21 ತಿಂಗಳಿಗೊಮ್ಮೆ ಫೋನ್ ಬದಲಾಯಿಸುತ್ತಾರಂತೆ ಸ್ಮಾರ್ಟ್‌ಫೋನ್ ಬಳಕೆದಾರರು!!

By Tejaswini P G
|

ಸ್ಮಾರ್ಟ್ಫೋನ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು ಜಗತ್ತಿನ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿನ ಜನರು ಸ್ಮಾರ್ಟ್ಫೋನ್ ಬಳಸುತ್ತಾರೆ. ಈ ಸಾಧನಗಳ ಜನಪ್ರಿಯತೆ ಮತ್ತು ಅವುಗಳ ಕೈಗೆಟಕುವ ಬೆಲೆ ಜನರನ್ನು ಸ್ಮಾರ್ಟ್ಫೋನ್ ಖರೀದಿಸುವಂತೆ ಪ್ರೇರೇಪಿಸುತ್ತಿದೆ. ಈ ಸಂದರ್ಭದಲ್ಲಿ ಜನಪ್ರಿಯ ಮಾರುಕಟ್ಟೆ ಸಂಶೋಧನಾ ಸಂಸ್ಥೆಯೊಂದು ಕುತೂಹಲಕಾರಿ ವಿಷಯವನ್ನು ಬೆಳಕಿಗೆ ತಂದಿದೆ.

ಕೌಂಟರ್ಪಾಯಿಂಟ್ ರೀಸರ್ಚ್ ಸಂಸ್ಥೆಯು ಒಂದು ಸಂಶೋಧನೆಯನ್ನು ನಡೆಸುತ್ತಿದ್ದು ಸ್ಮಾರ್ಟ್ಫೋನ್ ಬಳಕೆದಾರರ ಸ್ವಭಾವದ ಕುರಿತು ಅಧ್ಯಯನ ನಡೆಸುತ್ತಿದೆ. ಸ್ಮಾರ್ಟ್ಫೋನ್ ಬಳಕೆದಾರರ ಬ್ರ್ಯಾಂಡ್ ಆದ್ಯತೆ, ಖರೀದಿಯನ್ನು ನಿರ್ಧರಿಸುವ ವಿಧಾನ, ಮೊಬೈಲ್ ಬಳಕೆಯ ಮಾದರಿ, ಜನರು ಹೆಚ್ಚಾಗಿ ಬಳಸುವ ಟಾಪ್ ಆಪ್ಲಿಕೇಶನ್ಗಳು ಹೀಗೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಿದೆ. ಈ ಅಧ್ಯಯನಕ್ಕೆ ಜಗತ್ತಿನ ವಿವಿಧ ಪ್ರದೇಶಗಳ ಅಂದಾಜು 3500 ಜನರನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿದ್ದು, ಅವರ ಸ್ವಭಾವವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸಲಾಗಿದೆ.

21 ತಿಂಗಳಿಗೊಮ್ಮೆ ಫೋನ್ ಬದಲಾಯಿಸುತ್ತಾರಂತೆ ಸ್ಮಾರ್ಟ್‌ಫೋನ್ ಬಳಕೆದಾರರು!!

