ಇದೀಗ ಮತ್ತಷ್ಟು ಅಪ್‌ಡೇಟ್ ಆಗಿ ಬಂದಿದೆ 'ಸ್ನ್ಯಾಪ್‌ಚಾಟ್'!

|

ವಿಶ್ವದ ಜನಪ್ರಿಯ ಚಾಟಿಂಗ್ ಆಪ್‌ಗಳಲ್ಲಿ ಒಂದಾಗ ಸ್ನ್ಯಾಪ್‌ಚಾಟ್ ಇದೀಗ ಮತ್ತಷ್ಟು ಬದಲಾಗಿ ಗೂಗಲ್ ಪ್ಲೇಸ್ಟೋರ್‌ಗೆ ಕಾಲಿಟ್ಟಿದೆ. ಸ್ವಲ್ಪ ಸಮಯ ತೆಗೆದುಕೊಂಡಿದ್ದರೂ ಸಹ ಇದೀಗ ಸ್ನ್ಯಾಪ್‌ಚಾಟ್ ಆಪ್ ಹೊಸದಾಗಿ ಮತ್ತು ಸುಧಾರಣೆಗೊಂಡು ಅಪ್‌ಡೇಟ್ ಆಗಿದ್ದು, ಎಲ್ಲರಿಗೂ ರೋಲಿಂಗ್ ಔಟ್ ಆಗಿದೆ. ಆದರೆ, ಬಳಕೆದಾರರಿಗೆ ಇದರ ಮೊದಲ ಯೂಸರ್ ಇಂಟರ್‌ಫೇಸ್ ಅಥವಾ ನ್ಯಾವಿಗೇಷನ್‍ನಲ್ಲಿ ಬದಲಾವಣೆ ಕಂಡುಬರುವುದಿಲ್ಲ ಎಂದು ತಿಳಿದುಬಂದಿದೆ.

ಹೌದು, ಸ್ನ್ಯಾಪ್‌ಚಾಟ್ ಆಪ್ ಅನ್ನು ಗೂಗಲ್‌ನ ಆಪರೇಟಿಂಗ್ ಸಿಸ್ಟಮ್‌ಗಾಗಿ ಹೊಸದಾಗಿ ಮರುನಿರ್ಮಿಸಲಾಗಿದ್ದು, ಹಳೆ ಆಪ್‌ಗೆ ಹೋಲಿಕೆ ಮಾಡಿದರೆ ದೋಷಮುಕ್ತವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಂದರೆ ಆಪ್‍ ಬಳಸುವಾಗ ಬಳಕೆದಾರರಿಗೆ ಅದೇ ಹಳೆಯ ಅನುಭವ ದೊರೆತರೂ, ವೇಗ ವರ್ಧನೆ ಮತ್ತು ಹೆಚ್ಚಿನ ಆಯ್ಕೆ ದೊರೆಯುತ್ತದೆ ಇದರಿಂದ ಕಂಪನಿ ನಿರೀಕ್ಷಿತ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ನಾಪ್‍ಚಾಟ್ ಸಂಸ್ಥೆ ತಿಳಿಸಿದೆ.

ಇದೀಗ ಮತ್ತಷ್ಟು ಅಪ್‌ಡೇಟ್ ಆಗಿ ಬಂದಿದೆ 'ಸ್ನ್ಯಾಪ್‌ಚಾಟ್'!

