ಶಾಕಿಂಗ್!..'HDFC ಸ್ಮಾರ್ಟ್‌ಬೈ'ನಲ್ಲಿ ಮಾರಾಟಕ್ಕಿದೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್!!

By Tejaswini P G
|

ಒನ್ಪ್ಲಸ್ 6 ನ ಅಧಿಕೃತ ಲಾಂಚ್ ಗೆ ಇನ್ನೂ 2 ವಾರಗಳು ಉಳಿದಿರುವಾಗಲೇ ಅದು HDFC ಯ ಏಕೈಕ ಶಾಪಿಂಗ್ ಪೋರ್ಟಲ್ ಆಗಿರುವ HDFC ಸ್ಮಾರ್ಟ್ ಬೈ ನಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಮೂಡಿಸಿದೆ.

ಒನ್ಪ್ಲಸ್ 6 ನ ಅಧಿಕೃತ ಲಾಂಚ್ ಗೆ ಇನ್ನೂ 2 ವಾರಗಳು ಉಳಿದಿರುವಾಗಲೇ ಅದು HDFC ಯ ಏಕೈಕ ಶಾಪಿಂಗ್ ಪೋರ್ಟಲ್ ಆಗಿರುವ HDFC ಸ್ಮಾರ್ಟ್ ಬೈ ನಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಮೂಡಿಸಿದೆ. ಈ ಲಿಸ್ಟಿಂಗ್ ನಲ್ಲಿ ಒನ್ಪ್ಲಸ್ 6 ನ ಚಿತ್ರ ಮಾತ್ರವಲ್ಲದೇ ಒಂದಷ್ಟು ಸ್ಪೆಸಿಫಿಕೇಶನ್ ಗಳನ್ನೂ ಪಟ್ಟಿ ಮಾಡಲಾಗಿದೆ. ಆದರೆ ಇದೆಲ್ಲದರ ಮಧ್ಯೆ ಮತ್ತಷ್ಟು ಅಚ್ಚರಿ ಮೂಡಿಸಿರುವ ವಿಷಯವೇನೆಂದರೆ ಈ ಲಿಸ್ಟಿಂಗ್ ನಲ್ಲಿ ನೀಡಲಾಗಿರುವ ಸ್ಪೆಸಿಫಿಕೇಶನ್ಗಳು ಈಗಾಗಲೇ ಸೋರಿಕೆಯಾಗಿರುವ ಮಾಹಿತಿಗಳೊಡನೆ ಹೊಂದಾಣಿಕೆಯಾಗುತ್ತಿಲ್ಲ!

'HDFC ಸ್ಮಾರ್ಟ್‌ಬೈ'ನಲ್ಲಿ ಮಾರಾಟಕ್ಕಿದೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್!!


HDFC ಸ್ಮಾರ್ಟ್ ಬೈ ನಲ್ಲಿರುವ ಲಿಸ್ಟಿಂಗ್ ನ ಅನುಸಾರ ಒನ್ಪ್ಲಸ್ 6 5.7 ಇಂಚ್ ಡಿಸ್ಪ್ಲೇ ಮತ್ತು 16:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಆದರೆ ಈ ಮೊದಲು ಲಭಿಸಿದ್ದ ಮಾಹಿತಿಗಳ ಅನುಸಾರ ಒನ್ಪ್ಲಸ್ 6 ಕನಿಷ್ಠ ಪಕ್ಷ 6 ಇಂಚ್ ಡಿಸ್ಪ್ಲೇ ಹೊಂದಿರಬೇಕು.

ಸ್ಮಾರ್ಟ್ ಬೈ ಲಿಸ್ಟಿಂಗ್ ನಲ್ಲಿ ಒನ್ಪ್ಲಸ್ 6 ನ ಎರಡು ಆವೃತ್ತಿಗಳನ್ನು ತೋರಿಸಲಾಗಿದ್ದು, ಒಂದರ ಬೆಲೆ ರೂ 36,999 ಆಗಿದ್ದು, ಮತ್ತೊಂದು ಆವೃತ್ತಿ ರೂ 39,999 ಬೆಲೆ ಹೊಂದಿದೆ. ಅಷ್ಟೇ ಅಲ್ಲದೆ ಲಿಸ್ಟಿಂಗ್ ನಲ್ಲಿ ಈ ಸಾಧನ 'ಔಟ್ ಆಫ್ ಸ್ಟಾಕ್' ಎಂದು ತೋರಿಸಲಾಗಿದೆ. ಸ್ಮಾರ್ಟ್ ಬೈ ನ ಲಿಸ್ಟಿಂಗ್ ನ ಅನುಸಾರ ಈ ಫ್ಲ್ಯಾಗ್ಶಿಪ್ ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 845 SoC , 8GB ರ್ಯಾಮ್ ಮತ್ತು 128 GB ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ.

ಈ ಲಿಸ್ಟಿಂಗ್ನಲ್ಲಿರುವ ಮತ್ತೊಂದು ಆಘಾತಕಾರಿ ಅಂಶವೆಂದರೆ ಅದು ಒನ್ಪ್ಲಸ್ 6 ನ ಕ್ಯಾಮೆರಾ ಕುರಿತಾದುದು. ಸ್ಮಾರ್ಟ್ ಬೈ ನಲ್ಲಿರುವ ಮಾಹಿತಿಯ ಅನುಸಾರ ಒನ್ಪ್ಲಸ್ 6 ನಲ್ಲಿ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ನ ಬದಲು ಸಿಂಗಲ್ ರೇರ್ ಕ್ಯಾಮೆರಾ ಮಾಡ್ಯೂಲ್ ಇರಲಿದ್ದು, 23MP ಕ್ಯಾಮೆರಾ ಹೊಂದಿರಲಿದೆ. ಇನ್ನು ಒನ್ಪ್ಲಸ್ 6 ನ ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದ್ದು ಎರಡು 16MP ಸೆನ್ಸರ್ಗಳು ಇರಲಿವೆ. ಈ ಸಾಧನ 3500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ.

