ವಿಶ್ವದಾಧ್ಯಂತ ಹವಾ ಎಬ್ಬಿಸಿದ್ದ 'ಸಾರಾಹ್' ಆಪ್ ನಿಷೇಧ!!..ಏಕೆ ಗೊತ್ತಾ?
ನಿಮ್ಮ ಗುರುತನ್ನು ಬಹಿರಂಗಪಡಿಸದೆ ನೀವು ಯಾರಿಗೆ ಬೇಕಾದರೂ ಸಂದೇಶ ಕಳುಹಿಸಬಹುದಾದ ಈ ಆಪ್ ಅನ್ನು ಇನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.!!
ವಿಶ್ವದಾಧ್ಯಂತ ಹವಾ ಎಬ್ಬಿಸಿದ್ದ ಜನಪ್ರಿಯ ಸಾರಾಹ್(SARAHAH) ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ನಿಮ್ಮ ಗುರುತನ್ನು ಬಹಿರಂಗಪಡಿಸದೆ ನೀವು ಯಾರಿಗೆ ಬೇಕಾದರೂ ಸಂದೇಶ ಕಳುಹಿಸಬಹುದಾದ ಈ ಆಪ್ ಅನ್ನು ಇನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.!!
ಅತ್ಯಂತ ಕಡಿಮೆ ಅವಧಿಯಲ್ಲೇ ಹೆಚ್ಚಿನ ಜನಪ್ರಿಯತೆ ಗಳಿಸಿದ್ದ ಸಾರಾಹ್(SARAHAH) ಅಪ್ಲಿಕೇಷನ್ ವಿಶ್ವದಲ್ಲಿಯೇ ಹೆಸರುವಾಸಿಯಾಗಿತ್ತು. ಹಾಗಾಗಿಯೇ, ಕೆಲವೇ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತ ಸುಮಾರು 30 ಕೋಟಿ ಬಳಕೆದಾರರು ಸಾರಾಹ್ ಅಪ್ಲಿಕೇಶನ್ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದರು ಮತ್ತು ಬಳಕೆ ಮಾಡುತ್ತಿದ್ದರು.!!

ಆದರೆ, ಇತ್ತೀಚಿನ ವರದಿಗಳ ಪ್ರಕಾರ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಈ ಆಪ್ ನಿಷೇಧವಾಗಿದೆ.! ಹಾಗಾದರೆ, ಸಾರಾಹ್(SARAHAH) ಅಪ್ಲಿಕೇಷನ್ ನಿಷೇಧವಾಗಿದ್ದು ಏಕೆ? ಪ್ರಸ್ತುತ ಆಪ್ ಬಳಸುತ್ತಿರುವವರು ಆಪ್ ಕಾರ್ಯಚರಣೆ ನಡೆಸಬಹುದೇ? ಕಂಪೆನಿ ಏನು ಹೇಳುತ್ತಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ಏನಿದು ಸಾರಾಹ್ ಅಪ್ಲಿಕೇಶನ್?
ಸೌದಿ ಅರೇಬಿಯಾದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಅನಾಮಧೇಯ ಸಂದೇಶ ಕಳಿಹಿಸುವ ಒಂದು ಜನಪ್ರಿಯ ಅಪ್ಲಿಕೇಶನ್ ಈ ಸರಾಹ್ ಆಪ್.! ಈ ಅಪ್ಲಿಕೇಶನ್ ಸಹಾಯದಿಂದ ನಿಮ್ಮ ಗುರುತನ್ನು ಬಹಿರಂಗಪಡಿಸದೆ ನೀವು ಯಾರಿಗೆ ಬೇಕಾದರೂ ಸಂದೇಶ ಕಳುಹಿಸಬಹುದಾದ ಆಯ್ಕೆ ಲಭ್ಯವಿತ್ತು.!!

ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.!!
ಕಳೆದ ವರ್ಷ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಾರಾಹ್ ಆಪ್ ಅನ್ನು ಇನ್ಮುಂದೆ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಸ್ಮಾರ್ಟ್ಫೋನ್ ಬಳಕೆದಾರರ ಅಭಿಪ್ರಾಯದಂತೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಸರಾಹ್ ಆಪ್ ಅನ್ನು ತೆಗೆದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.!!

ಸಾರಾಹ್ ನಿಷೇಧವಾಗಿದ್ದು ಏಕೆ?
ಕಿರುಕುಳ ಪ್ರಚಾರ ಮಾಡುವಂತಹ ಆರೋಪದ ಮೇಲೆ ಗೂಗಲ್ ಮತ್ತು ಆಪಲ್ ಪ್ಲೇಸ್ಟೋರ್ಗಳಿಂದ ಸಾರಾಹ್ ಅಪ್ಲಿಕೇಷನ್ನ್ನು ತೆಗೆಯಲಾಗಿದೆ. ಗುರುತನ್ನು ಬಹಿರಂಗಪಡಿಸದೆ ನೀವು ಯಾರಿಗೆ ಬೇಕಾದರೂ ಸಂದೇಶ ಕಳುಹಿಸಬಹುದಾದ ಈ ಅಪ್ಲಿಕೇಷನ್ ನಿಷೇಧಕ್ಕೆ ಮನವಿ ಸಲ್ಲಿಸಿದ್ದರು.!!

ಮನವಿ ಸಲ್ಲಿಸಿದ್ದು ಯಾರು?
ಆಸ್ಟ್ರೇಲಿಯಾದ ಕತ್ರಿನಾ ಕಾಲಿನ್ಸ್ 13 ವರ್ಷದ ಮಗಳಿಗೆ ಈ ಮೆಸೇಜಿಂಗ್ ಅಪ್ಲಿಕೇಶನ್ ಫ್ಲಾಟ್ಫಾರ್ಮ್ನಲ್ಲಿ ಅವಮಾನಕರ ಸಂದೇಶಗಳನ್ನು ಕಳುಹಿಸಲಾಗಿತ್ತು. ಹಾಗಾಗಿ, ಕತ್ರಿನಾ ಕಾಲಿನ್ಸ್ ಅವರು ಸಾರಾಹ್ ಅಪ್ಲಿಕೇಷನ್ ನಿಷೇಧಕ್ಕೆ ಮನವಿ ಸಲ್ಲಿಸಿದ್ದರು. ನಂತರ ನಂತರ ಸುಮಾರು 470,000 ಜನರು ಈ ಮನವಿಗೆ ಸಹಿ ಹಾಕಿದ್ದಾರೆ.


ಪ್ರಸ್ತುತ ಬಳಕೆದಾರರು?
ಗೂಗಲ್ ಮತ್ತು ಆಪಲ್ ಪ್ಲೇಸ್ಟೋರ್ಗಳಿಂದ ಈ ಅಪ್ಲಿಕೇಷನ್ನ್ನು ಡೌನ್‌ಲೋಡ್ ಮಾಡಲು ಮಾತ್ರ ಸಾಧ್ಯವಿಲ್ಲ. ಆದರೆ, ಸಾರಾಹ್ ಆಪ್ ಅನ್ನು ಈಗಾಗಲೇ ಬಳಸುತ್ತಿರುವವರು ಅದನ್ನು ಮುಂದುವರಿಸಬಹುದು ಎಂದು ತಿಳಿದು ಬಂದಿದೆ. ಆದರೆ, ಸಾರಾಹ್ ಆಪ್ ಮುಖ್ಯಸ್ಥ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.!!


Click it and Unblock the Notifications








