ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ಗೆ ಬಂಪರ್ ಕ್ಯಾಷ್ ಬ್ಯಾಕ್..!
ಸ್ಯಾಮ್ ಸಂಗ್ ಗ್ಯಾಲಕ್ಸಿ 9 ಪ್ರೀಮಿಯಂ ಫ್ಲಾಗ್ ಶಿಪ್ ಮೊಬೈಲ್ ಈಗ ಅಧಿಕೃತವಾಗಿ ಭಾರತದಲ್ಲೂ ಲಭ್ಯವಾಗುತ್ತಿದೆ. ಹೆಚ್ಚಿನ ಬ್ಯಾಟರಿ, ಬ್ಲೂಟೂತ್ ಅನೇಬಲ್ ಆಗಿರುವ ಎಸ್ ಪೆನ್ ಸೌಕರ್ಯ ಸೇರಿದಂತೆ ಹಲವು ವೈಶಿಷ್ಟ್ಯತೆಗಳೊಂದಿಗೆ ಕೊರಿಯನ್ ಕಂಪೆನಿ ಸ್ಯಾಮ್ ಸಂಗ್ ತನ್ನ ಹಿಂದಿನ ವರ್ಷದ ಮಾಡೆಲ್ ಗಿಂತ ವಿಭಿನ್ನವಾಗಿರುವ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನ್ನು ಬಿಡುಗಡೆಗೊಳಿಸಿದೆ.
ಎರಡು ವಿಭಿನ್ನ ಸ್ಟೋರೇಜ್ ವೇರಿಯಂಟ್ ನಲ್ಲಿ ನೋಟ್ ಡ9 ಲಭ್ಯವಾಗುತ್ತದೆ ಮತ್ತು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಕೂಡ ಈ ಫೋನ್ ಖರೀದಿಗೆ ಗ್ರಾಹಕರಿಗೆ ಅವಕಾಶಗಳಿದೆ. ಅಮೇಜಾನ್ ಇಂಡಿಯಾ, ಫ್ಲಿಪ್ ಕಾರ್ಡ್, ಪೇಟಿಎಂ ಮಾಲ್, ಸ್ಯಾಮ್ ಸಂಗ್ ಇ-ಶಾಪ್ ಮತ್ತು ಆಫ್ ಲೈನ್ ರೀಟೈಲರ್ ಸ್ಟೋರ್ ಗಳಲ್ಲಿ ಮೊಬೈಲ್ ಖರೀದಿ ಮಾಡಬಹುದು.

ಗ್ಯಾಲಕ್ಸಿ ನೋಟ್ 9 ನ ಆರಂಭಿಕ ಬೆಲೆಯು 67,900 ರುಪಾಯಿ ಆಗಿದ್ದು ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಆಕರ್ಷೀಯವಾಗಿರುವ ರಿಯಾಯಿತಿ ದರಗಳು ಲಭ್ಯವಿದೆ. ಹಾಗಾದ್ರೆ ಯಾವ ಯಾವ ವೆಬ್ ಸೈಟ್ ಗಳಲ್ಲಿ ಯಾವ ಯಾವ ಬೆಲೆಯನ್ನು ನಿಗದಿಗೊಳಿಸಲಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಬೆಲೆ :
ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ನಲ್ಲಿ 6,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಗೆ ನೀಡಲಾಗುತ್ತಿದೆ. ಎರಡೂ ವೇರಿಯಂಟ್ ಗೂ ಕೂಡ ಈ ತಿಂಗಳ ಅಂತ್ಯದ ವರೆಗೆ ಈ ಕ್ಯಾಷ್ ಬ್ಯಾಕ್ ಸೌಲಭ್ಯ ಲಭ್ಯವಿರುತ್ತದೆ. ಹೆಚ್ ಡಿಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡುವ ಗ್ರಾಹಕರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ಇದರ ಜೊತೆಗೆ ಸುಮಾರು 15,000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಫ್ಲಿಪ್ ಕಾರ್ಟ್ ನೀಡುತ್ತಿದೆ. ಬಜಾಜ್ ಫಿನ್ ಸರ್ವ್ ಕಾರ್ಡ್ಸ್ ಮತ್ತು ಕ್ರೆಡಿಟ್ ಕಾರ್ಡ್ ಗಳಲ್ಲಿ ಇಎಂಐನಲ್ಲೂ ಖರೀದಿ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಅಮೇಜಾನ್ ನಲ್ಲಿ ಸುಮಾರು 11,300 ರುಪಾಯಿ ವರೆಗೆ ತಮ್ಮ ಹಳೆಯ ಫೋನ್ ಕೊಟ್ಟು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಖರೀದಿಸುವ ಅವಕಾಶವಿದೆ.

ಪೇಟಿಎಂ ಮಾಲ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಬೆಲೆ
ಗ್ಯಾಲಕ್ಸಿ ನೋಟ್ 9 64ಜಿಬಿ ಮೆಮೊರಿ ಮತ್ತು 128ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆ 67,900 ರುಪಾಯಿ ಆಗಿದ್ದು ಪೇಟಿಎಂ ಮಾಲ್ ನಲ್ಲಿ 61,900 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಖರೀದಿಸಲು ಅವಕಾಶವಿದೆ. ಅಂದರೆ 6,000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವು ಇದರಲ್ಲಿ ಲಭ್ಯವಿದೆ. ಬಡ್ಡಿರಹಿತ ಇಎಂಐ ಸೌಲಭ್ಯದಲ್ಲೂ ಕೂಡ ಈ ಮೊಬೈಲ್ ನ್ನು ಪೇಟಿಎಂನಲ್ಲಿ ಖರೀದಿಸಬಹುದು.

