ಹೆಲ್ಪ್‌ಚಾಟ್ ಆಪ್ ಬಳಸಿ ವಾಯುಮಾಲಿನ್ಯದ ಬಗ್ಗೆ ಎಚ್ಚರ ವಹಿಸಿ
ಹೆಲ್ಪ್‌ಚಾಟ್ (ಎಲ್ಲಾ ಅಪ್ಲಿಕೇಶನ್‌ಗಳನ್ನು ಹೊಂದಿರುವ ಅಪ್ಲಿಕೇಶನ್), ಭಾರತದ ಅತಿದೊಡ್ಡ ವಯಕ್ತಿಕ ಸಹಾಯಕ ಆಫ್ "ಪೊಲುಶನ್ ಮೀಟರ್" ಎಂಬ ಹೊಸ ಆಪ್ ಲಾಂಚ್ ಮಾಡಿದೆ. ಈ ಆಪ್ ಸುತ್ತಮುತ್ತಲ ವಾತಾವರಣವನ್ನು ಸಮೀಕ್ಷೆ ನಡೆಸಿ ಗಾಳಿಯಲ್ಲರುವ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲಿದೆ.
ಈ ವಿಶೇಷ ಆಪ್‌ನ ಗುಣ ವಿಶೇಷ ಏನು, ಜನರಿಗೆ ಹೇಗೆ ಉಪಯೋಗವಾಗಲಿದೆ ಎಂಬ ಮಾಹಿತಿಯನ್ನು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಪೊಲುಶನ್ ಮೀಟರ್
ದೆಹಲಿಯ ವಾಯುಮಾಲಿನ್ಯದಿಂದ ಸುರಕ್ಷತೆ ಹೊಂದಲು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಆಪ್ ಅನ್ನು ಹೆಲ್ಪ್‌ಚಾಟ್ ಲಾಂಚ್ ಮಾಡಿದೆ.

ಗಾಳಿಯ ಗುಣಮಟ್ಟ
ಈ ಆಪ್ ಅನ್ನು ತಮ್ಮ ಆಂಡ್ರಾಯ್ಡ್ ಮತ್ತು ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಂದಿರುವವರು ತಮ್ಮ ಸುತ್ತಮುತ್ತಲ ಗಾಳಿಯ ಗುಣಮಟ್ಟವನ್ನು ತಿಳಿಯಬಹುದಾಗಿದೆ.

ಭಾರತೀಯ ಜನತೆಗೆ ಸಹಾಯ
ಭಾರತೀಯ ಜನತೆ ಈ ಆಪ್ ಬಳಸುವುದರಿಂದ ಗಾಳಿಯ ಗುಣಮಟ್ಟ ತಿಳಿದು ವಾಯು ಮಾಲಿನ್ಯದಿಂದ ಬರಬಹುದಾದಂತಹ ರೋಗಗಳಿಂದ ದೂರ ಉಳಿಯಲು ಸಹಾಯಕವಾಗಿದೆ. ಅಲ್ಲದೇ ತಾವು ಉಸಿರಾಡುವ ಗಾಳಿಯಲ್ಲಿ ವಿಷಕಾರಿ ಅಂಶವಿರುವ ಬಗ್ಗೆ ಸಹ ತಿಳಿಯಬಹುದಾಗಿದೆ.

ಹೆಲ್ಪ್‌ಚಾಟ್
"ಹೆಲ್ಪ್‌ಚಾಟ್ ಜನರ ಜೀವನವನ್ನು ಸುಲಭವಾಗಿಸುವ ಸಲಹೆಗಳನ್ನು ನೀಡುತ್ತದೆ. ಅಲ್ಲದೇ ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡುತ್ತದೆ. ಹಾಗೂ ರೋಗಗಳಿಂದ ದೂರವಿರುವ ಬಗ್ಗೆ ಸಲಹೆಗಳನ್ನು ನೀಡುತ್ತದೆ", ಎಂದು 'ಅಂಕುರ್ ಸಿಂಗ್ಲಾ' ಹೆಲ್ಪ್‌ಚಾಟ್ ಸಂಸ್ಥಾಪಕ ಮತ್ತು ಸಿಇಒ ಹೇಳಿದ್ದಾರೆ.

ಆಪ್ ಮಾಹಿತಿ
ಪೊಲುಶನ್ ಮೀಟರ್ ಆಪ್ ಗಾಳಿ ಗುಣಮಟ್ಟದ ಇಂಡೆಕ್ಸ್ ಅನ್ನು ಶೂನ್ಯದಿಂದ 500 ರವರೆಗೆ ಶುದ್ಧ ಗಾಳಿಯ ಗುಣಗಳನ್ನು ಸಹ ಪ್ರದರ್ಶಿಸುತ್ತದೆ.

ಸ್ಮಾರ್ಟ್‌ಫೋನ್ ಅಲರ್ಟ್
ಆಪ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಿವಿಧ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಬಗ್ಗೆ ಮಾಹಿತಿ ನೀಡಲಿದ್ದು, ಹೆಚ್ಚು ಮಾಲಿನ್ಯ ಇರುವ ಸ್ಥಳಗಳಿಗೆ ಹೋಗದಿರುವಂತೆ ಸಲಹೆ ನೀಡುತ್ತದೆ. ಬಳಕೆದಾರರು ತಮ್ಮ ಕುಟುಂಬದವರೊಂದಿಗೆ ಮಾಲಿನ್ಯ ಮುಕ್ತ ಪ್ರದೇಶಗಳಿಗೆ ಪ್ರವಾಸ ಹೋಗಲು ಸಹ ಸಹಾಯಕವಾಗುತ್ತದೆ.

ರಿಯಲ್ ಟೈಮ್ ಅಪ್‌ಡೇಟ್
ಹೆಲ್ಪ್‌ಚಾಟ್ ಆಪ್ ರಿಯಲ್ ಟೈಮ್ ವಾತಾವರಣದ ಮಾಹಿತಿಯನ್ನು ಟ್ರ್ಯಾಕ್ ಮಾಡಲಿದ್ದು ಅಪ್‌ಡೇಟ್ ನೀಡಲಿದೆ.

ದೆಹಲಿ ಸರ್ಕಾರ
ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಸಮ ಸಂಖ್ಯೆ - ಬೆಸ ಸಂಖ್ಯೆ ನಿಯಮ ಜಾರಿ ಮಾಡಿದ್ದು, ದೆಹಲಿ ಸರ್ಕಾರಕ್ಕೆ ಸಹಾಯ ಮಾಡುವ ಮತ್ತು ದೇಶದ ಜನರನ್ನು ವಾಯು ಮಾಲಿನ್ಯದಿಂದ ರಕ್ಷಿಸುವ ದೃಷ್ಟಿಯಿಂದ ಈ ಫೀಚರ್ ಲಾಂಚ್ ಮಾಡಿರುವ ಬಗ್ಗೆ ಅಂಕುರ್ ಸಿಂಗ್ಲಾ ಹೇಳಿದ್ದಾರೆ.

ಹೆಲ್ಪ್‌ಚಾಟ್
ಹೆಲ್ಪ್‌ಚಾಟ್ ಆಪ್ ಆಂಡ್ರಾಯ್ಡ್ ಮತ್ತು ಆಪಲ್ ಫೋನ್‌ಗಳಿಗೆ ಲಭ್ಯ ಎಂದು ಹೇಳಲಾಗಿದೆ.

ಗಿಜ್‌ಬಾಟ್

ಗಿಜ್‌ಬಾಟ್
ಟೆಕ್ನಾಲಜಿ ಬಗೆಗಿನ ಹೆಚ್ಚಿನ ಲೇಖನಗಳಿಗಾಗಿ ಲೈಕ್ ಮಾಡಿ ಗಿಜ್‌ಬಾಟ್ ಫೇಸ್‌ಬುಕ್ ಫೇಜ್ ಹಾಗೂ ಓದಿರಿ ಗಿಜ್‌ಬಾಟ್ ವೆಬ್‌ಸೈಟ್


Click it and Unblock the Notifications








