Home
Apps

ಈ ಟ್ರಿಕ್ಸ್ ತಿಳಿದರೆ ಟೆಲಿಗ್ರಾಮ್ ಆಗಲಿದೆ ನಿಮ್ಮ ಫೇವರೆಟ್

ಟೆಲಿಗ್ರಾಮ್ ಮೆಸೆಂಜರ್ ನಲ್ಲಿರುವ ವಿಶೇಷ ಫೀಚರ್ಗಳು ಮಾಡುತ್ತಿದೆ ಈ ಆಪ್ಅನ್ನು ಎಲ್ಲರಿಗೆ ಪ್ರಿಯ. ಇಲ್ಲಿದೆ ಅದರ ವಿಶೆಷತೆಗಳ ಒಂದು ಚಿಕ್ಕ ನೋಟ.

By Tejaswini P G

ಟೆಲಿಗ್ರಾಮ್ ಮೆಸೆಂಜರ್ ಒಂದು ಅದ್ಭುತ ಆಪ್ ಆಗಿದ್ದು ಅದರಲ್ಲಿರುವ ಫೀಚರ್ಗಳು ತಿಳದರೆ ಅದು ನಿಮ್ಮ ಅಚ್ಚುಮೆಚ್ಚಿನ ಮೆಸೆಂಜರ್ ಆಪ್ ಎನಿಸುವುದರಲ್ಲಿ ಎರಡು ಮಾತಿಲ್ಲ.ನೀವು ಇನ್ನೂ ಟೆಲಿಗ್ರಾಮ್ ಇನ್ಸ್ಟಾಲ್ ಮಾಡಿಲ್ಲವೆ? ಹಾಗಾದರೆ,ಕೆಲವೇ MBಗಳಷ್ಟು ಪುಟ್ಡದಾದ ಈ ಆಪ್ ನ ಫೀಚರ್ಗಳು ತಿಳಿದರೆ ನೀವು ಅದನ್ನು ತಕ್ಷಣ ಇನ್ಸ್ಟಾಲ್ ಮಾಡುವುದರಲ್ಲಿ ಸಂಶಯವಿಲ್ಲ.

ಈ ಟ್ರಿಕ್ಸ್ ತಿಳಿದರೆ ಟೆಲಿಗ್ರಾಮ್ ಆಗಲಿದೆ ನಿಮ್ಮ ಫೇವರೆಟ್

2013ರಲ್ಲಿ ಬಿಡುಗಡೆಯಾದ ಆಪ್ಗೆ ಈಗ 100ಮಿಲಿಯನ್ ಬಳಕೆದಾರರಿದ್ದು ಪ್ರತಿನಿತ್ಯ 0.32 ಹೊಸ ಬಳಕೆದಾರರು ಇದನ್ನು ಇನ್ಸ್ಟಾಲ್ ಮಾಡುತ್ತಿದ್ದಾರೆ.ವಿಭಿನ್ನ ಥೀಮ್ಗಳು,ಸ್ಟಿಕರ್ಗಳು,ಮಾಸ್ಕ್ಗಳು ಹಾಗು ಒಂದಷ್ಟು ಪ್ರೈವೆಸಿ ಮತ್ತು ಸೆಕ್ಯೂರಿಟಿ ಸೆಟ್ಟಿಂಗ್ ಗಳಿಂದ ಕೂಡಿದ ಟೆಲಿಗ್ರಾಮ್ ಆಗಿದೆ ಇಂದಿನ ಹಾಟ್ ಫೇವರೆಟ್.

ಟೆಲಿಗ್ರಾಮ್ ನ ಇಂಟರ್ಫೇಸ್ ವಾಟ್ಸಾಪ್ ನಂತೆಯೆ ಇದ್ದು ವಾಟ್ಸಾಪ್ ಬಳಸಿದವರಿಗೆ ಟೆಲಿಗ್ರಾಮ್ ಗೆ ಹೊಂದಿಕೊಳ್ಳುವುದು ಕಿಂಚಿತ್ತೂ ಕಷ್ಟವೆನಿಸುವುದಿಲ್ಲ. ಇದು ಕೇವಲ ಟೆಕ್ಸ್ಟ್ ಮೆಸೇಜ್ ಕಳುಹಿಸುವುದಕ್ಕೆ ಸೀಮಿತವಲ್ಲ. ಇದರಲ್ಲಿದೆ ಮತ್ತಷ್ಟು ಆಕರ್ಷಕ ಅಂಶಗಳು.

