ಸ್ಯಾಮ್ ಸಂಗ್ ಪೇ ಬಳಕೆದಾರರಿಗೆ ಹೊಸ ಆಪ್ ಡೇಟ್ ಲಭ್ಯ..!
ಸ್ಯಾಮ್ ಸಂಗ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊಬೈಲ್ ವ್ಯಾಲೆಟೆ ಸೇವೆ ಸ್ಯಾಮ್ ಸಂಗ್ ಪೇ ಅನ್ನು ಪರಿಚಯಿಸಿದೆ. ಸ್ಯಾಮ್ ಸಂಗ್ ಪೇ ಯುಪಿಎ ಇಂಟೆರ್ ಫೇಸ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಪೇಮೆಂಟ್ ಮಾಡುವುದನ್ನು ಮತ್ತಷ್ಟು ಸುಲಭ ಮಾಡಿದೆ. ಸದ್ಯ ಸ್ಯಾಮ್ ಸಂಗ್ ಪೇ ಮತ್ತೊಂದು ಹೊಸ ಆಪ್ ಡೇಟ್ ಅನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಇನ್ನು ಮುಂದೆ ಸ್ಯಾಮ್ ಸಂಗ್ ಪೇ ಭಾರತ್ QR ಕೋಡ್ ಗಳನ್ನು ಸ್ಕ್ಯಾನ್ ಮಾಡಲಿದ್ದು, ಇದು UPI ಪೇಮೆಂಟ್ ಅನ್ನು ಮತ್ತಷ್ಟು ಸುಧಾರಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಸುಲಭವಾಗಿ ಸ್ಯಾಮ್ ಸಂಗ್ ಪೇ ಬಳಕೆದಾರರು ಪೇಮೆಂಟ್ ಮಾಡಬಹುದಾಗಿದೆ.
ನ್ಯಾಷಿನಲ್ ಪೇಮೆಂಟ್ ಕಾರ್ಪೋರೆಷನ್ ಆಫ್ ಇಂಡಿಯಾ UPI ಪೇಮೆಂಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಎರಡು ಬ್ಯಾಂಕ್ ಆಕೌಂಟ್ ನಡುವೆ ಹಣವನ್ನು ವರ್ಗಾಹಿಸುವ ಒಂದು ಮೊಬೈಲ್ ಪ್ಲಾಟ್ ಫಾರ್ಮ್ ಆಗಿದೆ. ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಗೆ ಸೇವೆಯನ್ನು ನೀಡಲಿದೆ.
ಆಂಡ್ರಾಯ್ಡ್ O ಬಳಕೆದಾರರಿಗೆ ಸ್ಯಾಮ್ ಸಂಗ್ ಪೇ ಆಪ್ ಆಪ್ಡೇಟ್ ಲಭ್ಯವಿರಲಿದ್ದು, ಇದರಲ್ಲಿ ಭಾರತ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಈ ಆಪ್ ಡೇಟ್ ಬಳಕೆದಾರರಿಗೆ ದೊರೆಯಲು ಇನ್ನು ಕೆಲವು ದಿನಗಳು ಬೇಕಾಗಬಹುದು ಎನ್ನಲಾಗಿದೆ.
ಈಗಾಗಲೇ ಸ್ಯಾಮ್ ಸಂಗ್ ಪೇ ಬಳಕೆದಾರರ ಸಂಖ್ಯೆ 1 ಮಿಲಿಯನ್ ದಾಟಿದ್ದು, ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಈ ಹೊಸ ಆಪ್ ಡೇಟ್ ಬಿಡುಗಡೆ ಮಾಡಿದೆ ಎನ್ನಲಾಗಿದೆ.


Click it and Unblock the Notifications








