ಸಾರ್ವಜನಿಕ ವೈಫೈ ನೆಟ್‌ವರ್ಕ್ ಮೂಲಕ ಇನ್ಮುಂದೆ ಕರೆಗಳು ಉಚಿತ..!

By GizBot Bureau
|

ಇದಕ್ಕೆ ಅದು ಫ್ರೀ, ಅದಕ್ಕೆ ಇದು ಫ್ರೀ ಅನ್ನೋ ಜಾಹೀರಾತುಗಳಿರುತ್ತವೆಯಲ್ಲ ಅವುಗಳೇ ಹಾಗೆ.ಜನರನ್ನು ಥಟ್ ಅಂತ ಸೆಳೆದು ಬಿಡುತ್ತದೆ. ಉಚಿತ ಅನ್ನೋ ಪದಕ್ಕಿರುವ ಪವರ್ರೇ ಅಂತದ್ದು. ಈ ಲೇಖನದಲ್ಲೂ ಖಂಡಿತ ನಿಮ್ಮನ್ನು ಇದೇ ಪದ ಆಕರ್ಷಿಸಿರುತ್ತೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅದೇನು ಫ್ರೀ ಬೇಗ ಹೇಳಿ ಅಂತಿದ್ದೀರಾ..? ಮುಂದೆ ಓದಿ.

ಇನ್ನು ಮುಂದೆ ಅಲ್ಲಿ ನೆಟ್ ವರ್ಕ್ ಇಲ್ಲ, ಇಲ್ಲಿ ನೆಟ್ ವರ್ಕ್ ಇಲ್ಲ ಅಂತ ಹಳ್ಳಿಗಳ ಮಂದಿ ಚಿಂತೆ ಪಡುವ ಅಗತ್ಯವಿಲ್ಲ. ಹಳ್ಳಿ ಅಂದರೆ ಮುಂದುವರಿಯದ ಪ್ರದೇಶ ಅಂತ ಭಾವಿಸಬೇಕಾಗೂ ಇಲ್ಲ ಅಂತ ಅನ್ನಿಸುತ್ತದೆ. ಯಾಕೆಂದರೆ ವೈಫೈ ನೆಟ್ ವರ್ಕ್ ಗಳ ಮೂಲಕ, ಉಚಿತವಾಗಿ ಕರೆಗಳನ್ನು ಮಾಡಲು ಇನ್ನು ಮುಂದೆ ಅವಕಾಶ ಸಿಗಲಿದೆ. ಹೌದು ಸಾರ್ವಜನಿಕ ವೈಫೈ ಬಳಸಿ ಕೊಂಡು ನಿಮ್ಮದೇ ಫೋನ್ ನಂಬರ್ ನಿಂದ ಉಚಿತವಾಗಿ ಕರೆಗಳನ್ನು ಮಾಡಲು ಅವಕಾಶ ನೀಡಲಾಗುತ್ತದೆ.

ಸಾರ್ವಜನಿಕ ವೈಫೈ ನೆಟ್‌ವರ್ಕ್ ಮೂಲಕ ಇನ್ಮುಂದೆ ಕರೆಗಳು ಉಚಿತ..!