ಒನ್ಪ್ಲಸ್ 6 ಕುರಿತು ಈಗಾಗಲೇ ಸೋರಿಕೆಯಾಗಿರುವ ಮಾಹಿತಿ ಸ್ಮಾರ್ಟ್ ಬೈ ನ ಲಿಸ್ಟಿಂಗ್ ಗಿಂತ ಸಂಪೂರ್ಣ ಭಿನ್ನವಾಗಿದ್ದು, ಸ್ಮಾರ್ಟ್ ಬೈ ನ ಲಿಸ್ಟಿಂಗ್ ಅನ್ನು ನಕಲಿಯೆಂದೇ ಭಾವಿಸಬಹುದು. ಸೋರಿಕೆಯಾಗಿರುವ ಮಾಹಿತಿಯ ಅನುಸಾರ ಒನ್ಪ್ಲಸ್ 6 6-ಇಂಚ್ ಗಿಂತಲೂ ಹಿರಿದಾದ ಡಿಸ್ಪ್ಲೇ ಹೊಂದಿರಲಿದ್ದು, ಜೊತೆಗೆ ಮೇಲ್ಭಾಗದಲ್ಲಿ ಐಫೋನ್ X ಮಾದರಿಯನಾಚ್ ಒಂದನ್ನು ಹೊಂದಿರಲಿದೆ.

'HDFC ಸ್ಮಾರ್ಟ್‌ಬೈ'ನಲ್ಲಿ ಮಾರಾಟಕ್ಕಿದೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್!!


ಅಷ್ಟೇ ಅಲ್ಲದೆ, ಸ್ಮಾರ್ಟ್ ಬೈ ನಲ್ಲಿರುವ ಕ್ಯಾಮೆರಾ ಲಿಸ್ಟಿಂಗ್ ಕೂಡ ಖಂಡಿತ ನಕಲಿಯಾಗಿದ್ದು ಒನ್ಪ್ಲಸ್ 6 ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿರುವುದಾಗಿ ಹಲವು ವರದಿಗಳು ಸೂಚಿಸಿವೆ. ಆದರೆ ಲಿಸ್ಟಿಂಗ್ ನಲ್ಲಿ ಇದರ ವಿರುದ್ಧವಾಗಿ ಸೂಚಿಸಲಾಗಿದೆ. ಈ ಲಿಸ್ಟಿಂಗ್ ಸ್ಮಾರ್ಟ್ ಬೈ ವೆಬ್ಸೈಟ್ ನಲ್ಲಿ ಕಾಣಿಸಿಕೊಂಡ ಸ್ವಲ್ಪ ಸಮಯದಲ್ಲೇ ಅದನ್ನು ಅಲ್ಲಿಂದ ತೆಗೆದುಹಾಕಲಾಗಿತ್ತು ಮತ್ತು ಆ ಪುಟಕ್ಕೆ ಯಾರಿಗೂ ಆಕ್ಸೆಸ್ ಇಲ್ಲದಂತಾಗಿತ್ತು.

ಒನ್ಪ್ಲಸ್ 6 ಜಾಗತಿಕವಾಗಿ ಮೇ 16 ರಂದು ಬಿಡುಗಡೆಯಾಗಲಿದ್ದು, ಮರುದಿನ ಮುಂಬೈ ನಲ್ಲಿ ನಡೆಯಲಿರುವ ಸಮಾರಂಭವೊಂದರ ಮೂಲಕ ಭಾರತದಲ್ಲಿ ಬಿಡುಗಡೆಯಾಗಲಿದೆ. ಒನ್ಪ್ಲಸ್ 6 ನ ಬೆಲೆ ಭಾರತದಲ್ಲಿ ರೂ 36,999 ಎಂದು ಹೇಳಲಾಗುತ್ತಿದೆ. ಒನ್ಪ್ಲಸ್ ಸಂಸ್ಥೆ ಯು ಮೇ 21-22ರಂದು ಭಾರತಾದಾದ್ಯಂತ 8 ನಗರಗಳಲ್ಲಿ ಒನ್ಪ್ಲಸ್ 6 ಗೆ ಸಂಬಂಧಿಸಿದಂತೆ ಪಾಪ್-ಅಪ್ ಇವೆಂಟ್ಗಳನ್ನು ನಡೆಸುವುದಾಗಿ ತಿಳಿಸಿದೆ.

ಒನ್ಪ್ಲಸ್ ಸ್ಮಾರ್ಟ್ಫೋನ್ ಗಳ ಅಭಿಮಾನಿಗಳು ಈ ಪಾಪ್-ಅಪ್ ಸ್ಟೋರ್ಗಳಿಗೆ ಭೇಟಿ ನೀಡುವ ಮೂಲಕ ಫ್ಲ್ಯಾಗ್ಶಿಪ್ ಮೊಬೈಲ್ ಆದ ಒನ್ಪ್ಲಸ್ 6 ನ ಅನುಭವ ಪಡೆಯಬಹುದು ಮತ್ತು ಅದನ್ನು ಫರ್ಸ್ಟ್ ಕಮ್-ಫರ್ಸ್ಟ್ ಸರ್ವ್ ಆಧಾರದ ಮೇಲೆ ಖರೀದಿಸಬಹುದಾಗಿದೆ.

Best Mobiles in India

English summary
The launch of OnePlus 6 is just two weeks away and the flagship is been spotted on HDFC Bank SmartBuy, which is the only shopping portal of the bank.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X