Home
Apps

ಅತಿ ಹೆಚ್ಚು ಡೌನ್‌ಲೋಡ್‌ ಆಗಿ ದಾಖಲೆ ಸೃಷ್ಟಿಸುತ್ತಿರುವ ಆಪ್‌ಗಳು..!

By Gizbot Bureau

ಒಂದು ಆಪ್ ಬೇಕು ನಮ್ಮ ಮೊಬೈಲಿಗೆ ಅಂದ ಕೂಡಲೇ ಆಪ್ ಸ್ಟೋರ್ ಗೆ ಹೋಗುತ್ತೇವೆ. ಅಲ್ಲಿ ತಡಕಾಡಿ ಯಾವುದು ಅತೀ ಹೆಚ್ಚು ಡೌನ್ ಲೋಡ್ ಆಗಿದೆ, ಯಾವುದು ಅತೀ ಹೆಚ್ಚು ಜನಮನ್ನಣೆ ಪಡೆದಿದೆ.. ರಿವ್ಯೂ ಹೇಗಿದೆ? ಇತ್ಯಾದಿ ಎಲ್ಲವನ್ನೂ ಪರೀಕ್ಷಿಸುತ್ತೇವೆ ಮತ್ತು ನಂತರ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳುತ್ತೇವೆ.

ಆದರೆ ಈ ವಿಚಾರ ನಿಮಗೆ ತಿಳಿಯಬೇಕು ಅಂದರೆ ಆ ಅಂಕಿಅಂಶಗಳ ಪಟ್ಟಿಯನ್ನು ಯಾರೋ ಒಬ್ಬರು ಕಾಯ್ದುಕೊಳ್ಳುತ್ತಿರಬೇಕಲ್ಲವೇ? ಹೀಗೆ ಕಾಯ್ದಿರಿಸಿರುವ ಅಂಕಿಅಂಶಗಳ ಒಂದು ವಿವರವನ್ನು ಈಗ ಪ್ರಕಟಿಸಲಾಗಿದ್ದು ಅವುಗಳ ವಿವರ ಇಲ್ಲಿದ ನೋಡಿ.

ಅತಿ ಹೆಚ್ಚು ಡೌನ್‌ಲೋಡ್‌ ಆಗಿ ದಾಖಲೆ ಸೃಷ್ಟಿಸುತ್ತಿರುವ ಆಪ್‌ಗಳು..!

ಆಪ್ ಸ್ಟೋರ್ ನ 10 ನೇ ವಾರ್ಷಿಕೋತ್ಸವದ ಮುನ್ನವೇ, ಆಪ್ ಮಾರುಕ್ಟ್ಟೆ ಡಾಟಾ ಮತ್ತು ಒಳನೋಟಗಳನ್ನು ಒದಗಿಸುವವರಾದ ಆಪ್ ಅನ್ನಿ, ಆಪಲ್ ನ ಅಪ್ಲಿಕೇಷನ್ ಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಅಂಕಿಅಂಶಗಳ ವಿವರವನ್ನು ಬಿಡುಗಡೆ ಮಾಡಿದ್ದಾರೆ.

ಕಳೆದ 8 ವರ್ಷದಿಂದ ಜುಲೈ 2018 ರ ವರೆಗಿನ ಅಂಶಗಳು, ನಮಗೆ ಆಪ್ ಸ್ಟೋರ್ ನ ಬೆಳವಣಿಗೆಯ ಹಾದಿ, ಮತ್ತು ಅದಕ್ಕಿಂತ ಹೆಚ್ಚಾಗಿ ಮಹತ್ವವಾಗಿರುವುದೆಂದರೆ ಅತೀ ಹೆಚ್ಚು ಪ್ರಸಿದ್ಧಿ ಗಳಿಸಿದ, ಅತೀ ಹೆಚ್ಚು ಗಳಿಕೆಯನ್ನು ಮಾಡಿದ ಆಪ್ ಗಳ ವಿವರ, ಪ್ರಾದೇಶಿಕವಾಗಿ ನೀಡಲಾಗಿರುವ ಅಂಕಿಅಂಶಗಳೂ ಸೇರಿದಂತೆ ಇನ್ನೂ ಹಲವು ಮಾಹಿತಿಗಳನ್ನು ಈ ವಿವರವು ನೀಡಲಿದೆ.

