ಈ ಆಪ್ ಜತೆಗಿದ್ದರೆ ನೀವು ಆಹಾರತಜ್ಞರು ಆಗಬಹುದು..!
ಡಯಟ್ ಅನ್ನುವುದು ಪ್ರತಿಯೊಬ್ಬರ ಜೀವನದ ಭಾಗವಾಗಿರಬೇಕು. ಡಯಟ್ ನಲ್ಲಿ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸಬೇಕು, ಹಣ್ಣು ತರಕಾರಿಗಳಿರಬೇಕು. ಅನಾರೋಗ್ಯದಲ್ಲಿರುವವರು ನಿಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳುವಂತಹ ಡಯಟ್ ನ್ನು ಪಾಲಿಸಬೇಕು. ಆರೋಗ್ಯವಾಗಿರುವವರು ಇನ್ನೂ ಹೆಚ್ಚು ಆರೋಗ್ಯವಾಗಿರುವಂತ ಆಹಾರ ಪದ್ದತಿಯನ್ನು ಅನುಸರಿಸಬೇಕು.
ಒಟ್ಟಾರೆ ಆರೋಗ್ಯವಾಗಿ ಜೀವಿಸಬೇಕು ಎಂಬುದು ಎಲ್ಲರ ಇಚ್ಛೆಯಾಗಿರುತ್ತದೆ. ಅದಕ್ಕಾಗಿ ಆನ್ ಲೈನ್ ನಲ್ಲಿ ಸಾಕಷ್ಟು ಸಲಹೆ ಸೂಚನೆಗಳಿರುತ್ತೆ. ವೈದ್ಯರ ಬಳಿ ತೆರಳಿದರೂ ಕೂಡ ಅವರು ಅನೇಕ ಸಲಹೆಗಳನ್ನು ತಿಳಿಸುತ್ತಾರೆ. ಆದರೆ ಇವೆಲ್ಲವೂ ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟು ಹೋಗುವಂತಾದರೆ ಹೇಗೆ? ಅಥವಾ ಅದು ಅಗತ್ಯ ಬಿದ್ದಾಗ ನಿಮ್ಮ ನೆನಪಿಗೆ ಬರದೇ ಇದ್ದರೆ ಏನು ಮಾಡುವುದು?

ಮುಖ್ಯವಾಗಿ ನಿಮಗೆ ಆಹಾರದ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕಾದ ಸಂದರ್ಬ ಯಾವುದು ಎಂದರೆ ನೀವು ಕಿರಾಣಿ ಅಂಗಡಿಯಲ್ಲಿ ಸಾಮಾನುಗಳನ್ನು ಖರೀದಿಸುವಾಗ. ಆ ಸಮಯದಲ್ಲಿ ನೀವು ಓದಿದ ನ್ಯೂಟ್ರಿಷಿಯಸ್ ವಿಚಾರಗಳು ನಿಮಗೆ ನೆನಪಿಲ್ಲದೇ ಇದ್ದರೆ ಏನು ಮಾಡುವುದು ಎಂದು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಹೌದು ಸಂಶೋಧನಕಾರರು ಅದಕ್ಕೊಂದು ಪರಿಹಾರವನ್ನು ಕಂಡು ಹಿಡಿದಾಗಿದೆ. ಕಿರಾಣಿ ಅಂಗಡಿಯಲ್ಲಿದ್ದಾಗ ನೀವು ಖರೀದಿಸುವ ಆಹಾರ ಪದಾರ್ಥಗಳು ಎಷ್ಟು ನ್ಯೂಟ್ರಿಷಿಯಸ್ ಎಂಬ ಮಾಹಿತಿಯನ್ನು ನೀಡುವ ಆಪ್ ಒಂದು ಈಗ ಲಭ್ಯವಾಗಿದೆ.