ನೀವು ಈಗಾಗಲೇ ಟೆಲಿಗ್ರಾಮ್ ಬಳಸುತ್ತಿದ್ದರೆ ಈ ಆಪ್ ಏಕಿಷ್ಟು ಕೂಲ್ ಎಂದು ನಿಮಗೆ ತಿಳಿದೇ ಇರುತ್ತದೆ.ನಿಮಗೆ ಈ ಆಪ್ ಹೊಸದೇ…?ಹಾಗಾದರೆ ನಿಮಗೆಂದೇ ಇಲ್ಲಿ ತಿಳಿಸಿದ್ದೇವೆ ಟೆಲಿಗ್ರಾಮ್ ನ 7 ಕೂಲ್ ಟಿಪ್ಗಳು.

ಇಷ್ಟವಾದ ಥೀಮ್ ಆಯ್ಕೆಮಾಡಿ ಅಥವ ಸೃಷ್ಟಿಸಿ ನಿಮ್ಮ ಸ್ವಂತ ಥೀಮ್

ಇಷ್ಟವಾದ ಥೀಮ್ ಆಯ್ಕೆಮಾಡಿ ಅಥವ ಸೃಷ್ಟಿಸಿ ನಿಮ್ಮ ಸ್ವಂತ ಥೀಮ್

ಟೆಲಿಗ್ರಾಮ್ ಆಪ್ ನಲ್ಲಿ ಬೇಕಾದಷ್ಟು ಬ್ಯಾಕ್ಗ್ರೌಂಡ್ ಚಿತ್ರಗಳ ಆಯ್ಕೆ ಇದ್ದರೂ,ನಿಮ್ಮ ಗ್ಯಾಲರಿಯಿಂದ ನಿಮಗೆ ಬೇಕಾದ ಚಿತ್ರವನ್ನು ಬ್ಯಾಕ್ಗ್ರೌಂಡ್ ಚಿತ್ರವನ್ನಾಗಿ ಆಯ್ಕೆ ಮಾಡಿಕೊಳ್ಲಬಹುದು.ಅಲ್ಲದೇ ನೀವು ನಿಮಗಿಷ್ಟವಾದ ಪ್ರಿ ಡಿಫೈನ್ಡ್ ಥೀಮ್ ಬಳಸಬಹುದು ಇಲ್ಲವೇ ನಿಮ್ಮ ಸ್ವಂತ ಥೀಮನ್ನು ಸೃಷ್ಟಿಸಬಹುದು.

ಈ ಆಪ್ನಲ್ಲಿ 'ಡಿಫಾಲ್ಟ್' ಥೀಮ್, 'ಬ್ಲೂ' ಥೀಮ್ ಹಾಗೂ 'ಡಾರ್ಕ್' ಥೀಮ್ ಎಂಬ ಮೂರು ಪ್ರಿ ಡಿಫೈನ್ಡ್ ಥೀಮ್ಗಳಿವೆ. ನಿಮ್ಮದೇ ಸ್ವಂತ ಥೀಮ್ ಸೃಷ್ಟಿಸಲು ಬಯಸುವಿರಾದರೆ ಆಕ್ಷನ್ ಬಾರ್,ವಿಂಡೋ ಬ್ಯಾಕ್ಗ್ರೌಂಡ್, ಸ್ಟಿಕರ್ ಮೆನು ಮೊದಲಾದ ಇಂಟರ್ಫೇಸ್ ಅಂಶಗಳಿಗೆ ನಿಮಗಿಷ್ಟವಾದ ಬಣ್ಣಗಳನ್ನು ಸೆಟ್ ಮಾಡಬಹುದು.