ನಾವು ಅತೀ ಹೆಚ್ಚು ಡೌನ್ ಲೋಡ್ ಮಾಡಲಾದ ಆಪ್ ಮತ್ತು ಅತೀ ಹೆಚ್ಚು ಗಳಿಕೆ ಮಾಡಿದ ಆಪ್ ನ ವಿವರವನ್ನು ತಿಳಿಯುವುದಕ್ಕಿಂತ ಮುನ್ನ ಕೆಲವು ಕುತೂಹಲಕಾರಿ ಅಂಕಿಅಂಶಗಳನ್ನು ತಿಳಿದುಕೊಳ್ಳೋಣ.

ಗೂಗಲ್ ಪ್ಲೇ ಸ್ಟೋರ್ ನ ವಿಶ್ವದಾದ್ಯಂತ ಅಪ್ಲಿಕೇಷನ್ ಡೋನ್ ಲೋಡ್ ಮಾಡಿರುವುದರ ಪಾಲು ಶೇಕಡಾ 70 ರಷ್ಟು ಆಗಿದೆ. ಇದು ಆಪ್ ಸ್ಟೋರ್ ನ ಶೇಕಡಾ 30 ರಷ್ಟರ ಪಾಲಿಗೆ ಹೋಲಿಸಿದರೆ ದುಪ್ಪಟ್ಟು ಅಧಿಕ. ಆದರೂ ಆಪ್ ಸ್ಟೋರ್ ನ ನಿವ್ವಳ ಗ್ರಾಹಕರ ವೆಚ್ಚದಲ್ಲಿ 66 ಶೇಕಡಾ ದಷ್ಟು ಅಧಿಕವಾಗುತ್ತದೆ ಮತ್ತು ಗೂಗಲ್ ಪ್ಲೇ ಸ್ಟೋರ್ ನ ಶೇಕಡಾ 34 ರಷ್ಟು ಮೀರಿಸುವ ಪ್ರಮಾಣವನ್ನು ಹೊಂದಿದೆ.

ಅತಿ ಹೆಚ್ಚು ಡೌನ್‌ಲೋಡ್‌ ಆಗಿ ದಾಖಲೆ ಸೃಷ್ಟಿಸುತ್ತಿರುವ ಆಪ್‌ಗಳು..!

ಆಪ್ ಸ್ಟೋರ್ ನಿಂದ ಶೇಕಡಾ 31 ರಷ್ಟು ಆಪ್ ಗಳು ಗೇಮ್ ಅಕೌಂಟ್ ಗಳಾಗಿದೆ ಆದರೆ ನಿವ್ವಳ ಗ್ರಾಹಕರ ಖರ್ಚಿನ ಮೇಲೆ ಶೇಕಡಾ 75 ರಷ್ಟನ್ನು ತೊಡಗಿಸಬೇಕಾಗುತ್ತದೆ. 2017 ರ ಸಾಲಿನಲ್ಲಿ ಗೇಮ್ ಗಳಿಗಾಗಿ 257 ಬಿಲಿಯನ್ ಡಾಲರ್ ನ್ನು ಎಪಿಎಸಿ ಪ್ರದೇಶವು ಆದಾಯ ತೆರಿಗೆಗಾಗಿ ವಿನಿಯೋಗಿಸಲಾಗಿದೆ.

ಆಪ್ ಡೌನ್ ಲೋಡ್ ಮತ್ತು ಅದನ್ನು ಬಳಸುವ ವಿಷಯದಲ್ಲಿ ಯುಎಸ್ ಮೊದಲನೆ ಸ್ಥಾನದಲ್ಲಿ ನಿಂತರೆ ಚೀನಾ ಮತ್ತು ಜಪಾನ್ ನಂತರದ ಸ್ಥಾನವನ್ನು ಗಳಿಸಿಕೊಳ್ಳುತ್ತದೆ.

