ಮಕ್ಕಳು ಗಣಿತದಲ್ಲಿ 100% ಮಾರ್ಕ್ಸ್ ತಗೊಬೇಕಾ?..ಈ ಉಚಿತ ಆಪ್ ಡೌನ್‌ಲೋಡ್ ಮಾಡಿ!!

ಸ್ಮಾರ್ಟ್‌ಫೋನ್‌ ಮೂಲಕ ಗಣಿತದ ಸಮಸ್ಯೆಯ ಚಿತ್ರ ತೆಗೆದರೆ ಅದಕ್ಕೆ ಯಾವ ರೀತಿ ಉತ್ತರ ಕಂಡುಕೊಳ್ಳಬೇಕು ಎಂಬುದನ್ನು ಈ ಆಪ್‌ ಹಂತ ಹಂತವಾಗಿ ತಿಳಿಸಲಿದೆ.

|

ಗಣಿತ ಎಂದರೆ ಶಾಲಾ ಮಕ್ಕಳಿಗೆ ಏನು ಎಲ್ಲರಿಗೂ ತಲೆನೋವು, ಅದರಲ್ಲಿಯೂ ಗಣಿತದ ಸೂತ್ರಗಳನ್ನು ನೋಡಿದಯೇ ಹೆದರಿದವರಿದ್ದಾರೆ.! ಹಾಗಾಗಿಯೇ ಗಣಿತದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು, ಬರವಣಿಗೆಯ ರೂಪದಲ್ಲಿ ಇರುವ ಗಣಿತದ ಪ್ರಶ್ನೆಗಳನ್ನು ಸರಾಗವಾಗಿ ಓದುವ. ಆನಂತರ ಅದಕ್ಕೆ ಹಂತ ಹಂತವಾಗಿ ಪರಿಹಾರ ಒದಗಿಸುತ್ತ ವಿವರಣೆ ನೀಡಲಿರುವ ಆಪ್ ಒಂದು ಬಿಡುಗಡೆಯಾಗಿದೆ.!!

ಈ ಆಪ್ ಇದ್ದರೆ ಮಕ್ಕಳು ಮೊಬೈಲ್‌ ಮೂಲಕವೇ ಯಾವುದೇ ಗಣಿತ ಪ್ರಶ್ನೆಗೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದಾಗಿದ್ದು, ಗಣಿತ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಕಲಿಯಲು ಉತ್ತಮ ಮಾರ್ಗವಾಗಿದೆ.! ಹಾಗಾದರೆ ಪೋಷಕರಿಗೆ ಹೋಂ ವರ್ಕ್‌ ತಲೆನೋವನ್ನು ನೀಗಿಸುವ ಆ ಆಪ್ ಯಾವುದು? ಏನೆಲ್ಲಾ ಉಪಯೋಗ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 ಚಿತ್ರ ತೆಗೆದರೆ ಉತ್ತರ ಸಿಗುತ್ತೆ.!!

ಚಿತ್ರ ತೆಗೆದರೆ ಉತ್ತರ ಸಿಗುತ್ತೆ.!!

ಸ್ಮಾರ್ಟ್‌ಫೋನ್‌ ಮೂಲಕ ಗಣಿತದ ಸಮಸ್ಯೆಯ ಚಿತ್ರ ತೆಗೆದರೆ ಅದಕ್ಕೆ ಯಾವ ರೀತಿ ಉತ್ತರ ಕಂಡುಕೊಳ್ಳಬೇಕು ಎಂಬುದನ್ನು ಈ ಆಪ್‌ ಹಂತ ಹಂತವಾಗಿ ತಿಳಿಸಲಿದೆ. ಜೊತೆಗೆ ಕೃತಕ ಬುದ್ದಿಮತ್ತೆಯಿಂದ ಗಣಿತದ ಸಮಸ್ಯೆ ಹಿಂದಿರುವ ಪರಿಕಲ್ಪನೆ ಅರ್ಥೈಸಿಕೊಂಡು ಅದಕ್ಕೆ ಪರಿಹಾರ ನೀಡುವುದರಲ್ಲಿ ಈ ಆಪ್ ಯಶಸ್ವಿಯಾಗಿದೆ.!!

ಸಾಕ್ರೆಟಿಸ್ ಅಪ್‌ .!!

ಸಾಕ್ರೆಟಿಸ್ ಅಪ್‌ .!!