ಈ ಸಮೀಕ್ಷೆಯ ಅನುಸಾರ ಸ್ಮಾರ್ಟ್ಫೋನ್ ಬದಲಾಯಿಸುವಿಕೆಯ ಚಕ್ರದ ಸರಾಸರಿ ಸಮಯ 21 ತಿಂಗಳುಗಳಾಗಿವೆ. ಉದಯೋನ್ಮುಖ ಮಾರುಕಟ್ಟೆಯ ಜನರು ಈ ಫೋನ್ ಬದಲಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಈಗಾಗಲೇ ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಯಲ್ಲಿ ಜನರು ಅವರಿಗಿಂತ ಕಡಿಮೆ ಸಕ್ರಿಯರಾಗಿದ್ದಾರೆ. ಚೀನೀ ಬ್ರ್ಯಾಂಡ್ಗಳ ಬೆಳವಣಿಗೆ ಮತ್ತು ಜನಪ್ರಿಯತೆಯ ಫಲವಾಗಿ ಉತ್ತಮ ಫೀಚರ್ಗಳನ್ನು ಹೊಂದಿರುವ ಸ್ಮಾರ್ಟ್ಫೋನ್ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದು, ಸ್ಮಾರ್ಟ್ಫೋನ್ ಬದಲಾಯಿಸುವಿಕೆಯ ಚಕ್ರದ ವೇಗ ಹೆಚ್ಚಿದೆ. ಇದರ ಫಲವಾಗಿ ನವೀಕರಣಗೊಂಡಿರುವ ಮೊಬೈಲ್ಗಳ ಬಳಕೆಯೂ ಹೆಚ್ಚುತ್ತಿದೆ.

ಮೆಕ್ಸಿಕನ್ ಜನರು ಬಹು ಬೇಗನೆ ತಮ್ಮ ಸ್ಮಾರ್ಟ್ಫೋನ್ ಅನ್ನು ಬದಲಾಯಿಸುತ್ತಿರುವುದು ಈ ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಅವರ ಅಪ್ಗ್ರೇಡ್ ಚಕ್ರ ಸರಾಸರಿ 18 ತಿಂಗಳ ಅವಧಿಯನ್ನು ಹೊಂದಿದೆ. ಹಾಗೆಯೇ ಜಪಾನೀಯರು ತಮ್ಮ ಸಾಧನಗಳನ್ನು ಅತೀಹೆಚ್ಚು ಕಾಲ ಬಳಸುತ್ತಿದ್ದು, ಅವರ ಅಪ್ಗ್ರೇಡ್ ಚಕ್ರದ ಅವಧಿ ಸರಾಸರಿ 26 ತಿಂಗಳುಗಳು ಎಂದು ಈ ಸಮೀಕ್ಷೆ ವರದಿ ಮಾಡಿದೆ. ಇನ್ನು ಮೊಬೈಲ್ ಬದಲಾಯಿಸಲು ಜನರು ಮಾಡುವ ವೆಚ್ಚವನ್ನು ಗಮನಿಸಿದರೆ ಸೌದಿ, ಜರ್ಮನಿ, ಚೈನಾ ಮತ್ತು ಆಸ್ಟ್ರೇಲಿಯಾ ದೇಶದ ಜನರು ತಮ್ಮ ಹಳೆಯ ಸಾಧನವನ್ನು ಬದಲಿಸಿ ಹೊಸತನ್ನು ಕೊಳ್ಳಲು ಸರಾಸರಿ $400 ರಷ್ಟು ವೆಚ್ಚ ಮಾಡುತ್ತಾರೆ. ಹಾಗೆಯೇ ಜಪಾನಿನ ಸ್ಮಾರ್ಟ್ಫೋನ್ ಬಳಕೆದಾರರ ಪೈಕಿ ಶೇಕಡಾ 13% ಜನರು ಮಾತ್ರ ತಮ್ಮ ಸ್ಮಾರ್ಟ್ಫೋನ್ ಬದಲಾಯಿಸಲು $400 ಕ್ಕಿಂತ ವೆಚ್ಚ ಮಾಡಲು ಸಿದ್ಧರಿದ್ದಾರೆ.

