ವಿಡಿಯೋ ಸ್ಟ್ರೀಮರ್ ಶೋಬಾಕ್ಸ್‌ನ ಬೆಸ್ಟ್‌ ಪರ್ಯಾಯಗಳೆಂದರೆ ಇವುಗಳೆ..!

|

ನೀವು ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ಗಮನಿಸಿದರೆ ಹಲವಾರು ಮೂವಿ ಮತ್ತು ವೀಡಿಯೋ ಸ್ಟ್ರೀಮಿಂಗ್ ಆಪ್ ಗಳು ಲಭ್ಯವಾಗುತ್ತದೆ. ಅದೂ ಅಲ್ಲದೆ ಇತ್ತೀಚೆಗೆ ಪ್ರೀಮಿಯಂ ಮೂವಿ ಆಪ್ ಗಳಾದ ನೆಟ್ ಫ್ಲಿಕ್ಸ್ ಮತ್ತು ಹಾಟ್ ಸ್ಟಾರ್ ನಂತವು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಆದರೆ ಹೆಚ್ಚಿನ ಮೂವಿ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವವು ನಿಮ್ಮ ಬಳಿ ಪ್ರೀಮಿಯಂ ಟ್ಯಾಗ್ ಲೈನ್ ನ್ನು ಬೇಡುತ್ತದೆ ಮತ್ತು ಮಾಸಿಕ ಪ್ಯಾಕೇಜ್ ಗೆ ಚಂದಾದಾರರಾಗುವಂತೆ ಹೇಳುತ್ತದೆ. ಆದರೆ ಉಚಿತವಾಗಿರುವ ವೀಡಿಯೋ ಸ್ಟ್ರೀಮಿಂಗ್ ಆಪ್ ಗಳು ಇವೆ.

ಹೆಚ್ಚಿನ ಉಚಿತ ಮೂವಿ ಸ್ಟ್ರೀಮಿಂಗ್ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಅದಕ್ಕೆ ಕಾರಣಗಳು ಹಲವಾರು ಇದೆ. ಆದರೂ ಅವುಗಳು ಗೂಗಲ್ ಸರ್ಚ್ ಮೂಲಕ ನಿಮಗೆ ಲಭ್ಯವಾಗುತ್ತದೆ. ಮೂವಿ ಆಪ್ ಗಳಲ್ಲಿ ಅತ್ಯುತ್ತಮವಾಗಿರುವುದನ್ನು ಮಾತನಾಡುವುದಾದರೆ ಶೋಬಾಕ್ಸ್. ಹೌದು ಇದು ಆಂಡ್ರಾಯ್ಡ್ ನಲ್ಲಿ ಲಭ್ಯವಿರುವ ಒಂದು ಅಧ್ಬುತವಾದ ಉಚಿತವಾಗಿರುವ ಮೂವಿ ಆಪ್.

ವಿಡಿಯೋ ಸ್ಟ್ರೀಮರ್ ಶೋಬಾಕ್ಸ್‌ನ ಬೆಸ್ಟ್‌ ಪರ್ಯಾಯಗಳೆಂದರೆ ಇವುಗಳೆ..!

ಅನಿಯಮಿತ ಘಂಟೆಗಳ ವರೆಗೆ ವೀಡಿಯೋ ಕಂಟೆಂಟ್ ಗಳನ್ನು ಇದರಲ್ಲಿ ಉಚಿತವಾಗಿ ನೋಡಬಹುದು. ಆಫ್ ಲೈನ್ ವ್ಯೂವಿಂಗ್, ಹೆಚ್ ಡಿ ವೀಡಿಯೋಗಳು, ವೀಡಿಯೋ ಶೇರಿಂಗ್, ಇತ್ಯಾದಿ ವೈಶಿಷ್ಟ್ಯತೆಗಳನ್ನು ಕೂಡ ಶೋಬಾಕ್ಸ್ ಹೊಂದಿದೆ. ಆದರೆ ಶೋಬಾಕ್ಸ್ ಮಾತ್ರವೇ ಆಂಡ್ರಾಯ್ಡ್ ನಲ್ಲಿ ಲಭ್ಯವಿರುವ ಮೂವಿ ಆಪ್ ಅಲ್ಲ. ಬದಲಾಗಿ ಇನ್ನೂ ಹಲವು ಶೋಬಾಕ್ಸ್ ಗೆ ಪರ್ಯಾಯವಾಗಿರುವ ಆಪ್ ಗಳಿವೆ. ಆ ಆಪ್ ಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಮೂವಿ ಬಾಕ್ಸ್( Movie Box)

