Home
Apps

ಇನ್ಮುಂದೆ ಪಾರ್ಕಿಂಗ್‌ಗೆ ಅಲೆದಾಡಬೇಕಿಲ್ಲ..! ಮೊಬೈಲ್‌ನಿಂದಲೇ ಸ್ಥಳ ಪ್ರೀ ಬುಕ್‌ ಮಾಡಿ..!

ಇನ್ನು ಮುಂದೆ ಪಾರ್ಕಿಂಗ್ ಜಾಗವನ್ನು ಹುಡುಕಾಡುವುದಕ್ಕೆ ಕಷ್ಟಪಡಬೇಕಾಗಿಲ್ಲ. ಯಾವುದೋ ಮಾಲ್ ಗೆ ತೆರಳಿ ಪಾರ್ಕ್ ಮಾಡುವುದು ಎಲ್ಲಿ ಎಂದು ತಡಕಾಡಬೇಕಾಗಿಲ್ಲ. ನಿಮ್ಮ ಪಾರ್ಕಿಂಗ್ ಜಾಗ ಯಾವುದು ಎಂಬುದನ್ನು ಮನೆಯಲ್ಲೇ ನಿರ್ಧಾರ ಮಾಡಿಕೊಂಡು ತೆರಳಬಹುದು. ಹೇಗೆ ಎಂದು ಕೇಳುತ್ತಿದ್ದೀರಾ. ಅದಕ್ಕಾಗಿ ಆಪ್ ವೊಂದು ಬಿಡುಗಡೆಗೊಳ್ಳುತ್ತಿದೆ. ಚಲನಚಿತ್ರದ ಟಿಕೆಟ್, ಬಸ್ ಟಿಕೆಟ್, ರೈಲ್ವೇ ಟಿಕೆಟ್ ಗಳನ್ನು ಮುಂಚಿತವಾಗಿ ಪಡೆದಂತೆ ಇನ್ನು ಮುಂದೆ ಪಾರ್ಕಿಂಗ್ ಟಿಕೆಟ್ ಗಳನ್ನು ಕೂಡ ಮೊದಲೇ ಪಡೆದುಕೊಳ್ಳಲು ಅವಕಾಶವಿದೆ.

ಇನ್ಮುಂದೆ ಪಾರ್ಕಿಂಗ್‌ಗೆ ಅಲೆದಾಡಬೇಕಿಲ್ಲ..! ಮೊಬೈಲ್‌ನಿಂದಲೇ ಪ್ರೀ ಬುಕ್‌ ಮಾಡಿ.!

ನೀವೀಗ ಪಾರ್ಕಿಂಗ್ ಟಿಕೆಟ್ ಗಳನ್ನು ನಿಮ್ಮ ಮನೆಯಿಂದ ವೆಹಿಕಲ್ ಹೊರಡಿಸುವ ಮುನ್ನವೇ ಪಡೆದುಕೊಳ್ಳಬಹುದು. ನಾಗರೀಕ ಅಧಿಕಾರಿಗಳು ಮೊಬೈಲ್ ಆಧಾರಿತ ಅಪ್ಲಿಕೇಷನ್ ನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಪಾರ್ಕಿಂಗ್ ಸ್ಥಳಗಳಲ್ಲಿ ಖಾಸಗಿ ಗುತ್ತಿಗೆದಾರರು ಹೆಚ್ಚು ಚಾರ್ಜ್ ಮಾಡುತ್ತಿರುವುದರ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

ಪಾರ್ಕಿಂಗ್ ಟಿಕೆಟ್ ಗಳನ್ನು ಮುಂಚಿತವಾಗಿಯೇ ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ ಮತ್ತು ಅದನ್ನು ಪಾರ್ಕಿಂಗ್ ಸ್ಥಳಕ್ಕೆ ತಲುಪಿದ ಕೂಡಲೇ ಅದನ್ನು ತೋರಿಸಬಹುದು. ಪೇಟಿಎಂ ಮೂಲಕ ಗುತ್ತಿಗೆದಾರರ ವ್ಯಾಪಾರಿ ಖಾತೆಗಳಿಗೆ ಪಾವತಿಯನ್ನು ವರ್ಗಾವಣೆ ಮಾಡಲಾಗುತ್ತದೆ.