ಮೇ 2018 ರಲ್ಲಿ ಆಪ್ ಸ್ಟೋರ್ ನಲ್ಲಿ ಸುಮಾರು 2 ಮಿಲಿಯನ್ ಆಪ್ ಗಳಿವೆ. ಆಪ್ ಸ್ಟೋರ್ ಬಿಡುಗಡೆಗೊಂಡಾಗಿನಿಂದಲೂ ಒಟ್ಟು 4.5 ಮಿಲಿಯನ್ ಆಪ್ ಗಳು ಬಿಡುಗಡೆಗೊಂಡಿವೆ ಮತ್ತು ಅವುಗಳಲ್ಲಿ ಶೇಕಡಾ 77 ಆಟಕ್ಕೆ ಸಂಬಂಧಿಸಿದ ಆಪ್ ಗಳೇ ಆಗಿವೆ.

ಈಗ, ನಾವು ಡೌನ್ ಲೋಡ್ ಮತ್ತು ಜನಪ್ರೀಯತೆಯ ಅಂಕಿಅಂಶಗಳ ವಿಚಾರಕ್ಕೆ ಬರೋಣ.. ಆಪ್ ಸ್ಟೋರ್ ನಲ್ಲಿ ಫೇಸ್ಬುಕ್ ಯಾವಾಗಲೂ ಅತೀ ಹೆಚ್ಚು ಡೌನ್ ಲೋಡ್ ಕಂಡ ಆಪ್ ಆಗಿದೆ.ಜೊತೆಗೆ ಫೇಸ್ ಬುಕ್ ಮೆಸೇಂದರ್ ಮತ್ತು ಯುಟ್ಯೂಬ್.ಯುಟ್ಯೂಬ್ ಹೊರತು ಪಡಿಸಿ ಉಳಿದ 5 ಸ್ಥಾನಗಳೂ ಕೂಡ ಫೇಸ್ ಬುಕ್ ನ ಉತ್ಪನ್ನಗಳಿಗೆ ಮೀಸಲಾಗಿದೆ. ಇನ್ಸ್ಟಾಗ್ರಾಂ, ವಾಟ್ಸ್ ಆಪ್ ನಾಲ್ಕು ಮತ್ತು ಐದನೇ ಸ್ಥಾನವನ್ನು ಭರ್ತಿ ಮಾಡುತ್ತದೆ.

ಬಳಕೆದಾರ ಬಳಸಿದ ಆಧಾರವನ್ನು ಇಟ್ಟು ಹೇಳುವುದಾದರೆ, ನೆಟ್ ಫೀಕ್ಸ್ ಮೊದಲ ಸ್ಥಾನದಲ್ಲಿದ್ದರೆ ಸ್ಪಾಟಿಫೈ ಮತ್ತು ಪಂಡೋರಾ ರೇಡಿಯೋ ನಂತರದಲ್ಲಿರುತ್ತದೆ. ಟಿಂಡೋರಾ ಅಗ್ರ ಐದರ ಪಟ್ಟಿಯಲ್ಲಿರುವ ನಾನ್-ಸ್ಟ್ರೀಮಿಂಗ್ ಆಪ್ ಆಗಿದೆ. ಅದರ ನಂತರದಲ್ಲಿ ಟೆನ್ ಸೆಂಟ್ ವೀಡಿಯೋ ಇದೆ.

ಅತಿ ಹೆಚ್ಚು ಡೌನ್‌ಲೋಡ್‌ ಆಗಿ ದಾಖಲೆ ಸೃಷ್ಟಿಸುತ್ತಿರುವ ಆಪ್‌ಗಳು..!

