ನಿಮ್ಮ ಪ್ರತಿಭೆ ಅನಾವರಣಕ್ಕೆ ದಾರಿ ಈ 'ಸ್ವೋ' ಆಪ್!!
ಜಗತ್ತಿನಾದ್ಯಂತ ನಡೆಯುವ ವಿಶೇಷ ವಿದ್ಯಮಾನಗಳನ್ನು ವೀಕ್ಷಿಸಬಹುದಾದ ಮತ್ತು ಜನರು ತಮ್ಮ ಪ್ರತಿಭೆಯನ್ನು ಲೈವ್ ವಿಡಿಯೊ ಕಳಿಸಿ ಪ್ರದರ್ಶನ ಮಾಡಲು ವೇದಿಕೆಯನು ಒದಗಿಸಿಕೊಡುವ ವಿಡಿಯೊ ಸ್ಟ್ರೀಮಿಂಗ್ ಗೇಮ್ ಆದ 'ಸ್ವೋ ಟ್ರಿವಿಯಾ ಷೋ' (Swoo Trivia) ನೇರ ಪ್ರಸಾರವನ್ನು ಭಾರತದ ಬಳಕೆದಾರರಿಗಾಗಿ ಆರಂಭವಾಗಿದೆ.
ಮಧ್ಯ ಏಷ್ಯಾದಲ್ಲಿ ಜನಪ್ರಿಯವಾಗಿರುವ ವಿಡಿಯೊ ಸ್ಟ್ರೀಮಿಂಗ್ ಗೇಮ್ ಆದ 'ಸ್ವೋ ಟ್ರಿವಿಯಾ ಷೋ' ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 60 ಲಕ್ಷ ಬಳಕೆದಾರರನ್ನು ಹೊಂದಿದೆ. ಈ ಪೈಕಿ ಭಾರತದ ಗ್ರಾಹಕರ ಸಂಖ್ಯೆ ಶೇ 30 ರಷ್ಟಿರುವದರಿಂದ ಭಾರತದಲ್ಲಿ ನೇರ ಪ್ರಸಾರವನ್ನು ಆರಂಭಿಸಲಾಗಿದೆ.

ಸ್ವೋ ಟ್ರಿವಿಯಾ ಷೋ ಭಾರತದ ಅತ್ಯಂತ ಜನಪ್ರಿಯ ಮತ್ತು ಅತಿದೊಡ್ಡ ಆನ್‌ಲೈನ್ ಗೇಮ್ ಸಹ ಆಗಲಿದೆ. ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಈ ಸೆಲೆಬ್ರಿಟಿ ಷೋನಲ್ಲಿ ಸಾವಿರಾರು ರೂಪಾಯಿ ಹಣವನ್ನು ವೀಕ್ಷಕರು ಗೆಲ್ಲಬಹುದು ಎಂದು ಸ್ವೋ ಟ್ರಿವಿಯಾ ಸಂಸ್ಥೆ ತಿಳಿಸಿದೆ.

ಅಂಗೈನಲ್ಲೇ ಸೆಲೆಬ್ರಿಟಿ ಷೋ!
‘ಸ್ವೋ ಟ್ರಿವಿಯಾ ಷೋ' ಸೆಲೆಬ್ರಿಟಿ ಷೋನಲ್ಲಿ 10 ಬಹುವಿಧದ ಪ್ರಶ್ನೆಗಳಿರಲಿದ್ದು, ಇವುಗಳಿಗೆ 3 ಆಯ್ಕೆಗಳು ಇರುತ್ತವೆ. ಈ ಮೂಲಕ ಇದರಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳ ಬುದ್ಧಿಮಟ್ಟ ಅಳೆಯಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು 10 ಸೆಕೆಂಡ್‍ಗಳ ಕಾಲಾವಕಾಶ ನೀಡಲಾಗುತ್ತದೆ. ಸಾವಿರಾರು ರೂಪಾಯಿಗಳ ಬಹುಮಾನ ಇರಲಿದೆ.

ಹಲವಾರು ಬಗೆಯ ಕಾರ್ಯಕ್ರಮಗಳು!!
‘ಸ್ವೋ' ಆಪ್ ಮೂಲಕ ಗ್ರಾಹಕರು ಹಲವಾರು ಬಗೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಚಾಕ್‍ಟಾಕ್, ರಿವ್ಯೂ, ಸಾಧನೆಗಳು, ಧಾರಾವಾಹಿಗಳು, ಹಾಡುಗಳು, ಉಪನ್ಯಾಸಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಪ್‌ನಲ್ಲಿ ನೋಡಬಹುದು ಎಂದು ಸ್ವೋ ಟ್ರಿವಿಯಾ ಸಂಸ್ಥೆ ಹೇಳಿದೆ.

ಪ್ರತಿಭೆ ಅನಾವರಣಕ್ಕೆ ದಾರಿ!
ಭಾರತವು ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಬಳಕೆದಾರರ ದೇಶವಾಗಲಿದೆ. ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ವಿವಿಧ ವೇದಿಕೆಗಳ ಹುಡುಕಾಟದಲ್ಲಿ ಇರುವ ಯುವ ಜನರ ಪಾಲಿಗೆ ಈ ಆಪ್ ನೆರವಿಗೆ ಬರಲಿದೆ. ಆಪ್ ಬಳಕೆದಾರರ ಸಂಖ್ಯೆ ಹೆಚ್ಚಿರುವುದರಿಂದ ಬಳಕೆದಾರ ಪ್ರತಿಭೆಯ ಅನಾವರಣಕ್ಕೆ ಸುಲಭವಾಗಲಿದೆ.

ಬಳಕೆದಾರರ ಸ್ನೇಹಿ ಆಪ್!
‘ಸ್ವೋ' ಆಪ್ ಬಳಕೆದಾರರ ಸ್ನೇಹಿ ಆಪ್ ಆಗಿದ್ದು, ನೇರ ಪ್ರಸಾರದ ಗುಣಮಟ್ಟ ಹೊಂದಿದ. ‘ಸ್ವೋ ಟ್ರಿವಿಯಾ ಷೋ' ಸೆಲೆಬ್ರಿಟಿ ಷೋನಲ್ಲಿ ಗೆದ್ದ ಹಣವನ್ನು ಪೇಟಿಎಂ ಸೇರಿದಂತೆ ವಿವಿಧ ಮೊಬೈಲ್ ವ್ಯಾಲೆಟ್‍ಗಳ ಮೂಲಕ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಸಿಇಒ ದಿವ್ಯೇಶ್ ಮಹಾಜನ್ ಅವರು ತಿಳಿಸಿದ್ದಾರೆ.

ಆಂಡ್ರಾಯ್ಡ್ ಮತ್ತು ಐಒಎಸ್
‘ಸ್ವೋ ಟ್ರಿವಿಯಾ ಷೋ' ಆಪ್ (Swoo - Live Video Streaming and Broadcast App) ಆಂಡ್ರಾಯ್ಡ್, ಐಒಎಸ್ ಮತ್ತು ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ನೇರ ಪ್ರಸಾರದ ಗುಣಮಟ್ಟ ಹೊಂದಿರುವ ಆಪ್ ಅನ್ನು ಆಪಲ್ (ಐಸ್ಟೋರ್) ಮತ್ತು ಆಂಡ್ರಾಯ್ಡ್ (ಗೂಗಲ್ ಪ್ಲೇಸ್ಟೋರ್ನಲ್ಲಿ ) ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications




