ನೀವು ಬೈಕ್ ಸವಾರಿ ಪ್ರಿಯರಾಗಿದ್ದರೆ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿ!!
ಈ ಮೊಬೈಲ್ ಆಪ್‌ಗಳು ಜನರಿಗೆ ಹೇಗೆಲ್ಲಾ ಸಹಾಯ ಮಾಡುತ್ತಿವೆ ಎಂಬ ಊಹೆ ಕೂಡ ಹಲವರಿಗೆ ಇಲ್ಲ. ಮೊದಲೆಲ್ಲಾ ಮೊಬೈಲ್‌ನಲ್ಲಿ ಚಾಟಿಂಗ್, ಸೋಶಿಯಲ್ ಮೀಡಿಯಾ, ಗೇಮ್ಸ್‌ಗಳಿಗೆ ಮಾತ್ರ ಸೀಮಿತವಾಗಿರುತ್ತಿದ್ದ ಆಪ್ಸ್ ಈಗ ಊಟ ಮಾಡುವುದನ್ನು ಹೇಳಿಕೊಡುವುದರಿಂದ ಶುರುವಾಗಿ, ಊಟ ಮಾಡಿದ ನಂತರ ಹೇಗೆ ಮಲಗಬೇಕು ಎಂಬುದನ್ನು ಸಹ ಹೇಳಿಕೊಡುತ್ತವೆ.
ಅಂದರೆ, ಪ್ರತಿಯೊಂದರ ಬಗ್ಗೆಯೂ ನಮಗೆ ಸಹಾಯ ಮಾಡಲು ಸಾವಿರಾರು ಆಪ್‌ಗಳು ಹುಟ್ಟಿವೆ. ಉದಾಹರಣೆಗೆ, ಬೈಕ್ ಚಾಲನೆ ಮಾಡುವವರಿಗೆ ಅಥವಾ ಬೈಕ್ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಲವಾರು ಅಪ್ಲಿಕೇಷನ್‌ಗಳಿವೆ. ಇವುಗಳು ಬೈಕ್ ಬಳಕೆದಾರರಿಗೆ ಸಹಾಯ ಮಾಡಲು ಶಕ್ತವಾಗಿವೆ ಎಂದರೆ ಇಂತಹ ಆಪ್‌ಗಳನ್ನು ನಾವೇಕೆ ಉಪಯೋಗಿಸಿಕೊಳ್ಳಬಾರದು?

ಹಾಗಾಗಿ, ಇಂದಿನ ಲೇಖನದಲ್ಲಿ ಬೈಕ್ ಸವಾರಿ ಪ್ರಿಯರಿಗೆ ಬೇಕಾದಂತಹ ಅತ್ಯುತ್ತಮ ಆಪ್‌ಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೆವೆ. ಈ ಆಪ್‌ಗಳು ಭಾರತದಲ್ಲೇ ಅತಿ ಹೆಚ್ಚು ಬಳಕೆಯಾಗುವ ಆಪ್‌ಗಳಾಗಿದ್ದು,ಇವುಗಳ ಸಹಾಯವನ್ನು ಬೈಕ್ ಚಾಲಕರು ಪಡೆಯಬಹುದು.! ಹಾಗಾದರೆ, ಬೈಕ್ ಚಾಲಕರ ನೆಚ್ಚಿನ ಆಪ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಫ್ಯೂಯಲ್ ಲಾಗ್
ಬೈಕ್ ಖರ್ಚು ಮಾಡುವ ಇಂಧನದ ಪ್ರಮಾಣವನ್ನು ಲೆಕ್ಕ ಹಾಕಲು ಸಹಾಯ ಮಾಡುವ ತಂತ್ರಾಂಶ ಇದು. ಇದರ ಜತೆ ನಿರ್ವಹಣಾ ವೆಚ್ಚ, ಪ್ರತಿಯೊಂದು ಪ್ರಯಾಣದಲ್ಲಿ ಆಗುವ ಖರ್ಚು, ಇನ್ಶುರೆನ್ಸ್ ಮತ್ತು ಟ್ಯಾಕ್ಸ್ ಇತ್ಯಾದಿ ಸಂಗತಿಗಳನ್ನು ಟ್ರ್ಯಾಕ್ ಮಾಡಿಟ್ಟುಕೊಂಡಿರುತ್ತದೆ. ಆಪ್‌ನ ಚಾರ್ಟ್‌ನಲ್ಲಿ ಒಂದು ಬಾರಿ ಮಾಹಿತಿ ಸಂಗ್ರಹಿಸಿಟ್ಟರೆ, ಸಮಯ ಬಂದಾಗ ಅದೇ ಸೂಚನೆ ಕೊಡುತ್ತದೆ. ಬೈಕ್ ಕೊಡುತ್ತಿರುವ ಮೈಲೇಜ್ ಹಾಗೂ ಒಟ್ಟು ನಿರ್ವಹಣಾ ವೆಚ್ಚ ಲೆಕ್ಕಾಚಾರ ಹಾಕಿ, ಅಗುತ್ತಿರುವ ಲಾಭ ನಷ್ಟದ ಸಂಗತಿಯನ್ನು ಇದು ತಿಳಿಸುತ್ತದೆ.

ಗೂಗಲ್ ಮ್ಯಾಪ್ಸ್
ಇಂದು ಗೂಗಲ್ ಮ್ಯಾಪ್ಸ್ ಬಳಸದೇ ಬೈಕು ಮತ್ತು ಕಾರು ಓಡಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಈ ಆಪ್ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ನ್ಯಾವಿಗೇಷನ್ ಗೈಡ್‌ನಲ್ಲಿ ಈ ಆಪ್ ಅನ್ನು ಮೀರಿಸಲು ಯಾವುದೇ ಆಪ್‌ಗೆ ಸಾಧ್ಯವಿಲ್ಲ. ಸಂಪೂರ್ಣ ಉಚಿತವಾಗಿರುವ ಈ ಅಪ್ಲಿಕೇಷನ್ ಜತೆಗೆ ಜಿಪಿಎಸ್ ಆಧಾರಿತ ಮ್ಯಾಪ್, ತ್ರಿಡಿ ವೀಕ್ಷಣೆ ಅವಕಾಶವೂ ಇದೆ. ಇದರಲ್ಲಿ 'ಸ್ಟ್ರೀಟ್ ವ್ಯೂ' ಎನ್ನುವ ಆಯ್ಕೆಯಿದ್ದು, ಮ್ಯಾಫ್ಸ್ ಅನ್ನು ಓಪನ್ ಮಾಡಿಕೊಂಡು ಆಯ್ಕೆ ತೆಗೆದುಕೊಂಡರೆ, ಯಾವುದೇ ಪ್ರದೇಶದ 360 ಡಿಗ್ರಿ ನಕ್ಷೆ ದೊರೆಯುತ್ತದೆ.

ಸ್ಪೀಡ್ ವ್ಯೂ ಆಪ್
ಮೊಬೈಲ್‌ಗೆ ನೇರವಾಗಿ ವಾಹನ ಓಡುತ್ತಿರುವ ವೇಗ, ತಲುಪಿದ ಜಾಗ, ಗುರಿ ತಲುಪಲು ಬೇಕಾಗುವ ಸಮಯ ಮತ್ತಿತರ ಸಂಗತಿಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಆಪ್ ಇದಾಗಿದೆ. ಇದರಲ್ಲಿ ಬಿಲ್ಡ್‌ಇನ್ ಜಿಪಿಎಸ್ ವ್ಯವಸ್ಥೆ ಇದ್ದು, ಬೈಕು ಮತ್ತು ಕಾರು ಸಾಗಿದ ಗರಿಷ್ಠ ವೇಗ, ಸರಾಸರಿ ವೇಗ ಹಾಗೂ ಸಾಗಿದ ದೂರವನ್ನು ದಾಖಲಿಸಿಕೊಳ್ಳುತ್ತದೆ.ಈ ಆಪ್‌ನ ಒಳಗೆ ಇರುವ ಮಾಹಿತಿಯನ್ನು ಜಿಪಿಎಕ್ಸ್ ಫಾರ್ಮಾಟ್‌ನಲ್ಲಿ ಬೇರೆ ಕಡೆ ವರ್ಗಾಯಿಸಿಟ್ಟುಕೊಳ್ಳಬಹುದಾಗಿದೆ.

ಐ ಆಂಡ್ರಾಯ್ಡ್
ನಿಮ್ಮ ಮೊಬೈಲ್ ಅನ್ನೇ ನಿಮ್ಮ ಬೈಕ್‌ನ ಸುರಕ್ಷಿತ ಸಾಧನವನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದಾದ ಆಪ್ ಇದು. ಇದರ ಕ್ಯಾಮೆರಾ, ಜಿಪಿಎಸ್ ಮತ್ತು ಸೆನ್ಸರ್‌ಗಳ ಮೂಲಕ ಬೈಕು ಸಾಗಬೇಕಾದ ವೇಗ, ಎದುರಿಗೆ ಇರುವ ಅಪಾಯವನ್ನು ತಿಳಿದುಕೊಳ್ಳಬಹುದು. ಅಲ್ಲದೆ ನೀವು ಬೇರೆ ವಾಹನದ ಹತ್ತಿರಕ್ಕೆ ಬಂದರೆ ಸೂಚನೆ ನೀಡುತ್ತದೆ. ಅಲ್ಲದೆ, ನೀವು ಹೋದ ಜಾಗ, ಬೈಕ್ ನಿಲ್ಲಿಸಿದಜಾಗ ಮತ್ತಿತರ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಹಾಗಾಗಿ, ಇದು ಕೂಡ ಬೆಸ್ಟ್ ಆಪ್.

ಸಿರಿ ಸ್ಪೀಕ್ ಟು ಮಿ
ಇದು 'ಗೂಗಲ್ ವಾಯ್ಸ್ ಆಕ್ಷನ್' ಮಾದರಿಯಲ್ಲಿ ಕೆಲಸ ಮಾಡುವ ಆಪ್ ಇದಾಗಿದೆ. ಬೈಕ್ ಚಾಲನೆ ಮಾಡುವಾಗ ಸಹವರ್ತಿಯಾಗಿ ಇಟ್ಟುಕೊಳ್ಳಬಹುದು. ಮೊಬೈಲ್ ಸ್ಕ್ರೀನ್ ಅನ್ನು ನೋಡದೆ, ಮೆಸೇಜ್ ಓದಬಹುದು. ಇ- ಮೇಲ್ ಕಳುಹಿಸಬಹುದು, ಟೆಕ್ಸ್ಟ್ ಮೆಸೇಜ್ ಕಳುಹಿಸಬಹುದು. ಇದಕ್ಕೆಲ್ಲ ನೆರವಾಗುವುದು 'ಸಿರಿ' ಆಪಲ್ ಫೋನ್‌ಗಳಲ್ಲಿ ಬಳಸುವ ತಂತ್ರಾಂಶ ಇದಾಗಿರುವುದರಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಉಪಯೋಗವಿಲ್ಲ.

ಟ್ರಾಫಿಕ್ ಫೈನ್ಸ್ ಇನ್ ಇಂಡಿಯಾ
ಭಾರತದಲ್ಲಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡುವವರಿಗಿಂತ ಉಲ್ಲಂಘನೆ ಮಾಡುವವರೇ ಜಾಸ್ತಿ. ಹಾಗಾಗಿ, ಪ್ರತಿ ತಪ್ಪಿಗೆ ಆರ್‌ಟಿಒ ಅಧಿಕಾರಿಗಳು ಅಥವಾ ಟ್ರಾಫಿಕ್ ಪೊಲೀಸರು ಎಷ್ಟು ದಂಡ ವಿಧಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಾಗಿ, ಆ ಮಾಹಿತಿಯನ್ನು ಟ್ರಾಫಿಕ್ ಫೈನ್ಸ್ ಇನ್ ಇಂಡಿಯಾ ಆಪ್ ನೀಡುತ್ತದೆ. ಈ ಆಪ್‌ನ ಮತ್ತೊಮದು ವಿಶೇಷವೆಂದರೆ, ಈ ಆಪ್ ಚಾಲಕನೊಬ್ಬ ಮಾಡುವ ಪ್ರತಿ ತಪ್ಪಿಗೆ ಯಾವ ಸೆಕ್ಷ ನ್ ಮೇಲೆ ದಂಡ ವಿಧಿಸಬಹುದು ಎಂಬುದನ್ನು ಸಹ ತಿಳಿಸುತ್ತದೆ.


Click it and Unblock the Notifications