ಮೂವಿ ಬಾಕ್ಸ್( Movie Box)

ಆಂಡ್ರಾಯ್ಡ್ ಮತ್ತು ಐಓಎಸ್ ಗೆ ಲಭ್ಯವಿರುವ ಬಹಳ ಪ್ರಸಿದ್ಧವಾಗಿರುವ ಮೂವಿ ಸ್ಟ್ರೀಮಿಂಗ್ ಆಪ್ ಎಂದರೆ ಅದು ಮೂವಿ ಬಾಕ್ಸ್.ಶೋಬಾಕ್ಸ್ ನಂತೆಯೇ ಇದರ ಇಂಟರ್ಫೇಸ್ ಕಾಣಿಸುತ್ತದೆ. ಹಲವು ಕುತೂಹಲಕಾರಿ ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ. ಮೂವಿ ಬಾಕ್ಸ್ ನಲ್ಲಿ ನೂತನ ವೀಡಿಯೋ ಕಂಟೆಂಟ್ ಗಳನ್ನು ನೀವು ಗಮನಿಸಬಹುದು. ಅದರಲ್ಲಿ ಮೂವಿ, ಟಿವಿಶೋಗಳು, ಕಾರ್ಟೂನ್ ವೀಡಿಯೋಗಳು ಇನ್ನು ಹಲವಾರು ಇದೆ. ಇದು ಉಚಿತವಾಗಿರುತ್ತದೆ ಮತ್ತು ಯಾವುದೇ ನಿಯಮಾವಳಿಗಳನ್ನು ವೀಡಿಯೋ ನೋಡುವುದಕ್ಕೆ ಇದು ವಿಧಿಸುವುದಿಲ್ಲ.

2 ಪ್ಲೇಬಾಕ್ಸ್ HD

2 ಪ್ಲೇಬಾಕ್ಸ್ HD

ಮೂವಿ ಬಾಕ್ಸ್ ನಂತೆಯೇ ಪ್ಲೇ ಬಾಕ್ಸ್ HD ಮತ್ತೊಂದು ಪ್ರಸಿದ್ಧ ಮೂವಿ ಆಪ್ ಆಗಿದ್ದು ಐಓಎಸ್ ಮತ್ತು ಆಂಡ್ರಾಯ್ಡ್ ಡಿವೈಸ್ ಎರಡರಲ್ಲೂ ಲಭ್ಯವಾಗುತ್ತದೆ. ಮೂವಿ ಬಾಕ್ಸ್ ನಂತೆಯೇ ಇದರ ಇಂಟರ್ಫೇಸ್ ಇದೆ. ಈ ಆಪ್ ನ್ನು ನೀವು ಮೂವಿ, ಟಿವಿಶೋ, ಕಾರ್ಟೂನ್ ವೀಡಿಯೋ, ಲೇಟೆಸ್ಟ್ ಮೂವಿ ಟ್ರೈಲರ್ ಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಬಳಸಬಹುದು. ಇದರಲ್ಲಿ ಹೆಚ್ಚು ಜಾಹಿರಾತುಗಳು ಇರುವುದಿಲ್ಲ ಮತ್ತು ಉಚಿತವಾಗಿರುತ್ತದೆ.

3 ಮೆಗಾ ಬಾಕ್ಸ್ HD

3 ಮೆಗಾ ಬಾಕ್ಸ್ HD

ಮೆಗಾ ಬಾಕ್ಸ್ HD ಒಂದು ಪ್ರಸಿದ್ಧ ಮತ್ತು ಬಹಳ ವೈರಲ್ ಆಗಿರುವ ವೀಡಿಯೋ ಸ್ಟ್ರೀಮಿಂಗ್ ಆಪ್. ಇದು ಆಂಡ್ರಾಯ್ಡ್ ನಲ್ಲಿ ಲಭ್ಯವಿದೆ.ಬಳಕೆದಾರರಿಗೆ ತಮಗಿಷ್ಟವಾದ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಇದರಲ್ಲಿ ಅವಕಾಶವಿದೆ. ಲೋ ಎಂಡ್ ಡಿವೈಸ್ ಗಳಲ್ಲೂ ಕೂಡ ಇದು ರನ್ ಆಗುತ್ತದೆ.

