Home
Apps

ವಾಟ್ಸ್ ಆಪ್ ನಲ್ಲಿ ಇರುವ ಈ 12 ಫೀಚರ್ ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

By Gizbot Bureau

ಜಾಗತಿಕವಾಗಿ ಅತೀ ಹೆಚ್ಚು ಬಳಕೆ ಮಾಡುವ ಇನ್ಸೆಂಟ್ ಮೆಸೇಜಿಂಗ್ ವಿಧಾನವೆಂದರೆ ಅದು ವಾಟ್ಸ್ ಆಪ್. ತನ್ನ ಪ್ರಸಿದ್ಧತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದಿಲ್ಲೊಂದು ಹೊಸ ಫೀಚರ್ ಪ್ರತಿವಾರವೂ ವಾಟ್ಸ್ ಆಪ್ ಗೆ ಸೇರುತ್ತಲೇ ಇರುತ್ತದೆ. ಕೆಲವು ಫೀಚರ್ ಗಳು ನೀವು ವಾಟ್ಸ್ ಆಪ್ ಬಳಕೆ ಮಾಡುತ್ತಿರುವ ರೀತಿಯನ್ನೇ ಬದಲಿಸಬಹುದು.ಈ 12 ಫೀಚರ್ ಗಳನ್ನು ಮೊದಲು ಬೇಟಾ ಮೋಡ್ ನಲ್ಲಿ ಪರೀಕ್ಷೆ ಮಾಡಲಾಗಿತ್ತು. ನಾವಿಲ್ಲಿ ವಾಟ್ಸ್ ಆಪ್ ಬೇಟಾ ವರ್ಷನ್ ನಲ್ಲಿ ಲಭ್ಯವಿರುವ 12 ವಾಟ್ಸ್ ಆಪ್ ಫೀಚರ್ ಗಳನ್ನು ತಿಳಿಸುತ್ತಿದ್ದೇವೆ ಮತ್ತು ಇವುಗಳು ನಿಮ್ಮ ವಾಟ್ಸ್ ಆಪ್ ಶೈಲಿಯಲ್ಲಿ ಬದಲು ಮಾಡುವ ಸಾಧ್ಯತೆ ಇದೆ.

ನಿಮ್ಮ ಚಾಟ್ ಗಳನ್ನು ಇನ್ನಷ್ಟು ಸೆಕ್ಯೂರ್ ಆಗಿಡುವುದು

ನಿಮ್ಮ ಚಾಟ್ ಗಳನ್ನು ಇನ್ನಷ್ಟು ಸೆಕ್ಯೂರ್ ಆಗಿಡುವುದು

ಈಗಾಗಲೇ ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಆಂಡ್ರಾಯ್ಡ್ ಬೇಟಾ ವರ್ಷನ್ 2.19.83ಯಲ್ಲಿ ಇದೀಗ ಈ ಫೀಚರ್ ಕಾಣಿಸಿದ್ದು ಟೆಸ್ಟಿಂಗ್ ಕೆಲಸ ನಡೆಯುತ್ತಿದೆ.ಇದು ಬಳಕೆದಾರರಿಗೆ ತಮ್ಮ ಆಪ್ ನಲ್ಲಿ ಇನ್ನೊಂದು ಸೆಕ್ಯುರಿಟಿ ಲೇಯರ್ ನ್ನು ಸೇರಿಸುತ್ತದೆ ಮತ್ತು ನೀವು ಆಯ್ಕೆ ಮಾಡಿದ ಸೆಟ್ಟಿಂಗ್ ನ ಅನುಸಾರ ಮಾತ್ರವೇ ಚಾಟ್ ಗಳು ತೆರೆದುಕೊಳ್ಳುತ್ತದೆ. ಇದನ್ನು ಅನೇಬಲ್ ಮಾಡಿದ ನಂತರ ನೀವು ಯಾವಾಗ ದೃಢೀಕರಣದ ಫೀಚರ್ ಆಪ್ ನಲ್ಲಿ ಲಾಕ್ ಆಗಬೇಕು ಎಂಬುದನ್ನು ಸೆಟ್ ಮಾಡಬಹುದು. ಅದರಲ್ಲಿ ಕೂಡಲೇ, ಒಂದು ನಿಮಿಷಕ್ಕೆ, 10 ನಿಮಿಷದ ನಂತರ ಮತ್ತು 30 ನಿಮಿಷದ ನಂತರ ಎಂಬ ಆಯ್ಕೆಗಳಿರುತ್ತದೆ.

ಚಾಟ್ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಆಯ್ಕೆ ಬ್ಲಾಕ್ ಆಗುತ್ತದೆ

ಚಾಟ್ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಆಯ್ಕೆ ಬ್ಲಾಕ್ ಆಗುತ್ತದೆ

ವಾಟ್ಸ್ ಆಪ್ ನಲ್ಲಿ ಬರಲಿರುವ ಮತ್ತೊಂದು ದೊಡ್ಡ ಬದಲಾವಣೆ ಎಂದರೆ ಅದುವೇ ಚಾಟ್ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳುವುದಕ್ಕೆ ವಾಟ್ಸ್ ಆಪ್ ಅನುಮತಿಸುವುದಿಲ್ಲ. ಒಂದು ವೇಳೆ ಬಳಕೆದಾರರು ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಅನೇಬಲ್ ಮಾಡಿದ್ದಾರಾದರೆ ಯಾವುದೇ ವ್ಯಕ್ತಿಯು ವಾಟ್ಸ್ ಆಪ್ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ವಾಟ್ಸ್ ಆಪ್ ನ ಬೇಟಾ ವರ್ಷನ್ 2.19.106 ರಲ್ಲಿ ಈ ಫೀಚರ್ ಕಾಣಿಸಿಕೊಂಡಿದೆ.

ಎಷ್ಟು ನಿಯಮಿತವಾಗಿ ಮೆಸೇಜ್ ಗಳನ್ನು ನೀವು ಫಾರ್ವರ್ಡ್ ಮಾಡಿದ್ದೀರಿ? ವಾಟ್ಸ್ ಆಪ್ ನಲ್ಲಿ ನೀವು ಎಷ್ಟು ನಿಯಮಿತವಾಗಿ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡುತ್ತೀರಿ ಎಂಬ ಬಗ್ಗೆ ಕೂಡ ವಾಟ್ಸ್ ಆಪ್ ನಿಮಗೆ ಮಾಹಿತಿ ನೀಡಲಿದೆ. ಫಾರ್ವರ್ಡಿಂಗ್ ಇನ್ಫೋ ಟ್ಯಾಬ್ ಮೂಲಕ ಬಳಕೆದಾರರು ತಮಗೆ ಬಂದ ಫಾರ್ವರ್ಡ್ ಮೆಸೇಜ್ ಎಷ್ಟು ಬಾರಿ ಫಾರ್ವರ್ಡ್ ಆಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದು ವಾಟ್ಸ್ ಆಪ್ ನ ಬೇಟಾ ವರ್ಷನ್ 2.19.97 ನಲ್ಲಿ ಕಾಣಿಸಿಕೊಂಡಿರುವ ಫೀಚರ್ ಆಗಿದೆ.

ವಾಟ್ಸ್ ಆಪ್ ಗೆ ಆಡಿಯೋ ಫೈಲ್ಸ್ ಸೆಂಡ್ ಮಾಡುವ ವಿಧಾನದಲ್ಲಿ ಬದಲಾವಣೆ ವಾಟ್ಸ್ ಆಪ್ ನ ಬೇಟಾ ವರ್ಷನ್ 2.19.89 ನಲ್ಲಿ ಈ ಫೀಚರ್ ಲಭ್ಯವಿದ್ದು ಆಡಿಯೋ ಫೈಲ್ಸ್ ಗಳನ್ನು ಸೆಂಡ್ ಮಾಡುವ ಮುನ್ನ ವಾಟ್ಸ್ ಆಪ್ ನಲ್ಲಿ ಪ್ಲೇ ಮಾಡುವುದಕ್ಕೆ ಅವಕಾಶವಿರುತ್ತದೆ.ಒಂದೇ ಬಾರಿಗೆ 30 ಆಡಿಯೋ ಫೈಲ್ಸ್ ಗಳನ್ನು ಸೆಂಡ್ ಮಾಡಲು ಅನುವು ಮಾಡುತ್ತದೆ.

ಉತ್ತಮ ವಿಸಿಬ್ಲಿಟಿಗಾಗಿ ಡಾರ್ಕ್ ಮೋಡ್

ಉತ್ತಮ ವಿಸಿಬ್ಲಿಟಿಗಾಗಿ ಡಾರ್ಕ್ ಮೋಡ್

ವಾಟ್ಸ್ ಆಪ್ ನಲ್ಲಿ ಬಹಳ ಕುತೂಹಲದಿಂದ ಕಾಯುತ್ತಿರುವ ಫೀಚರ್ ಡಾರ್ಕ್ ಮೋಡ್. ಈಗಾಗಲೇ ಬೇಟಾ ವರ್ಷನ್ 2.19.87 ನಲ್ಲಿ ಇದು ಲಭ್ಯವಿದೆ. ವಾಟ್ಸ್ ಆಪ್ ನ ಬೇರೆಬೇರೆ ವಿಂಡೋಗಳಲ್ಲಿ ಈ ಮೋಡ್ ನ್ನು ಗಮನಿಸಬಹುದು ಪ್ರಮುಖ ಸೆಟ್ಟಿಂಗ್ಸ್, ಅಕೌಂಟ್ ಸೆಟ್ಟಿಂಗ್ಸ್, ಚಾಟ್ ಸೆಟ್ಟಿಂಗ್ಸ್,ನೋಟಿಫಿಕೇಷನ್ ಸೆಟ್ಟಿಂಗ್ಸ್ ಮತ್ತು ಡಾಟಾ, ಸ್ಟೋರೇಜ್ ಯ್ಯೂಸೇಜ್ ಸೆಟ್ಟಿಂಗ್ಸ್ ಗಳ ವಿಂಡೋಗಳಲ್ಲೂ ಡಾರ್ಕ್ ಮೋಡ್ ಕಾರ್ಯ ನಿರ್ವಹಿಸುತ್ತದೆ.

ವಾಯ್ಸ್ ಮೆಸೇಜ್ ಗಳ ಸ್ವಯಂಚಾಲಿತ ಪ್ಲೇ ಗೆ ಅವಕಾಶ

ವಾಯ್ಸ್ ಮೆಸೇಜ್ ಗಳ ಸ್ವಯಂಚಾಲಿತ ಪ್ಲೇ ಗೆ ಅವಕಾಶ

ಒಂದಾದ ಮೇಲೆ ಒಂದರಂತೆ ವಾಟ್ಸ್ ಆಪ್ ವಾಯ್ಸ್ ಮೆಸೇಜ್ ಗಳು ಒಂದು ವಾಯ್ಸ್ ಮೆಸೇಜ್ ನ್ನು ಪ್ಲೇ ಮಾಡಿದ ನಂತರ ಉಳಿದವು ಸ್ವಯಂಚಾಲಿತವಾಗಿ ಪ್ಲೇ ಆಗುವ ಆಯ್ಕೆ ವಾಟ್ಸ್ ಆಪ್ ನಲ್ಲಿ ಲಭ್ಯವಾಗತ್ತದೆ. ಅಂದರೆ ಪ್ರತಿಯೊಂದು ವಾಯ್ಸ್ ಮೆಸೇಜ್ ನ್ನು ಬಳಕೆದಾರರು ಪ್ಲೇ ಮಾಡುವುದಕ್ಕಾಗಿ ಕ್ಲಿಕ್ಕಿಸುತ್ತಲೇ ಇರುವ ಅಗತ್ಯವಿಲ್ಲ.ವಾಟ್ಸ್ ಆಪ್ ನ ಆಂಡ್ರಾಯ್ಡ್ ಬೇಟಾ ವರ್ಷನ್ 2.19.86 ನಲ್ಲಿ ಈಫೀಚರ್ ಈಗಾಗಲೇ ಲಭ್ಯವಿದೆ..

ವಾಟ್ಸ್ ಆಪ್ ಒಳಗೆ ಮಲ್ಟಿಪಲ್ ಆಪ್ಸ್ ಗಳನ್ನು ಬಳಸುವುದಕ್ಕೆ ಸಾಧ್ಯ

ಈ ಫೀಚರ್ ಕೂಡ ಆಂಡ್ರಾಯ್ಡ್ ನ ಬೇಟಾ ವರ್ಷನ್ 2.19.86 ನಲ್ಲಿ ಕಾಣಬಹುದು.ಯುಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಇತರೆ ಆಪ್ ಗಳನ್ನು ವಾಟ್ಸ್ ಆಪ್ ಕ್ಲೋಸ್ ಮಾಡದೆಯೂ ಸ್ಟ್ರೀಮ್ ಮಾಡಿ ವೀಡಿಯೋ ನೋಡುವುದಕ್ಕೆ ಅವಕಾಶ ನೀಡುತ್ತದೆ.

ವಾಟ್ಸ್ ಆಪ್ ನಲ್ಲಿ ಲಿಂಕ್ ಓಪನ್ ಮಾಡುವುದು ಮತ್ತಷ್ಟು ಸುಲಭವಾಗಲಿದೆ. ಇನ್-ಆಪ್ ಬ್ರೌಸರ್ ನ್ನು ಬಿಡುಗಡೆಗೊಳಿಸುವ ಬಗ್ಗೆ ವಾಟ್ಸ್ ಆಪ್ ಚಿಂತಿಸಿದೆ. ಇದು ಬಳಕೆದಾರರು ಯಾವುದೇ ಲಿಂಕ್ ತೆರೆಯುವುದಕ್ಕೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಈ ಬ್ರೌಸರ್ ನೀವು ಆಯ್ಕೆ ಮಾಡಿದ ಲಿಂಕ್ ಸೇಫ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ತಿಳಿಸುತ್ತದೆ. ವಾಟ್ಸ್ ಆಪ್ ನ ಬೇಟಾ ವರ್ಷನ್ 2.19.74 ನಲ್ಲಿ ಇದು ಕಾಣಿಸಿದೆ.

ವಾಟ್ಸ್ ಆಪ್ ಸ್ಟಿಕ್ಕರ್ ಗಳು ಇನ್ನಷ್ಟು ಬೆಟರ್ ಆಗುತ್ತದೆ

ವಾಟ್ಸ್ ಆಪ್ ಸ್ಟಿಕ್ಕರ್ ಗಳು ಇನ್ನಷ್ಟು ಬೆಟರ್ ಆಗುತ್ತದೆ

ಅನಿಮೇಟೆಡ್ ಸ್ಟಿಕ್ಕರ್ ಗಳು ವಾಟ್ಸ್ ಆಪ್ ನಲ್ಲಿ ಲಭ್ಯವಾಗುತ್ತದೆ. ಈ ಸ್ಟಿಕ್ಕರ್ ಗಳನ್ನು ಸದ್ಯ ಲಭ್ಯವಿರುವ ಸ್ಟಿಕ್ಕರ್ ಗಳಲ್ಲಿ ಸೇರಿಸಬಹುದು. ಇದು ಈಗಾಗಲೇ ಆಂಡ್ರಾಯ್ಡ್,ಐಓಎಶ್ ಮತ್ತು ವೆಬ್ ಮೂರೂ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕಾಣಿಸಿಕೊಂಡಿದೆ.

ಚಾಟ್ ಹೈಡ್ ಮಾಡುವಿಕೆ ಇನ್ನಷ್ಟು ಸರಳವಾಗುತ್ತದೆ

ಹೊಸದಾಗಿ ಮತ್ತೊಂದು ಆಯ್ಕೆಯನ್ನು ಸೇರಿಸುವ ಬಗ್ಗೆ ಈಗಾಗಲೇ ವಾಟ್ಸ್ ಆಪ್ ಕೆಲಸ ಮಾಡುತ್ತಿದ್ದು ನೀವು ಹೊಸ ಮೆಸೇಜ್ ಆರ್ಕೈವ್ ಆದಾಗ ಚಾಟ್ ಗಳು ಅನ್ ಆರ್ಕೈವ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಇದರಲ್ಲಿ ಕಂಟ್ರೋಲ್ ನೀಡಲಾಗುತ್ತದೆ.ಸದ್ಯ ನೀವು ಚಾಟ್ ಆರ್ಕೈವ್ ಮಾಡಿದಾಗ ಹೊಸ ಮೆಸೇಜ್ ರಿಸೀವ್ ಆದಾಗ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಆರ್ಕೈವ್ ಆಗಿರುವ ಚಾಟ್ ನ್ನು ಅನ್ ಆರ್ಕೈವ್ ಮಾಡಿಬಿಡುತ್ತದೆ. ಹಾಗಾಗಿ ಹೊಸ ಫೀಚರ್ ಸದ್ಯ ವಾಟ್ಸ್ ಆಪ್ ನ ಬೇಟಾ ವರ್ಷನ್ 2.19.101 ನಲ್ಲಿ ಲಭ್ಯವಿದೆ.

ನೀವು ರಿಸೀವ್ ಮಾಡಿದ ಇಮೇಜ್ ಫೇಕ್ ಅಥವಾ ರಿಯಲ್ ಎಂದು ತಿಳಿಯುವುದಕ್ಕೆ ವಾಟ್ಸ್ ಆಪ್ ಸಹಾಯ

ವಾಟ್ಸ್ ಆಪ್ ಬೇಟಾ ವರ್ಷನ್ 2.19.73 ನಲ್ಲಿ ಈ ಫೀಚರ್ ಲಭ್ಯವಿದೆ.ನಿಮಗೆ ಕಳುಹಿಸಲಾಗಿರುವ ಇಮೇಜ್ ಗಳನ್ನು ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವುದಕ್ಕೆ ಇದು ಅವಕಾಶ ನೀಡುತ್ತದೆ ಮತ್ತು ನೀವು ಪಡೆದ ಇಮೇಜ್ ಅಥವಾ ವೀಡಿಯೋ ಮಾಹಿತಿ ನಿಜವೇ ಅಥವಾ ಸುಳ್ಳೇ ಎಂಬುದನ್ನು ಪರೀಕ್ಷಿಸುವುದಕ್ಕೆ ಅವಕಾಶ ನೀಡುತ್ತದೆ.

ಎಮೋಜಿಗಳಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳು

ವಾಟ್ಸ್ ಆಪ್ ನಲ್ಲಿ ಸದ್ಯ ಲಭ್ಯವಿರುವ ಎಮೋಜಿ ಸ್ಟಿಕ್ಕರ್ ಗಳು ರಿಪ್ಲೇಸ್ ಆಗುತ್ತವೆ ಮತ್ತು ಡೂಡಲ್ ಪಿಕ್ಕರ್ ಲಭ್ಯವಾಗಿ ಅಧಿಕೃತ ಎಮೋಜಿಗಳ ಆಯ್ಕೆಗೆ ಅವಕಾಶ ಸಿಗುತ್ತದೆ.ಅಂದರೆ ಇನ್ನೂ ಅಧಿಕ ಎಮೋಜಿಗಳ ಆಯ್ಕೆ ನಿಮಗೆ ಲಭ್ಯವಾಗುತ್ತದೆ. ಈ ಫೀಚರ್ ಈಗಾಗಲೇ ಆಂಡ್ರಾಯ್ಡ್ ಬೇಟಾ ವರ್ಷನ್ 2.19.110 ನಲ್ಲಿ ಲಭ್ಯವಿದೆ.

Best Mobiles in India

English summary
These 12 WhatsApp features will transform the user experience
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+