ಕಿಂಬೋ ಆಪ್‌ ಹಿಂದಿರುವ ಶಕ್ತಿ ಬಾಬಾ ರಾಮ್‌ದೇವ್ ಅಲ್ಲ, ಬದಲಿಗೆ ಓರ್ವ ಯಶಸ್ವಿ ಮಹಿಳೆ..!

|

ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಶುರು ಮಾಡಿರುವ ಬಾಬಾ ರಾಮ್‌ದೇವ್ ಪತಾಂಜಲಿ 'ಕಿಂಬೋ' ಆಪ್, ಬಳಕೆದಾರರಿಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಮಾರುಕಟ್ಟೆಯಲ್ಲಿ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆಪ್ ಮೇಸೆಜಿಂಗ್ ಆಪ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಲಾಂಚ್ ಆಗಲಿರುವ ರಾಮ್‌ದೇವ್ ಪತಾಂಜಲಿ 'ಕಿಂಬೋ' ಆಪ್ ನಿರ್ಮಾಣದ ಹಿಂದಿರುವ ಶಕ್ತಿಯ ಕುರಿತ ಮಾಹಿತಿಯೂ ಇದಲ್ಲಿದೆ.

ಕಿಂಬೋ ಆಪ್‌ ಹಿಂದಿರುವ ಶಕ್ತಿ ಬಾಬಾ ಅಲ್ಲ, ಬದಲಿಗೆ ಓರ್ವ ಯಶಸ್ವಿ ಮಹಿಳೆ..!

ಹಿಂದೆ ಟೆಕ್ ದೈತ್ಯ ಕಂಪನಿಗಳಾದ ಗೂಗಲ್, ಯಾಹೂ ಮತ್ತು ಒರಾಕಲ್ ನಂತಹ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡಿದ ಅಮೆರಿಕಾದ ಸಾಫ್ಟ್‌ವೇರ್ ಇಂಜಿನಿಯರ್ ಆದಿತಿ ಕಮಲ್ ಎನ್ನುವವರು ಪತಾಂಜಲಿ 'ಕಿಂಬೋ' ಆಪ್ ಹಿಂದಿರುವ ಶಕ್ತಿ ಎನ್ನಲಾಗಿದೆ. ಈಕೆಯ ಮಾರ್ಗದರ್ಶನದಲ್ಲಿಯೇ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಪತಾಂಜಲಿ 'ಕಿಂಬೋ' ಆಪ್ ಸಿದ್ದವಾಗಿದೆ. ಹೊಸ ಆಪ್‌ ನಿರ್ಮಾಣದ ಹಿಂದಿನ ಸತ್ಯ ಸಂಗತಿ ಇಲ್ಲಿದೆ.

ಈ ಹಿಂದೆಯೇ ಬಂದಿತ್ತು:

ಈ ಹಿಂದೆಯೇ ಬಂದಿತ್ತು:

ಕಳೆದ ಮೇ ತಿಂಗಳಿನಲ್ಲಿಯೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಪತಾಂಜಲಿ 'ಕಿಂಬೋ' ಆಪ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ ಎನ್ನುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಅದನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಅದನ್ನು ಸರಿಪಡಿಸಿ ಮತ್ತೆ ಮಾರುಕಟ್ಟೆಗೆ ಲಾಂಚ್ ಮಾಡಿದೆ.

ಭಾರತಕ್ಕಾಗಿ ನಿರ್ಮಾಣ:

ಭಾರತಕ್ಕಾಗಿ ನಿರ್ಮಾಣ:

ಭಾರತೀಯ ಮೂಲದವರಾಗಿ ಅಮೆರಿಕಾದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಇಂಜಿನಿಯರ್ ಆದಿತಿ ಕಮಲ್, ತಮ್ಮ ದೇಶಕ್ಕಾಗಿಯೇ ಆಪ್‌ವೊಂದನ್ನು ನಿರ್ಮಿಸ ಬೇಕು ಎನ್ನುವ ಕಾರಣಕ್ಕೆ ಕಿಂಬೋ' ಆಪ್ ಅನ್ನು ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಈ ಆಪ್ ನಿರ್ಮಾಣದ ಹಿಂದೆ ಅವರ ದೊಡ್ಡ ಮಟ್ಟದ ಶ್ರಮವನ್ನು ಮತ್ತು ಅನುಭವನ್ನು ಕಾಣಬಹುದಾಗಿದೆ.

ಗೂಗಲ್ ಹ್ಯಾಗ್‌ ಔಟ್:

ಗೂಗಲ್ ಹ್ಯಾಗ್‌ ಔಟ್:

ಕಂಪ್ಯೂಟರ್ ಸೈನ್ಸ್ ನಲ್ಲಿ MSc ಪಡೆದು, ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗೂಗಲ್ ಹ್ಯಾಂಗ್ ಔಟ್ ಆಪ್ ಟೀಮ್ ಅನ್ನು ನಿರ್ವಹಿಸಿದ ಅನುಭವನ್ನು ಹೊಂದಿರುವ ಸಾಫ್ಟ್‌ವೇರ್ ಇಂಜಿನಿಯರ್ ಆದಿತಿ ಕಮಲ್, ಕೆಲವು ದಿನಗಳ ಕಾಲ ಯಾಹೂ ಮೇಲ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವನ್ನು ಪಡೆದುಕೊಂಡಿದ್ದಾರೆ. ಇವುಗಳ ಸಹಾಯದಿಂದಲೇ ವಾಟ್ಸ್‌ಆಪ್ ಸೆಡ್ಡು ಹೊಡೆಯುವಂತಹ ಕಿಂಬೋ ಆಪ್‌ ನಿರ್ಮಿಸಿದ್ದಾರೆ.

ವಾಟ್ಸ್‌ಆಪ್ ಮೀರಿಸುವಂತಿದೆ:

ವಾಟ್ಸ್‌ಆಪ್ ಮೀರಿಸುವಂತಿದೆ:

ಕಿಂಬೋ ಆಪ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸಲಿದೆ. ವಾಟ್ಸ್‌ಆಪ್ ಅನ್ನು ಮೀರಿಸುವ ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳು ದೊರೆಯಲಿದ್ದು, ವಾಟ್ಸ್‌ಆಪ್‌ನಲ್ಲಿಯೂ ಇಲ್ಲದ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ.

ಸ್ವದೇಶಿ ಆಪ್‌:

ಸ್ವದೇಶಿ ಆಪ್‌:

ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ಸ್ವದೇಶಿ ವಸ್ತುಗಳನ್ನು ಲಾಂಚ್ ಮಾಡುತ್ತಿರುವ ಪತಾಂಜಲಿ, ಕಿಂಬೋ ಆಪ್‌ ಬಿಡುಗಡೆ ಮಾಡುವ ಮೂಲಕ ಸ್ವದೇಶಿ ಆಪ್‌ಗಳ ಸರಣಿಯನ್ನು ಆರಂಭಿಸಲು ಮುಂದಾಗಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ವಿದೇಶಿಯ ಕಂಪನಿಗಳ ಕಾಟ ತಡೆಯಲು ಇದೊಂದು ವೇದಿಕೆಯಾಗಲಿದೆ ಎನ್ನಲಾಗಿದೆ.

Best Mobiles in India

English summary
The Techie Behind Patanjali’s ‘WhatsApp-Killer’ App. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X