4 ಟೆರ್ರರಿಯಮ್ ಟಿವಿ

4 ಟೆರ್ರರಿಯಮ್ ಟಿವಿ

ಈ ಆಪ್ ಕೂಡ ಒಂದು ಅಧ್ಬುತ ಆಯ್ಕೆಯಾಗಬಲ್ಲದು. ಇದರಲ್ಲಿ ವೀಡಿಯೋ ಸ್ಟ್ರೀಮಿಂಗ್ ಆಗುವಾಗ ಅತೀ ಕಡಿಮೆ ಡಾಟಾ ಬಳಕೆಯಾಗುತ್ತದೆ. ಇದು ಉಚಿತವಾಗಿ ಬಳಕೆ ಮಾಡಬಹುದಾದ ಆಪ್ ಮತ್ತು ಇದರಲ್ಲಿ ನೀವು ಹಲವು ವೀಡಿಯೋ ಕಂಟೆಂಟ್ ಗಳನ್ನು ಹುಡುಕಾಟ ನಡೆಸಬಹುದು ಮತ್ತು ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು

5 ಪಾಪ್ ಕಾರ್ನ್ ಟೈಮ್

5 ಪಾಪ್ ಕಾರ್ನ್ ಟೈಮ್

ಆಂಡ್ರಾಯ್ಡ್ , ಐಓಎಶ್ ಮತತು ಲಿನಕ್ಸ್ ಆಪರೇಟಿಂಗ್ ಸಿಸ್ಟಂಗೆ ಲಭ್ಯವಿರುವ ಬಹಳ ಪ್ರಸಿದ್ಧವಾಗಿರುವ ಮತ್ತು ಟ್ರೆಂಡ್ ನಲ್ಲಿರುವ ಆಪ್ ಅಂದರೆ ಅದು ಪಾಪ್ ಕಾರ್ನ್ ಟೈಮ್.ಇದು ಬಹಳ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. HD ಮತ್ತು SD ಫಾರ್ಮೇಟ್ ನ ವೀಡಿಯೋ ಸ್ಟ್ರೀಮಿಂಗ್ ನಡೆಸಬಹುದು.ಇದು ಉಚಿತವಾಗಿದ್ದು ಯಾವುದೇ ಹಿಡನ್ ಶುಲ್ಕವನ್ನು ಹೊಂದಿರುವುದಿಲ್ಲ. ಸ್ಮಾರ್ಟ್ ಟಿವಿಗಳಿಗೂ ಕೂಡ ಬೆಂಬಲ ನೀಡುವ ಆಪ್ ಇದಾಗಿದೆ.

6 ಕ್ರ್ಯಾಕಲ್

6 ಕ್ರ್ಯಾಕಲ್

ಕ್ರ್ಯಾಕಲ್ ಕೂಡ ಮತ್ತೊಂದು ಬೆಸ್ಟ್ ಮೂವಿ ಆಪ್ ಆಗಿದೆ.ಆಂಡ್ರಾಯ್ಡ್ ಬಳಕೆದಾರರು ಇದನ್ನು ಹೆಚ್ಚು ಇಷ್ಟ ಪಡುತ್ತಾರೆ. ಈಗಾಗಲೇ ಸುಮಾರು 20 ಮಿಲಿಯನ್ ಆಂಡ್ರಾಯ್ಡ್ ಬಳಕೆದಾರರು ಕ್ರ್ಯಾಕಲ್ ಗೆ ರಿಜಿಸ್ಟರ್ ಆಗಿದ್ದಾರೆ. ಎಲ್ಲಾ ಪ್ರಸಿದ್ಧ ಪ್ಲಾಟ್ ಫಾರ್ಮ್ ಗಳಲ್ಲಿ ಇದು ಲಭ್ಯವಿದೆ. ವಿಂಡೋಸ್, ಐಓಎಸ್, ಮ್ಯಾಕ್ ಓಎಸ್ ಇತ್ಯಾದಿ.ಮೂವಿ ನೋಡಲು ಮತ್ತು ಟಿವಿ ಶೋಗಳನ್ನು ಯಾವುದೇ ನಿಬಂಧನೆಗಳಿಲ್ಲದೇ ವೀಕ್ಷಿಸಲು ಬಳಕೆದಾರರಿಗೆ ಇದು ಅನುಮತಿ ನೀಡುತ್ತದೆ.

