Subscribe to Gizbot

ಸೆಕೆಂಡ್ ಹಾಂಡ್ ಬೈಕ್-ಕಾರು ಖರೀದಿಸುವ ಮುನ್ನ ಅದರ ಜಾತಕ ತಿಳಿಸುವ ಆಪ್..!

Written By:

ಸ್ಮಾರ್ಟ್‌ಫೋನ್ ಇಂದು ನಮ್ಮ ಅವಶ್ಯಕತೆಗಳನ್ನು ಪೂರೈಸುವ ವಸ್ತುವಾಗಿದ್ದು, ಇದರಿಂದ ನಾವು ಹಲವು ಸಹಾಯವನ್ನು ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ಗಳನ್ನು ಹಾಕಿಕೊಳ್ಳುವ ಮೂಲಕ ನಾವು ಹಲವಾರು ಸೇವೆಯನ್ನು ಪಡೆಯಬಹುದಾಗಿದೆ. ಇಂದು ಅಂತಹುದೆ ಆಪ್ ವೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ಆಪ್ ನಲ್ಲಿ ನೀವು ಯಾವುದೇ ವಾಹನದ ನೋಂದಣಿ ಸಂಖ್ಯೆಯನ್ನು ಹಾಕುವ ಮೂಲಕ ಆ ವಾಹನದ ಮಾಲೀಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಸೆಕೆಂಡ್ ಹಾಂಡ್ ಬೈಕ್-ಕಾರು ಖರೀದಿಸುವ ಮುನ್ನ ಅದರ ಜಾತಕ ತಿಳಿಸುವ ಆಪ್..!

ನೀವು ಯಾವುದೇ ವಾಹನವನ್ನು ಖರೀದಿಸಲು ಹೋಗುವ ಸಂದರ್ಭದಲ್ಲಿ ಇಲ್ಲವೇ ಹಿಟ್ ಅಂಡ್ ರನ್ ಆದ ಸಂದರ್ಭದಲ್ಲಿ ನೀವು ಯಾವುದೇ ವಾಹನದ ಮಾಹಿತಿಯನ್ನು ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ವಾಹನದ ಮಾಲೀಕರು ಯಾರು? ವಾಹನ ರಿಜಸ್ಟರ್ ಆಗಿರುವುದು ಎಲ್ಲಿ ಮತ್ತು ಯಾವಾಗ, ವಾಹನದ ಚಾಟ್ಸಿ ನಂಬರ್ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
RTO ಕಾರ್ ಅಂಡ್ ಬೈಕ್:

RTO ಕಾರ್ ಅಂಡ್ ಬೈಕ್:

ಗೂಗಲ್ ಪ್ಲೇ ಸ್ಟೋರಿನಲ್ಲಿ ನೀವು RTO ಕಾರ್ ಅಂಡ್ ಬೈಕ್ ಎಂದು ಟೈಪ್ ಮಾಡಿದರೆ ಹಲವಾರು ಆಪ್‌ಗಳ ಲಿಸ್ಟ್ ಕಾಣಿಸಿಕೊಳ್ಳಲಿದೆ. ಇದರಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುವ ಆಪ್ ಅನ್ನು ಇನ್ಸ್ ಸ್ಪಾಲ್ ಮಾಡಿಕೊಳ್ಳಿ.

ಆಪ್ ಓಪನ್ ಮಾಡಿ:

ಆಪ್ ಓಪನ್ ಮಾಡಿ:

ನಂತರ ಇನ್ ಸ್ಟಾಲ್ ಆದ ಆಪ್ ಅನ್ನು ಓಪನ್ ಮಾಡಿರಿ. ಮಾಡಿದ ನಂತರದಲ್ಲಿ ಸ್ಟಾರ್ಟ್ ಎನ್ನುವ ಬಟನ್ ವೊಂದನ್ನು ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡಿ.

ನಂಬರ್ ಎಂಟ್ರಿ ಮಾಡಿ:

ನಂಬರ್ ಎಂಟ್ರಿ ಮಾಡಿ:

ಇದಾದ ನಂತರದಲ್ಲಿ ನೀವು ಮಾಹಿತಿಯನ್ನು ಪಡೆಯಬೇಕಾದ ವಾಹನದ ಸಂಖ್ಯೆಯನ್ನು ಅಲ್ಲಿ ಎಂಟ್ರಿ ಮಾಡಿ. ಮಾಡಿದ ನಂತರದಲ್ಲಿ ಕೆಳಭಾಗದಲ್ಲಿ ಸರ್ಚ್ ಎನ್ನುವ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕಿಕ್ ಮಾಡಿ.

ಮಾಹಿತಿ ದೊರೆಯಲಿದೆ:

ಮಾಹಿತಿ ದೊರೆಯಲಿದೆ:

ಇದಾದ ನಂತರ ನಿಮ್ಮ ಡಿಸ್‌ಪ್ಲೇಯಲ್ಲಿ ನೀವು ಹುಡುಕಿದ ವಾಹನದ ಮಾದರಿಯಿಂದ ಹಿಡಿದು ಎಲ್ಲಾ ಮಾಹಿತಿಗಳು ದೊರೆಯಲಿದೆ. ಇದೊಂದು ಸರಳವಾದ ಆಪ್ ಆಗಿದ್ದು, ಬಳಕೆದಾರರಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
RTO Car & Bike Info app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot