ಆಧಾರ್- ಪ್ಯಾನ್‌ ಜೋಡಣೆ, ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಒಂದೇ ಆಪ್!! ಯಾವುದು?

ಸರಳವಾಗಿ ಪಾನ್‌ಕಾರ್ಡ್ಗೆ ಇನ್ನು ಮೊಬೈಲ್‌ನಲ್ಲಿಯೇ ಅರ್ಜಿಸಲ್ಲಿಸಬಹುದು.!!

|

ತೆರಿಗೆ ಪಾವತಿದಾರರಿಗೆ ಅನುಕೂಲವಾಗಲು ಭಾರತ ಸರ್ಕಾರದ ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಮೊಬೈಲ್‌ ಆಪ್ ಒಂದನ್ನು ಬಿಡುಗಡೆ ಮಾಡಿದೆ. ತೆರಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವ ಆಪ್ ಇದಾಗಿದ್ದು, ಈ ಸೇವೆಯ ಜೊತೆಗೆ ಹಲವು ಸೇವೆಗಳನ್ನು ಒಂದೇ ಆಪ್‌ನಲ್ಲಿ ನೀಡಲಾಗಿದೆ.!!

ನೇರ ತೆರಿಗೆ ಕೇಂದ್ರೀಯ ಮಂಡಳಿ ಅಭಿವೃದ್ಧಿಪಡಿಸಿದ ಮೊದಲ ಆಪ್ ಇದಾಗಿದ್ದು, ಆಪ್‌ಗೆ 'ಆಯಕರ ಸೇತು' ಎಂಬ ಹೆಸರಿಡಲಾಗಿದೆ. ತೆರಿಗೆದಾರರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ತಗ್ಗಿಸಲು ಈ ಆಪ್ ತಯಾರಿಸಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಹೇಳಿದೆ.!!

ಹಾಗಾದರೆ, ಆಯಕರ ಸೇತು' ಆಪ್ ಬಳಕೆ ಹೇಗೆ? ತೆರಿಗೆ ಪಾವತಿ ಜೊತೆಗೆ ಬೇರೆ ಏನೆನೆಲ್ಲಾ ಸೇವೆಗಳು 'ಆಯಕರ ಸೇತು' ಆಪ್‌ನಲ್ಲಿ ಲಭ್ಯವಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊಬೈಲ್‌ ಸಂಖ್ಯೆಗೆ ಮಾಹಿತಿ ರವಾನೆ!!

ಮೊಬೈಲ್‌ ಸಂಖ್ಯೆಗೆ ಮಾಹಿತಿ ರವಾನೆ!!

ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಾಯಿತಗೊಂಡ ತೆರಿಗೆದಾರರ ಮೊಬೈಲ್‌ ಸಂಖ್ಯೆಗೆ, ತೆರಿಗೆಗೆ ಸಂಬಂಧಿಸಿದ ಪ್ರಮುಖ ದಿನಗಳು, ಅರ್ಜಿ ನಮೂನೆ, ಅಧಿಸೂಚನೆಗಳ ಕುರಿತು ‘ಆಯಕರ ಸೇತು' ನಿಯಮಿತವಾಗಿ ಮಾಹಿತಿ ರವಾನಿಸುತ್ತದೆ.!!

ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೂ ಅವಕಾಶ

ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೂ ಅವಕಾಶ

ತೆರಿಗೆದಾರರ ಸಂಪರ್ಕ ಸೇತುವೆಯಾಗಿರುವ ಈ ಆಪ್ ಮುಂಬರುವ ದಿನಗಳಲ್ಲಿ, ಸಿಬಿಡಿಟಿ ಆಪ್ ಮೂಲಕವೇ ರಿಗೆ ರಿಟರ್ನ್ಸ್‌ ಸಲ್ಲಿಕೆಗೂ ಅವಕಾಶ ಮಾಡಿಕೊಡಲಿದೆ.ಹಾಗಾಗಿ, ತೆರಿಗೆ ಪಾವತಿಸಲು ಇನ್ನು ಯಾವುದೇ ತೊಂದರೆ ಎದುರಿಸುವಹಾಗಿಲ್ಲ.!!

ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.!!

ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.!!

ಆಯಕರ ಸೇತು ಆಪ್‌ನಲ್ಲಿ ತೆರಿಗೆ ಪಾವತಿಸುವುದರ ಜೊತೆಗೆ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಹ ಅವಕಾಶ ನೀಡಲಾಗಿದ. ಸರಳವಾಗಿ ಪಾನ್‌ಕಾರ್ಡ್ಗೆ ಇನ್ನು ಮೊಬೈಲ್‌ನಲ್ಲಿಯೇ ಅರ್ಜಿಸಲ್ಲಿಸಬಹುದು.!!

ಆಧಾರ್- ಪ್ಯಾನ್‌ ಜೋಡಣೆ

ಆಧಾರ್- ಪ್ಯಾನ್‌ ಜೋಡಣೆ

ಇಲ್ಲಿಯವರೆಗೂ ಆಧಾರ್ ಮತ್ತು ಪಾನ್‌ ಕಾರ್ಡ್ ಜೋಡಿಸಲು ಇನ್‌ಕಮ್‌ಟ್ಯಾಕ್ಸ್ ಅಫಿಶಿಯಲ್ ವೆಬ್‌ಸೈಟ್ ತೆರೆಯಬೇಕಿತ್ತು. ಆದರೆ, ಆಯಕರ ಸೇತು' ಆಪ್‌ನಲ್ಲಿ ಆಧಾರ್ ಸಂಖ್ಯೆಯನ್ನು ಪ್ಯಾನ್‌ ಕಾರ್ಡ್‌ ಜತೆಗೆ ಜೋಡಣೆ ಮಾಡಲು ಒಂದೇ ನಿಮಿಷ ಸಾಕು.!!

ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯ.!!

ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯ.!!

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೋಮವಾರ ಆಪ್‌ಗೆ ಚಾಲನೆ ನೀಡಿದ್ದು, ಈ ಆಪ್‌ ಕೇವಲ ‌ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ.! ನಂತರ ಬೇರೆ ಬೇರೆ ಆಪರೇಟಿಂಗ್ ಸಿಸ್ಟಮ್ ಮಾದರಿಯಲ್ಲಿಯೂ ಆಪ್ ಸೇವೆ ನೀಡುವುದಾಗಿ 'ಸಿಬಿಡಿಟಿ' ತಿಳಿಸಿದೆ.!!

<strong>12 ಹೊಸ ಆಫರ್ ಬಿಡುಗಡೆ ಮಾಡಿದ ಜಿಯೋ!..ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!</strong>12 ಹೊಸ ಆಫರ್ ಬಿಡುಗಡೆ ಮಾಡಿದ ಜಿಯೋ!..ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

Best Mobiles in India

English summary
The Income Tax Department has introduced a mobile app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X