ಗೇಮ್ ಗಳ ವಿಚಾರವನ್ನು ಪ್ರಸ್ತಾಪಿಸುವುದಾದರೆ, ಕ್ಯಾಂಡಿ ಕ್ರಷ್ ಸಾಗಾ ವಿಶ್ವದಾದ್ಯಂತ ಅತೀ ಹೆಚ್ಚು ಡೌನ್ ಲೋಡ್ ಕಂಡ ಐಓಎಸ್ ಗೇಮ್ ಆಗಿದೆ. ಇದರ ಜೊತೆಗೆ ಇನ್ನೆರಡು ಗೇಮ್ ಗಳಿದೆ. ಸಬ್ ವೇ ಸರ್ಫರ್ ಮ್ತು ಫ್ರೂಟ್ ನಿಂಜ.

ಆಪ್ ಸ್ಟೋರ್ ನಲ್ಲಿ ಅತೀ ಹೆಚ್ಚು ಆದಾಯ ಗಳಿಗೆ ಮಾಡಿದ ರ್ಯಾಂಕ್ ಗಳ ಪಟ್ಟಿಯಲ್ಲಿ ಕ್ಲ್ಯಾಷ್ ಆಫ್ ಕ್ಲ್ಯಾನ್ಸ್ ನಿಲ್ಲುತ್ತದೆ ಮತ್ತು ಇದು ಕ್ಯಾಂಡಿ ಕ್ರಷ್ ಸಾಗಾ ಮತ್ತು ಮಾಂನ್ಸರ್ ಸ್ಟ್ರೈಕ್ ನ್ನೂ ಕೂಡ ಹಿಮ್ಮೆಟ್ಟಿಸಿ ಮುಂಚೂಣಿಯಲ್ಲಿದೆ. ಮಲ್ಟಿಪ್ಲೇಯರ್ ಆಟಗಳು ಮತ್ತು ಆರ್ ಪಿಜಿಸ್ ಡೊಮೈನ್ ಟಾಪ್ 10 ರ ಲಿಸ್ಟ್ ನಲ್ಲಿ ಇವೆ, ಮತ್ತು ಇವು ಅತೀ ಹೆಚ್ಚು ಹೂಡಿಕೆ ಜೊತೆಗೆ ಖರೀದಿಯಲ್ಲೂ ಶ್ರೀಮಂತವಾಗಿದೆ.

2010 ಕ್ಕೆ ರ ವಿಚಾರವನ್ನು ಹೇಳುವುದಾದರೆ ಆಪ್ ಸ್ಟೋರ್ ನಿಂದ ಟಾಕಿಂಗ್ ಟಾಮ್ ಅತೀ ಹೆಚ್ಚು ಡೌನ್ ಲೋಡ್ ಆಗಿರುವ ಆಪ್ ಆಗಿದೆ. ಅದೇ 2018 ರಲ್ಲಿ ಶಾರ್ಟ್ ಫಾರ್ಮ್ ವೀಡಿಯೋ ಫ್ಲಾಟ್ ಫಾರ್ಮ್ ಮತ್ತು ಸಾಮಾಜಿಕ ಜಾಲತಾಣ ಟಿಕ್ ಟಾಕ್ ಅತೀ ಹೆಚ್ಚು ಡೌನ್ ಲೋಡ್ ಆದ ಆಪ್ ಗಳ ಪಟ್ಟಿಯನ್ನು ಸೇರುತ್ತಿದೆ.

ನಿಮಗೆ ಈ ಪಟ್ಟಿಯಲ್ಲಿ ಯಾವುದಾದರೂ ಆಶ್ಚರ್ಯ ಹುಟ್ಟಿಸುತ್ತಿದೆಯಾ? ನಿಮ್ಮ ಆಲ್ ಟೈಮ್ ಫೇವರೆಟ್ ಆಪ್ ಯಾವುದು ಎಂಬುದನ್ನು ನಮಗೂ ಕಮೆಂಟ್ ಮೂಲಕ ತಿಳಿಸಿ..

Best Mobiles in India

English summary
These Are the Most Downloaded, Top-Grossing iOS Apps of All Time on the App Store. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+