ಈ ಆಪ್ ನ ಹೆಸರು Finlo (ಫೈಂಡ್ ಯುವರ್ ಪಾರ್ಕಿಂಗ್ ಲಾಟ್) ಮತ್ತು ಎಂಸಿ ಔಪಚಾರಿಕವಾಗಿ ಸೇವೆ ಪ್ರಾರಂಭಿಸಿದಾಗ ಇದು ಕಾರ್ಯಗತಗೊಳ್ಳುತ್ತದೆ. ಇದಕ್ಕಾಗಿ ಯಾರೂ ಕೂಡ ಮ್ಯಾನುವಲ್ ಸ್ಲಿಪ್ ಪಡೆಯುವ ಅಗತ್ಯವಿಲ್ಲ ಮತ್ತು ಮುಂಚಿತವಾಗಿ ಪಾರ್ಕಿಂಟ್ ಟಿಕೆಟ್ ನ್ನು ಆಪ್ ಮೂಲಕ ಪಡೆಯಲು ಅವಕಾಶವಿರುತ್ತದೆ. ಕಾಂಟ್ರ್ಯಾಕ್ಟರ್ ಗೆ ಈ ಟಿಕೆಟ್ ಬುಕ್ಕಿಂಗ್ ನ ಬಗ್ಗೆ ಖಾತ್ರಿಯನ್ನು ನೀಡಿದರಾಯಿತು ಅವರು ನಿಮಗೆ ನಿಮ್ಮ ವಾಹನವನ್ನು ಪಾರ್ಕ್ ಮಾಡಲು ಅವಕಾಶ ನೀಡುತ್ತಾರೆ. ಬುಕ್ಕಿಂಗ್ ಮಾಡುವುದಕ್ಕಿಂತ ಮುಂಚೆ ಯಾವೆಲ್ಲ ಪಾರ್ಕಿಂಗ್ ಜಾಗವು ಪಾರ್ಕ್ ಮಾಡಲು ಖಾತಿ ಇದೆ ಎಂಬುದನ್ನು ಆಪ್ ನಲ್ಲಿ ತೋರಿಸಲಾಗುತ್ತದೆ.

ಈಗಾಗಲೇ ಹೆಚ್ಚು ಚಾರ್ಜ್ ನ್ನು ಗುತ್ತಿಗೆದಾರರು ಮಾಡುತ್ತಿರುವ ಬಗ್ಗೆ ಎರಡು ನೋಟೀಸ್ ನ್ನು ಜಾರಿಮಾಡಲಾಗಿದೆ.ಒಂದು ವೇಳೆ ಅವರು ಇದಕ್ಕೂ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಅವರ ಗುತ್ತಿಗೆಯನ್ನು ರದ್ದು ಮಾಡಲಾಗುತ್ತದೆ ಎಂದು ಎಂಸಿ ಕಮಿಷನರ್ ಕೆಪಿ ಬ್ರಾರ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೊಬೈಲ್ ಆಪ್ ಆಯ್ಕೆಯನ್ನು ಬಿಡುಗಡೆಗೊಳಿಸಲು ಕೆಲಸ ಮಾಡಲಾಗುತ್ತಿದೆ ಮತ್ತು ಅದರ ಆಯ್ಕೆಯನ್ನು ಗ್ರಾಹಕರಿಗೆ ತಿಳಿಸಲು ಇನ್ನೇನು ಕೆಲವೇ ದಿನದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಔರಿಬಿಸಸ್ ಟೆಕ್ನಾಲಜೀಸ್ ಡೈರೆಕ್ಟರ್ ಇಶಾಂತ್ ಕುಮಾರ್ ಅವರು ಹೇಳುವಂತೆ ಈ ಗುತ್ತಿದಾರರ ಸಮಸ್ಯೆಗೆ ಒಂದು ಮೀಟಿಂಗ್ ನ್ನು ಯೋಜಿಸಿ ಚರ್ಚೆ ನಡೆಸಲಾಗುತ್ತದೆ ಮತ್ತು ಮುಂದಿನ ಪ್ಲಾನ್ ಗಳ ಬಗ್ಗೆ ವಿವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ಅವರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕು.

ಇದು ಎರಡು ವಾರಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಸರಿಯಾದ ದಾರಿಯಲ್ಲಿ ಎಲ್ಲಾ ವಿಚಾರಗಳನ್ನು ಸೆಟ್ ಮಾಡಲಾಗುತ್ತದೆ ಮತ್ತು ಸಿಸ್ಟಮ್ ನಲ್ಲಿ ಒಂದು ಪಾರದರ್ಶಕತೆಯನ್ನು ತರಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೊಬೈಲ್ ಅಪ್ಲಿಕೇಷನ್ ಲಭ್ಯವಿದ್ದು ಅದರ ಸಿಸ್ಟಮ್ ನ್ನು ಸರಿಯಾದ ಕ್ರಮದಲ್ಲಿ ಜೋಡಿಸಬೇಕು ಅಷ್ಟೇ..

ಗುತ್ತಿಗೆದಾರರಿಂದ ವಿರೋಧ:

ಗುತ್ತಿಗೆದಾರರಿಂದ ವಿರೋಧ:

2016 ರಲ್ಲೇ ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು ಆದರೆ ಗುತ್ತಿಗೆದಾರರು ಆ ಸಂದರ್ಬದಲ್ಲಿ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಅವರು ಅವರ ಆದಾಯಕ್ಕೆ ಕೊಕ್ಕೆ ಬೀಳುತ್ತದೆ ಎಂಬ ಬಗ್ಗೆ ಹೆದರಿದ್ದರು ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಬಿಡುಗಡೆಗೊಳಿಸುವುದನ್ನು ಮುಂದೂಡಲಾಗಿತ್ತು. ಆದರೆ ಈ ಮೊಬೈಲ್ ಆಪ್ ನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆಗೊಳಿಸಲು ಈಗ ಯೋಜನೆ ರೂಪಿಸಲಾಗುತ್ತಿದೆ.

ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಪಾರ್ಕಿಂಗ್ ವಿಚಾರದ ದೂರುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಗುತ್ತಿಗೆದಾರರ ಜೊತೆ ಸಾರ್ವಜನಿಕರು ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವುದನ್ನು ಕೂಡ ಇದು ಕಡಿತ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ದೊಡ್ಡ ದೊಡ್ಡ ಮಹಾನಗರಿಗಳಲ್ಲಿ ಪಾರ್ಕಿಂಗ್ ಒಂದು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿರುವ ಈ ಸಂದರ್ಬದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸರಾಗಗೊಳಿಸುವ ಈ ಆಪ್ ಬಿಡುಗಡೆಗೊಳ್ಳುವುದು ನಿಜಕ್ಕೂ ಸ್ವಾಗತಾರ್ಹ ವಿಚಾರವಾಗಿದೆ.

ಕಲರ್ ಬಾರ್ ಗಳು

ಕಲರ್ ಬಾರ್ ಗಳು

ಪಾರ್ಕಿಂಗ್ ಟಿಕೆಟ್ ಗಳನ್ನು ಗುರುತಿಸಲು ಮೂರು ವಿಭಿನ್ನ ಕಲರ್ ಬಾರ್ ಗಳಿರುತ್ತದೆ. ಯಾವಾಗ ಜನರು ತಮ್ಮ ಟಿಕೆಟ್ ಗಳನ್ನು ಮುಂಚಿತವಾಗಿ ಪಡೆಯುತ್ತಾರೋ ಆಗ ಆಪ್ ನೀಲಿ ಬಣ್ಣದ ಬಾರ್ ನ್ನು ತೋರಿಸುತ್ತದೆ. ಯಾವಾಗ ಗುತ್ತಿಗೆದಾರರಿಗೆ ಅವರು ಟಿಕೆಟ್ ತೋರಿಸುತ್ತಾರೋ ಆಗ ಪಾರ್ಕಿಂಗ್ ಜಾಗವು ಹಸಿರು ಬಣ್ಣದಲ್ಲಿ ತೋರಿಸಲಾಗುತ್ತದೆ. ಯಾವಾಗ ಪಾರ್ಕಿಂಗ್ ಜಾಗವನ್ನು ಜನರು ಬಳಸಿಕೊಳ್ಳುತ್ತಾರೋ ಕಲರ್ ಬಾರ್ ಕೆಂಪು ಬಣ್ಣವಾಗುತ್ತದೆ. ಇದು ಇತರೆ ವ್ಯಕ್ತಿಗಳಿಗೆ ಯಾವ ಪಾರ್ಕಿಂಗ್ ಜಾಗವನ್ನು ಬಳಸಿಕೊಳ್ಳಲಾಗಿದೆ ಎಂಬ ವಿವರ ದೊರೆಯುತ್ತದೆ.

ಎರಡು ಪಾರ್ಕಿಂಗ್ ಜಾಗವನ್ನು ಒಂದೇ ಸಮಯಕ್ಕಾಗಿ ಬುಕ್ ಮಾಡಲು ಅವಕಾಶವಿಲ್ಲ :

ಎರಡು ಪಾರ್ಕಿಂಗ್ ಜಾಗವನ್ನು ಒಂದೇ ಸಮಯಕ್ಕಾಗಿ ಬುಕ್ ಮಾಡಲು ಅವಕಾಶವಿಲ್ಲ :

ಒಬ್ಬ ವ್ಯಕ್ತಿ ಒಂದು ವೆಹಿಕಲ್ ನ್ನು ಒಂದು ಜಾಗದಲ್ಲಿ ಮಾತ್ರ ಪಾರ್ಕಿಂಗ್ ಮಾಡಲು ಅವಕಾಶವಿದೆ. ಯಾವುದೇ ವ್ಯಕ್ತಿ ಒಂದೇ ಸಮಯಕ್ಕೆ ಎರಡೆರಡು ಜಾಗದಲ್ಲಿ ಒಂದೇ ವೆಹಿಕಲ್ ನ್ನು ಪಾರ್ಕಿಂಗ್ ಮಾಡಲು ಸಾಧ್ಯವಿಲ್ಲ ಮತ್ತು ಅದನ್ನು ಪ್ರೀಬುಕ್ ಮಾಡಿಕೊಳ್ಳಲು ಕೂಡ ಅವಕಾಶವಿರುವುದಿಲ್ಲ.

Best Mobiles in India

English summary
Soon, book your parking lots by mobile app
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+