫ್ಐಆರ್” ದಾಖಲಿಸಲು ಅವಕಾಶ ಮಾಡಿ ಕೊಡುತ್ತಿದೆ. ಸಾಮಾನ್ಯವಾಗಿ ಎಫ್ಐಆರ್ ನ್ನು ಕ್ರೈಮ್ ನಡೆದಿರುವ ಹತ್ತಿರದ ಪೊಲೀಸ್‌ ಸ್ಟೇಷನ್ ನಲ್ಲಿ ದಾಖಲಿಸಬೇಕಾಗುತ್ತದೆ.

ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೇಯಿಂದ ಹೊಸ ಆಪ್‌..!

ಆದರೆ ಇದು ಪ್ರಯಾಣಿಕರಿಗೆ ನಿಜಕ್ಕೂ ಕಷ್ಟದ ಕೆಲಸವಾಗಿರುತ್ತದೆ. ಹಾಗಾಗಿ ಝೀರೋ ಎಫ್ಐಆರ್ ಜಾರಿಗೆ ಬಂದಿದೆ.ಇದು ಪ್ರಯಾಣ ಮಾಡುವವರಿಗಾಗಿ ಇರುವ ಹೊಸ ಸೌಲಭ್ಯವಾಗಿದ್ದು ಮೊಬೈಲ್ ಅಪ್ಲಿಕೇಷನ್ ಮೂಲಕ ಎಫ್ ಐಆರ್ ದಾಖಲಿಸಲು ರೈಲ್ವೇ ಇಲಾಖೆ ಅನುವು ಮಾಡಿಕೊಡುತ್ತಿದೆ.

ರಾಜನಾಥ್ ಸಿಂಗ್ ನೇತೃತ್ವದಲ್ಲಿ ಜಾರಿಗೆ ಬಂದ ಆಪ್:

ರಾಜನಾಥ್ ಸಿಂಗ್ ನೇತೃತ್ವದಲ್ಲಿ ಜಾರಿಗೆ ಬಂದ ಆಪ್:

ಒಮ್ಮೆ ಎಫ್ಐಆರ್ ದಾಖಲಿಸಿದ ನಂತರ ಅದನ್ನು ಮುಂದಿನ ತನಿಖೆಗಾಗಿ ಸಂಬಂಧಪಟ್ಟ ಪೊಲೀಸ್‌ ಸ್ಟೇಷನ್ನಿಗೆ ವರ್ಗಾಯಿಸಲಾಗುತ್ತದೆ.ಇದು ಈಗಾಗಲೇ ಒಂದು ವರ್ಷದಿಂದ ಜಾರಿಯಲ್ಲಿದೆ. ಆದರೆ ಸಾರ್ವಜನಿಕರಿಗೆ ಈ ಬಗೆಗಿನ ಮಾಹಿತಿ ಕಡಿಮೆ ಇದೆ. ಹೋಮ್ ಮಿನಿಸ್ಟರ್ ರಾಜನಾಥ್ ಸಿಂಗ್ ಈ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು.

ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ:

ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ:

ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿಎಫ್) ನ ಡಿಜಿ ಆಗಿರುವ ಅರುಣ್ ಕುಮಾರ್ ಅವರು ಈ ವ್ಯವಸ್ಥೆಯ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಮೊಬೈಲ್ ಆಪ್ ಮೂಲಕ ಕಂಪ್ಲೈಟ್ ದಾಖಲಿಸಬಹುದು ಮತ್ತು ಯಾವುದ ಕಂಪ್ಲೈಟ್ ನೀಡಲು ಮುಂದಿನ ಪೊಲೀಸ್‌ಸ್ಟೇಷನ್ ಬರುವವರೆಗೆ ಜನರು ಕಾಯುವ ಅಗತ್ಯವಿಲ್ಲ ಮತ್ತು ಮೊಬೈಲ್ ಆಪ್ ಮೂಲಕ ಕಂಪ್ಲೈಟ್ ನೀಡದ ಕೂಡಲೇ ಪೊಲೀಸ್‌ ನೆರವು ಪ್ರಯಾಣಿಕರಿಗೆ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಟಿಕೆಟ್ ಪರೀಕ್ಷಕರ ಸಹಿ ಬೇಡ:

ಟಿಕೆಟ್ ಪರೀಕ್ಷಕರ ಸಹಿ ಬೇಡ:

ಇದುವರೆಗೂ ಪ್ರಯಾಣಿಕರು ಯಾವುದೇ ದೂರನ್ನು ದಾಖಸಬೇಕು ಎಂದಾದಲ್ಲಿ ರೈಲ್ವೇ ಟಿಕೆಟ್ ಪರೀಕ್ಷಕರ ಸಹಿಯನ್ನು ಪಡೆಯಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ರೈಲಿನಲ್ಲಿ ನಡೆದ ಯಾವುದೇ ಘಟನೆಯ ಬಗ್ಗೆ ದೂರು ನೀಡುವುದಾದರೆ ಯಾರ ಬಳಿಯೂ ಕೇಳಬೇಕಾಗಿಲ್ಲ ನೇರವಾಗಿ ಮೊಬೈಲ್ ಆಪ್ ಮೂಲಕವೇ ಕಂಪ್ಲೈಟ್ ದಾಖಲಿಸಬಹುದು.

ಅಂತರ್ಜಾಲ ಸಂಪರ್ಕವಿಲ್ಲದೆ ಕಾರ್ಯ ನಿರ್ವಹಿಸುವ ಆಪ್:

ಅಂತರ್ಜಾಲ ಸಂಪರ್ಕವಿಲ್ಲದೆ ಕಾರ್ಯ ನಿರ್ವಹಿಸುವ ಆಪ್:

ಇದನ್ನು ಈಗಾಗಲೇ ಮಧ್ಯ ಪ್ರದೇಶದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಈ ಸೇವೆಯನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಆಪ್ ನ್ನು ಯಾವುದೇ ಅಂತರ್ಜಾಲ ಸಂಪರ್ಕ ಇಲ್ಲದೇ ಇದ್ದಾಗ ಕೂಡ ಬಳಕೆ ಮಾಡಬಹುದಾಗಿದೆ ಮತ್ತು ಎಂತಹ ತುರ್ತು ಪರಿಸ್ಥಿತಿಯಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
RPF At Your Service: Railways To Soon Launch Mobile Application For Passengers Requiring Police Assistance. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X