ಮೊಬೈಲ್ ಸಂಪರ್ಕ ಹೊಂದಿರುವ ಗ್ರಾಹಕರು ಸಾರ್ವಜನಿಕ ವೈಫೈ ಜಾಲಗಳ ಮೂಲಕ ಧ್ವನಿ ಕರೆಗಳನ್ನು ಮಾಡಲು ಹೆಚ್ಚುವರಿ ಹಣವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ, ಟೆಲಿಕೋಗಳು ಇಂಟರ್ನೆಟ್ ಕರೆ ಮಾಡುವ ಆಯ್ಕೆಯನ್ನು ರೋಲ್-ಔಟ್ ಮಾಡಲು ತಯಾರು ಮಾಡುತ್ತಿವೆ ಮತ್ತು ಇದು ಮೊಬೈಲ್ ಸಂಪರ್ಕವು ಕೆಟ್ಟದಾಗಿರುವ ಪ್ರದೇಶಗಳಲ್ಲಿ ಕರೆಗಳ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವಡಾಫೋನ್ ಇಂಡಿಯಾ ಮೂರನೇ ಅತೀ ದೊಡ್ಡ ಕಂಪೆನಿ ಐಡಿಯಾ ಸೆಲ್ಯೂಲರ್ ಜೊತೆ ವೀಲೀನಗೊಳ್ಳುತ್ತಿದೆ. ಈಗಾಗಲೇ ಇಂತಹ ಸಾರ್ವಜನಿಕ ವೈ-ಫೈ ನೆಟ್ ವರ್ಕ್ ಬಳಸಿಕೊಂಡು ಕರೆಗಳನ್ನು ಮಾಡುವ ಸೌಲಭ್ಯವು ಯುಕೆ ಮತ್ತು ಆಸ್ಟ್ರೇಲಿಯಾಗಳಲ್ಲಿ ಲಭ್ಯವಿದೆ. ಅಂತಹದ್ದೇ ಹೈಟೆಕ್ ಸೌಲಭ್ಯ ಭಾರತದಲ್ಲೂ ಇನ್ನು ಮುಂದೆ ಸಿಗುವ ಲಕ್ಷಣಗಳು ಗೋಚರಿಸುತ್ತಿದೆ. ಮೊಬೈಲ್ ಸಿಗ್ನಲ್ ಗಳು ಲಭ್ಯವಿರದ ಸಂದರ್ಬದಲ್ಲೂ ಕೂಡ ನೀವು ನಿಮ್ಮವರ ಲ್ಯಾಂಡ್ ಲೈನ್ ಅಥವಾ ಮೊಬೈಲ್ ಗಳಿಗೆ ಸಾರ್ವಜನಿಕ ವೈಫೈ ನೆಟ್ ವರ್ಕ್ ಮೂಲಕ ಉಚಿತವಾಗಿ ಕರೆಗಳನ್ನು ಮಾಡಬಹುದು.

ಮುಖೇಶ್ ಅಂಬಾನಿ ಅವರ ನಿಯಂತ್ರಣದಲ್ಲಿರುವ ರಿಲಯನ್ಸ್ ಜಿಯೋ ಇನ್ಫೋಟೆಕ್ ಸಂಸ್ಥೆಯು ಈ ನಿಟ್ಟಿನಲ್ಲಿ ಯಶಸ್ವೀ ಪರೀಕ್ಷೆ ನಡೆಸಿದ್ದು, ಅಂತರ್ಜಾಲ ಕರೆಯನ್ನು ರಾಷ್ಟ್ರದಾದ್ಯಂತ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಮಾರ್ಕೆಟ್ ನ ನಾಯಕ ಸ್ಥಾನದಲ್ಲಿರುವ “ ಭಾರತೀ ಏರ್ ಟೆಲ್ “ ಕೂಡ ದೊಡ್ಡ ಮಟ್ಟದಲ್ಲಿ ಇದನ್ನು ಬಿಡುಗಡೆಗೊಳಿಸಲು ತಾಂತ್ರಿಕ ಪ್ರಯೋಗಗಳನ್ನು ಮಾಡಲು ತಯಾರಿ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಇದರ ಬಿಡುಗಡೆಯ ದಿನಾಂಕವೂ ಕೂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಸಾರ್ವಜನಿಕ ವೈಫೈ ನೆಟ್‌ವರ್ಕ್ ಮೂಲಕ ಇನ್ಮುಂದೆ ಕರೆಗಳು ಉಚಿತ..!

ಇಂತಹ ವಾಯ್ಸ್ ಓವರ್ ವೈ-ಫೈ ಕಾಲಿಂಗ್ ಸೇವೆಗಳು 4G VoLTE ಡಿವೈಸ್ ಗಳಲ್ಲಿ ಬಹಳ ಬೇಗನೆ ಕೆಲಸ ಮಾಡುತ್ತದೆ. ಈ ವಾರದ ಹಿಂದೆ, ದೂರಸಂಪರ್ಕ ಇಲಾಖೆಯು (DOT) ಒಂದೇ ಮೊಬೈಲ್ ನಂಬರ್ ನ್ನು ಸೆಲ್ಯುಲರ್ ಮತ್ತು ಇಂಟರ್ನೆಟ್ ಟೆಲಿಫೋನಿ ಸೇವೆಗಳಿಗೆ ಬಳಸಲು ಅನುವು ಮಾಡಿತ್ತು. ಇದೇ ಕಾರಣದಿಂದಾಗಿ ಟೆಲ್ಕೋಸ್ ಗೆ ಉಚಿತ ಮೊಬೈಲ್ ಕರೆಗಳನ್ನು ವೈಫೈ ನಲ್ಲಿ ಬಳಕೆ ಮಾಡಲು ಅನುವು ಮಾಡಿ ಕೊಟ್ಟಿದೆ ಮತ್ತು ಕವರೇಜ್ ಇಲ್ಲದಿರುವ ಪ್ರದೇಶದಲ್ಲಿ ಇದರ ಉಪಯೋಗ ಪಡೆಯಲು ಗ್ರಾಹಕರಿಗೆ ಸಹಕಾರಿಯಾಗಲಿದೆ.

