Subscribe to Gizbot

ಸರಹಾ ಆಪ್ ನಿಮ್ಮ ಕಾಂಟೆಕ್ಟ್ ಗಳನ್ನು ಕದಿಯುತ್ತದೆ ಎಚ್ಚರ.!

Written By: Lekhaka

ಭಾರೀ ಹವಾ ಎಬ್ಬಿಸಿರುವ ಸರಹಾ ಆಪ್ ಸದ್ಯದ ಹಾಟ್ ಟಾಪಿಕ್ ಎಲ್ಲೇ ನೋಡಿದರೂ ಇದರದ್ದೇ ಟಾಕ್. ಯಾರಿಗೂ ತಿಳಿದಂತೆ ಮೇಸೆಜ್ ಮಾಡುವ ಕಾರಣಕ್ಕೆ ಎಲ್ಲಾರು ಈ ಆಪ್ ಅನ್ನು ಬಳಸಲು ಶುರುಮಾಡಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಇದರ ಅಬ್ಬರವು ಹೆಚ್ಚಾಗಿದೆ.

ಸರಹಾ ಆಪ್ ನಿಮ್ಮ ಕಾಂಟೆಕ್ಟ್ ಗಳನ್ನು ಕದಿಯುತ್ತದೆ ಎಚ್ಚರ.!

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುವವರೇಲ್ಲರೂ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಹೆಚ್ಚಿನ ಮಂದಿ ಈ ಆಪ್ ಅನ್ನು ಲಘು ಹಾಸ್ಯವಾಗಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗಿದೆ.

ಈ ಆಪ್ ಬಗ್ಗೆ ನಿಮಗೆ ತಿಳಿದಿಲ್ಲವಾದ ಮತ್ತೊಂದು ಭಯಾನಕ ಸತ್ಯ ಎಂದರೆ ಈ ಆಪ್ ನಿಮ್ಮ ಮೊಬೈಲ್ ನಲ್ಲಿರುವ ಕಾಟೆಂಕ್ಟ್ ಗಳನ್ನು ಕದಿಯಲಿದೆ. ನಿಮ್ಮ ಫೋನಿನಲ್ಲಿರುವ ಕಾಂಟೆಕ್ಸ್ ಗಳನ್ನು ಕಂಪನಿಯ ಸರ್ವರ್ ಗೆ ವರ್ಗಹಿಸುತ್ತಿದೆ ಎನ್ನಲಾಗಿದೆ.

BSNL ನಿಂದ ಮತ್ತೊಂದು ಬೊಂಬಾಟ್ ಆಫರ್ ಘೋಷಣೆ.!

ಇದು ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿರುವ ಕಾಂಟೆಕ್ಟ್ ಗಳನ್ನು ಕದಿಯುತ್ತಿದೆ ಎಂದು ಸೆಕ್ಯೂರಿಟಿ ಎಜೆನ್ಸಿಯೊಂದು ವರದಿ ನೀಡಿದ್ದು, ಸರಹಾ ಆಪ್ ನಿಮ್ಮ ಫೋನಿನ ಕಾಂಟೆಕ್ಸ್ ಗಳನ್ನು ಕಾಪಿ ಮಾಡಿಕೊಳ್ಳುತ್ತಿದೆ ಎಂದಿದೆ.

ಈ ಆಪ್ ಮುಂದೆ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದ್ದು, ಅದಕ್ಕಾಗಿ ಈ ನಂಬರ್ ಗಳನ್ನು ಸಂಗ್ರಹಿಸುತ್ತಿದೆ ಎನ್ನಲಾಗಿದೆ. ಆದರೂ ಇದು ಭದ್ರತೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ.

Read more about:
English summary
The Sarahah app allegedly steals your phone's contacts and transfers them to the company's server.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot