ಭವಿಷ್ಯದ ವಾಟ್ಸ್ ಆಪ್ ನಲ್ಲಿ ಕಾಣಿಸಿಕೊಳ್ಳುವ 6 ವಿಶೇಷ ವೈಶಿಷ್ಟ್ಯತೆಗಳು

|

ಮೆಸೇಜಿಂಗ್ ಆಪ್ ಗಳಲ್ಲಿ ವಾಟ್ಸ್ ಆಪ್ ನ್ನು ವಿಶ್ವದಾದ್ಯಂತ ಅತೀ ಹೆಚ್ಚು ಮಂದಿ ಬಳಸುತ್ತಾರೆ. ಈ ಪ್ರಸಿದ್ಧತೆಯು ಕೆಲವು ಹೊಸ ಫೀಚರ್ ಗಳನ್ನು ಸೇರಿಸುವುದಕ್ಕೆ ಮುನ್ನುಡಿ ಬರೆಯುತ್ತಿದೆ. ಗ್ರಾಹಕರ ಬೇಡಿಕೆಯ ಮೇರೆಗೆ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ಆಪ್ ಗೆ ಸೇರಿಸಲಾಗುತ್ತಿದೆ. ಈಗಾಗಲೇ 6 ಹೊಸ ಫೀಚರ್ ಗಳ ಬಗ್ಗೆ ಟೆಸ್ಟಿಂಗ್ ಕೆಲಸಗಳು ನಡೆಯುತ್ತಿದೆ. ಹಾಗಾದ್ರೆ ವಾಟ್ಸ್ ಆಪ್ ಗೆ ಸಧ್ಯದಲ್ಲೇ ಸೇರಲಿರುವ ಆ ಆರು ಹೊಸ ಫೀಚರ್ ಗಳು ಯಾವುದು? ಇಲ್ಲಿದೆ ನೋಡಿ ಅದರ ವಿವರ.

ವಾಟ್ಸ್ ಆಪ್ ನಲ್ಲಿ ಡಾರ್ಕ್ ಮೋಡ್

ವಾಟ್ಸ್ ಆಪ್ ನಲ್ಲಿ ಡಾರ್ಕ್ ಮೋಡ್

ವಾಬೇಟಾಇನ್ಫೋ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸ್ ಆಪ್ ಈಗಾಗಲೇ ಡಾರ್ಕ್ ಮೋಡ್ ಫೀಚರ್ ಬಗ್ಗೆ ಕಳೆದ ಕೆಲವು ದಿನಗಳಿಂದ ಕೆಲಸ ಮಾಡುತ್ತಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ವರ್ಷನ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ.

2019 ರ ವೇಳೆಗೆ ಬಿಡುಗಡೆಗೊಳ್ಳಲಿರುವ ಈ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಕೇವಲ ನಿಮ್ಮ ಫೋನಿನ ಬ್ಯಾಟರಿಯನ್ನು ಮಾತ್ರವೇ ಉಳಿಸುತ್ತದೆ ಎಂದು ಭಾವಿಸಬೇಡಿ ಬದಲಾಗಿ ಇದು ನಿಮ್ಮ ಕಣ್ಣುಗಳಿಗೆ ಆಗುವ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಹೌದು ರಾತ್ರಿ ವೇಳೆ ನೀವು ಚಾಟ್ ಮಾಡುವ ಸಂದರ್ಬದಲ್ಲಿ ನಿಮ್ಮ ಕಣ್ಣುಗಳಿಗೆ ತೊಂದರೆ ಆಗುವುದನ್ನು ತಡೆಯುವುದಕ್ಕೆ ಇದು ನೆರವಾಗುತ್ತದೆ.

ಈಗಾಗಲೇ ಯುಟ್ಯೂಬ್, ಮೇಸೇಜಿಂಗ್ ಮತ್ತು ಟ್ವೀಟರ್ ನ ಫೋನ್ ಆಪ್ ಗಳಲ್ಲಿ ಈ ಫೀಚರ್ ನ್ನು ಪರಿಚಯಿಸಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ವಾಟ್ಸ್ ಆಪ್ ಗೂ ಡಾರ್ಕ್ ಮೋಡ್ ವೈಶಿಷ್ಟ್ಯತೆ ಕಾಲಿಡಲಿದೆ.

ಕನ್ಸಿಗೇಟಿವ್ ವಾಯ್ಸ್ ಮೇಸೇಜ್ ಪ್ಲೇಬ್ಯಾಕ್

ಕನ್ಸಿಗೇಟಿವ್ ವಾಯ್ಸ್ ಮೇಸೇಜ್ ಪ್ಲೇಬ್ಯಾಕ್

ಐಓಎಸ್ ನ ವಾಟ್ಸ್ ಆಪ್ ನಲ್ಲಿ ಈ ಫೀಚರ್ ಈಗಾಗಲೇ ಲಭ್ಯವಿದ್ದು ಇನ್ನು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಗೂ ಕೂಡ ಲಭ್ಯವಾಗಲಿದೆ. ಒಂದು ವೇಳೆ ಯಾರಾದರೂ ನಿಮಗೆ ಹಲವು ವಾಯ್ಸ್ ಮೆಸೇಜ್ ಗಳನ್ನು ಕಳುಹಿಸಿದ್ದರೆ ಒಂದು ವಾಯ್ಸ್ ಮೆಸೇಜ್ ನ್ನು ಕ್ಲಿಕ್ ಮಾಡಿದ ಕೂಡಲೇ ಉಳಿದೆಲ್ಲವೂ ಒಂದಾದ ಮೇಲೊಂದರಂತೆ ಪ್ಲೇ ಆಗುವ ವೈಶಿಷ್ಟ್ಯತೆ ಇದು. ಅಂದರೆ ಸ್ವಯಂಚಾಲಿತವಾಗಿ ನಿಮ್ಮ ವಾಟ್ಸ್ ಆಪ್ ನಲ್ಲಿರುವ ವಾಯ್ಸ್ ಮೆಸೇಜ್ ಗಳು ಒಂದು ವಾಯ್ಸ್ ಮೇಸೇಜ್ ನ್ನು ಕ್ಲಿಕ್ ಮಾಡಿದಾಗ ಪ್ಲೇ ಆಗುತ್ತದೆ. ಅಷ್ಟೇ ಅಲ್ಲ ಇದು ಪ್ರತಿ ಒಂದು ವಾಯ್ಸ್ ಮೆಸೇಜ್ ಮುಗಿದಾಗಲೂ ನಿಮಗೆ ಶಾರ್ಟ್ ಸೌಂಡ್ ಅಲರ್ಟ್ ನ ಮೂಲಕ ಮುಗಿದಿರುವ ಬಗ್ಗೆ ಸೂಚನೆ ನೀಡುತ್ತದೆ. ಪ್ರತಿ ಬಾರಿ ವಾಯ್ಸ್ ಮೆಸೇಜ್ ಗೆ ಕ್ಲಿಕ್ಕಿಸುವಿಕೆಯನ್ನು ಇದು ಕಡಿತಗೊಳಿಸುತ್ತದೆ.

ಗ್ರೂಪ್ ಕಾಲಿಂಗ್ ಶಾರ್ಟ್ ಕಟ್ ಫೀಚರ್

ಗ್ರೂಪ್ ಕಾಲಿಂಗ್ ಶಾರ್ಟ್ ಕಟ್ ಫೀಚರ್

ಗ್ರೂಪ್ ಕಾಲಿಂಗ್ ವೈಶಿಷ್ಟ್ಯತೆಯು ಕೆಲವೇ ದಿನಗಳ ಮುಂಚೆ ಬಿಡುಗಡೆಗೊಂಡ ಅಧ್ಬುತ ಫೀಚರ್ ಆಗಿದೆ. ಇದರಲ್ಲಿ ನೀವು ಗ್ರೂಪ್ ಕರೆಗಾಗಿ ಪ್ರತಿಯೊಬ್ಬ ವ್ಯಕ್ತಿಯನ್ನು ಪದೇ ಪದೇ ಆಡ್ ಮಾಡಬೇಕಾಗುತ್ತದೆ. ಮೊದಲು ಒಬ್ಬರಿಗೆ ಕರೆ ಮಾಡಿ ನಂತರ ಇನ್ನೊಬ್ಬರನ್ನು ಸೇರಿಸಬೇಕಾಗುತ್ತದೆ. ಇದು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ. ಆದರೆ ಇನ್ನು ಮುಂದೆ ಈ ಕಿರಿಕಿರಿ ಇರುವುದಿಲ್ಲ.

ಗ್ರೂಪ್ ಚಾಟ್ ಬಾಕ್ಸ್ ನ ಮೇಲ್ಬಾಗದ ಬಲತುದಿಯಲ್ಲಿ ಗ್ರೂಪ್ ಕಾಲ್ ಶಾರ್ಟ್ ಕಟ್ ಇನ್ನು ಮುಂದೆ ಇರಲಿದೆ. ಇದು ಗ್ರೂಪ್ ಕಾಲ್ ನ್ನು ಮಾಡಲು ನೆರವಾಗುತ್ತದೆ ಮತ್ತು ಗ್ರೂಪ್ ಚಾಟ್ ತೆಗೆದು ಅದರಲ್ಲಿ ಕಾಲ್ ಐಕಾನ್ ನ್ನು ಚಾಟ್ ಹೆಡ್ಡರ್ ನಲ್ಲಿರುವುದನ್ನು ಟ್ಯಾಪ್ ಮಾಡಲು ಸುಲಭವಾಗಿಸುತ್ತದೆ. ಇದನ್ನು ಮಾಡಿದಾಗ ಗ್ರೂಪಿನ ಸದಸ್ಯರ ಲಿಸ್ಟ್ ನ್ನು ತೋರಿಸುತ್ತದೆ ಮತ್ತು ಯಾರಿಗೆ ಕಾನ್ಫರೆನ್ಸ್ ಕಾಲ್ ಮಾಡಬೇಕು ಎಂದು ನೀವು ಬಯಸುತ್ತೀರೋ ಅವರೊಂದಿಗೆ ಸುಲಭವಾಗಿ ಕರೆ ಮಾಡಲು ನೆರವಾಗುತ್ತದೆ.

ನೀವು ನೆನಪಿನಲ್ಲಿಡಬೇಕಾಗಿರುವ ಅಂಶವೆಂದರೆ 3 ಜನ ಸದಸ್ಯರನ್ನು ಮಾತ್ರವೇ ನೀವು ಗ್ರೂಪ್ ಕಾನ್ಫರೆನ್ಸ್ ಗೆ ಸೇರಿಸಲು ಸಾಧ್ಯವಿರುತ್ತದೆ. ಸದ್ಯ ಬೇಟಾ ವರ್ಷನ್ ನಲ್ಲಿರುವ ಈ ಫೀಚರ್ ಸದ್ಯದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಮಲ್ಟಿ-ಶೇರ್ ಪ್ರೀವ್ಯೂ

