ಐಐಟಿ ವಿದ್ಯಾರ್ಥಿಗಳಿಂದ ನಕಲಿ ಕರೆನ್ಸಿ ಪತ್ತೆ ಹಚ್ಚುವ 'ಮೊಬೈಲ್ ಆಪ್' ಅಭಿವೃದ್ಧಿ!

|

ಐಐಟಿ ಖರಗ್​ಪುರ ಸಂಶೋಧನಾ ವಿದ್ಯಾರ್ಥಿಗಳ ತಂಡವೊಂದು ನಕಲಿ ಕರೆನ್ಸಿ ಪತ್ತೆ ಹಚ್ಚುವ ಸ್ಮಾರ್ಟ್​ ಫೋನ್​ ಆಧಾರಿತ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿ ದೇಶದ ಗಮನಸೆಳೆದಿದೆ. ನಕಲಿ ನೋಟುಗಳ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಡಿಜಿಟಲ್ ಮಾರ್ಗದ ಹಿಂದೆಬಿದ್ದಿದ್ದ ಐಐಟಿ ಖರಗ್​ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ಆರು ಜನ ವಿದ್ಯಾರ್ಥಿಗಳ ಗುಂಪು ಇಂತಹದೊಂದು ಆಪ್ ಅನ್ನು ಅಭಿವೃದ್ಧಿಪಡಿಸಿದೆ.

ನಕಲಿ ಕರೆನ್ಸಿಯನ್ನು ಪತ್ತೆ ಹಚ್ಚುವ ಇಮೇಜ್ ಪ್ರೊಸೆಸಿಂಗ್ ಅಪ್ಲಿಕೇಶನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಆರು ವಿದ್ಯಾರ್ಥಿಗಳ ತಂಡ ಇಂತಹದೊಂದು ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ವಿಧ್ಯಾರ್ಥಿಗಳ ತಂಡವೇ ಅಭಿವೃದ್ಧಿಪಡಿಸಿರುವ ಈ ಆಪ್ ಸ್ಮಾರ್ಟ್​ಫೋನ್ ಬೆಂಬಲಿತ ಕೋಡಿಂಗ್ ಸಹಾಯದಿಂದ​ ನಕಲಿ ನೋಟುಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದು ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ.

ಐಐಟಿ ವಿದ್ಯಾರ್ಥಿಗಳಿಂದ ನಕಲಿ ಕರೆನ್ಸಿ ಪತ್ತೆ ಹಚ್ಚುವ 'ಮೊಬೈಲ್ ಆಪ್' ಅಭಿವೃದ್ಧಿ!

ವಿದ್ಯಾರ್ಥಿಗಳ ತಂಡವೇ ಹೇಳಿರುವಂತೆ, ನಾವು ಅಭಿವೃದ್ಧಿಪಡಿಸಿರುವ ಈ ಆಪ್ ಮೂಲಕ ಕರೆನ್ಸಿ ನೋಟ್ ಇಮೇಜ್ ಅನ್ನು ಅಪ್ಲೋಡ್ ಮಾಡಿದರೆ ಅಥವಾ ಸೆನ್ಸಾರ್ ಮೂಲಕ ಕರೆನ್ಸಿ ನೋಟ್ ಅನ್ನು ಸ್ಕ್ಯಾನ್ ಮಾಡಿ ತೋರಿಸಿದರೂ ಸಾಕು ಆ ಕರೆನ್ಸಿ ನೋಟನ್ನು ಆಪ್ ಖಾತರಿಪಡಿಸುತ್ತದೆ. ಒಂದು ವೇಳೆ ಆ ಕರೆನ್ಸಿ ನೋಟ್ ನಕಲಿಯಾಗಿದೆ ಎಂದು ಸೂಚನೆ ನೀಡಿದರೆ, ಆ ತಕ್ಷಣವೇ ಆಪ್ ಬಳಕೆದಾರರಿಗೆ ನಕಲಿ ನೋಟಿನ ಬಗ್ಗೆ ಸೂಚನೆ ನೀಡಲಿದೆ ಎಂದು ಹೇಳಿದ್ದಾರೆ.

ಬಳಕೆದಾರರು ಕರೆನ್ಸಿ ನೋಟಿನ ಚಿತ್ರವನ್ನು ಅಪ್ಲೋಡ್ ಅಥವಾ ಸ್ಕ್ಯಾನ್ ಮಾಡಿದಾಗ ಈ ಮೊಬೈಲ್ ಅಪ್ಲಿಕೇಷನ್ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿನ 25 ಲಕ್ಷಣಗಳ ವೈಶಿಷ್ಟ್ಯತೆಯನ್ನು ಪರಿಶೀಲಿಸುತ್ತದೆ. ಇದರಿಂದ ಆ ನೋಟು ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಪತ್ತೆಹಚ್ಚಿ ಸೂಚನೆ ನೀಡುತ್ತದೆ. ಹಾಗಾಗಿ, ಜನರು ವಿವಿಧ ಹಂತಗಳಲ್ಲಿ ನಕಲಿ ಕರೆನ್ಸಿಗಳಿಂದ ಮೋಸ ಹೋಗುವುದನ್ನು ತಡೆಗಟ್ಟಬಹುದು ಎಂದು ಸಂಶೋಧನಾ ತಂಡದ ನಾಯಕ ಸಂತೋಷ್ ಅವರು ಹೇಳಿದ್ದಾರೆ.

ಐಐಟಿ ವಿದ್ಯಾರ್ಥಿಗಳಿಂದ ನಕಲಿ ಕರೆನ್ಸಿ ಪತ್ತೆ ಹಚ್ಚುವ 'ಮೊಬೈಲ್ ಆಪ್' ಅಭಿವೃದ್ಧಿ!

ನಕಲಿ ಕರೆನ್ಸಿ ಪತ್ತೆ ಹಚ್ಚುವ ಸ್ಮಾರ್ಟ್​ ಫೋನ್​ ಆಧಾರಿತ ಅಪ್ಲಿಕೇಷನ್ ಮಾತ್ರವಲ್ಲದೇ, ಇದರ ಜೊತೆಗೆ ಕೈಗಾರಿಕಾ ಮಾಲಿನ್ಯದಂತಹ ಉಷ್ಣ ವಿದ್ಯುತ್ ಸ್ಥಾವರದಿಂದ ಹೊರ ಸೂಸುವ ಪರಮಾಣು ವಿಕಿರಣ ಟ್ರ್ಯಾಕಿಂಗ್​ ಅಪ್ಲಿಕೇಷನ್ ಅನ್ನು ಸಹ ಈ ತಂಡ ಅಭಿವೃದ್ಧಿಪಡಿಸಿದೆ. ಈ ಸಾಧನೆಗಳಿಗಾಗಿ ಈ ತಂಡದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎಸ್ಐಹೆಚ್ (ಸ್ಮಾರ್ಟ್ ಇಂಡಿಯಾ ಹ್ಯಾಕಾಟನ್) 2019 ರಲ್ಲಿ ಉನ್ನತ ಬಹುಮಾನಗಳನ್ನು ಸಹ ಗೆದ್ದಿದ್ದಾರೆ.
Most Read Articles
Best Mobiles in India

English summary
Reseachers at IIT-Kharagpur have developed a smartphone application to detect fake currency. This application will reduce the chances of fraud. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X