ಇನ್ನು ಜನರು ಸ್ಮಾರ್ಟ್ಫೋನ್ ಬಳಕೆಯಲ್ಲಿ ವ್ಯಯಿಸುವ ಸಮಯದ ಕುರಿತು ನಡೆಸಿರುವ ಸಮೀಕ್ಷೆಯ ಅನುಸಾರ ಜನರು ಪ್ರತಿದಿನ ಕಡಿಮೆಯೆಂದರೆ 5 ಘಂಟೆಗಳನ್ನಾದರೂ ಸ್ಮಾರ್ಟ್ಫೋನ್ ಬಳಕೆಯಲ್ಲಿ ವ್ಯಯಿಸುತ್ತಾರೆ. ಉದಯೋನ್ಮುಖ ದೇಶಗಳ ಜನರು ಈಗಾಗಲೇ ಅಭಿವೃದ್ಧಿ ಹೊಂದಿರುವ ದೇಶಗಳ ಜನರಿಗಿಂತ ಅಧಿಕ ಸಮಯವನ್ನು ಸ್ಮಾರ್ಟ್ಫೋನ್ ಬಳಕೆಯಲ್ಲಿ ವ್ಯಯಿಸುತ್ತಾರಂತೆ. ಇದರ ಅನುಸಾರ ಮಲೇಶ್ಯಾದ ಸ್ಮಾರ್ಟ್ಫೋನ್ ಬಳಕೆದಾರರು ಅತ್ಯಧಿಕ ಸಮಯವನ್ನು ಸ್ಮಾರ್ಟ್ಫೋನ್ ಬಳಕೆಯಲ್ಲಿ ಕಳೆಯುತ್ತಿದ್ದು, ಶೇಕಡಾ 55% ಗಿಂತ ಅಧಿಕ ಜನರು 5 ಘಂಟೆಗಳಿಗಿಂತ ಹೆಚ್ಚಿನ ಸಮಯವನ್ನು ಸ್ಮಾರ್ಟಫೋನ್ ಬಳಕೆಯಲ್ಲಿ ವ್ಯಯಿಸುತ್ತಾರೆ. ಜಪಾನಿನ ಸ್ಮಾರ್ಟ್ಫೋನ್ ಬಳಕೆದಾರರ ಪೈಕಿ ಶೇಕಡಾ 43% ರಷ್ಟು ಜನರು ದಿನಂಪ್ರತಿ 3 ಘಂಟೆಗಳಿಗಿಂತಲೂ ಕಡಿಮೆ ಸಮಯ ಸ್ಮಾರ್ಟ್ಫೋನ್ ಬಳಸುತ್ತಿದ್ದು,ಈ ಮೂಲಕ ಕಡಿಮೆ ಸ್ಮಾರ್ಟ್ಫೋನ್ ಬಳಸುವವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Here's how the Face ID of the newly launched Oppo A83 works (KANNADA)

ಕೊನೆಯದಾಗಿ, ಜಾಗತಿಕವಾಗಿ ಶೇಕಡಾ 64%ರಷ್ಟು ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ನಲ್ಲಿ ಇಂಟರ್ನೆಟ್ ಬಳಸಿದರೆ ಶೇಕಡಾ 62% ಜನರು ಗೇಮಿಂಗ್ ಗಾಗಿ ಸ್ಮಾರ್ಟ್ಫೋನ್ ಬಳಸುತ್ತಾರೆ. ಜರ್ಮನಿ ಮತ್ತು ಜಪಾನಿನಂಥ ದೇಶಗಳಲ್ಲಿ ಸಂವಹನಕ್ಕಾಗಿ ವಾಯ್ಸ್ ಕರೆಗಳನ್ನು ಹೆಚ್ಚಾಗಿ ಬಳಸಿದರೆ ಏಶಿಯಾ ಮತ್ತು ಆಫ್ರಿಕಾದ ಉದಯೋನ್ಮುಖ ಮಾರುಕಟ್ಟೆಗಳ ಜನರು ಮೆಸೇಜಿಂಗ್ ಅನ್ನು ಹೆಚ್ಚು ಬಳಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದು ಮತ್ತು ವೀಡಿಯೋ ವೀಕ್ಷಿಸುವುದು - ಇವು ಸ್ಮಾರ್ಟ್ಫೋನ್ ನಲ್ಲಿ ಹೆಚ್ಚಾಗಿ ಮಾಡುವ ಇತರ ಚಟುವಟಿಕೆಗಳಾಗಿವೆ.

Most Read Articles
Best Mobiles in India

English summary
On an average, the global users replace their smartphones after 21 months.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more