ಏರ್ ಟೆಲ್ ಸ್ಟೋರ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಬೆಲೆ
ಗ್ಯಾಲಕ್ಸಿ ನೋಟ್ 9 ಬೆಲೆ ಏರ್ ಟೆಲ್ ನಲ್ಲಿ 7,900 ರುಪಾಯಿ ಡೌನ್ ಪೇಮೆಂಟ್ ಮಾಡಿ, ತಿಂಗಳಿಗೆ 2,999 ರುಪಾಯಿ ಪಾವತಿ ಮಾಡಿ ಖರೀದಿಸಲು ಅವಕಾಶವಿದೆ. ಈ ಡಿವೈಸ್ ನ ಜೊತೆಗೆ ಏರ್ ಟೆಲ್ ಬಳಕೆದಾರರಿಗೆ 75ಜಿಬಿ ಡಾಟಾ ಪ್ರತಿ ತಿಂಗಳು ,4ಜಿ ಪ್ಲಾನ್ ನಲ್ಲಿ ಲಭ್ಯವಾಗುತ್ತದೆ.

Quad HD+ ಸೂಪರ್ AMOLED ಡಿಸ್‌ಪ್ಲೇ
ಗ್ಯಾಲಕ್ಸಿ ನೋಟ್ 9 6.4-ಇಂಚಿನ Quad HD+ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು ಅದರ ರೆಸಲ್ಯೂಷನ್ 2960 x 1440 ಪಿಕ್ಸಲ್ ಮತ್ತು 18.5:9 ಅನುಪಾತವನ್ನು ಹೊಂದಿದೆ. ಇದು Exynos 9810 ಚಿಪ್ ಸೆಟ್ ಹೊಂದಿದ್ದು ಎರಡು ವೇರಿಯಂಟ್ ನ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ. ಒಂದು 6GB RAM ಜೊತೆಗೆ 128GB ಸ್ಟೋರೇಜ್ ವ್ಯವಸ್ಥೆಯದ್ದಾದರೆ ಮತ್ತೊಂದು 8GB RAM ಜೊತೆಗೆ 512GB ಸ್ಟೋರೇಜ್ ನ್ನು ಹೊಂದಿದೆ.

ಡುಯಲ್ ಕ್ಯಾಮರಾ
ಕ್ಯಾಮರಾ ಸೆಟ್ ಅಪ್ ಗ್ಯಾಲಕ್ಸಿ ಎಸ್9+ ನಲ್ಲಿ ಇರುವಂತೆಯೇ ಇದ್ದು ಡುಯಲ್ 12 ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾವಿದ್ದು, ಈ ಪ್ರೈಮರಿ ಕ್ಯಾಮರಾವು ಕ್ರಮವಾಗಿ f/1.5 ಮತ್ತು f/2.4 ದ್ಯುತಿರಂಧ್ರವನ್ನು ಹೊಂದಿದೆ. ಸೆಕೆಂಡರಿ ಕ್ಯಾಮರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದ್ದೇ ಆಗಿದ್ದು ಸೆನ್ಸರ್ ಗಳು, ಪ್ರೊಟ್ರೈಟ್ ಇಮೇಜ್ ಶೂಟಿಂಗ್ ಗೆ ಬೆಂಬಲ, ಟೆಲಿಫೋಟೋ ಲೆನ್ಸ್ ನಂತೆ ಇದು ವರ್ತಿಸುತ್ತದೆ. ಜೊತೆಗೆ 8 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವಿದ್ದು ಆಟೋಫೋಕಸ್ ಮತ್ತು f/1.7 ದ್ಯುತಿರಂಧ್ರವನ್ನು ಅದು ಹೊಂದಿದೆ.

ಎಸ್-ಪೆನ್ ಸೌಲಭ್ಯ
ಗ್ಯಾಲಕ್ಸಿ ನೋಟ್ 9 ಬ್ಲೂಟೂತ್ ಅನೇಬಲ್ ಆಗಿರುವ ಎಸ್-ಪೆನ್ ಸೌಲಭ್ಯ ಹೊಂದಿದ್ದು ಕ್ಯಾಮರಾದೊಳಗೆ ರಿಮೋಟ್ ಶಟರ್ ನ್ನು ಬಳಸಬಹುದಾಗಿದೆ. ಆಂಡ್ರಾಯ್ಡ್ 8.1 ಓರಿಯೋ ಮೂಲಕ ಇದು ರನ್ ಆಗುತ್ತದೆ ಮತ್ತು ಇದರಲ್ಲಿ 4,000mAh ಬ್ಯಾಟರಿಯನ್ನು ಇದು ಹೊಂದಿದೆ. 6ಜಿಬಿ ಮೆಮೊಪಿ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ನ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ರ ಎಂಆರ್ ಪಿ ಬೆಲೆ 67,900 ರುಪಾಯಿ ಮತ್ತು ಹೈ ಎಂಡ್ ಮಾಡೆಲ್ 8ಜಿಬಿ ಮೆಮೊರಿ ಮತ್ತು 512ಜಿಬಿ ಸ್ಟೋರೇಜ್ ನ ಬೆಲೆ 84,900 ರುಪಾಯಿಗಳಾಗಿದೆ.


Click it and Unblock the Notifications