ಆ ಆಪ್ ನ ಹೆಸರು “ ಪುಡ್ ಸ್ವಿಚ್”. ಬಳಕೆದಾರರು ಈ ಆಪ್ ನ್ನು ಇನ್ಸ್ಟಾಲ್ ಮಾಡಿ ತಮ್ಮ ಮೊಬೈಲಿಗೆ ಡೌನ್ ಮಾಡಿಕೊಂಡು ಬಳಕೆ ಮಾಡಬಹುದು. ಇದು ಪ್ಯಾಕ್ ಆಗಿರುವ ಆಹಾರ ಪದಾರ್ಥಗಳ ಬಾರ್ ಕೋಡ್ ನ್ನು ಸ್ಕ್ಯಾನ್ ಮಾಡಿ ನಿಮಗೆ ಕೂಡಲೇ ಅದರ ನ್ಯೂಟ್ರೀಷಿಯಸ್ ವ್ಯಾಲ್ಯೂವನ್ನು ತಿಳಿಸುತ್ತದೆ. ಅದಕ್ಕೆ ಸರಿಸಮನಾಗಿ ಇತ್ಯಾದಿ ಯಾವ ಆಹಾರ ಪದಾರ್ಥಗಳು ನ್ಯೂಟ್ರೀಷಿಯಸ್ ಆಗುತ್ತವೆ ಎಂಬುದನ್ನೂ ಕೂಡ ತಿಳಿಸುತ್ತದೆ.
ಆಪ್ ನಲ್ಲೇ ಎಲ್ಲಾ ಪದಾರ್ಥಗಳ ಪೋಷಕಾಂಶಗಳ ವಿವರವನ್ನು ನೀಡಲಾಗಿದೆ. ಮತ್ತು ಇದೊಂದು ಆಪ್ ಇದ್ದರೆ, ಡಯಟ್ ಪ್ಲಾನ್ ಗಾಗಿ ಬೇರೆ ಎಲ್ಲೂ ತಡಕಾಡಬೇಕಾಗಿಲ್ಲ ಎನ್ನುತ್ತಾರೆ ಯುಸ್ ನ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಮಾರ್ಕ್ ಹಫ್ ಸ್ಟನ್.
ಇತರೆ ನ್ಯೂಟ್ರೀಷಿಯನ್ ಆಪ್ ಗಳಂತೆ, ಫುಡ್ ಸ್ವಿಚ್ ಕೂಡ ಬಳಕೆದಾರರಿಂದ ಕೆಲವು ಮಾಹಿತಿಗಳನ್ನು ಪಡೆಯುತ್ತೆ ಮತ್ತು ತನ್ನ 2,68,000 ಪ್ರೊಡಕ್ಟಿನ ಡಾಟಾಬೇಸ್ ನಿಂದ ರಿಯಲ್ ಟೈಮ್ ನಲ್ಲಿ ಮಾಹಿತಿಯನ್ನು ಅಪ್ ಡೇಟ್ ಮಾಡುತ್ತದೆ.

ಇನ್ನು ಈ ಆಪ್ ಆಹಾರ ಪದಾರ್ಥಗಳಿಗೆ 0.5 ಯಿಂದ 5 ವರೆಗೆ ಸ್ಟಾರ್ ರೇಟಿಂಗ್ ಗಳನ್ನು ಕೂಡ ನೀಡುತ್ತದೆ. ಇದು ಆ ಆಹಾರ ಪದಾರ್ಥದ ನ್ಯೂಟ್ರೀಷಿಯಸ್ ವ್ಯಾಲ್ಯೂ ಮೇಲೆ ನಿರ್ಧರಿತವಾಗಿರುತ್ತದೆ.
ಇದು ವೈಜ್ಞಾನಿಕ ಅಲ್ಗೋರಿತ್ತಮ್ ನ್ನು ಹೊಂದಿದ್ದು, ಇದು ಆರೋಗ್ಯದ ಮೇಲಿನ ಬೇರೆಬೇರೆ ಪೋಷಕಾಂಶ ಸೇವನೆಯ ಮೇಲೆ ಪರಿಣಾಮ ಬೀರುತ್ತದೆ.
