ಇಂದಿನಿಂದ ವಾಟ್ಸ್ ಆಪ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

|

ಅಗಸ್ಟ್ ನಲ್ಲಿ ವಾಟ್ಸ್ ಆಪ್ ಪ್ರಕಟಿಸಿರುವಂತೆ ನವೆಂಬರ್ 12,2018 ರಿಂದ ವಾಟ್ಸ್ ಆಪ್ ಬ್ಯಾಕ್ ಅಪ್ ಗಳು ಗೂಗಲ್ ಡ್ರೈವ್ ಸ್ಟೋರೇಜ್ ಕೋಟಾದಲ್ಲಿ ಕೌಂಟ್ ಆಗುವುದಿಲ್ಲ. ಅಗಸ್ಟ್ ನಲ್ಲೇ ಪ್ರಕಟಗೊಂಡಿದ್ದರೂ ಕೂಡ ಇದೀಗ ಈ ವ್ಯವಸ್ಥೆಯು ನಿಮ್ಮ ಗೂಗಲ್ ಡ್ರೈವ್ ಸ್ಟೋರೇಜ್ ನಲ್ಲಿ ಕಾಣಸಿಗುತ್ತದೆ.

ಇಂದಿನಿಂದ ವಾಟ್ಸ್ ಆಪ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

ಗೂಗಲ್ ಡ್ರೈವ್ ನಲ್ಲಿ ಉಚಿತ ಸ್ಟೋರೇಜ್ :

ಇದು ವಾಟ್ಸ್ ಆಪ್ ಬಳಕೆದಾರರಿಗೆ ಖಂಡಿತವಾಗಲೂ ಸಿಹಿಸುದ್ದಿಯಾಗಿದೆ.ಅಂದರೆ ಇನ್ನು ಮುಂದೆ ಗೂಗಲ್ ಸಂಸ್ಥೆ ವಾಟ್ಸ್ ಆಪ್ ಸ್ಟೋರೇಜ್ ಗಾಗಿ ಉಚಿತ ವ್ಯವಸ್ಥೆ ಕಲ್ಪಿಸಿದೆ ಅರ್ಥಾತ್ ಗೂಗಲ್ ಡ್ರೈವ್ ನಲ್ಲಿ ಸ್ಟೋರೇಜ್ ನ ಚಿಂತೆಯಿಲ್ಲದೆ ನಿಮ್ಮ ವಾಟ್ಸ್ ಆಪ್ ಫೈಲ್ ಗಳನ್ನು ಬ್ಯಾಕ್ ಅಪ್ ಇಡಬಹುದು.

ಸ್ವಯಂಚಾಲಿತವಾಗಿ ಡಿಲೀಟ್:

ಆದರೆ ಕಳೆದ ಒಂದು ವರ್ಷದಲ್ಲಿ ಒಮ್ಮೆಯೂ ಕೂಡ ವಾಟ್ಸ್ ಆಪ್ ಫೈಲ್ ಗಳನ್ನು ಬಳಕೆದಾರ ಮ್ಯಾನುವಲಿ ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಮಾಡಿಲ್ಲದೇ ಇದ್ದಲ್ಲಿ ಸ್ವಯಂಚಾಲಿತವಾಗಿ ಎಲ್ಲಾ ಡಾಟಾಗಳು ಡ್ರೈವ್ ನಿಂದ ಡಿಲೀಟ್ ಆಗುತ್ತದೆ. ಇದನ್ನು ವಾಟ್ಸ್ ಆಪ್ ಸಂಸ್ಥೆ ಅಧಿಕೃತವಾಗಿಯೂ ಪ್ರಕಟಿಸಿದೆ.

ಇದರ ಅರ್ಥ ಇಷ್ಟೇ, ಒಬ್ಬ ಬಳಕೆದಾರ ಒಂದೇ ನಿರ್ಧಿಷ್ಟ ಸ್ಮಾರ್ಟ್ ಫೋನ್ ನ್ನು ಬಳಸದೇ ಇದ್ದು , ಅದರ ಡಾಟಾವನ್ನು ಕಳೆದ ಒಂದು ವರ್ಷದಿಂದ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ , ಗೂಗಲ್ ಡ್ರೈವ್ ನಲ್ಲಿರುವ ಎಲ್ಲಾ ವಾಟ್ಸ್ ಆಪ್ ಡಾಟಾಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಿರುತ್ತದೆ. ಅದಕ್ಕೆ ಗೂಗಲ್ ಸಂಸ್ಥೆ ಹೊಣೆಹೊತ್ತುಕೊಳ್ಳುವುದಿಲ್ಲ. ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದ ಡಾಟಾಗಳಿಗೆ ನೀವೇ ಸ್ವತಃ ಜವಾಬ್ದಾರರಾಗಿರುತ್ತೀರಿ. ಒಂದು ವರ್ಷದ ನಂತರವೂ ಯಾವುದೇ ಅಗತ್ಯತೆಗಾಗಿ ನಿಮ್ಮ ವಾಟ್ಸ್ ಆಪ್ ಡಾಟಾಗಳು ನಿಮಗೆ ಬೇಕು ಎಂದಾದಲ್ಲಿ ಮ್ಯಾನುವಲ್ ಆಗಿ ಗೂಗಲ್ ಡ್ರೈವ್ ಗೆ ವಾಟ್ಸ್ ಆಪ್ ಡಾಟಾಗಳನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದನ್ನು ಮರೆಯಬೇಡಿ.

ಮ್ಯಾನುವಲಿ ವಾಟ್ಸ್ ಆಪ್ ಡಾಟಾವನ್ನು ಗೂಗಲ್ ಡ್ರೈವ್ ನನಲ್ಲಿ ಬ್ಯಾಕ್ ಅಪ್ ತೆಗೆದುಕೊಳ್ಳುವುದಕ್ಕಾಗಿ ಮೊದಲು ನೀವು ಗೂಗಲ್ ಅಕೌಂಟ್ ನ್ನು ಆಕ್ಟಿವೇಟ್ ಮಾಡಬೇಕು ಮತ್ತು ಗೂಗಲ್ ಪ್ಲೇ ಸರ್ವೀಸ್ ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಆಗಿರಬೇಕು. ಬ್ಯಾಕ್ ಅಪ್ ತೆಗೆದುಕೊಳ್ಳುವುದಕ್ಕಾಗಿ ನೀವು ವಾಟ್ಸ್ ಆಪ್ ನ್ನು ತೆರೆಯಿರಿ; Menu> Settings> Chats> Chat Backup ನ್ನು ಟ್ಯಾಪ್ ಮಾಡಿ. ಬ್ಯಾಕ್ ಅಪ್ ನ್ನು ಟ್ಯಾಪ್ ಮಾಡಿದಾಗ ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಆಗುವುದು ಆರಂಭವಾಗುತ್ತದೆ. ನಿಮ್ಮ ಚಾಟ್ ಗಳ ಸೈಜಿನ ಆಧಾರದಲ್ಲಿ ಕೆಲವು ಸೆಕೆಂಡ್ ಗಳು ಬ್ಯಾಕ್ ಅಪ್ ತೆಗೆದುಕೊಳ್ಳುವುದಕ್ಕೆ ಹಿಡಿಯಬಹುದು.

ಗೂಗಲ್ ಡ್ರೈವ್ ಬ್ಯಾಕ್ ಅಪ್ ಗೆ ಫ್ರೀಕ್ವೆನ್ಸಿ ಸೆಟ್ಟಿಂಗ್:

ನಿಮ್ಮ ಗೂಗಲ್ ಡ್ರೈವ್ ಬ್ಯಾಕ್ ಅಪ್ ನ ಫ್ರೀಕ್ವೆನ್ಸಿಯನ್ನು ಸೆಟ್ ಮಾಡುವ ಮೂಲಕ ಗೂಗಲ್ ಡ್ರೈವ್ ಬ್ಯಾಕ್ ಅಪ್ ಸೆಟ್ಟಿಂಗ್ಸ್ ನ್ನು ಕಾನ್ಫಿಗರ್ ಕೂಡ ಮಾಡಬಹುದು. ಇದಕ್ಕಾಗಿ ಮೊದಲು ವಾಟ್ಸ್ ಆಪ್ ನ್ನು ತೆರೆಯಿರಿ. Menu > Settings > Chats > Chat backup ನ್ನು ಟ್ಯಾಪ್ ಮಾಡಿ; ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಮಾಡುವ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಬ್ಯಾಕ್ ಅಪ್ ಫ್ರೀಕ್ವೆನ್ಸಿಯನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ 5 ಆಯ್ಕೆಗಳಿರುತ್ತದೆ. ನೀವು ಟ್ಯಾಪ್ ಮಾಡಿದಾಗ ಮಾತ್ರ ಬ್ಯಾಕ್ ಆಪ್ ಆಗಬೇಕು, ದಿನವೂ ಬ್ಯಾಕ್ ಅಪ್ ಆಗಬೇಕು, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ಯಾವಾಗಲೂ ಬೇಡ. ನಿಮಗೆ ಬೇಕಾದುದನ್ನು ನೀವು ಆಯ್ಕೆ ಮಾಡಿ ಸೆಟ್ ಮಾಡಬಹುದು.

ಡಾಟಾ ಬ್ಯಾಕ್ ಅಪ್ ಹೇಗೆ ಸಾಧ್ಯ?

ವಾಟ್ಸ್ ಆಪ್ ಡಾಟಾಗಳನ್ನು ವೈಫೈ ಮೂಲಕ ಅಥವಾ ಡಾಟಾ ಮೂಲಕ ಇಲ್ಲವೇ ಎರಡೂ ಆಯ್ಕೆಗಳಲ್ಲೂ ಕೂಡ ಬ್ಯಾಕ್ ಅಪ್ ಮಾಡಬಹುದು. ಬ್ಯಾಕ್ ಅಪ್ ಡಾಟಾಗಳಲ್ಲಿ ಫೋಟೋಗಳು ಮತ್ತು ಟೆಕ್ಸ್ಟ್ ಗಳು ಎರಡೂ ಸೇರಿರುತ್ತದೆ.ವೀಡಿಯೋಗಳು ಬೇಕಾದಲ್ಲಿ ನೀವು ಇನ್ಕ್ಲೂಡ್ ವೀಡಿಯೋಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.

Best Mobiles in India

Read more about:
English summary
Starting today, you may not have to worry about WhatsApp storage

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X