ಗಣಿತ ಸೂತ್ರ ಬಿಡಿಸುತ್ತ ಉತ್ತರ ಕಂಡುಕೊಳ್ಳುವುದು ಅನೇಕರ ಪಾಲಿಗೆ ಒಗಟಾಗಿಯೇ ಕಾಡಿತ್ತು. ಅಂತವರಿಗಾಗಿ ಅಮೆರಿಕದ ಸ್ಟಾರ್ಟ್‌ಅಪ್‌ ಕಂಪೆನಿ 'ಸಾಕ್ರೆಟಿಸ್' (Socratic) ಎಂಬ ಆಪ್‌ ಅನ್ನು ಅಭಿವೃದ್ದಿಪಡಿಸಿದೆ. ಈ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ತಂಡದ ಸದಸ್ಯರಲ್ಲಿ ಭಾರತದ ಶ್ರೇಯಾಂಶ ಬನ್ಸಾಲಿ ಒಬ್ಬರು.!!

ಬೋಧಿಸುವ ರೀತಿಯಲ್ಲಿಯೇ ಇರಲಿದೆ ಆಪ್ ಕಾರ್ಯ.!!

ಬೋಧಿಸುವ ರೀತಿಯಲ್ಲಿಯೇ ಇರಲಿದೆ ಆಪ್ ಕಾರ್ಯ.!!

ಗಣಿತದ ಸಮಸ್ಯೆಗಳ ಪರಿಹಾರ ಕುರಿತು ತಿಳಿಯುವುದು ಸುಲಭವಾದುದಲ್ಲ. ಹಾಗಾಗಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಅರ್ಥವಾಗುವ ಬಗೆಯಲ್ಲಿ ಗಣಿತದ ಸೂತ್ರಗಳನ್ನು ಬಿಡಿಸುವ ಕ್ರಮಾವಳಿಯ ರೀತಿಯಲ್ಲಿಯೇ ವಿದ್ಯಾರ್ಥಿಗಳು ಸುಲಭವಾಗಿ ಗಣಿತ ಸಮಸ್ಯೆಗಳನ್ನು ಬಿಡಿಸಲು ಆಪ್‌ನಿಂದ ಸಾಧ್ಯವಾಗಲಿದೆ.

 ಉಚಿತವಾಗಿ ಲಭ್ಯವಿದೆ.!!

ಉಚಿತವಾಗಿ ಲಭ್ಯವಿದೆ.!!

ಬೈಜುಸ್ ನಂತಹ ಹಲವು ಆಪ್‌ಗಳು ಗಣಿತಕ್ಕಾಗಿ ರೂಪಿತವಾಗಿದ್ದರೂ, 'ಸಾಕ್ರೆಟಿಸ್' (Socratic) ಆಪ್ ಗಣಿತದ ಸಮಸ್ಯೆಗಳಿಗೆ ಉಚಿತವಾಗಿ ಪರಿಹಾರ ಕಂಡುಕೊಳ್ಳಲು ಉತ್ತಮವಾದುದಾಗಿದೆ. ಗಣಿತದ ಸಮಸ್ಯೆಗಳ ಕುರಿತು ಗ್ರಾಫ್‌, ವಿಡಿಯೊ ಮತ್ತು ವ್ಯಾಖ್ಯಾನಗಳೂ ಇರುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಆಳವಾಗಿ ತಿಳಿದುಕೊಳ್ಳಲು ನೆರವಾಗಲಿದೆ ಮತ್ತು ಗಣಿತ ವಿಷಯವನ್ನು ಹೆಚ್ಚು ಜಾಣ್ಮೆಯಿಂದ ಸಿದ್ಧಪಡಿಸಲಾಗಿದೆ.!!

<strong>ಫೋನ್‌ನಲ್ಲಿ ಪ್ರಮುಖ ಫೈಲ್‌ಗಳನ್ನು ತೆರೆಯಲು ಸಾಧ್ಯವಾಗದೇ? ಹೀಗೆ ಮಾಡಿ!!</strong>ಫೋನ್‌ನಲ್ಲಿ ಪ್ರಮುಖ ಫೈಲ್‌ಗಳನ್ನು ತೆರೆಯಲು ಸಾಧ್ಯವಾಗದೇ? ಹೀಗೆ ಮಾಡಿ!!

Best Mobiles in India

Read more about:
English summary
Take a PHOTO of your homework question or math equation and get explanations, videos, and step-by-step help INSTANTLY. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X