ತುರ್ತು ಸಾಲ ನೀಡುವ ಆಪ್‌ಗಳಿವು!..ಬೇಕಾಗುತ್ತೆ ನೋಡಿರಿ!!

ಆಧಾರ್, ಪ್ಯಾನ್‌ ಕಾರ್ಡ್‌ ನೀಡಿ ದಾಖಲೆಗಳನ್ನು ಒದಗಿಸಿದರೆ ಸಾಲವು ಬ್ಯಾಂಕ್‌ ಖಾತೆಗೆ ಬಂದು ಬೀಳುವ ಆಯ್ಕೆಯನ್ನು ಈ ಆಪ್‌ಗಳು ಮಾಡುತ್ತವೆ.!!

|

ಕೆಲವೊಮ್ಮೆ ನಮಗೆ ಬರುವ ಅಕಸ್ಮಾತ್ ತೊಂದರೆಗಳಿಂದ ಕೂಡಲೇ ಹಣ ಬೇಕಾಗಿರುತ್ತದೆ. ಆದರೆ, ನಾವು ಗಳಿಸಿ ಕೂಡಿಟ್ಟ ಈ ಹಣ ಸಾಕಗಬಹುದು. ಇನ್ನು ಹಣ ಎಲ್ಲಿಯೂ ಸಿಗದೇ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ದುಬಾರಿ ಬಡ್ಡಿಗೆ ಸಾಲ ಪಡೆಯಬೇಕಾಗುತ್ತದೆ ಅಲ್ಲವೇ.?

ಹಾಗಾಗಿಯೇ, ಇಂತಹ ಸಂದರ್ಭಗಳಲ್ಲಿ ಸಾಲದ ಅಗತ್ಯ ಪೂರೈಸಲೆಂದೇ ಆನ್‌ಲೈನ್‌ ಮತ್ತು ಕಿರುತಂತ್ರಾಂಶ ಆಧಾರಿತ ಸಂಸ್ಥೆಗಳು ಈಗ ಸಾಲ ನೀಡಲು ಹೊರಟಿವೆ. ಆಧಾರ್, ಪ್ಯಾನ್‌ ಕಾರ್ಡ್‌ ನೀಡಿ ದಾಖಲೆಗಳನ್ನು ಒದಗಿಸಿದರೆ ಸಾಲವು ಬ್ಯಾಂಕ್‌ ಖಾತೆಗೆ ಬಂದು ಬೀಳುವ ಆಯ್ಕೆಯನ್ನು ಈ ಆಪ್‌ಗಳು ಮಾಡುತ್ತವೆ.!!

ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಈ ಆಪ್‌ಗಳು ಸಾಲ ಪಡೆಯುವವರ ಸಾಲ ಮರು ಪಾವತಿ ಸಾಮರ್ಥ್ಯ ಆಧರಿಸಿಯೇ ಸಾಲ ನೀಡುತ್ತವೆ.ಹಾಗಾಗಿ. ಕಷ್ಟಕಾಲದಲ್ಲಿ ನೆರವಾಗಬಹುದಾದ ಇಂತಹ ಹೊಸ ಸಾಲ ಆಪ್‌ ಮೂಲಕ ಸಾಲ ನೀಡುವ ಸಂಸ್ಥೆಗಳು ಯಾವುವು? ಹೇಗೆ ಕಾರ್ಯನಿರ್ವಹಿಸುತ್ತವೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಲೋನ್‌ ಟ್ಯಾಪ್!!

ಲೋನ್‌ ಟ್ಯಾಪ್!!

ಉದ್ಯೋಗಿಗಳಿಗೆ ಮಾತ್ರ ಸಾಲ ಒದಗಿಸುವ ಆಪ್‌ ಆಧಾರಿತ ನವೋದ್ಯಮ ಇದಾಗಿದ್ದು, ಇಎಮ್‌ಐ ಫ್ರೀ ಲೋನ್‌ ಸಾಲ ಸೌಲಭ್ಯ ನೀಡುತ್ತದೆ. ಅಂದರೆ ಪ್ರತಿ ತಿಂಗಳು ಕಡ್ಡಾಯವಾಗಿ ಕಂತಿನ ರೂಪದಲ್ಲಿ ಸಾಲ ಮರುಪಾವತಿಸುವ ಅಗತ್ಯ ಇಲ್ಲ. ಹಣ ಹೊಂದಿಸಿಕೊಂಡು ಬೇಕೆಂದಾಗ ಸಾಲ ಮರುಪಾವತಿಸಬಹುದು.!! ಆದರೆ, ಸಾಲ ಪಡೆದ ಐದು ವರ್ಷಗಳಲ್ಲಿ ಹಣ ಪಾವತಿಸಬೇಕು.!!

ಅರ್ಲಿ ಸ್ಯಾಲರಿ

ಅರ್ಲಿ ಸ್ಯಾಲರಿ

ತಿಂಗಳ ಕೊನೆ ಬಂದರೆ ಹಣ ಖಾಲಿಯಾಗಿ ಉದ್ಯೋಗಿಗಳು ಪಡುವ ಕಷ್ಟ ನೋಡಿ ಹುಟ್ಟಿರುವ ಆಪ್‌ ಆಧಾರಿತ ಉದ್ಯಮ ಇದು.! ತುರ್ತು ಸಂದರ್ಭಗಳಲ್ಲಿ ನಮ್ಮ ಸಂಬಳದ ಶೇ 50ರಷ್ಟು ಹಣವನ್ನು ಈ ಆಪ್‌ ಮೂಲಕ ಪಡೆಯಬಹುದು.ನಿಮ್ಮ ಸಂಬಳಕ್ಕೆ ತಕ್ಕಂತೆ ಈ ಆಪ್ ಸಾಲ ನೀಡುತ್ತದೆ.!!

ಪೇ ಸೆನ್ಸ್

ಪೇ ಸೆನ್ಸ್

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಲ ನೀಡುವ ಪೇ ಸೆನ್ಸ್ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಅಸಲು ಸಮೇತ ಬಡ್ಡಿ ವಸೂಲಿ ಮಾಡುತ್ತದೆ. 5,000ದಿಂದ 1 ಲಕ್ಷದ ವರೆಗೆ ಸಾಲ ನೀಡುವ ಈ ಪೇ ಸೆನ್ಸ್ ಹಣ ನಿಮ್ಮ ಕೈಸೇರಲು ಒಂದು ವಾರ ಬೇಕಾಗಬಹುದು.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಕಿಸ್ತ್

ಕಿಸ್ತ್

ಕೆಲವೊಮ್ಮೆ ದಾಖಲೆಗಳಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೂ ಬ್ಯಾಂಕ್‌ನವರು ಸಾಲ ನೀಡದೇ ಇರಬಹುದು. ಈ ಸಮಸ್ಯೆ ಪರಿಹಾರಕ್ಕಾಗಿಯೇ ಹುಟ್ಟಿಕೊಂಡಿದ್ದು ಕಿಸ್ತ್ ಸಂಸ್ಥೆ.!! ಲ್ಯಾಪ್‌ಟಾಪ್‌, ಮೊಬೈಲ್‌ಫೋನ್‌ ಕೊಳ್ಳುವುದಕ್ಕೂ ಇಲ್ಲಿ ಸಾಲ ಪಡೆಯಬಹುದಾಗಿದ್ದು, .9 ಕೋಟಿ ಜನರಿಗೆ ಸುಮಾರು 17 ಕೋಟಿ ವರೆಗೆ ಈ ಸಂಸ್ಥೆ ಸಾಲ ನೀಡಿದೆ.!!

ಎಜ್ ಕ್ರೆಡ್

ಎಜ್ ಕ್ರೆಡ್

ಕಂಪ್ಯೂಟರ್, ಲ್ಯಾಪ್‌ಟಾಪ್‌, ಮೊಬೈಲ್‌ ಇತ್ಯಾದಿ ವಸ್ತುಗಳನ್ನು ಕೊಳ್ಳುವುದಕ್ಕೆ ಸಾಲ ಕೊಡುವ ವೆಬ್‌ಸೈಟ್ ಎಜ್ ಕ್ರೆಡ್.!! ಈ ಸಂಸ್ಥೆಯ ವೆಬ್‌ಸೈಟ್‌ಗೆ ಹೋಗಿ ಆಧಾರ್‌ ಕಾರ್ಡ್ ಮೂಲಕ ನೊಂದಣಿ ಮಾಡಿಕೊಂಡರೆ ಸಾಲ ಸೌಲಭ್ಯ ಸಿಗಲಿದೆ. ಬಡ್ಡಿದರವೂ ಕಡಿಮೆ ಇರುವುದರಿಂದ ಈ ಸಂಸ್ಥೆ ಜನಪ್ರಿಯವಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?

Best Mobiles in India

Read more about:
English summary
mobile app through which merchants will be able to avail low-ticket instant loans between Rs 10,000 and Rs 80,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X