ಮಲ್ಟಿ-ಶೇರ್ ಪ್ರೀವ್ಯೂ

ಮಲ್ಟಿ ಶೇರ್ ಪ್ರೀವ್ಯೂ ಫೀಚರ್ ನೀವು ಹಲವು ಕಾಂಟ್ಯಾಕ್ಟ್ ಗೆ ಯಾವುದೇ ಮೆಸೇಜ್ ಕಳಿಸುವ ಮುನ್ನ ಅಥವಾ ಫಾರ್ವರ್ಡ್ ಮಾಡುವ ಮುನ್ನ ಅದರ ಪ್ರೀವ್ಯೂ ನೋಡುವುದಕ್ಕೆ ಇದು ಅವಕಾಶ ನೀಡುತ್ತದೆ. ಈ ರೀತಿ ನೀವು ಕಳಿಸಬೇಕು ಎಂದುಕೊಂಡಿರುವ ಮೆಸೇಜ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಒಂದು ವೇಳೆ ಸರಿವಿಲ್ಲ ಎನ್ನಿಸಿದರೆ ಅದನ್ನು ಕ್ಯಾನ್ಸಲ್ ಮಾಡಿ ಮತ್ತೆ ಪುನಃ ಕ್ರಿಯೇಟ್ ಮಾಡಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಅಥವಾ ಆಯ್ಕೆ ಮಾಡಿಕೊಂಡಿರುವ ಕಾಂಟ್ಯಾಕ್ಟ್ ಗಳು ಸರಿವಿಲ್ಲದಿದ್ದರೂ ಕೂಡ ಅದನ್ನು ಮರುಆಯ್ಕೆ ಪ್ರಕ್ರಿಯೆಯನ್ನು ನೀವಿಲ್ಲಿ ಮಾಡಿಕೊಳ್ಳಬಹುದು. ಬೇಟಾ ವರ್ಷನ್ ನಲ್ಲಿ ಈ ಫೀಚರ್ ನ್ನು ನಾವು ಕಾಯುತ್ತಿದ್ದೇವೆ.

ವೇಕೇಷನ್ ಮೋಡ್

ವೇಕೇಷನ್ ಮೋಡ್

ಹೆಸರೇ ಸೂಚಿಸುವಂತೆ ವೆಕೇಷನ್ ಮೋಡ್ ಫೀಚರ್ ನೀವು ಹಾಲಿಡೇ ಮೂಡ್ ನಲ್ಲಿದ್ದಾಗ ನಿಮ್ಮ ಸಹಾಯಕ್ಕೆ ಬರುತ್ತದೆ. ಅನಗತ್ಯ ಮೆಸೇಜ್ ಗಳು ಮತ್ತು ನೋಟಿಫಿಕೇಷನ್ ಗಳು ನಿಮಗೆ ಕಿರಿಕಿರಿ ಮಾಡುವುದನ್ನು ಈ ಫೀಚರ್ ಬಳಸಿ ತಪ್ಪಿಸಿಕೊಳ್ಳಬಹುದು. ಇದು ವಾಟ್ಸ್ ಆಪ್ ನೋಟಿಫಿಕೇಷನ್ ಸೆಟ್ಟಿಂಗ್ಸ್ ನಲ್ಲಿ ಲಭ್ಯವಿರುತ್ತದೆ.

ನೀವು ಯಾವುದೇ ಚಾಟ್ ನ್ನು ಆರ್ಕೈವ್ ಮಾಡಿದ್ದಲ್ಲಿ ಅದು ಹೊಸ ಮೆಸೇಜ್ ರಿಸೀವ್ ಆದಾಗ ಪುನಃ ಚಾಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಕೆಲವೊಮ್ಮೆ ನೀವು ಆಪ್ ನಿಂದ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳಬೇಕು ಎಂದು ಬಯಸಿದಾಗ ಕಿರಿಕಿರಿಗೆ ಕಾರಣವಾಗುತ್ತದೆ.

ವೆಕೇಷನ್ ಮೋಡ್ ಆಕ್ಟಿವೇಟ್ ಆಗಿದ್ದಾಗ ಆರ್ಕೈವ್ ಆಗಿರುವ ಚಾಟ್ ಗಳು ರೀಅಪಿಯರ್ ಆಗಿರುವುದು ತಪ್ಪುತ್ತದೆ. ಈ ಫೀಚರ್ ಸದ್ಯ ಡೆವಲಪ್ ಮೆಂಟ್ ಹಂತದಲ್ಲಿದೆ.

ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಈಗಾಗಲೇ ಸೈಲೆಂಟ್ ಮೋಡ್ ಆಯ್ಕೆ ಲಭ್ಯವಿದೆ. ಇದು ಅವರ ಮ್ಯೂಟ್ ಆಗಿರುವ ಚಾಟ್ ನ ನೋಟಿಫಿಕೇಷನ್ ನ್ನು ಹೈಡ್ ಮಾಡುವುದಕ್ಕೆ ಬಳಸಲಾಗುತ್ತಿದೆ.

ಗ್ರೂಪ್ ಚಾಟ್ ನಲ್ಲಿ ಪ್ರೈವೇಟ್ ರಿಪ್ಲೈ ಗೆ ಅವಕಾಶ

ಗ್ರೂಪ್ ಚಾಟ್ ನಲ್ಲಿ ಪ್ರೈವೇಟ್ ರಿಪ್ಲೈ ಗೆ ಅವಕಾಶ

ಗ್ರೂಪ್ ನಲ್ಲಿ ರಿಸೀವ್ ಮಾಡಿದ ಯಾವುದೋ ಮೆಸೇಜಿಗೆ ಪ್ರೈವೇಟ್ ಆಗಿ ರಿಪ್ಲೈ ಮಾಡಬೇಕು ಎಂದು ಬಯಸಿದ್ದಲ್ಲಿ ಈ ವಿಶೇಷ ವೈಶಿಷ್ಟ್ಯತೆಯು ನಿಮಗೆ ನೆರವಿಗೆ ಬರುತ್ತದೆ. ನೀವು ಸೆಲೆಕ್ಟೀವ್ ರಿಪ್ಲೈ ಮಾಡಿದಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತದೆ. ಆದರೆ ಅದು ಗ್ರೂಪ್ ನ ಬದಲಾಗಿ ಪ್ರೈವೇಟ್ ಆಗಿ ನಿರ್ಧಿಷ್ಟ ವ್ಯಕ್ತಿಗೆ ಕಳುಹಿಸಲ್ಪಡುತ್ತದೆ.

ಆ ಮೂಲಕ ಇಬ್ಬರು ವ್ಯಕ್ತಿಗಳು ಯಾವುದೇ ಗ್ರೂಪ್ ನ ಇತರೆ ಸದಸ್ಯರಿಗೆ ತೊಂದರೆಯಾಗದಂತೆ ಗ್ರೂಪ್ ನ ಒಳಗೇ ರಿಪ್ಲೈ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.

ಇದೆಲ್ಲದರ ಜೊತೆಗೆ ಲಿಂಕ್ಡ್ ಅಕೌಂಟ್ ಫೀಚರ್ ಬರಲಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ. ಇದು ನಿಮ್ಮ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂನಂತೆ ಹೆಚ್ಚುವರಿ ಸೇವೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದು ನಿಮ್ಮ ಪ್ರೊಫೈಲ್ ಸೆಟ್ಟಿಂಗ್ ನಲ್ಲಿ ಇರುತ್ತದೆ. ಸಂಪೂರ್ಣ ಮಾಹಿತಿ ಈ ವೈಶಿಷ್ಟ್ಯತೆಯ ಬಗ್ಗೆ ಇದುವರೆಗೂ ಲಭ್ಯವಾಗಿಲ್ಲ.

ಮೇಲೆ ತಿಳಿಸಲಾಗಿರುವ ಎಲ್ಲಾ ಫೀಚರ್ ಗಳು ಕೂಡ ಸದ್ಯದಲ್ಲೇ ವಾಟ್ಸ್ ಆಪ್ ನಲ್ಲಿ ಬರಲಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಿಮ್ಮ ವಾಟ್ಸ್ ಆಪ್ ನ್ನು ಅಪ್ ಡೇಟ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

Best Mobiles in India

English summary
Six Upcoming WhatsApp Features [December 2018]

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X