ಹೊಸ ಅಪ್‌ಡೇಟ್‌ನೊಂದಿಗೆ ನೀವು ನಿಜವಾಗಿಯೂ ವಿನ್ಯಾಸದ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಕಾಣುವುದಿಲ್ಲ, ಆದರೆ ನ್ಯಾವಿಗೇಷನ್ ವೇಗವಾಗಿ ಮತ್ತು ಹೆಚ್ಚಿನ ಫೀಚರ್ಸ್ ಅನ್ನು ನೀವು ಗಮನಿಸಬಹುದು. ಆಪ್ ಪರದೆಯ ಮಧ್ಯೆ ಪರಿವರ್ತಿಸುವುದರಿಂದ ಹೆಚ್ಚು ತ್ವರಿತವಾಗಿ ನಡೆಯುತ್ತದೆ ಮತ್ತು ಎಆರ್ ಫಿಲ್ಟರ್ಗಳನ್ನು ಲೋಡ್ ಮಾಡುವುದು ಈಗ ವೇಗವಾಗಿರುತ್ತದೆ. ಆದರೆ ಈ ಹೊಸ ನವೀಕರಣವು ಎಲ್ಲರಿಗೂ ತಕ್ಷಣ ಲಭ್ಯವಿಲ್ಲದಿರಬಹುದು ಎಂದು ಸ್ನಾಪ್‍ಚಾಟ್ ಹೇಳಿದೆ.

ಜನಪ್ರಿಯ ಸ್ನಾಪ್‍ಚಾಟ್ ತನ್ನಲ್ಲಿ ಕೆಲ ಬದಲಾವಣೆಗಳು ಅಗತ್ಯ ಎಂದು ಕಂಡುಕೊಂಡ ನಂತರದಲ್ಲಿ ಹಿಂದಿನ ಐಒಎಸ್ ಆಪ್ ವರ್ಷನ್‍ನಲ್ಲಿಯೇ ಅಲ್ಪಸ್ವಲ್ಪ ಬದಲಾವಣೆಗೆ ಮುಂದಾಗಿತ್ತು. ಆದರೆ ಇದು ಅಲ್ಪಾವಧಿ ಪರಿಹಾರವಾಗಿರಲಿದೆ ಎಂದು ಕಂಡುಕೊಂಡ ಸಂಸ್ಥೆಯು ಆಂಡ್ರಾಯ್ಡ್ ಆವೃತ್ತಿ ರೂಪಿಸಲು ಮುಂದಾಯಿತು. ಇದರಿಂದ ಕಂಪನಿ ನಿರೀಕ್ಷಿತ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಈಗ ಈ ಆಪ್ ಮತ್ತಷ್ಟು ಸರಳವಾಗಲಿದೆ ಎಂದು ಹೇಳಬಹುದು.

ಇದೀಗ ಮತ್ತಷ್ಟು ಅಪ್‌ಡೇಟ್ ಆಗಿ ಬಂದಿದೆ 'ಸ್ನ್ಯಾಪ್‌ಚಾಟ್'!

ಮುಂದಿನ ದಿನಗಳಲ್ಲಿ ಇದರಲ್ಲಿ ಅಪ್‌ಡೇಟ್ ಮಾಡಬೇಕೆಂದರೂ ಇದು ಸರಳವಾಗಿರಲಿದೆ. ಸ್ನಾಪ್‍ಚಾಟ್‍ನಲ್ಲಿ ಕೆಲ ನೂತನ ಫೀಚರ್‌ ಪರಿಚಯಿಸಲಾಗಿದೆ. ಗ್ರಾಹಕ ಬಳಕೆ ಸ್ನೇಹಿಯಾಗಿ ರೂಪಿಸಲಾಗಿದೆ ಎಂದು ಸ್ನಾಪ್‌ಚಾಟ್ ತಿಳಿಸಿದೆ. ದೇಶದಲ್ಲಿ ಚಾಟಿಂಗ್ ಆಪ್‌ಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿರುವ ಸಮಯದಲ್ಲೇ ಸ್ನ್ಯಾಪ್‌ಚಾಟ್ ತನ್ನಲ್ಲಿ ಬದಲಾವಣೆಗಳನ್ನು ತಂದುಕೊಂಡು ಗ್ರಾಹಕರ ಬಳಿ ಬಂದಿದೆ. ಆದರೆ, ಈ ಆಪ್ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕು.

ಓದಿರಿ: ಭಾರತದಲ್ಲಿ ಹುವಾವೆ ಪಿ30 ಪ್ರೊ ಲಾಂಚ್!..ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್‌ಗೂ ಭಯ!!

Best Mobiles in India

English summary
Snapchat officially launches its rebuilt Android app. the company finally started working to get its Android app on a similar level to that of the iOS version. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X