ನೀವು ಪ್ರಿ ಡಿಫೈನ್ಡ್ ಥೀಮ್ಗಳನ್ನು ಕಸ್ಟಮೈಸ್ ಮಾಡಲು ಬಯಸಿದರೆ ಆಪ್ನ ಸೆಟ್ಟಿಂಗ್ಸ್ ಮೆನುಗೆ ಹೋಗಿ ಥೀಮ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಹಾಗೆ ಸೆಟ್ ಮಾಡಿ.

ನೀವು ಸೃಷ್ಟಿಸುವ ಹೊಸ ಥೀಮ್ಗಳನ್ನು ನಿಮ್ಮ ಗೆಳೆಯರೊಂದಿಗೂ ಶೇರ್ ಮಾಡಬಹುದು.

ನಿಮ್ಮ ಫೋಟೊ/ಇಮೆಜ್ಗಳಿಗೆ ಬೇಕಾದ ಮಾಸ್ಕ್ ಹಾಕಿ

ನಿಮ್ಮ ಫೋಟೊ/ಇಮೆಜ್ಗಳಿಗೆ ಬೇಕಾದ ಮಾಸ್ಕ್ ಹಾಕಿ

ನೀವು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳುವ ಫೋಟೊಗಳಿಗೆ ಮಾಸ್ಕ್ ಹಾಕಬಹುದು. ಗೆಳೆಯರೊಂದಿಗೆ ಫೋಟೊ ಹಂಚಿಕೊಳ್ಳುವ ಮುನ್ನ ಫೋಟೊ ಎಡಿಟ್ ಮಾಡುವುದು ನಿಮಗೆ ತಿಳಿದೇ ಇದೆ.

ಫೋಟೊಗೆ ಮಾಸ್ಕ್ ಹಾಕಲು ನೀವು ಮಾಡಬೇಕಾದದ್ದು ಇಷ್ಟೇ. ಟೆಲಿಗ್ರಾಮ್ನಲ್ಲಿ ನಿಮ್ಮ ಗ್ಯಾಲರಿ ಅಥವಾ ಕ್ಯಾಮೆರಾದಿಂದ ಫೋಟೊ ಕಳಿಸುವ ಮುನ್ನ ಅದನ್ನು ಎಡಿಟ್ ಮಾಡುವ ಆಪ್ಶನ್ ಕೊಡುತ್ತದೆ. ಅಲ್ಲಿರುವ ಪೈಂಟ್ ಬ್ರಷ್ ಐಕನ್ ಒತ್ತಿದರೆ ಮಾಸ್ಕಿಂಗ್ ಮೆನು ಓಪನ್ ಆಗುತ್ತದೆ. ಅಲ್ಲಿರುವ ಸ್ಮೈಲಿ ಫೇಸ್ ಒತ್ತಿದರೆ ಹಲವಾರು ಮಾಸ್ಕ್ಗಳು ನಿಮ್ಮ ಪರದೆ ಮೇಲಿರುತ್ತವೆ. ನಿಮಗೆ ಬೇಕಾದ್ದನ್ನು ಆಯ್ದು ಅದರ ಸೈಜ್ ಹೆಚ್ಚುಕಡಿಮೆ ಮಾಡಿ ಫೋಟೊ ಮೇಲೆ ಹಾಕಿದರೆ ನಿಮ್ಮ ಕೆಲಸ ಮುಗಿಯಿತು!!