7 ಸಿನಿಮಾ ಬಾಕ್ಸ್

7 ಸಿನಿಮಾ ಬಾಕ್ಸ್

ಸಿನಿಮಾ ಬಾಕ್ಸ್ ಮತ್ತೊಂದು ಆಂಡ್ರಾಯ್ಡ್ ಆಪ್ ಆಗಿದ್ದು ನೂತನ ಮೂವಿ, ಟಿವಿ ಶೋಗಳನ್ನು ಹೆಚ್ ಡಿ ಫಾರ್ಮೇಟ್ ನಲ್ಲಿ ನೋಡಲು ಅವಕಾಶ ನೀಡುತ್ತದೆ. ಆಫ್ ಲೈನ್ ನಲ್ಲಿ ನೋಡಲು ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಸಿನಿಮಾ ಬಾಕ್ಸ್ ಅವಕಾಶ ನೀಡುತ್ತದೆ. ಇದರ ಇಂಟರ್ಫೇಸ್ ಕೂಡ ಬಹಳ ಸುಲಭವಾಗಿದೆ. ಈ ಆಪ್ ನ ಎಲ್ಲಾ ಸೇವೆಗಳನ್ನು ಉಚಿತವಾಗಿ ಬಳಸಬಹುದು.

8 ಸ್ಟ್ರೀಮಿಯೋ

8 ಸ್ಟ್ರೀಮಿಯೋ

ಸ್ಟ್ರೀಮಿಯೋ ಮತ್ತೊಂದು ಬೆಸ್ಟ್ ಶೋ ಬಾಕ್ಸ್ ಗೆ ಪರ್ಯಾಯವಾಗಿರುವ ಆಂಡ್ರಾಯ್ಡ್ ಆಪ್ ಆಗಿದೆ. ಇದರ ಪ್ರಮುಖ ವಿಚಾರವೆಂದರೆ ಅಮೇಜಾನ್,ಐಟ್ಯೂನ್ಸ್, ನೆಟ್ ಫ್ಲಿಕ್ಸ್ ಮತ್ತು ಇತರೆ ಕಾನೂನಾತ್ಮಕ ಮೂಲಗಳಿಂದ ನಿಮ್ಮ ಅಸಲಿ ಸ್ಟ್ರೀಮ್ ಗಳನ್ನು ಆಯೋಜಿಸಿಕೊಳ್ಳಲು ನೆರವು ನೀಡುತ್ತದೆ. ಬೇರೆಬೇರೆ ಫ್ಲಾಟ್ ಫಾರ್ಮ್ ಗಳಿಂದ ವೀಡಿಯೋಗಳನ್ನು ಇದು ಸಂಗ್ರಹಿಸುತ್ತದೆ ಮತ್ತು ಇದರ ಯುಐ ಮೂಲಕ ಯಾವುದೇ ಡಿವೈಸ್ ನಲ್ಲಿ ಪ್ರಸ್ತುತ ಪಡಿಸುತ್ತದೆ.

9 ಹಬ್ ಸ್ಟ್ರೀಮಿಂಗ್

9 ಹಬ್ ಸ್ಟ್ರೀಮಿಂಗ್

ಹಬ್ ಸ್ಟ್ರೀಮಿಂಗ್ ಕೂಡ ಮತ್ತೊಂದು ನೆಟ್ ವರ್ಕ್ ಪರ್ಯಾಯ ವ್ಯವಸ್ಥೆ ಆಗಿದ್ದು. ವಿಭಿನ್ನ ಆಯ್ಕೆಗಳನ್ನು ಸ್ಟ್ರೀಮಿಂಗ್ ಗಾಗಿ ಇದು ಒದಗಿಸುತ್ತದೆ. ದೊಡ್ಡ ಮಟ್ಟದ ಚಲನಚಿತ್ರಗಳ ಸಂಗ್ರಹ ಇದರಲ್ಲಿದ್ದು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಇದು ಕೇವಲ ಆಂಡ್ರಾಯ್ಡ್ ಗೆ ಮಾತ್ರ ಲಭ್ಯವಿರುವ ಆಪ್ ಆಗಿದ್ದು ಐಓಎಸ್ ಡಿವೈಸ್ ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.

Best Mobiles in India

English summary
Showbox Alternatives 2018: 10 Best Free Apps Like Showbox. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X