ಕೈಗಾರಿಕಾ ಅಧಿಕಾರಿಗಳು ಈ ವೈಫೈ ಕಾಲಿಂಗ್ ಸೇವೆಯನ್ನು ಪ್ರಮುಖವಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ, ದಪ್ಪನೆಯ ಗೋಡೆಗಳಿರುವ ಹಳೆಯ ಬಿಲ್ಡಿಂಗ್ ಗಳಲ್ಲಿ, ಭೂಗತವಾಗಿರುವ ಗ್ಯಾರೇಜ್ ಗಳಲ್ಲಿ ಅಥವಾ ಮೆಟ್ರೋ ಸ್ಟೇಷನ್ ಗಳಲ್ಲಿ, ಎಲ್ಲಿ ಮೊಬೈಲ್ ಸಿಗ್ನಲ್ ಗಳು ಬಹಳವಾಗಿ ವೀಕ್ ಇರುತ್ತದೆಯೋ ಅಂತಹ ಪ್ರದೇಶದಲ್ಲಿ ಈ ಸೇವೆಯನ್ನು ಒದಗಿಸಲು ಯೋಚನೆ ಮಾಡಲಾಗುತ್ತಿದೆ. ಆದರೆ ಸುದ್ದಿಗೋಷ್ಟಿಯಲ್ಲಿ ವಡಾಫೋನ್ ಇಂಡಿಯಾ, ಐಡಿಯಾ, ಭಾರತೀ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಗಳು ಯಾವುದೇ ಪ್ರಶ್ನೆಗಳಿಗೂ ಸರಿಯಾಗಿ ಉತ್ತರವನ್ನು ನೀಡಿಲ್ಲ.

ಇನ್ನು ಇಂತಹ ಕರೆಗಳಲ್ಲಿ ಭದ್ರತೆಯ ವಿಚಾರವೂ ಪ್ರಮುಖ ಅಂಶವಾಗಿರುತ್ತದೆ. ಇಂಟರ್ ನೆಟ್ ಟೆಲಿಫೋನಿ ನಿಯಮಗಳ ಅಡಿಯಲ್ಲಿ ಸರ್ಕಾರವು ಇಂತಹ ವೈಫೈ ಕರೆಗಳನ್ನು ಮಾಡುವಾಗ ಡಾಟಾ ನೆಟ್ ವರ್ಕ್ ನ್ನು ಬಳಸಲೂ ಕೂಡ ಅವಕಾಶ ನೀಡುತ್ತದೆ. ಇನ್ನು ಈ ಕರೆಗಳಲ್ಲಿ ಎಲ್ಲಾ ರೀತಿಯ ಕಾನೂನುಬದ್ಧ ಪ್ರತಿಬಂಧಗಳು ಮತ್ತು ಮೇಲ್ವಿಚಾರಣೆಯ ಅವಶ್ಯಕತೆಗಳನ್ನೂ ಕೂಡ ಗಮನದಲ್ಲಿ ಇಟ್ಟುಕೊಳ್ಳಲಾಗಿದೆಯಂತೆ.

ಒಟ್ಟಾರೆ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಒಂದು ಪರಿಹಾರ ಸದ್ಯದಲ್ಲೇ ಸಿಗುವ ಲಕ್ಷಣಗಳು ಗೋಚರಿಸುತ್ತಿದೆ. ಎಲ್ಲಾ ಹಳ್ಳಿಗಳೂ ಕೂಡ ಇಂತಹ ಸೇವೆಯನ್ನು ಪಡೆದರೆ ಖಂಡಿತ ದೇಶದ ಪಥ ಉತ್ತಮ ರೀತಿಯಲ್ಲಿ ಸಾಗಿದಂತಾಗುತ್ತದೆ. ಇದನ್ನು ಅಚ್ಛೇ ದಿನ್ ಎಂದು ಹೇಳದೆ ಬೇರೆ ಏನು ಹೇಳಲು ಸಾಧ್ಯ ಅಲ್ಲವೇ?

Best Mobiles in India

Read more about:
English summary
Soon make free voice calls over public WiFi networks. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X