ವಾಟ್ಸ್‌ಆಪ್‌ಗೆ ಟಾಂಗ್!..200 ಮಿಲಿಯನ್ ಬಳಕೆದಾರರನ್ನು ತಲುಪಿತು ಟೆಲಿಗ್ರಾಮ್!!
ಟೆಲಿಗ್ರಾಮ್‌ಗೆ ಪ್ರತಿ ತಿಂಗಳು 200 ಮಿಲಿಯನ್ ಸಕ್ರೀಯ ಬಳಕೆದಾರರಿರುವುದಾಗಿ ಟೆಲಿಗ್ರಾಮ್ ಸಹ-ಸಂಸ್ಥಾಪಕ ಪಾವೆಲ್ ಡ್ಯುರೊವ್ ಅವರು ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.!!
ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುತ್ತಿರುವ ಏಕೈಕ ಮೆಸೇಂಜಿಗ್ ಆಪ್ ಟೆಲಿಗ್ರಾಮ್ ಇದೇ ಮೊದಲ ಬಾರಿಗೆ 200 ಮಿಲಿಯನ್ ಬಳಕೆದಾರರಿರುವುದಾಗಿ ಘೋಷಿಸಿಕೊಂಡಿದೆ.! ಟೆಲಿಗ್ರಾಮ್‌ಗೆ ಪ್ರತಿ ತಿಂಗಳು 200 ಮಿಲಿಯನ್ ಸಕ್ರೀಯ ಬಳಕೆದಾರರಿರುವುದಾಗಿ ಟೆಲಿಗ್ರಾಮ್ ಸಹ-ಸಂಸ್ಥಾಪಕ ಪಾವೆಲ್ ಡ್ಯುರೊವ್ ಅವರು ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.!!
ಇದೇ ಮೊದಲ ಬಾರಿಗೆ ಟೆಲಿಗ್ರಾಮ್ 200 ಮಿಲಿಯನ್ ಬಳಕೆದಾರರನ್ನು ಹೊಂದಿರುವುದಕ್ಕೆ ಪಾವೆಲ್ ಡ್ಯುರೊವ್ ಅವರು ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆಯಲ್ಲಿ ಟೆಲಿಗ್ರಾಮ್ ಎಂದಿಗೂ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಮತ್ತು ಯಾವುದೇ ಏಜೆನ್ಸಿಗಳೊಂದಿಗೆ ವ್ಯವಹಾರಗಳನ್ನು ಮಾಡುತ್ತಿಲ್ಲ ಎಂದು ಫೇಸ್‌ಬುಕ್‌ಗೆ ಟಾಂಗ್ ನೀಡಿದ್ದಾರೆ.!!

2013 ಆಗಸ್ಟ್ನಲ್ಲಿ ಟೆಲಿಗ್ರಾಮ್ ಪ್ರಾರಂಭವಾದಾಗಿನಿಂದ ನಮ್ಮ ಬಳಕೆದಾರರ ಖಾಸಗಿ ಡೇಟಾವನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗಪಡಿಸಲಿಲ್ಲ ಮತ್ತು ಇತರ ಜನಪ್ರಿಯ ಅಪ್ಲಿಕೇಶನ್ಗಳಿಗಿಂತ ಭಿನ್ನವಾಗಿ, ಟೆಲಿಗ್ರಾಮ್ ತನ್ನ ಷೇರುದಾರರು ಅಥವಾ ಜಾಹೀರಾತುದಾರರಿಗೆ ಎಂದೂ ವರದಿ ಮಾಡಲು ಹೊಗುವುದಿಲ್ಲ ಎಂದು ತಿಳಿಸಿದ್ದಾರೆ.!!

ಇನ್ನು ಹೊಸದಾಗಿ ಟೆಲಿಗ್ರಾಮ್‌ನಲ್ಲಿ ನೀಡಲಾಗಿರುವ ಅಪ್‌ಡೇಟ್ ಬಗ್ಗೆಯೂ ಮಾಹಿತಿ ನೀಡಿರುವ ಪಾವೆಲ್ ಡ್ಯುರೊವ್ ಅವರು, ಟೆಲಿಗ್ರಾಮ್ ಸ್ಟಿಕ್ಕರ್ಗಳು, ಹಲವು ಚಿತ್ರ ಕಳುಹಿಸುವಿಕೆ ಮತ್ತು ಆಟೊ-ರಾತ್ರಿ ಮೋಡ್ ಫೀಚರ್ಸ್‌ಗಳ ಅಪ್‌ಡೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಗಳಿಗೆ ಈ ಅಪ್‌ಡೇಟ್ ತರುತ್ತಿರುವುದಾಗಿ ತಿಳಿಸಿದ್ದಾರೆ.!!

ಪ್ರತಿ ತಿಂಗಳೂ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ಗಿಂತಲೂ ಬಹಳ ದೂರದಲ್ಲಿರುವ ಟೆಲಿಗ್ರಾಮ್ ಈಗಷ್ಟೇ ಮೊದಲ ಬಾರಿಗೆ 200 ಮಿಲಿಯನ್ ಬಳಕೆದಾರರ ತಲುಪಿದೆ. ಆಪ್ಟಿಮೈಸ್ಡ್ ಬ್ಯಾಟರಿ ಬಳಕೆ ಸೇರಿ ಹಲವು ವಿಶಿಷ್ಟ ಸೇವೆಗಳನ್ನು ನೀಡುತ್ತಿರುವ ಟೆಲಿಗ್ರಾಮ್ ಭವಿಷ್ಯದಲ್ಲಿ ಮತ್ತಷ್ಟು ಜನರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.!!
ಓದಿರಿ: ನಿಮ್ಮ ಸ್ಮಾಟ್‌ಫೋನ್‌ಗೆ ಇತರೆ ಯಾವುದೇ ಚಾರ್ಜರ್ ಬಳಲೇಬಾರದು ಏಕೆ?..ಕಾರಣ ಇಲ್ಲಿದೆ!!


Click it and Unblock the Notifications



