ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತೆರಡು ನಕಲಿ ಆಪ್‌ಗಳ ಕಾಟ!

|

ಜನಪ್ರಿಯ ಕ್ಯಾಮ್‌ಸ್ಕ್ಯಾನರ್ ಆಪ್‌ನಂತೆಯೇ ಮತ್ತೆರಡು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ವಂಚನೆ ಎಸಗುತ್ತಿರುವುದು ಕಂಡುಬಂದಿದೆ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಭದ್ರತೆ, ಸುರಕ್ಷತೆ ಒದಗಿಸುವ ಸೈಮಂಟೆಕ್ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಇಂತಹದೊಂದು ಮಾಹಿತಿ ಬಹಿರಂಗವಾಗಿದ್ದು, ಪ್ಲೇ ಸ್ಟೋರ್‌ನಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿರುವ ಆಪ್‌ಗಳು ನಕಲಿಯಾಗಿದ್ದು, ಗ್ರಾಹಕರ ಮಾಹಿತಿ ಕದಿಯುವ ಕೆಲಸದ ಜತೆಗೆ, ಪಾಪ್‌ ಅಪ್‌ ಜಾಹೀರಾತಿನ ಮೇಲೆ ಕ್ಲಿಕ್ ನೀಡುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತೆರಡು ನಕಲಿ ಆಪ್‌ಗಳ ಕಾಟ!

ಹೌದು, ಐಡಿಯಾ ಮಾಸ್ಟರ್ ಎಂಬ ಡೆವಲಪರ್ ಅಭಿವೃದ್ಧಿಪಡಿಸಿದ, ಐಡಿಯಾ ನೋಟ್: OCR Text Scanner, GTD, Color Notes ಎಂಬ ಆಪ್ ಮತ್ತು ಬ್ಯೂಟಿ ಫಿಟ್‌ನೆಸ್ daily workout, best HIIT coach ಆಪ್‌ಗಳು ಗ್ರಾಹಕರ ಅರಿವಿಲ್ಲದೆಯೆ ಆಡ್ ಕ್ಲಿಕ್‌ ನೀಡುತ್ತಿವೆ. ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿರುವ ಇರುವ ಆಪ್ಸ್, ಅವರ ಅರಿವಿಗೆ ಬಾರದೆಯೇ ಅಲ್ಲಿ ಆಡ್ ಕ್ಲಿಕ್ಸ್ ನೀಡುತ್ತಿರುವ ಜತೆಗೆ ಮಾಹಿತಿ ಕದಿಯುತ್ತವೆ ಎಂದಿದೆ. ಈ ಬಗ್ಗೆ ಗೂಗಲ್‌ಗೆ ಸ್ವತಃ ಯಾವುದೇ ಮಾಹಿತಿಯಿರಲಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿರುವ ಈ ಆಪ್‌ಗಳು ನಕಲಿಯಾಗಿದ್ದು, ಫೋನ್‌ನಲ್ಲಿನ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ. ಅದರಲ್ಲೂ ಹಿಡನ್ ವ್ಯೂ ಆಯ್ಕೆ ಮೂಲಕ ಜಾಹೀರಾತಿಗೆ ಕ್ಲಿಕ್ಸ್ ಒದಗಿಸುತ್ತಿವೆ. ಹೀಗಾಗಿ ಅಂತಹ ಆಪ್ ಕುರಿತು ಬಳಕೆದಾರರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ. ಒಟ್ಟಿನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ನಕಲಿ ಆಪ್‌ಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಸರಿಯಾದ ಮಾಹಿತಿ ಇರದಿರುವುದು ಕೂಡ ಇದಕ್ಕೆ ಕಾರಣವಾಗುತ್ತಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತೆರಡು ನಕಲಿ ಆಪ್‌ಗಳ ಕಾಟ!

ಆಪ್‌ ಸ್ಟೋರ್‌ಗಳಲ್ಲಿ ಫೇಕ್ ಆಪ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಅಧಿಕೃತ ಆಪ್‌ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡುವುದು ಒಳ್ಳೆಯದು. ಆದರೆ, ಅದರಲ್ಲೂ ಸಹ ಕೆಲ ಫೇಕ್ ಆಪ್‌ಗಳು ಇರಬಹುದು. ಹಾಗಾಗಿ, ಬಳಕೆದಾರರು ನೀಡಿರುವ ರಿವ್ಯೂವ್ ಮತ್ತು ತಪ್ಪು ಮಾಹಿತಿಯನ್ನು ಕಂಡುಹಿಡಿದು ಕೊಂಡು ಅವುಗಳ ಬಗ್ಗೆ ಎಚ್ಚರಿಕೆ ವಹಿಸಿಸಬೇಕು. ಕೆಲವರಿಗೆ ಪ್ಲೇ ಸ್ಟೋರ್ ನಲ್ಲಿ ನೋಡಿದ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಅಂತವರು ಇನ್ನುಮುಂದೆ ಹೆಚ್ಚು ಜಾಗರೂಕವಾಗಿರಬೇಕು ಎಂದು ವರದಿ ತಿಳಿಸಿದೆ.

'ರೆಡ್‌ಮಿಬುಕ್ 14 ಪ್ರೊ' ಬಿಡುಗಡೆ!..ವಿಶ್ವದ ಅತ್ಯುತ್ತಮ ಅಗ್ಗದ ಲ್ಯಾಪ್‌ಟಾಪ್?!

ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮುನ್ನ ಆ ಆಪ್‍ ಬಗ್ಗೆ ಬಳಕೆದಾರರು ನೀಡಿರುವ ರಿವ್ಯೂವ್‌ಗಳನ್ನು ಓದಿ. ಅದೊಂದು ಫೇಕ್ ಆಪ್ ಆಗಿದ್ದರೆ ಬಳಕೆದಾರರು ಆ ಬಗ್ಗೆ ಬರೆದಿರುತ್ತಾರೆ. ಅದರ ಪ್ಲಸ್ / ಮೈನಸ್ ಪಾಯಿಂಟ್ ಎಲ್ಲವೂ ಅಲ್ಲಿರುತ್ತದೆ.ಇದನ್ನೆಲ್ಲಾ ಓದಿದ ನಂತರವೇ ಆ ಆಪ್ ಇನ್‍ಸ್ಟಾಲ್ ಮಾಡಿ. ಆಪ್ ಡೆವಲಪರ್ ಯಾರು ಎಂಬುದನ್ನು ಸಹ ತಿಳಿದುಕೊಳ್ಳಿ. ಆ ಡೆವಲಪರ್‌ಗಳ ವೆಬ್‌ಸೈಟ್‌ಗೆ ಭೇಟಿ ನೀಡಿ. ಆ ಡೆವಲಪರ್‌ಗಳು ಯಾವುದೇ ಸಾಮಾಜಿಕ ಮಾಧ್ಯಮಗಳ ಲಿಂಕ್‌ಗಳನ್ನು ಹೊಂದಿಲ್ಲ ಎಂದಾದರೆ ಆ ಆಪ್ ಇನ್‍ಸ್ಟಾಲ್ ಮಾಡದಿದ್ದರೆ ಒಳ್ಳೆಯದು.

Most Read Articles
Best Mobiles in India

English summary
Two Android apps are available in the Google Play Store, which had racked up over 1.5 million downloads between them. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more