How to create two accounts in one Telegram app (KANNADA)
ನೋಟಿಫಿಕೇಶನ್ LED ಬೆಳಕಿನ ಬಣ್ಣ ಬದಲಾಯಿಸಿ

ನೋಟಿಫಿಕೇಶನ್ LED ಬೆಳಕಿನ ಬಣ್ಣ ಬದಲಾಯಿಸಿ

ಈ ಫೀಚರ್ ನೋಟಿಫಿಕೇಶನ್ LED ಲೈಟ್ ಇರುವ ಸ್ಮಾರ್ಟ್ಫೋನ್ಗಳಗೆ ಮಾತ್ರ ಅನ್ವಯಿಸುತ್ತದೆ.ಟೆಲಿಗ್ರಾಮ್ ಆಪ್ನಲ್ಲಿ ಮೆಸೇಜ್ ಸ್ವೀಕರಿಸಿದ್ದನ್ನು ಸೂಚಿಸುವ ನೋಟಿಫಿಕೇಶನ್ LED ಲೈಟ್ನ ಬಣ್ಣ ಬದಲಾಯಿಸುವ ಆಯ್ಜೆಯೂ ಇದೆ.

ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಆಪ್ನ ಸೆಟ್ಟಂಗ್ಸ್ ಟ್ಯಾಬ್ನಲ್ಲಿ 'ನೋಟಿಫಿಕೇಶನ್ಸ್ & ಸೌಂಡ್ಸ್' ಬಾರ್ ಮೇಲೆ ಕ್ಲಿಕ್ ಮಾಡಿ.ಇಲ್ಲಿ ಪ್ರೈವೇಟ್ ಹಾಗೂ ಗ್ರೂಪ್ ಚ್ಯಾಟ್ಗಳಿಗೆ ಎರಡು ವಿಭಿನ್ನ ಸೆಟ್ಟಿಂಗ್ ಮೆನುಗಳಿರುತ್ತವೆ. ಎರಡೂ ಸೆಟ್ಟಿಂಗ್ ಮೆನುಗಳಲ್ಲಿ ನೋಟಿಫಿಕೇಶನ್ LED ಲೈಟ್ ನ ಬಣ್ಣವನ್ನು ನಿಮಗೆ ಬೇಕಾದಂತೆ ಸೆಟ್ಮಾಡಬಹುದು.

ಈಗಾಗಲೇ ಕಳುಹಿಸಿದ ಮೆಸೇಜ್ ಡಿಲೀಟ್ ಮಾಡಿ

ನೀವು ಯಾರಿಗೋ ಕಳಿಸಬೇಕಾದ ಮೆಸೇಜನ್ನು ಇನ್ಯಾರಿಗೋ ಕಳಿಸಿದ್ದೀರೆಂದುಕೊಳ್ಳಿ. ಇಂತಹ ಸನ್ನಿವೇಶಗಳಲ್ಲಿ ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಗೆ ಮುಜುಗರ ತಪ್ಪಿದ್ದಲ್ಲ. ಆದರೆ ಟೆಲಿಗ್ರಾಮ್ ನಲ್ಲಿ ಈ ಮೆಸೇಜ್ ಅನ್ನು ನಿಮ್ಮ ಚ್ಯಾಟ್ ಬಾಕ್ಸ್ ನಿಂದಷ್ಟೇ ಅಲ್ಲ ಅದನ್ನು ಯಾರಿಗೆ ಕಳಿಸಿದ್ದೀರೋ ಅವರ ಚ್ಯಾಟ್ ಬಾಕ್ಸ್ ನಿಂದಲೂ ಅದನ್ನು ಡಿಲೀಟ್ ಮಾಡಬಹುದು.

ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ನೀವು ಡಿಲೀಟ್ ಮಾಡಲಿಚ್ಛಿಸುವ ಮೆಸೇಜ್ ಮೇಲೆ ಲಾಂಗ್ ಪ್ರೆಸ್ ಮಾಡಿ.ಆಗ ಬರುವ ಆಪ್ಶನ್ ಟ್ರೇ ಇಂದ ಡಿಲೀಟ್ ಆಪ್ಶನ್ ಚೂಸ್ ಮಾಡಿ. ಈಗ ನಿಮಗೆ ಆ ಮೆಸೇಜ್ ಅನ್ನು ನಿಮ್ಮ ಹಾಗೂ ಅದನ್ನು ಸ್ವೀಕರಿಸಿದವರ ಚ್ಯಾಟ್ ಬಾಕ್ಸ್ ನಿಂದ ಡಿಲೀಟ್ ಮಾಡುವ ಆಯ್ಕೆ ಸಿಗುತ್ತದೆ.

