Home
Apps

ಪೋಟೋ ಗಾತ್ರ ಕುಗ್ಗಿಸಲು ಐಫೋನ್ ಬಳಕೆದಾರರಿಗೆ ಈ ಆಪ್‌ಗಳು ಅನುಕೂಲ..!

By Gizbot Bureau

ನೀವು ನಿಮ್ಮ ಕುಟುಂಬದವರೊಡನೆ ಅಥವಾ ಸ್ನೇಹಿತರೊಡನೆ ಹೊರಗಡೆ ಸುತ್ತಾಡಲು ಹೋದಾಗ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳೋದು ಸರ್ವೇಸಾಮಾನ್ಯ. ಎಲ್ಲಾ ಫೋಟೋಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಬೇಕು ಎಂದು ಬಯಸುವುದೇನೋ ಸರಿ. ಆದರೆ ಅದಕ್ಕೆ ನಿಮ್ಮ ಸ್ಮಾರ್ಟ್ ಫೋನ್ ಅವಕಾಶ ಕಲ್ಪಿಸಬೇಕಲ್ಲವೇ? ಪ್ರತಿ ಬಾರಿಯೂ ತೆಗೆದ ಎಲ್ಲಾ ಫೋಟೋಗಳನ್ನು ಹಾಗೆ ಸೇವ್ ಮಾಡುತ್ತಾ ಸಾಗಿದರೆ ಖಂಡಿತ ನಿಮ್ಮ ಮೊಬೈಲ್ ನಲ್ಲಿ ಜಾಗ ಸಾಕಾಗಲಿಕ್ಕಿಲ್ಲ. ಅದಕ್ಕಾಗಿ ಅನ್ಯ ಮಾರ್ಗಗಳನ್ನು ಅನುಸರಿಸಲೇ ಬೇಕಾಗುತ್ತದೆ. ಹಾಗಾದ್ರೆ ಏನು ಮಾಡುವುದು?

ಒಂದು ಸಿಂಪಲ್ ವಿಧಾನ ಎಂದರೆ ಇತರ ಜಾಗಗಳಲ್ಲಿ ಸೇವ್ ಮಾಡಿ ಇಡುವುದು. ಆದರೆ ಯಾವುದೇ ಜಾಗವೇ ಆದರೂ ಒಂದು ನಿರ್ಧಿಷ್ಟ ಮೊತ್ತದ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಸಮರ್ಥವಾಗಿರುತ್ತದೆ. ಹಾಗಾಗಿ ಇರುವ ಜಾಗದಲ್ಲಿ ಅತೀ ಹೆಚ್ಚು ಫೋಟೋಗಳನ್ನು ಸೇವ್ ಮಾಡಿ ಇಡುವುದು ಹೇಗೆ ಎಂಬ ಬಗ್ಗೆ ಆಲೋಚಿಸಬೇಕಾಗಿರುವುದು ಪ್ರಮುಖ ವಿಚಾರವಾಗಿದೆ.

ಪೋಟೋ ಗಾತ್ರ ಕುಗ್ಗಿಸಲು ಐಫೋನ್ ಬಳಕೆದಾರರಿಗೆ  ಈ ಆಪ್‌ಗಳು ಅನುಕೂಲ..!

ಇರುವ ಅಲ್ಪ ಜಾಗದಲ್ಲಿ ಹೆಚ್ಚು ಫೋಟೋಗಳನ್ನು ಸೇವ್ ಮಾಡಬೇಕು ಎಂದರೆ ನೀವು ಫೋಟೋ ಸೈಜ್ ನ್ನು ಕಡಿತ ಮಾಡಬೇಕು. ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ತೆಗೆದ ಫೋಟೋ ಕಡಿಮೆ ಎಂದರೂ 3ರಿಂದ 4 ಎಂಬಿ ಜಾಗವನ್ನು ಬಯಸುತ್ತದೆ. ಆದರೆ ಒಮ್ಮೆ ಫೋಟೋ ಕ್ಲಿಕ್ಕಿಸಿದ ನಂತರ ಅದರ ಗಾತ್ರವನ್ನು ಕುಗ್ಗಿಸುವುದಕ್ಕೆ ಸಾಕಷ್ಟು ವಿಫುಲ ಅವಕಾಶವಿದೆ. ಹೇಗೆ ಎಂದು ಪ್ರಶ್ನಿಸುತ್ತಿದ್ದೀರಾ? ಮುಂದೆ ಓದಿ.

ಐಫೋನ್ ಬಳಕೆದಾರರಿಗೆ ಸ್ಟೋರೇಜ್ ನ್ನು ಹಿಗ್ಗಿಸಿಕೊಳ್ಳುವ ಅವಕಾಶವಿರುವುದಿಲ್ಲ. ಹಾಗಾಗಿ ಅವರು ಈ ವಿಧಾನವನ್ನು ಅನುಸರಿಸಿ ಫೋಟೋ ಗಾತ್ರವನ್ನು ಕುಗ್ಗಿಸಿ ಇತರೆಡೆಗಳಲ್ಲಿ ಉದಾಹರಣೆಗೆ ಜೀಮೇಲ್ ಇಲ್ಲವೇ ಅಂತರ್ಜಾಲದ ಇತರೆ ಯಾವುದೇ ಜಾಗದಲ್ಲಿ ಸುರಕ್ಷಿತವಾಗಿ ಸೇವ್ ಮಾಡಿ ಇಟ್ಟುಕೊಳ್ಳುವುದು ಸೂಕ್ತವಾದದ್ದು. ಅದಕ್ಕಾಗಿ ಅವರಿಗೆ ಹಲವಾರು ಆಪ್ ಗಳು ಆಪ್ ಸ್ಟೋರ್ ನಲ್ಲಿ ಲಭ್ಯವಿದೆ. ಹೀಗೆ ಫೋಟ್ ರೀಸೈಜ್ ಮಾಡಿಕೊಡುವ ಕೆಲವು ಪ್ರಮುಖ ಐಓಎಸ್ ಆಪ್ ಗಳ ಬಗ್ಗೆ ನಾವಿಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ.

ಒಂದು ವೇಳೆ ನೀವು ಫೋಟೋವನ್ನು ವಾಟ್ಸ್ ಆಪ್ , ಇಮೇಲ್ ಅಥವಾ ಇತರೆ ಯಾವುದೇ ಮೂಲಗಳ ಮೂಲಕ ಮತ್ತೊಬ್ಬರಿಗೆ ಕಳುಹಿಸಬೇಕು ಎಂದಾದಲ್ಲಿ ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮೊಬೈಲ್ ಡಾಟಾ ಅಥವಾ ಅಂತರ್ಜಾಲ ಸಂಪರ್ಕವಿರುವುದನ್ನು ಖಾತ್ರಿಪಡಿಸಿಕೊಳ್ಳಿ.ಕೆಲವು ಐಓಎಸ್ ಆಪ್ ಗಳು ಫೋಟೋ ಮತ್ತು ವೀಡಿಯೋಗಳನ್ನು ಮರುಗಾತ್ರಗೊಳಿಸುವುದಕ್ಕೆ ಮತ್ತು ಅದನ್ನು ಸಾಮಾಜಿಕ ಜಾಲತಾಣದ ಯಾವುದೇ ಫ್ಲಾಟ್ ಫಾರ್ಮ್ ನಲ್ಲಿ ಕಳುಹಿಸುವುದಕ್ಕೆ ನೆರವು ನೀಡುತ್ತದೆ. ಆ ಕೆಲವು ಆಪ್ ಗಳ ವಿವರ ಇಲ್ಲಿದೆ ನೋಡಿ.

1) ಫೋಟೋ ಮರುಗಾತ್ರಗೊಳಿಸುವಿಕೆ(Reduce Photo Size) :

1) ಫೋಟೋ ಮರುಗಾತ್ರಗೊಳಿಸುವಿಕೆ(Reduce Photo Size) :

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಗಳಲ್ಲಿ ಇದಕ್ಕಾಗಿ ಹಲವಾರು ಆಪ್ ಗಳು ಲಭ್ಯವಿದೆ. ಇಮೇಲ್ ಮೂಲಕ ಅಥವಾ ಫೇಸ್ ಬುಕ್, ಟ್ವೀಟರ್ ಇಲ್ಲವೇ ಇನ್ಯಾವುದೇ ಕಡೆ ಅಪ್ ಲೋಡ್ ಮಾಡುವ ಮುನ್ನ ಫೋಟೋವನ್ನು ಕತ್ತರಿಸಿ ಹೊಸ ಆಕಾರ ನೀಡಲು ನೆರವಾಗುತ್ತದೆ. ಹೀಗೆ ಮರುಗಾತ್ರಗೊಳಿಸುವಿಕೆಯು ಮೂಲ ಫೋಟೋವಿನ ಮೇಲೆ ಯಾವುದೇ ಪರಿಣಾಮವನ್ನು ಉಂಟುಮಾಡದೇ ಇನ್ನಷ್ಟು ಚೆಂದಗಾಣಿಸಲು ನೆರವಾಗುತ್ತದೆ.

ಬಳಕೆ ಮಾಡುವುದು ಹೇಗೆ?: ನೀವು ಇಮೇಲ್ ಗೆ ಫೋಟೋವನ್ನು ಅಟ್ಯಾಚ್ ಮಾಡುವ ಮುನ್ನ ಅದರಲ್ಲಿ "Reduce Photo Size" ಆಯ್ಕೆ ಮಾಡಿ. ಮತ್ತು ಚಿತ್ರವನ್ನು ಟ್ಯಾಪ್ ಮಾಡಿ ಅದನ್ನು ಸ್ಕ್ರೀನ್ ಗೆ ತಕ್ಕ ಹಾಗೆ ಗಾತ್ರವನ್ನು ಸಣ್ಣದು ಮಾಡಿ.ಒಮ್ಮೆ ಆಯ್ಕೆ ಮಾಡಿದ ನಂತರ ಡನ್ ಬಟನ್ ನ್ನು ಹಿಟ್ ಮಾಡಿ.

2) ಚಿತ್ರವನ್ನು ಕುಗ್ಗಿಸುವಿಕೆ (Image Compress):

2) ಚಿತ್ರವನ್ನು ಕುಗ್ಗಿಸುವಿಕೆ (Image Compress):

ನಿಮ್ಮ ಆಯ್ಕೆಗೆ ತಕ್ಕಂತೆ ಫೋಟೋವನ್ನು ಯಾವುದೇ ಗಾತ್ರಕ್ಕೆ ಅಥವಾ ಯಾವುದೇ ಆಕಾರಕ್ಕೆ ಬದಲಿಸುವ ಅವಕಾಶವನ್ನು ಈ ಆಪ್ ನಿಮಗೆ ಒದಗಿಸಿಕೊಡುತ್ತದೆ.ಯಾವುದೇ ಅನುಪಾತ, ಎತ್ತರ, ಅಗಲಕ್ಕೆ ಫೋಟೋವನ್ನು ಕತ್ತರಿಸಲು ಇದು ಅನುವು ಮಾಡಿ ಕೊಡುತ್ತದೆ. ಇದರ ಇನ್ನೊಂದು ಪ್ರಮುಖ ಪ್ರಯೋಜನವೇನೆಂದರೆ ಹಲವಾರು ಫೋಟೋವನ್ನು ಒಂದೇ ಸಮಯಕ್ಕೆ ಮರುಆಕಾರಗೊಳಿಸಿಕೊಳ್ಳಲು ಈ ಆಪ್ ನಲ್ಲಿ ಅವಕಾಶವಿದೆ.

3) ಫೋಟೋ ರೀಸೈಜರ್ (Photo Resizer): 

3) ಫೋಟೋ ರೀಸೈಜರ್ (Photo Resizer): 

ಯಾಂಗ್ ಯೋಯಾನ್ ಚೋ ಅವರ ಫೋಟೋ ರಿಸೈಜರ್ ಆಪ್ ಮೂಲಕ ಯಾವುದೇ ಫೋಟೋವನ್ನು ಸುಲಭದಲ್ಲಿ ಮರು ಆಕಾರಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.ಇದರಲ್ಲಿ 8 ಪ್ರೀಡಿಫೈನ್ಡ್ ಅಂದರೆ ಮೊದಲೇ ನಿರ್ಧರಿತವಾಗಿರುವ ಆಕಾರಗಳಿರುತ್ತದೆ ಮತ್ತು ಒಂದು ಕಸ್ಟಮ್ ಸೈಜ್ ಮೋಡ್ ಕೂಡ ಇರುತ್ತದೆ. ನಿಮ್ಮ ಆಯ್ಕೆಗೆ ಅನುಗುಣವಾಗಿ ಫೋಟೋವನ್ನು ಸೈಜನ್ನು ಬದಲಾಯಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ.ಒಮ್ಮೆ ಫೋಟೋ ರೀಸೈಜ್ ಆದರೆ ಸ್ವಯಂಚಾಲಿತವಾಗಿ ಫೋಟೋ ನಿಮ್ಮ ಕ್ಯಾಮರಾ ವಿಭಾಗದಲ್ಲಿ ಸೇವ್ ಆಗುತ್ತದೆ.

4) ಇಮೇಜ್ ರೀಸೈಜ್  ಕನ್ವರ್ಟರ್ (Image resize Convertor):

4) ಇಮೇಜ್ ರೀಸೈಜ್ ಕನ್ವರ್ಟರ್ (Image resize Convertor):

ಈ ಆಪ್ ಕೂಡ ಸುಲಭದಲ್ಲಿ ನಿಮ್ಮ ಫೋಟೋವನ್ನು ರೀಸೈಜ್ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಸುಲಭದಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಕ್ಯಾಮರಾ ರೆಸಲ್ಯೂಷನ್ ನ ಆಧಾರದಲ್ಲಿ ಫೋಟೋದ ಮೂಲ ಅನುಪಾತವನ್ನು ಉಳಿಸಿಕೊಳ್ಳುವುದಕ್ಕೆ ರೆಸಲ್ಯೂಷನ್ ನ್ನು ಇದು ಸೂಚಿಸುತ್ತದೆ. ಒಮ್ಮೆ ಫೋಟೋ ಮರುಆಕಾರಗೊಳಿಸಿದ ನಂತರ ಸ್ವಯಂಚಾಲಿತವಾಗಿ ಪಿಕ್ಚರ್ ಅಥವಾ ಫೋಟೋ ರೀಸೈಜರ್ ಫೋಲ್ಡರ್ ನಲ್ಲಿ ಸೇವ್ ಆಗುತ್ತದೆ.

5)ಕಿರಿಹಾರಿ-ಸ್ಯಾನ್( Kirihari-San):

5)ಕಿರಿಹಾರಿ-ಸ್ಯಾನ್( Kirihari-San):

ಗುಣಮಟ್ಟ ಮತ್ತು ರೆಸಲ್ಯೂಷನ್ ಗೆ ಯಾವುದೇ ಕಳಂಕ ಬರದಂತೆ ದೊಡ್ಡ ಗಾತ್ರದ ಚಿತ್ರವನ್ನು ಸಣ್ಣಗಾತ್ರಕ್ಕೆ ಇಳಿಸುವುದಕ್ಕೆ ಈ ಆಪ್ ಬಹಳವಾಗಿ ಅನುಕೂಲಕರವಾಗಿದೆ. ಈ ಆಪ್ ಮೂಲಕ ಫೋಟೋವನ್ನು ಕೇವಲ ಮರುಗಾತ್ರಗೊಳಿಸುವಿಕೆ ಮಾತ್ರವಲ್ಲ ಬದಲಾಗಿ ಫೋಟೋ ಫಾರ್ಮೆಟ್ ನ್ನು ಕೂಡ ಬದಲಾಯಿಸುವುದಕ್ಕೆ ಇದರಲ್ಲಿ ಅವಕಾಶವಿದೆ. ಇದರಲ್ಲಿ ನೀವು ಮರುಆಕಾರಗೊಳಿಸಿದ ಫೋಟೋವನ್ನು ಮತ್ತೊಮ್ಮೆ ಪರೀಕ್ಷೆ ಮಾಡಲು ಅವಕಾಶವಿರುತ್ತದೆ ಅಂದರೆ ಪ್ರಿವ್ಯೂಗೆ ಅವಕಾಶವನ್ನು ಇದು ಕಲ್ಪಿಸುತ್ತದೆ ಮತ್ತು ಅದು ನಿಮಗೆ ಸರಿಯಾಗಿಲ್ಲ ಎಂದೆನಿಸಿದಲ್ಲಿ ರೀಡೂ ಮಾಡಲು ಅಂದರೆ ನೀವು ಹಿಂದೆ ಮಾಡಿದ ಬದಲಾವಣೆಯನ್ನು ತೆಗೆದುಹಾಕಿಕೊಳ್ಳಲು ಹಲವಾರು ಬಾರಿ ಅವಕಾಶ ನೀಡುತ್ತದೆ. ಮರುಗಾತ್ರಗೊಳಿಸಿದ ಚಿತ್ರವನ್ನು ಇತರೆ ಅಪ್ಲಿಕೇಷನ್ ಗಳಲ್ಲಿ ಅಥವಾ ಸರ್ವರ್ ಗಳಲ್ಲಿ ಎಫ್ ಟಿಪಿ ಮೂಲಕ ಹಂಚಿಕೊಳ್ಳಲು ಇದು ಸಹಾಯ ಮಾಡುತ್ತದೆ.

Best Mobiles in India

English summary
These 5 apps can solve 'biggest headache' of iPhone users. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+