ಫೇಸ್‌ಬುಕ್‌ಗೆ ಸೆಡ್ಡು: ಸ್ಯಾಮ್‌ಸಂಗ್‌ನಿಂತ ತನ್ನದೇ ಸೋಶಿಯಲ್ ಮೀಡಿಯಾ ಲಾಂಚ್..!
ಸದ್ಯ ಜಾಗತೀಕ ಮಾರುಕಟ್ಟೆಯಲ್ಲಿ ಸೋಶಿಯಲ್ ಮೀಡಿಯಾ ಹವಾ ಹೆಚ್ಚಾಗಿರುವ ಕಾರಣ ಅನೇಕ ಜಾಲತಾಣಗಳು ಹೊಸದಾಗಿ ರೂಪುಗೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ ಸಂಗ್ ತನ್ನ ಬಳಕೆದಾರಿಗಾಗಿ ಹೊಸದೊಂದು ತನ್ನದೇ ಆದ ಸೋಶಿಯಲ್ ಮೀಡಿಯಾ ಸೇವೆಯನ್ನು ನೀಡಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.


ಹೇಗೆ ಕಾರ್ಯನಿರ್ವಹಿಸಲಿದೆ:
ಸ್ಯಾಮ್ ಸಂಗ್ ನೂತನ ಸೋಶಿಯಲ್ ಮೀಡಿಯಾ ಸೇವೆಗೆ ‘ಊಶ್ಅಪ್' ಎಂದು ನಾಮಕರಣವನ್ನು ಮಾಡಲಾಗಿದ್ದು, ಇದು ಫೇಸ್ ಬುಕ್ ಮೆಸೆಂಜರ್ ಮತ್ತು ವಾಟ್ಸ್ ಆಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಈ ಹೊಸ ಸೇವೆಯೂ ಮೊದಲಿಗೆ ಗ್ಯಾಲೆಕ್ಸಿ ಎಸ್ 9 ಮತ್ತು ಗ್ಯಾಲೆಕ್ಸಿ ಎಸ್9+ ನಲ್ಲಿ ಕಾಣಿಸಿಕೊಳ್ಳಲಿದೆ.

ಅಧಿಕೃತವಾಗಿ:
ಸ್ಯಾಮ್ ಸಂಗ್ ತನ್ನದೇ ಸೋಶಿಯಲ್ ಮೀಡಿಯಾ ಸೇವೆಯನ್ನು ಲಾಂಚ್ ಮಾಡುವ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಆದರೆ ಈ ಹೊಸ ‘ಊಶ್ಅಪ್' ಸೇವೆಯನ್ನು ಆರಂಭಿಸಲು ಯೂರೋಪ್ ಮತ್ತು ಕೋರಿಯಾದಲ್ಲಿ ಅನುಮತಿಯನ್ನು ಪಡೆದುಕೊಂಡಿದೆ.


ಗ್ಯಾಲೆಕ್ಸಿ ಎಸ್ 9 ವಿಶೇಷತೆ:
ಈ ಸ್ಮಾರ್ಟ್ ಫೋನಿನಲ್ಲಿ 5.8 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು ಸೂಪರ್ ಅಮೊಲೈಡ್ ಡಿಸ್ ಪ್ಲೇಯಾಗಿದ್ದು, QHD ಗುಣಮಟ್ಟವನ್ನು ಹೊಂದಿದೆ. ಅಲ್ಲದೇ ಎಕ್ಸನೋಸ್ 8895 ಪ್ರೋಸೆಸರ್ ಅನ್ನು ಒಳಗೊಂಡಿದೆ. ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.
ಇದಲ್ಲದೇ 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ ಒರಿಯೋದಲ್ಲಿ ಈ ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸಲಿದ್ದು, 3000mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ.


Click it and Unblock the Notifications