ವೀಡಿಯೋ ಮೆಸೇಜ್ ಕಳುಹಿಸಿ

ವೀಡಿಯೋ ಮೆಸೇಜ್ ಕಳುಹಿಸಿ

ವೀಡಿಯೋ ಮೆಸೇಜ್ ಕಳುಹಿಸುವ ಫೀಚರ್ ಬಹುತೇಕ ಎಲ್ಲಾ ಮೆಸೆಂಜರ್ ಗಳಲ್ಲೂ ಲಭ್ಯವಿದೆ. ಟೆಲಿಗ್ರಾಮ್ ಆಪ್ನಲ್ಲಿ ವೀಡಿಯೋ ಮೆಸೇಜ್ ಕಳುಹಿಸುವುದು ಹೀಗೆ. ಮೊದಲು ಚ್ಯಾಟ್ ವಿಂಡೋನಲ್ಲಿ ಟೆಕ್ಸ್ಟ್ ಬಾರ್ ಪಕ್ಕ ಇರುವ ಮೈಕ್ ಐಕಾನ್ ಮೇಲೆ ಕ್ಲಿಕ್ ಮಾಡಿ.ಆಗ ಮೈಕ್ ಐಕಾನ್ ಕ್ಯಾಮೆರಾ ಆಗಿ ಬದಲಾಗುತ್ತದೆ. ಇದರ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ನೀವು ವೀಡಿಯೋ ರೆಕಾರ್ಡ್ ಮಾಡುವುದಲ್ಲದೆ ಕೂಡಲೆ ಸೆಂಡ್ ಕೂಡ ಮಾಡಬಹುದು.

ಸೀಕ್ರೆಟ್ ಚ್ಯಾಟ್ ಮತ್ತು ಸೆಲ್ಫ್ ಡಿಸ್ಟ್ರಕ್ಟ್ ಟೈಮರ್

ಟೆಲಿಗ್ರಾಮ್ ಬಳಕೆದಾರರಿಗೆ ಅಗತ್ಯ ಪ್ರೈವೆಸಿ ಕೊಡಲು 'ಸೀಕ್ರೆಟ್ ಚ್ಯಾಟ್' ಎಂಬ ಫೀಚರ್ ನೀಡಿದೆ.ಈ ಫೀಚರ್ ಬಳಸಲು ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಚ್ಯಾಟ್ ಮಾಡಲಿಚ್ಛಿಸುವ ಕಾಂಟ್ಯಾಕ್ಟ್ ನ ಮೇಲೆ ಟ್ಯಾಪ್ ಮಾಡಿದರೆ 'ಸ್ಟಾರ್ಟ್ ಸೀಕ್ರೇಟ್ ಚ್ಯಾಟ್' ಎಂಬ ಆಯ್ಕೆ ಸಿಗುತ್ತದೆ.ನೀವು ಈ ಅಪ್ಶನ್ ಆಯ್ಕೆ ಮಾಡಿದರೆ ನೀವಾಗಲಿ ನೀವು ಚ್ಯಾಟ್ ಮಾಡುತ್ತಿರುವ ವ್ಯಕ್ತಿಯಾಗಲಿ ಚ್ಯಾಟ್ ನ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ.

ಚ್ಯಾಟ್ ಬಾಕ್ಸ್ ಮೇಲೆ 'ಸೆಲ್ಫ್ ಡಿಸ್ಟ್ರಕ್ಟ್' ಆಪ್ಶನ್ ಸೆಟ್ ಮಾಡುವುದರಿಂದ ನಿಗದಿತ ಸಮಯದ ನಂತರ ಚ್ಯಾಟ್ ಬಾಕ್ಸ್ ನಿಂದ ಎಲ್ಲಾ ಮೆಸೇಜ್ಗಳು ತನ್ನಿಂತಾನೇ ಡಿಲೀಟ್ ಆಗುತ್ತದೆ.

