Home
Apps

ಸ್ನಾಪ್‌ಚಾಟ್‌ನಲ್ಲಿ IPL ಸ್ಟೋರಿ: ನಾಲ್ಕು ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ಸ್ನಾಪ್‌ಚಾಟ್..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಒಡೆತನದ ಆಪ್‌ಗಳ ಮುಂದೆ ಮಂಕಾಗಿರುವ, ಜಾಗತಿಕವಾಗಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಸ್ನಾಪ್‌ಚಾಟ್. ಭಾರತದ ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ IPL ಅನ್ನು ವೇದಿಕೆಯನ್ನಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ IPLನ ನಾಲ್ಕು ಪ್ರಮಖ ತಂಡದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಸ್ನಾಪ್‌ಚಾಟ್‌ನಲ್ಲಿ IPL ಸ್ಟೋರಿ: ನಾಲ್ಕು ತಂಡದೊಂದಿಗೆ ಒಪ್ಪಂದ

ಈ ಬಾರಿಯ IPL ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗುತ್ತಿದ್ದು, ಇದಕ್ಕೆ ಸ್ನಾಪ್‌ಚಾಟ್ ಸಹ ಸೇರ್ಪಡೆಗೊಂಡಿದೆ. ಹೊಸ ಸಾಧ್ಯತೆಯನ್ನು ಬಳಕೆದಾರರಿಗೆ ತೋರಿಸಿಕೊಡಲಿದೆ. ಇದಕ್ಕಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೇವಿಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಕೈ ಜೋಡಿಸಿರುವದಾಗಿ ಸ್ನಾಪ್‌ಚಾಟ್ ತಿಳಿಸಿದೆ.

ಸ್ಯಾಪ್ ಚಾಟ್ ಬಳೆಕೆದಾರರು ತಮ್ಮ ತಂಡವನ್ನು ಬೆಂಬಲಿಸುವ ಸಲುವಾಗಿಯೇ ಹೊಸದೊಂದು ಟೂಲ್ ಅನ್ನು ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ಸ್ನಾಪ್‌ಕೋಡ್ ಅನ್ನು ಪ್ರತಿ ತಂಡಕ್ಕೂ ನೀಡಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಈ ಮಾದರಿಯಲ್ಲಿ ಪ್ರಚಾರಕ್ಕೆ ಮುಂದಾಗಿರುವ ಸ್ನಾಪ್‌ಚಾಟ್ ಹೆಚ್ಚಿನ ಅಭಿಮಾನಿಗಳನ್ನು ಸೆಳೆಯುವ ನಿರೀಕ್ಷೆಯಲ್ಲಿದೆ.

ಸ್ನಾಪ್‌ಚಾಟ್‌ನಲ್ಲಿ IPL ಸ್ಟೋರಿ: ನಾಲ್ಕು ತಂಡದೊಂದಿಗೆ ಒಪ್ಪಂದ

ಇದಲ್ಲದೇ ತಂಡಗಳ ಸ್ನಾಪ್‌ಸ್ಟೋರಿಗಳನ್ನು ರಚಿಸುವ ಮೂಲಕ ಅಭಿಮಾನಿಗಳಿಗೆ ಹೊಸ ಮಾದರಿಯ ಸಾಧ್ಯತೆಯನ್ನು ತಂಡಗಳನ್ನು ಬೆಂಬಲಿಸಲು ನೀಡಲಿದೆ. ಕೇಲವ ಫೇಸ್‌ಬುಕ್ - ವಾಟ್ಸ್‌ಆಪ್ - ಇನ್‌ಸ್ಟಾಗ್ರಮ್ ಮಾತ್ರವಲ್ಲದೇ ತನ್ನದೇ ವೇದಿಕೆಯಲ್ಲಿ ವಿಭಿನ್ನವಾಗಿ ಸಪೋರ್ಟ್ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ.

How To Link Aadhaar With EPF Account Without Login (KANNADA)

ಒಟ್ಟಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಭಾವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ IPL ಅನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿರುವ ಸ್ನಾಪ್‌ಚಾಟ್, ಹೆಚ್ಚಿನ ಅಭಿಮಾನಿಗಳನ್ನು ಸೆಳೆಯುವ ಸಾಧ್ಯತೆ ಇದ್ದು, ಈ ಮೂಲಕ ಫೇಸ್‌ಬುಕಿಗೆ ಸೆಡ್ಡು ಹೊಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ IPL ರಂಜನೆ ಈ ಬಾರಿ ದೊಡ್ಡಮಟ್ಟಕ್ಕೆ ಏರುವುದಂತು ಖಂಡಿತ.

Best Mobiles in India

English summary
Snapchat announces partnership with four IPL teams. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+