ಆಹಾರ ಕೊಬ್ಬಿನಾಂಶ ಮತ್ತು ಪಾಶ್ಚರೀಕಸಿದ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಗ್ರಾಮ್ ಗಳಲ್ಲಿ ನೀಡುತ್ತದೆ. ಮತ್ತು ಇದನ್ನು ಯಾವ ವಯಸ್ಸಿನವರು ಎಷ್ಟು ಸೇವಿಸುವುದು ಒಳ್ಳೆಯದು ಎಂಬ ಮಾಹಿತಿಯನ್ನು ಕೂಡ ಒದಗಿಸುತ್ತದೆ. ಅದನ್ನು ಕೆಂಪು, ಹಳದಿ ಮತ್ತು ಹಸಿರು ಲೈಟ್ ಗಳಲ್ಲಿ ನೀಡಲಾಗುತ್ತೆ.
ಯಾವುದಾದರೂ ಆಹಾರಕ್ಕೆ ಕೆಲವೇ ಸ್ಟಾರ್ ಗಳು ಸಿಕ್ಕುತ್ತೆ ಅಥವಾ ಅದನ್ನು ಕೆಂಪು ಬಣ್ಣದಲ್ಲಿ ಮಾರ್ಕ್ ಮಾಡಲಾಗಿದೆ ಎಂದರೆ, ಅದರಲ್ಲಿ ಅತೀ ಹೆಚ್ಚು ಕೊಬ್ಬಿನಂಶ ಇದೆ, ಪಾಶ್ಚರೀಕರಿಸಿದ ಕೊಬ್ಬು ಮತ್ತು ಸಕ್ಕರೆ, ಉಪ್ಪಿನಂಶ ಅಧಿಕವಾಗಿದೆ ಎಂದರ್ಥ.
ಬಳಕೆದಾರರು ಒಂದೇ ದರ್ಜೆಗೆ ಸೇರಿದ ಹಲವಾರು ಆಹಾರ ಪದಾರ್ಥಗಳನ್ನು ಹೋಲಿಕೆ ಮಾಡಿ ಕೂಡ ನೋಡಬಹುದು ಉದಾಹರಣೆಗೆ ಸಾಮಾನ್ಯ ಮತ್ತು ಫ್ಯಾಟ್ ಫ್ರೀ ಸಲಾಡ್ ಡ್ರೆಸ್ಸಿಂಗ್ ನಲ್ಲಿ ಯಾವುದು ಉತ್ತಮ ಪ್ರೊಡಕ್ಟ್ ಎಂದು ಕಂಡು ಹಿಡಿದುಕೊಳ್ಳಬಹುದು.
ಫುಡ್ ಸ್ವಿಚ್ ಆಪ್ ಸದ್ಯ ಭಾರತ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಬ್ರಿಟನ್, ಚೈನಾ, ಸೌತ್ ಆಫ್ರಿಕಾ, ಮತ್ತು ಹಾಂಗ್ ಕಾಂಗ್ ನಲ್ಲಿ ಆಪಲ್ ಮತ್ತು ಗೂಗಲ್ ಪ್ಲೇ ಸ್ಟೋರ್ ಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಒಟ್ಟಾರೆ ನಿಮ್ಮ ಆರೋಗ್ಯ ಕಾಪಾಡುವ ವೈದ್ಯರು ಇನ್ನು ಮುಂದೆ ಆಸ್ಪತ್ರೆ ಮಾತ್ರವಲ್ಲ ನಿಮ್ಮ ಜೋಬಿನಲ್ಲೂ ಇರುತ್ತಾರೆ. ನೀವು ಆಹಾರ ಸೇವಿಸಬೇಕು ಎಂಬುದನ್ನು ಅಧ್ಬುತವಾಗಿ ಸಲಹೆ ನೀಡಿ ತಿಳಿಸುತ್ತಾರೆ.


Click it and Unblock the Notifications