ಟೆಲಿಗ್ರಾಮ್ ಲಾಕ್ ಮಾಡಿ

ಟೆಲಿಗ್ರಾಮ್ ಲಾಕ್ ಮಾಡಿ

ಟೆಲಿಗ್ರಾಮ್ ಮೂಲಕ ಗೌಪ್ಯ ವಿಷಯಗಳನ್ನು ಕಳುಹಿಸುವವರ ಪ್ರೈವೆಸಿಗಾಗಿ ಲಾಕ್ ಫೀಚರ್ ಇದೆ.ಈ ಫೀಚರ್ ಮೂಲಕ ನೀವು ಟೆಲಿಗ್ರಾಮ್ ಆಪ್ ಅನ್ನು ಲಾಕ್ ಮಾಡಬಹುದು.ನಂತರ ಪ್ರತಿ ಬಾರಿ ಟೆಲಿಗ್ರಾಮ್ ಆಪ್ ತೆರೆಯಲು ನೀವು ಪಾಸ್ಕೋಡ್ ಅಥವಾ ನಿಮ್ಮ ಬೆರಳಚ್ಚು ಉಪಯೋಗಿಸಿ ಅಪ್ಅನ್ನು ಅನ್ಲಾಕ್ ಮಾಡಬೇಕು.

ಇದನ್ನು ಬಳಸಲು ಸೆಟ್ಟಿಂಗ್ ಪ್ಯಾನೆಲ್ ನ 'ಪ್ರೈವೆಸಿ & ಸೆಕ್ಯೂರಿಟಿ' ಆಪ್ಶನ್ ಮೇಲೆ ಟ್ಯಾಪ್ ಮಾಡಿ.ಅಲ್ಲಿ ಕಾಣಸಿಗುವ 'ಸೆಕ್ಯುರಿಟಿ' ಟ್ಯಾಬ್ನಲ್ಲಿರುವ 'ಪಾಸ್ಕೋಡ್ ಲಾಕ್' ಮೇಲೆ ಕ್ಲಿಕ್ ಮಾಡಿ.ನಂತರ ನಿಮಗೆ ಬೇಕಾದ ಪಾಸ್ಕೋಡ್ ಸೆಟ್ ಮಾಡಿ. ನಂತರ ನಿಮಗೆ ಪಾಸ್ಕೊಡ್ ಎನೇಬಲ್ ಅಥವಾ ಡಿಸೇಬಲ್ ಮಾಡಲು ಟಾಗಲ್ ಸ್ವಿಚ್ ಕೂಡ ಕಾಣಸಿಗುತ್ತದೆ.ನಿಮ್ಮ ಅನುಕೂಲಕ್ಕಾಗಿ ಇದೇ ಫೀಚರ್ ನ ಐಕಾನ್ ಚ್ಯಾಟ್ ವಿಂಡೋಗಳ ನಡುವೆಯೂ ಕಾಣಸಿಗುತ್ತದೆ.

ಟೆಲಿಗ್ರಾಮ್ ಆಪ್ ನ ಇಷ್ಟೆಲ್ಲಾ ಫೀಚರ್ಗಳನ್ನು ತಿಳಿದ ಮೇಲೆ ಏಕೆ ಸುಮ್ಮನಿದ್ದೀರಿ. ತಡ ಮಾಡಬೇಡಿ. ಕೂಡಲೆ ನಿಮ್ಮ ಮೊಬೈಲ್ನಲ್ಲಿ ಟೆಲಿಗ್ರಾಮ್ ಇನ್ಸ್ಟಾಲ್ ಮಾಡಿ ಇನ್ನಷ್ಟು ಆಕರ್ಷಕ ಫೀಚರ್ಗಳನ್ನು ಅನುಭವಿಸಲು ತಯಾರಾಗಿ.

Best Mobiles in India

English summary
Telegram Messenger has several features including masks, app lock and notification LED and the app is available for Android and iOS devices with more than 100 million users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+